ಯಾವ ಕಾಯಿಲೆಗೆ ಯಾವ ಮದ್ದು ಎನ್ನುವ ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಉತ್ತಮ. ಕೆಲವು ಆಯುರ್ವೇದ ಔಷಧಿಗಳು, ಮನೆ ಮದ್ದು, ಸಸ್ಯಗಳ ಕುರಿತಾದ ಲೇಖನವಿದು. ಮುಂದೆ ಓದಿ…
ಅಗ್ನಿ ಮಾಂದ್ಯ, ಅಜೀರ್ಣ ಹಾಗು ವಿಬಂಧವೇದರೇನು?
- ಅಗ್ನಿ ಮಾಂದ್ಯ – ಆಹಾರ ಸೇವಿಸುವ ಈ ಇಚ್ಛೆ / ಆಸಕ್ತಿ ಇಲ್ಲದಿರುವುದು,
- ಅಜೀರ್ಣ – ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದಿರುವುದು.
- ವಿಬಂಧ- ನೋವಿನೊಂದಿಗೆ ಗಟ್ಟಿಯಾದ ಮಲ ವಿಸರ್ಜಿಸುವುದು, ಹೊಟ್ಟೆ ಉಬ್ಬರ, ಆಗಾಗ್ಗೆ ಹೊಟ್ಟೆ ನೋಯುವಿಕೆ, ಸರಿಯಾಗಿ ಮಲಪ್ರವೃತ್ತಿಯಾಗದಿರುವುದು.
ಲಕ್ಷಣಗಳು :
- ಅಗ್ನಿಮಾಂದ್ಯ : ಆಹಾರವು ರುಚಿಸದೆ ಇರುವುದು.
- ಅಜೀರ್ಣ : ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗದಿರುವುದು. ಮೈಭಾರ ಎನ್ನಿಸುವುದು. ಮೈ ಕೈ ನೋವು, ಅತಿಯಾದ ಬಾಯಾರಿಕೆ, ಆಹಾರವು ರುಚಿಸದಿರುವುದು,
- ವಿಬಂಧ: ಆಗಾಗ್ಗೆ ಹೊಟ್ಟೆ ನೋಯುವಿಕೆ, ಹೊಟ್ಟೆ ಉಬ್ಬರಿಸುವುದು, ವಾಂತಿಯಾಗುವುದು.
ಅಗ್ನಿ ಮಾಂದ್ಯ, ಅಜೀರ್ಣ ಹಾಗು ವಿಬಂಧಗಳಿಗೆ ಅಯುರ್ವೇದ ಚಿಕಿತ್ಸೆ :
ಆಯುರ್ವೇದದ ಅನುಸಾರ ಕೆಲವರು ವಾತಪ್ರಕೃತಿಯುಳ್ಳವರಿಗೆ ವಿಬಂಧವು ಸಹಜವಾಗಿಯೇ ಬಾಧಿಸುತ್ತದೆ. ಅಂಥವರು ಕರುಳನ್ನು ಮೃದುಗೊಳಿಸುವ ಸಲುವಾಗಿ ಬಿಸಿಯಾದ ಆಹಾರದೊಂದಿಗೆ ಎಣ್ಣೆ/ ತುಪ್ಪವನ್ನು ಸೇವಿಸುವುದು ಅವಶ್ಯಕವಾಗುತ್ತದೆ. ವಾತ ಶಾಮಕ ಉಷ್ಣತೈಲ ಬಸ್ತಿ ಚಿಕಿತ್ಸೆಯನ್ನು ವೈದ್ಯರ ಸಲಹೆಯ ಮೇರೆಗೆ ಪಡೆಯುವುದು. ವಿರೇಚನ ಚಿಕಿತ್ಸೆಯನ್ನು ವೈದ್ಯರ ಸಲಹೆಯ ಮೆರೆಗು ಪಡೆಯುವುದು.

ಫೋಟೋ ಕೃಪೆ : Udayavani
ಆಯುರ್ವೇದದ ಕೆಲವು ಪ್ರಮುಖ ಔಷಧಗಳು :
ಅಗ್ನಿ ಮಾಂದ್ಯ
- ಅಗ್ನಿತುಂಡಿ ವಟಿ
- ದ್ರಾಕ್ಷಾರಿಸ್ಟ
- ವೈಶ್ವಾನರ ಚೂರ್ಣ
- ಸೈನ್ಧವ ಲವಣದೊಂದಿಗೆ ಲಿಂಬೆರಸ
ಅಜೀರ್ಣ
- ಲಶುವಾದಿ ವಟಿ
- ಹಿಂಗ್ವಾಷ್ಟಕ ಚೂರ್ಣ
- ಶಂಖವಟಿ
- ಜೀರಕಾದ್ಯ ರಿಷ್ಟ
ವಿಬಂಧ
- ತ್ರಿಫಲಾ ಚೂರ್ಣ
- ಅಭಯಾರಿಷ್ಟ
- ಅವಿಪತ್ತಿಕಾರ ಚೂರ್ಣ

ಫೋಟೋ ಕೃಪೆ : lekhafoods
ಅಗ್ನಿ ಮಾಂದ್ಯ, ಅಜೀರ್ಣ ಹಾಗು ವಿಬಂಧಗಳಿಗೆ :
ಬಳಸಬಹುದಾದ ಕೆಲವು ಸಸ್ಯಗಳು –
ಅಗ್ನಿ ಮಾಂದ್ಯ : ಹಸಿ ಹಾಗೂ ಒಣಶುಂಠಿ,ಚಿತ್ರ ಮೂಲ, ಪುದಿನ
ಅಜೀರ್ಣ : ಶುಂಠಿ ಹಿಂಗು,ಹಿಪ್ಪಲಿ
ವಿಬಂಧ : ಸೋನಾಮುಖಿ (ನೀಲಾವರಿಕೆ) ಕಕ್ಕೆ, ಇಸಬಗೋಲು, ಹರಳು, ಅಳಲೆಕಾಯಿ.

ಫೋಟೋ ಕೃಪೆ : prajavani
ಯಾವುದು ಹಿತ?
- ಗೋಧಿ, ಹೆಸರು ಬೆಳೆ, ಒಂದು ವರ್ಷ ಮೀರಿದ ಭತ್ತದ ಅಕ್ಕಿ, ದ್ರಾಕ್ಷಿ, ಹಾಲು, ತುಪ್ಪು, ನೆಲ್ಲಿಕಾಯಿ, ಬಿಸಿನೀರು.
- ಕಾಲ್ನಡಿಗೆ, ಈಜುವಿಕೆ, ಯೋಗದಲ್ಲಿ ತಿಳಿಸಿರುವ ಕೆಲವು ಆಸನಗಳ ಮೂಲಕ ಶಾರೀರಿಕ ವ್ಯಾಯಾಮ ಉತ್ತಮ.
ಯಾವುದು ಅಹಿತ?
- ಅನಿಯಮಿತ ಆಹಾರ ಸೇವನೆ, ಜೀರ್ಣಕ್ಕೆ ಜಡವಾದ ಆಹಾರ, ಅತಿ ಎಣ್ಣೆ/ ಎಣ್ಣೆಯಲ್ಲಿ ಕರಿದ, ಉಪ್ಪು, ಹುಳಿ, ಖಾರ ಇರುವ ಆಹಾರದ ಸೇವನೆ.
- ಆಗಾಗ್ಗೆ ಚಹಾ, ಕಾಫಿಗಳ ಸೇವನೆ ಮಾಡುವುದು.
- ದೇಹದ ಸಹಜ ಕರೆಗಳಾದ ಹಸಿವು, ಬಾಯಾರಿಕೆ, ಮೂತ್ರ, ಮಲಪ್ರವೃತ್ತಿಯ, ಸೀನು, ಕೆಮ್ಮು, ನಿದ್ರೆ ಇತ್ಯಾದಿಗಳನ್ನು ತಡೆಯುವುದು ಅಥವಾ ಪ್ರಚೋದಿಸುವುದು.
- ಮದ್ಯಪಾನ, ಧೂಮಪಾನ, ತಂಬಾಕು ಮುಂತಾದ ಮಾದಕ, ಹಾನಿಕಾರಕ ವಸ್ತುಗಳ ಸೇವನೆ.
- ಅನಿಯಮಿತ ನಿದ್ರೆ, ಚಿಂತೆ, ಉದ್ವೇಗ, ಖಿನ್ನತೆ.
- (ಮಾಹಿತಿ ಸಂಗ್ರಹ : ಕೇಂದ್ರಿಯ ಅಯುರ್ವೇದ ವಿಜ್ಞಾನ ಸಂಶೋಧನಾ ಪರಿಷತ್)