ಕೈಮದ್ದು ಎಂಬ ಸೈಲೆಂಟ್ ಕಿಲ್ಲರ್ – ಶೋಭಾ ನಾರಾಯಣ ಹೆಗಡೆ

ಕೈಮದ್ದು ಎಂಬ ಸೈಲೆಂಟ್ ಕಿಲ್ಲರ್ ನ್ನು ತಿನ್ನುವ ಆಹಾರದಲ್ಲಿ ಬೆರಸಿಕೊಡುವುದರಿಂದ ತಿಂದವರು ಬದುಕಿನುದ್ದಕ್ಕೂ ಅನುಭವಿಸುವ ಯಾತನೆ ಯಾರಿಗೂ ಬೇಡ, ಕೈಮದ್ದಿನ ಕುರಿತು ಶೋಭಾ ನಾರಾಯಣ ಹೆಗಡೆ ಅವರು ಬರೆದ ಒಂದು ಲೇಖನವನ್ನು ತಪ್ಪ ಓದಿ…

ಯಾರದೋ ಈರ್ಷ್ಯೆಗೆ ,ಇನ್ಯಾರದೋ ಹತಾಶೆಗೆ,ಮತ್ಯಾರದೋ ಅಹಂಕಾರದ ಹೂಂಕಾರಕ್ಕೆ ಬಲಿಯಾದ ಮುಗ್ಧತೆ ,ಬದುಕಿನುದ್ದಕ್ಕೂ ಅನುಭವಿಸುವ ಪಾಡು ಅಂತಿಂಥದ್ದಲ್ಲ …ಇಂತಹ ವಿಷಯವನ್ನು ಬರೆದರೂ ಅಷ್ಟೇ. ಮಾರ್ಪಾಡಗದ ಮನಃಸ್ಥಿತಿಗಳು ಕೆಲವೊಂದು…ಯಾಕೆಂದರೆ ಸ್ವಾರ್ಥದ ಎದುರು ನಿಸ್ವಾರ್ಥತೆ ಎಂದಿಗೂ ತಲೆ ಎತ್ತಿ ನಿಲ್ಲಲಾಗದ ದುಸ್ಥಿತಿ ಜಗದಲ್ಲಿ.
ಈಗ ಹೇಳಹೊರಟಿದ್ದು “ಕೈಮದ್ದು “ಎಂಬ ಸೈಲೆಂಟ್ ಕಿಲ್ಲರ್ ಕಥೆ.ಇದನ್ನು ಅರಿತುಕೊಂಡದ್ದುದರ ಆಧಾರದ ಮೇಲೆ ಹೇಳುವುದಾದರೆ,ನಮ್ಮ ದೇಶ, ಬ್ರಿಟಿಷ್ ರ ಆಳ್ವಿಕೆಯ ಕಪಿ ಮುಷ್ಠಿಯಲ್ಲಿ ಇದ್ದಾಗ, ಭಾರತೀಯರು, ಅವರನ್ನು ಮಟ್ಟ ಹಾಕುವ ಸಲುವಾಗಿ ಈ ದಾರಿ ಕಂಡುಕೊಂಡಿದ್ದರೆಂಬ ಕಥೆ ಇದೆ.ಕೆಲವೊಂದು ಹಳ್ಳಿ, ನಗರ ಪ್ರದೇಶಗಳಲ್ಲಿ ಬ್ರಿಟೀಷರು ಕಾರ್ಯ ನಿಮಿತ್ತ ತಂಗುವಾಗ, ಅವರ ದರ್ಪಕ್ಕೆ ಬೇಸತ್ತು ಜನರು,ಊಟದಲ್ಲಿ ಕೈಮದ್ದು ಹಾಕಿ ಕೊಡುತ್ತಿದ್ದರಂತೆ…, ಸ್ವಲ್ಪ ತಿಂಗಳುಗಳ ಕಾಲ ,ಬ್ರಿಟೀಷರು ನಿಶ್ಯಕ್ತಿ ಹೊಂದಿ ಅಸುನೀಗುತ್ತಿದ್ದರು ಎಂಬುದು ತಿಳಯಲ್ಪಡುವ ವಿಷಯ..ಇದು ಉಪಯೋಗ ಇದ್ದಿತ್ತು ಆಗ. ಯಾಕೆಂದರೆ ಶತ್ರು ಸೈನಿಕರ ಸದೆ ಬಡಿವ ದಾರಿಯನ್ನು ಕಂಡುಕೊಂಡ ರೀತಿ ಎನ್ನಬಹುದು.

ಆದರೆ ಈಗಲೂ ಚಾಲ್ತಿಯಲ್ಲಿರುವ ಈ ಕೈ ಮದ್ದು ಎಂಬ ಸೈಲೆಂಟ್ ಕಿಲ್ಲರ್ ಅನ್ನು,ತಿನ್ನುವ ಜೀವ ಚೈತನ್ಯದಲ್ಲಿ ಬೆರೆಸಿ, ಜೀವ ಹಿಂಡುತ್ತಾ ಇರುವುದು ವಿಷಾದನೀಯ.ನಿಜ..ತಿಂದ ಮೇಲೆ ಒಂದೇ ಸಲ ಪ್ರಾಣ ಹೊರಟು ಹೋದರೆ ಬೇಜಾರು ಇಲ್ಲ.. ಮುಕ್ತಿ ದೊರೆಯಿತು ಹೀಗಾದರೂ ಎನ್ನಬಹುದು.. ಆದರೆ, ತಿಂದವರು ಬದುಕಿನುದ್ದಕ್ಕೂ ಅನುಭವಿಸುವ ಯಾತನೆ ಇರುತ್ತದಲ್ಲ, ಅದು ಯಾರಿಗೂ ಬೇಡ…

ಇದಕ್ಕೆ ಆಯುರ್ವೇದದಲ್ಲಿ “ಗರವಿಷ” ಎಂತಲೂ ಉಲ್ಲೇಖಿಸಲಾಗಿದೆ…

ವಿಷದ ಲಕ್ಷಣಗಳು :

ಈ ವಿಷ ಸೇವನೆಯ ಪ್ರಕರಣವು ಬೆಳಕಿಗೆ ಬರುವುದು ನಿಶ್ಚಿತವಾದರೂ ಸ್ವಲ್ಪ ಸಮಯ ಹಿಡಿಯುವುದು ಖಚಿತ.

* ಪಾಂಡುತ್ವ (ರಕ್ತಹೀನತೆ)
* ದುರ್ಬಲತೆ
* ಅಲ್ಪಾಗ್ನಿ (ಅಜೀರ್ಣ ಸಮಸ್ಯೆ)
* ಗ್ರಹಣಿದೋಷ (ಹೊಟ್ಟೆಯ ಸಮಸ್ಯೆಗಳು)
* ಜ್ವರ

ಹೀಗೇ ಒಂದೊಂದು ರೀತಿ ಖಾಯಿಲೆ ಶುರು ಆಗುತ್ತದೆ.. ಅಸಿಡಿಟಿ ಇದ್ದವರಿಗೆ ಅಸಿಡಿಟಿ ಕಂಟ್ರೋಲ್ ಆಗದು. ಜೀರ್ಣಕ್ರಿಯೆ ಕೈಕೊಟ್ಟು ,ಆಗಾಗ ನಿಶ್ಯಕ್ತಿ ಹೊಂದುತ್ತದೆ ಜೀವ.ಮನುಷ್ಯನನ್ನು ನಿತ್ರಾಣವಾಗಿಸಿ ಬಿಡುತ್ತದೆ… “ಕೈಮದ್ದು” ಬಿದ್ದು ಅನುಭವಿಸಿದವರು, ತಿಂಗಳೋ,ಎರಡು ತಿಂಗಳಿಗೊಮ್ಮೆ ವೈದ್ಯರನ್ನು ಭೇಟಿ ಮಾಡುತ್ತಲೇ ಇರಬೇಕು… ಒಂದು ತಿಂದರೆ ಹೆಚ್ಚು, ಒಂದು ತಿಂದರೆ ಕಡಿಮೆ ಎನ್ನುವ ಪರಿಸ್ಥಿತಿ ಅವರದು.

ಜೀವನ ಪರ್ಯಂತ ರೋಗಿಯಾಗೇ ಬಾಳಬೇಕು… ಮೊದಲಿನ ಉತ್ಸಾಹ ಆ ಜೀವಕ್ಕೆ ಇರದು.

ಫೋಟೋ ಕೃಪೆ : GOOGLE

ನನ್ನ ಪ್ರಶ್ನೆ ಒಂದೇ..ಇದುವರೆಗೂ ನನಗೆ ತಿಳಿಯದ ಉತ್ತರ… ನಾವು ಹಸಿದವರಿಗೆ ಒಂದು ತುತ್ತು ಹಾಕಿದಾಗ, ಅವರು ಉಂಡು ಹರಸಿದ ಆ ಕ್ಷಣ ಎಷ್ಟು ಸಂತೃಪ್ತ ಭಾವ ತಳೆಯುತ್ತೇವೆ. ಅದಕ್ಕೆ ನಮ್ಮಲ್ಲಿ ಹಿರಿಯರು ಹೇಳುತ್ತಾರೆ… “ಉಂಡವರು ಹರಸುವುದು ಬೇಕಿಲ್ಲ, ನೊಂದವರು ಶಪಿಸೋದು ಬೇಕಿಲ್ಲ” ಅಂತ.ಉಂಡು ಹಸಿವು ಇಂಗಿದ ಮೇಲೆ, ಸುಖವಾಗಿ ಬಾಳಿ ಎಂದು ಬಾಯಿಬಿಟ್ಟು ಹೇಳಬೇಕು ಎಂತಲೇ ಇಲ್ಲ… ಹಸಿದ ಹೊಟ್ಟೆ ತುಂಬಿದ ಆ ಸಂತೃಪ್ತಿ ಆಗಲೇ ಹರಸಿರುತ್ತದೆ..ಹಸಿವು ಇಂಗಿಸಿದ ಜೀವವನ್ನು… ಹಾಗೇ ನೊಂದವರು ,ಹಾಳಾಗಿ ಹೋಗಿ ಅಂತ ಶಪಿಸಬೇಕು ಎಂದೇನಿಲ್ಲ.. ಅವರ ನೊಂದ ಬಿಸಿಯುಸಿರ ಕಂಬನಿ, ಆ ಕ್ಷಣವೇ ಮಣ ಶಾಪ ಹಾಕಿರುತ್ತದೆ.

ಇಷ್ಟು ಸೂಕ್ಷ್ಮ ಈ ಬದುಕಿನಲ್ಲಿ ಹಾಸು ಹೊಕ್ಕಿದ್ದರೂ ಈ ಕೈಮದ್ದು ಯಾಕಾಗಿ ಹಾಕುತ್ತಾರೆ…ಇದು ಶಾಸ್ತ್ರ, ಸಂಪ್ರದಾಯವೋ,ಅಥವಾ ಕೆಡುಕಾಗಲಿ ಎಂದೋ ..ಧ್ವೇಷ ಸಾಧನೆಗೋ ಏನು ಅಂತ ಇಂದಿನವರೆಗೂ ಅರ್ಥ ಆಗದ ವಿಷಯ… ಹಾಗೇ ವೈದ್ಯಲೋಕಕ್ಕೂ ಇದು ಸವಾಲಿನ ವಿಷಯ.ಎಷ್ಟೇ ರಕ್ತ ತಪಾಸಣೆಗೆ , ಕೈ ಮದ್ದು ಬಿದ್ದವರು ಒಳಗಾದರೂ ಗೊತ್ತೇ ಆಗದು. “ನಾಡಿ ” ನೋಡುವ ಅನುಭವಕಾರರಿಗೆ ಮಾತ್ರ ಇದು ಗೋಚರ ಆಗುವಂತಹ ಪ್ರಕ್ರಿಯೆ. ಆಯುರ್ವೇದದಿಂದಲೂ ಪರಿಹಾರವಿದೆ. ಹಾಗೇ ವೇದಾದ್ಯಯನ ಹೊಂದಿದ ನುರಿತ ಜ್ಯೋತಿಷ್ಯಗಾರರು, ಕೂಲಂಕಷವಾಗಿ ಹೇಳಬಲ್ಲರು. ಯಾರಿಂದ? ಎಂತಹ ಆಹಾರದಲ್ಲಿ ಹಾಕಿದಾರೆ ಎಂದು.

“ಕೈಮದ್ದು” ಯಾಕಾಗಿ ಇದೆ?.ಏನಕ್ಕೆ ಇನ್ನೂ ಜೀವಂತವಾಗಿ ಚಾಲ್ತಿಯಲ್ಲಿದೆ ?ಚರ್ಚೆ ಪ್ರಯೋಜನ ಇಲ್ಲದ್ದು…ಅನಗತ್ಯ ಎನಿಸಿದರೂ,ತಿಂದವರು ಅನುಭವಿಸುವ ಪ್ರತೀಕ್ಷಣದ ಯಾತನೆಯ ಬಿಸಿಯುಸಿರು ,ತಿನ್ನಲು ಕೊಟ್ಟು ಖುಷಿ ಪಡುವವರಿಗೆ ತಾಕದೇ ಇರದು…ಯಾಕೆಂದರೆ ತುತ್ತು ನೀಡಿದರೆ,ದೇವಸ್ಥಾನ ಸುತ್ತಿ ಬಂದಂತಹ ಪುಣ್ಯ ಲಭಿಸುತ್ತದೆ ಎಂದಾದಲ್ಲಿ,ಜೀವವನ್ನು ನರಕಯಾತನೆಗೆ ದೂಡುವ , ವಿಷ ನೀಡಿದವನಿಗೆ ನರಕವೇ ಪ್ರಾಪ್ತಿ ಆಗುತ್ತದೆ ಎಂಬುದೂ ಅಷ್ಟೇ ಖಂಡಿತ..

ಕೊಡುವುದಾದರೆ ಒಂದೇ ಒಂದು ತುತ್ತೇ ಆಗಲಿ, ಅದು ಜೀವ ಉಳಿಸುವಂತಿರಬೇಕು. ನೀಡಿದರೂ ಮೃಷ್ಟಾನ್ನ, ಜೀವ ತೆಗೆಯುವಂತದ್ದು ಎಂದಾದರೆ ಖಂಡಿತ ಪುಣ್ಯ ಲಭಿಸದು.
ಪಾಪ, ಪುಣ್ಯಗಳ ಲೆಕ್ಕಾಚಾರ ಮೇಲಿನವನ ಬಾಬ್ತು. ಆದರೂ ತಿನ್ನುವ ಆಹಾರ ಸಾಕ್ಷಾತ್ ಆ ಜಗನ್ಮಾತೆ ಅನ್ನಪೂರ್ಣೇಶ್ವರಿ ಎಂದೇ ಅರಿತು ಕಣ್ಣಿಗೆ ಒತ್ತಿ ತಿನ್ನುವ, ಜೀವಕ್ಕೆ ಚೈತನ್ಯ ತುಂಬುವ ಆಹಾರಗಳಲ್ಲಿ ಇಂತಹ ವಿಷ ವಸ್ತು ಹಾಕಿ ಕೊಡಲು, ಅದು ಹೇಗೆ ಮನಸ್ಸು ಬರುತ್ತದೋ ಕಾಣೆ.. ಮೃಗೀಯ ಮನಸ್ಸುಗಳಿಗೆ ಮಾತ್ರ ಸಾದ್ಯ. ತಾಯ್ಮನದ ಮನಸ್ಸುಗಳಿಗೆ ಖಂಡಿತ ಸಾಧ್ಯವಿಲ್ಲ. ಶತ್ರುಗಳನ್ನೂ ಕೂಡ ಮಮತೆಯಿಂದ ಕಾಣುವವರು, ತಾಯ್ಮನದವರು…ಮಿತ್ರರನ್ನೂ ಶತ್ರುವಿನಂತೆ ಕಾಣುವವರು ಈ ಮೃಗೀಯ ಮನದವರು… “ಅನ್ನಂ ಪರಬೃಹ್ಮ ಸ್ವರೂಪಂ “ಅಂತಾರೆ. ಎಚ್ಚೆತ್ತು ನಡೆದರೆ ಒಳಿತಾದೀತು.


  • ಶೋಭಾ ನಾರಾಯಣ ಹೆಗಡೆ, ಶಿರಸಿ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW