ಮಲೆನಾಡಿನ ಕೈಮದ್ದೆಂಬ ಗೊಸುಂಬೆಯ ವಿಷಪ್ರಾಷನ ಈಗಲೂ ಜನರ ನಂಬಿಕೆಯಿ೦ದ ಅಥವಾ ಮೂಡ ನಂಬಿಕೆಯಿಂದ ಪ್ರಚಲಿತವಾಗಿ ಮುಂದುವರಿದಿದೆ, ಹೊಟ್ಟೆಗೆ ಮದ್ದು ಹಾಕುವರು ಇದ್ದಾರಾ?ಎನ್ನುವ ಸಾಕಷ್ಟು ಪ್ರಶ್ನೆ, ಗೊಂದಲಗಳಿವೆ, ಅರುಣ ಸಾಗರ್ ಅವರ ಲೇಖನಿಯಲ್ಲಿ ಮೂಡಿ ಬಂದ ಕೈ ಮದ್ದಿನ ಕುರಿತಾದ ಲೇಖನ ತಪ್ಪದೆ ಮುಂದೆ ಓದಿ…
ಗೋಸುಂಬೆ ಸಾಯಿಸಿ ಅದರ ಬಾಲಕ್ಕೆ ಹಗ್ಗ ಕಟ್ಟಿ ನೇತಾಡಿಸಿಡಬೇಕು, ಕೆಲ ದಿನದಲ್ಲಿ ಅದು ಕೊಳೆತು ಅದರ ಬಾಯಿ೦ದ ತೊಟಕುವ ರಸಗಳು ನೇರವಾಗಿ ಕೆಳಗೆ ಬಾಳೆ ಎಲೆಯಲ್ಲಿ ಹರಡಿಟ್ಟ ಮುಷ್ಟಿಯಷ್ಟು ಅಕ್ಕಿ ಮೇಲೆ ಬೀಳುವಂತೆ ಮಾಡಬೇಕು. ಪೂಣ೯ ಪ್ರಮಾಣದ ರಸ ಸ್ರವಿಸಿದ ನಂತರ ಈ ಅಕ್ಕಿ ಒಣಗಿಸಿ ನಂತರ ಹಿಟ್ಟು ಮಾಡಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು.
ಯಾರ ಮೇಲಾದರು ಈ ಮದ್ದು ಪ್ರಯೋಗಿಸಬೇಕಾದರೆ ಒಂದು ಹತ್ತಿಯ ದೀಪದ ಬತ್ತಿಯಲ್ಲಿ ಸಂಗ್ರಹಿಸಿದ ಹಿಟ್ಟಲ್ಲಿ ಬತ್ತಿ ಅದ್ದಿ ಅದನ್ನ ಕಾಫಿ, ಟೀ ಯಲ್ಲಿ ಅಥವಾ ಊಟ, ಉಪಹಾರದಲ್ಲಿ ಅದ್ದಿದರೆ ಆಯಿತು, ಅದನ್ನ ತಿಂದವರು ಕ್ರಮೇಣ ಜೀಣ೯ಶಕ್ತಿ ಕಳೆದುಕೊಳ್ಳುತ್ತಾರೆ.
ಊಟ ಸೇರುವುದಿಲ್ಲ, ದೇಹ ಕೃಷವಾಗುತ್ತೆ, ವೈದ್ಯರ ಹತ್ತಿರ ಹೋದರೆ ಏನೂ ಕಾಯಿಲೆ ಇಲ್ಲ ಅಂತಾರೆ. ದಿನದಿಂದ ದಿನಕ್ಕೆ ಆರೋಗ್ಯ ಬಿಗಡಾಯಿಸಿ ಸಾವು ಬರುತ್ತೆ. ಇದೊಂದು ಥರ ಸ್ಲೋ ಪಾಯಿಸನ್ ಇದ್ದಂತೆ ಅಂತ ಅವರು ವಿವರಿಸುತ್ತಿದ್ದರು. ಹಾಗಾದರೆ ಇದಕ್ಕೆ ಪರಿಹಾರ ಅಂದೆ?. ಅವರ ಪ್ರಕಾರ ಹಳ್ಳಿಗಳಲ್ಲಿ ಇದನ್ನ ಪರಿಹರಿಸುವ ಕೆಲ ಪಾರಂಪರಿಕ ಮನೆ ವೈದ್ಯರಿದ್ದಾರೆ. ಅವರು ಕಾಯಿ ಅಥವಾ ಹಣ ಪಡೆದು ಔಷಧ ನೀಡುತ್ತಾರೆ.
ಫೋಟೋ ಕೃಪೆ : google
ಅಲ್ಲೇ ಸ್ವಲ್ಪ ಹೊತ್ತಲ್ಲಿ ವಾಂತಿ ಆಗುತ್ತೆ, ಯಾವುದರಲ್ಲಿ ಮದ್ದು ಹಾಕಿದ್ದಾರೆ. ಅದು ಹೊರ ಬೀಳುತ್ತೆ ಅಥವಾ ಇದೇ ರೀತಿ ಇನ್ನೊಂದು ರೀತಿ ಮದ್ದು ತೆಗೆಯುವ ಸಂಪ್ರದಾಯವಿದೆ. ಒಂದು ಪಾತ್ರೆಯಲ್ಲಿ ನೀರು ಔಷಧ ಹಾಕಿ ಕೈ ತೊಳೆಸುತ್ತಾರೆ. ಆಗ ಪಾತ್ರೆಯಲ್ಲಿ ಯಾವುದರಲ್ಲಿ ಮದ್ದು ಹಾಕಿದ್ದಾರೆ ಆ ಆಕೃತಿ ಬರುತ್ತೆ ಅವತ್ತಿಂದ ಮದ್ದಿನ ಬಾಧೆ ಮುಕ್ತಿ ಆಗಿ ರೋಗಿಯ ಜೀಣ೯ ಶಕ್ತಿ ಸರಿ ಆಗಿ ಮೊದಲಿನ ಸ್ಥಿತಿಗೆ ಬರುತ್ತಾರೆ ಅಂದರು.
ಇದು ನಿಜಾನಾ?… ಆದರೆ ಹಳ್ಳಿಗಳಲ್ಲಿ ಈಗಲೂ ಇದನ್ನ ನಂಬುವವರಿದ್ದಾರೆ. ಈ ರೀತಿ ಆದವರು ತಮಗೆ ಅವರಿಗಾಗದವರಾರು ಇದ್ದಾರೋ ಅವರನ್ನ ಮದ್ದು ಹಾಕಿದವ ಎಂಬ ಅನುಮಾನದಿಂದ ನೋಡುತ್ತಾರೆ.
ಮದ್ದು ದೊಸೆ, ಹೋಳಿಗೆ ಅಥವ ಇಡ್ಲಿ ರೂಪದಲ್ಲಿ ಹಾಕಿದ್ದು ಅಂತಾದರೆ ಈ ಹಿಂದೆ ಯಾರ ಮನೆಯಲ್ಲಿ ತಿಂದಿದ್ದರೋ ಅವರೆ ಅಪರಾದಿ ಆಗುತ್ತಾರೆ.!! ಇತ್ತೀಚಿಗೆ ಬಾಣಂತಿಯೊಬ್ಬರಿಗೆ ಈ ಸಮಸ್ಯೆ ಆಗಿತ್ತು, ಮದ್ದು ತೆಗೆದವ ದೊಸೆಯಲ್ಲಿ ಮದ್ದು ಹಾಕಿದ್ದು ಅಂದಾಗ ಬಸಿರಿ ಹೆಂಗಸು ಒಮ್ಮೆ ತನ್ನ ಸಂಬಂದಿ ಹತ್ತಿರ ದೊಸೆ ತಿನ್ನುವ ಆಸೆ ಅಂದಾಗ ಅವರು ಮನೆಯಿ೦ದ ಪ್ರೀತಿಯಿ೦ದ ದೊಸೆ ಮಾಡಿ ಒಯ್ದದ್ದರಿಂದ ಅವರೇ ಅಪರಾದಿ ಆಗಿ ಬಿಟ್ಟರು!!?. ಇದೆಲ್ಲ ಮೌಡ್ಯನಾ? ಹಾಗಾದರೆ ವಿದ್ಯಾವಂತರು, ಮೇಲ್ಜಾತಿ ಜನರಲ್ಲಿ ಈ ನಂಬಿಕೆ ಯಾಕೆ?ಗೊತ್ತಿಲ್ಲ.
ಫೋಟೋ ಕೃಪೆ : google
ಈ ರೀತಿ ಮದ್ದು ಹಾಕುವ ಕಳಂಕ ಹೊತ್ತ ಮನೆಗಳಲ್ಲಿ ಆಹಾರ ಸೇವಿಸಲು ಹೆದರುತ್ತಾರೆ. ನಮ್ಮ ಊರಲ್ಲಿ ಇತ್ತೀಚಿಗೆ ಪ್ರತಿ ಮನೇಲಿ ಒಬ್ಬ ಈ ರೀತಿ ಔಷಧಿ ಹಾಕಿದ್ದರು. ರಿಪ್ಪನ್ ಪೇಟೆ ಹತ್ತಿರದ ಹೆದ್ದಾರಿಪುರದಲ್ಲಿ ತೆಗೆಸಿಕೊಂಡು ಸರಿ ಆದೆ ಅನ್ನುವವರು ಸಿಗುತ್ತಾರೆ. ನನಗೆ ಈ ಬಗ್ಗೆ ಕುತೂಹಲ ಅನೇಕರಲ್ಲಿ ವಿಚಾರಿಸಿದಾಗ ಇಂತಹ ಒಂದು ವಿಷಪ್ರಾಶನ ಹಿಂದಿನ ಕಾಲದಲ್ಲಿತ್ತು ,ನಂತರ ಇಲ್ಲವಾಗಿದೆ… ಎಲ್ಲೋ ಕೆಲವರು ಈ ವಿದ್ಯೆ ತಿಳಿದಿರಬಹುದು.
ಆದರೆ ತಮಗೆ ಆಗದವರ ಮೇಲೆ ಅನುಮಾನ ಮೂಡಿಸಿ ಸಮಾಜದಲ್ಲಿ ಅವರನ್ನ ಒಂದು ರೀತಿಯ ಬಹಿಷ್ಕರಿಸಲು ಈ ರೀತಿ ವದಂತಿ ಬರುತ್ತೆ ಅಂತ ಅವರು ಹೇಳುತ್ತಾರೆ. ಹೀಗಿರುವಾಗಲೇ ನಾನು ಮೊನ್ನೆ ಭೇಟಿ ಮಾಡಿದ ಒಬ್ಬ ಪ್ರಸಿದ್ದ ಬ್ರಾಹ್ಮಣ ಮುಖಂಡರು ತಮಗೆ ತಮ್ಮ ದಾಯಾದಿಗಳಿಂದ ಹೊಟ್ಟೆಗೆ ಮದ್ದು ಬಿದ್ದಿದೆ ತೆಗೆಸಿಕೊಳ್ಳಬೇಕು ಅಂದಾಗ ಇದೆಲ್ಲ ಬರೆಯಬೇಕಾಯಿತು.
ಇದು ಸತ್ಯನಾ? ಮಿಥ್ಯನಾ? ನಿಮ್ಮ ಅನುಭವ ಬರೆಯಿರಿ.
ಕೈ ಮದ್ದು ಕುರಿತು ಇನ್ನಷ್ಟು ಲೇಖನಗಳು :
- ಅರುಣ ಸಾಗರ್