ಪಲ್ಯ ಬ್ರೆಡ್ ಬಜ್ಜಿ : ಶಕುಂತಲಾ ಸವಿ

ಮೆಣಸಿಕಾಯಿ ಬಜ್ಜಿ, ಬಾಳೆಕಾಯಿ ಬಜ್ಜಿ, ಹೀರೆಕಾಯಿ ಬಜ್ಜಿ ತಿಂದಿರಬಹುದು. ಆದರೆ ಪಲ್ಯ ಬ್ರೆಡ್ ಬಜ್ಜಿ ತಿಂದಿಲ್ಲ ಅಂದ್ರೆ ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರ ಕೈರುಚಿ ಕುರಿತು ತಪ್ಪದೆ ಮುಂದೆ ಓದಿ…

ಬೇಕಾಗುವ ಪದಾರ್ಥಗಳು :

  • ಬ್ರೆಡ್ ೧ ಬಂಡಲ
  • ಆಲೂಗೆಡ್ಡೆ ಪಲ್ಯ
  • ಕಡ್ಲೆಹಿಟ್ಟು
  • ಅಚ್ಚ ಮೆಣಸಿನ ಪುಡಿ
  • ಉಪ್ಪು
  • ಜೀರಿಗೆ
  • ಓಂ ಕಾಳು
  • ಕಾಯಿಸಿದ ಬಿಸಿ ಎಣ್ಣೆ
  • ಕರಿಯಲು ಎಣ್ಣೆ

This slideshow requires JavaScript.

 

ಮಾಡುವ ವಿಧಾನ :

ಮೊದಲಿಗೆ ಆಲೂಗೆಡ್ಡೆ ಬೇಯಿಸಿ ಪಲ್ಯ ಮಾಡಿ ಇಟ್ಟು ಕೊಳ್ಳಿ. ಈಗ ಕಡ್ಲೆಹಿಟ್ಟಿಗೆ ಮೇಲೆ ಹೇಳಿದ ಪದಾರ್ಥಗಳನ್ನು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿ. ಬ್ರೆಡ್ ಸ್ಲೈಸ್ ನ ಬ್ರೌನ್ ಪಟ್ಟಿಗಳನ್ನು ಕಟ್ ಮಾಡಿ ತೆಗೆದು ಬಿಡಿ. ಬಾಣಲಿಯಲ್ಲಿ ಎಣ್ಣೆ ಕಾಯಲು ಇಡಿ. ಬ್ರೆಡ್ ಮಧ್ಯಕ್ಕೇ ಆಲೂಗಡ್ಡೆ ಪಲ್ಯ ಇಟ್ಟು ನಿಮಗೆ ಬೇಕಾದ ಷೇಪ್ ಗೆ ಕಟ್ಮಾಡಿಕೊಳ್ಳಿ. ಈಗ ಕಲಸಿದ ಬಜ್ಜಿ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಬಿಸಿ ಬಿಸಿ ಸ್ಟಫ್ಡ್ ಬ್ರೆಡ್ ಬಜ್ಜಿ ರೆಡಿ.


  • ಶಕುಂತಲಾ ಸವಿ – ನಳಪಾಕ ಪ್ರವೀಣೆ , ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading