ರಾತ್ರಿ ಊಟ ಬಿಟ್ಟ ಮೇಲೆ ದೇಹದಲ್ಲಿ ಆದ ಬದಲಾವಣೆ

ರಾತ್ರಿ ಊಟ ಬಿಟ್ಟ ಮೇಲೆ ಹಾಗೂ ವಾಕಿಂಗ್ ನಿಂದ 40 ಕೆಜಿ ಇಳಿಸಿದ್ದಾರೆ, ಕಡಿಮೆ ಆಗುವುದು ನಮ್ಮ ನಿರಂತರ ಜೀವನ ಶೈಲಿ ಹಾಗೂ ಕೆಲವು ವರ್ಷಗಳ ಅಭ್ಯಾಸದಿಂದ ಮಾತ್ರ ಅದು ಮನದಟ್ಟಾದರೆ ಮಾತ್ರ ದೇಹ ಸಂಗ್ರಹಿಸಿರುವ ಕೊಬ್ಬು ಬಿಡುತ್ತದೆ. ಉದ್ಯಮಿ, ಲೇಖಕರಾದ ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಾನು ವಿಪರೀತ ಸ್ಥೂಲಕಾಯಕ್ಕೆ ತಲುಪಿದ್ದೆ,  145 ಕಿಲೋ ತೂಕ ಬಾರವಿದ್ದೆ. ವಿಪರೀತವಾಗಿ ಬೋರ್ಗರೆಯುವ ಗೊರಕೆ. ಹೈಬಿಪಿ ಮತ್ತು ಹೊಕ್ಕುಳ ಹರ್ನಿಯ. ಎರೆಡು ಹೊತ್ತು ಇನ್ಸುಲಿನ್ ತೆಗೆದು ಕೊಂಡರೂ ನಿಯಂತ್ರಣಕ್ಕೆ ಬಾರದ ಡಯಾಬಿಟೀಸ್.  ಹತ್ತು ಹೆಜ್ಜೆ ನಡೆಯಲೂ ಸಾಧ್ಯವಿಲ್ಲದ ಹೆಚ್ಚು ಹೊತ್ತು ನಿಲ್ಲಲಾರದ ಕೆಟ್ಟ ಪರಿಸ್ಥಿತಿ ಇವತ್ತು ಗರ್ತಿಕೆರೆಯ ಗೆಳೆಯ ಫಾರೂಕ್ ಅವರು “ಸರ್ ನಿಮ್ಮ ತೂಕ ತುಂಬಾ ಇಳಿದಿದೆ ನೋಡಿ ” ಅಂತ ನನ್ನ ಮಾರ್ನಿಂಗ್ ಬೈಟ್ಸ್ ನೋಡಿ ಬರೆದಿದ್ದಾರೆ. ಪತ್ರಕರ್ತರಾದ ಗುರುಮೂರ್ತಿ ದೊಣೆಹಳ್ಳಿ ನನ್ನ ಪಿಟ್ನೆಸ್ ಜರ್ನಿಗೆ ಅಕ್ಷರ ರೂಪ ನೀಡಿ ಎಂದಿದ್ದಾರೆ ಆದ್ದರಿಂದ ಇಲ್ಲಿ ಬರೆದಿದ್ದೇನೆ ನೋಡಿ.

ನನ್ನ ತೂಕ ಕಳೆದ ವರ್ಷಕ್ಕೆ 110- 108 ಇತ್ತು. ಇದು 2019ರಲ್ಲಿ 145ರ ಆಸು ಪಾಸಿನಲ್ಲಿತ್ತು. ಈ ವರ್ಷ 105 – 104 ರಲ್ಲಿದೆ. ಕೆಲವೊಮ್ಮೆ 106ರ ತನಕ ಹೋಗುತ್ತದೆ. (ಇದು ನನ್ನ 25 ವರ್ಷದ ಹಿಂದಿನ ತೂಕ ಆಗಿತ್ತು). 2019ರ ಶಿವರಾತ್ರಿಯಿಂದ ರಾತ್ರಿ ಊಟ ಬಿಟ್ಟೆ. ಇದು ನಿರಂತರ ಅಭ್ಯಾಸ ಆಗಿ ಈಗಲೂ ಮುಂದುವರೆದಿದೆ. 2025ರ ಶಿವರಾತ್ರಿಗೆ ಆರು ವರ್ಷ ಆಗುತ್ತದೆ. ಇದರಿಂದ ಆಗಿರುವ ಉಪಯೋಗಗಳು ನನಗೆ ಅಪಾರ. ನಿತ್ಯ ರಾತ್ರಿ ಊಟ ಬಿಟ್ಟಿದ್ದು ಮತ್ತು ಬೆಳಿಗ್ಗೆ ಒಂದು ಗಂಟೆ ವಾಕಿಂಗ್ ನನ್ನ ಜೀವನವನ್ನೇ ಬದಲಾಯಿಸಿದೆ. ಇನ್ನೊಂದು ವಿಶೇಷ ಗೊತ್ತಾ ನನ್ನ ತೂಕ ಸುಮಾರು 40 ಕೆಜಿ ಇಳಿದಿದ್ದರೂ ನನ್ನ ದೇಹದ ಗಾತ್ರ – ರೂಪ – ಮುಖ -ಹೊಟ್ಟೆ ಕೊಬ್ಬು ಮಾತ್ರ ಕಡಿಮೆಯಾಗಿರಲಿಲ್ಲ.

ಈಗ ತೂಕ ಒಂದು ಸ್ಥಿರ ಸಂಖ್ಯೆಗೆ ಬಂದು ನಿಂತಿದೆ. ಆದರೆ ನನ್ನ ದೇಹದಲ್ಲಿ ಬಹಳ ಬದಲಾವಣೆ ಆಗಿದೆ. ಈಗ ನೋಡಿದವರಿಗೆ ನಾನು ಸಣ್ಣಗಾದ ಹಾಗೆ ಕಾಣುತ್ತೇನೆ. ನನ್ನ ಸೊಂಟದ ಸುತ್ತಳತೆ ಕಡಿಮೆ ಆಗಿದೆ, ಬೊಜ್ಜು ಕಡಿಮೆ ಆಗಿದೆ, ಮುಖದ ಕೊಬ್ಬು ಸಂಪೂರ್ಣ ಇಳಿದಿದೆ. ಆದ್ದರಿಂದಲೇ ನನ್ನ ನೋಡಿದವರೆಲ್ಲ ಇವು ತುಂಬಾ ಬದಲಾಗಿದೆ ಸಪೂರ ಆಗಿದ್ದೀರಿ ಇತ್ಯಾದಿ ಹೇಳುತ್ತಾರೆ. ಸ್ಥೂಲಕಾಯ ನಿವಾರಣೆ ಮತ್ತು ಅದರ ವಿಜ್ಞಾನವೇ ಬೇರೆ, ಅದು ನಮ್ಮ ಜೀವ ಮತ್ತು ಜೀವನದ ಜೊತೆಗೆ ತಳಕು ಹಾಕಿಕೊಂಡಿದೆ.

ನಮ್ಮ ಜೀವನ ಶೈಲಿ ದೇಹದ ತೂಕ ಕೊಬ್ಬು ಹೆಚ್ಚಾಗಿ ಮಾಡಲು ಕಾರಣವಾಗುತ್ತದೆ. ನೀವು ಧಿಡೀರ್ ಎಂದು ತೂಕ ಕಡಿಮೆ ಮಾಡಿದರು. ಅದು ದೇಹದ ಕೊಬ್ಬು ಮಾತ್ರ ಕರಗಲು ಬಿಡುವುದಿಲ್ಲ. ಅದು ಆಪತ್ತಿಗೆ ಸಂಗ್ರಹವಾಗಿರುವ, ಜೀವಕ್ಕೆ ಅತ್ಯವಶ್ಯಕವಾಗಿ ಬೇಕಾದ ಆಹಾರದ ಉಗ್ರಾಣ ಅದು. ಕಡಿಮೆ ಆಗುವುದು ನಿಮ್ಮ ನಿರಂತರ ಜೀವನ ಶೈಲಿ ಹಾಗೂ ಕೆಲವು ವರ್ಷಗಳ ಅಭ್ಯಾಸದಿಂದ ಮಾತ್ರ ಅದು ಮನದಟ್ಟಾದರೆ ಮಾತ್ರ ದೇಹ ಸಂಗ್ರಹಿಸಿರುವ ಕೊಬ್ಬು ಬಿಡುತ್ತದೆ. ಹಾಗಾಗಿ ಸ್ಥೂಲ ಕಾಯದವರು ಮೊದಲಿಗ ನಮ್ಮ ಜೀವನ ಶೈಲಿ ಬದಲಿಸಿಕೊಳ್ಳಬೇಕು. ಇದು ಕೆಲವು ದಿನಕ್ಕಲ್ಲ ನಿರಂತರ ಜೀವನಪೂರ್ತಿ ಎಂದು ಅಭ್ಯಾಸ ಮಾಡಬೇಕು. ಜೊತೆಗೆ ವಾಕಿಂಗ್ – ಉಪವಾಸಗಳು ನಿರಂತರವಾಗಿರಬೇಕು ಹಾಗಿದ್ದರೆ ಮಾತ್ರ ನೀವು ಫಿಟ್ ಅಂಡ್ ಹೆಲ್ತಿ ಆಗಲು ಸಾಧ್ಯ.

ಇದಕ್ಕೆ ನಾನೇ ಉದಾಹರಣೆ ಮತ್ತು ನನ್ನ ಅಭ್ಯಾಸಗಳೇ ಉದಾಹರಣೆ, 2019 ರಿಂದ 2025ರ ವರೆಗಿನ ನನ್ನ ಫಿಟ್ನೆಸ್ ಜರ್ನಿ ನನ್ನ ಫೋಟೋದಲ್ಲಿ ಆಗಿರುವ ಬದಲಾವಣೆಯನ್ನು ನೀವು ಗಮನಿಸಬಹುದು. ಇದಿಷ್ಟೇ ಅಲ್ಲ ನನ್ನ ನಿಯಂತ್ರಣಕ್ಕೆ ಬರದೇ ಇದ್ದ ಶುಗರ್ – ಬಿಪಿ ಈಗ ನಾರ್ಮಲ್ ಗೆ ಬಂದಿದೆ. ದಿನಕ್ಕೆ ಎರಡು ಹೊತ್ತು ಇಪ್ಪತ್ತೈದು ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುವುದು ಈಗ ನಿಂತು ಹೋಗಿದೆ. ನಿತ್ಯ ಸಿಹಿ ನಿಮ್ಮ ಹಾಗೆ ತಿನ್ನುತ್ತೇನೆ. ಮಲಗಿದ ಕೂಡಲೇ ದಿಡೀರಾಗಿ ಬೋರ್ಗೆರೆಯುತ್ತಿದ್ದ ಗೊರಕೆ ಇಲ್ಲವೇ ಇಲ್ಲ.

ಹೊಕ್ಕುಳ ಹರ್ನಿಯ ಆಪರೇಷನ್ ಮಾಡುವ ಹಂತಕ್ಕೆ ಹೋಗಿದ್ದು ಈನ ಅದಾಗಿಯೇ ಸಂಪೂರ್ಣ ಗುಣವಾಯಿತು. ನನ್ನ ದೇಹದ 145 ಕಿಲೋ ತೂಕ ಈಗ 105ಕ್ಕೆ ಇಳಿದಿದೆ, ಜೀವನದಲ್ಲಿ ಜೀವನೋತ್ಸವ ಇನ್ನೊಮ್ಮೆ ಹೊಸದಾಗಿ ಬಂದಿದೆ. ಇದೆಲ್ಲ ತೂಕ ಇಳಿದ ಮ್ಯಾಜಿಕ್… ಈಗಲೇ ನಿಮಗ್ಯಾರಿಗಾದರೂ ತೂಕ ಜಾಸ್ತಿ ಆಗುತ್ತಿದೆ ಅಂದರೆ ಈಗಲೇ ಎಚ್ಚರಿಕೆವಹಿಸಿ.

ಕೆಲವೇ ಕೆಜಿ ಹೆಚ್ಚಿರುವ ತೂಕ ಕಡಿಮೆ ಮಾಡುವುದು ಸುಲಭ ಆದರೆ ಅದು ನಿಗದಿಕ್ಕಿಂತ ನನಗಾದ ರೀತಿ 50ಕೆಜಿ ಎಲ್ಲಾ ಜಾಸ್ತಿ ಆದರೆ ಅದನ್ನು ಇಳಿಸಿ ಕೊಳ್ಳಲು ಕೆಲವು ವರ್ಷಗಳೇ ಬೇಕು ಅದರ ಜೊತೆ ಬೋನಸ್ ರೂಪದಲ್ಲಿ ಗೊರಕೆ-ಬಿಪಿ- ಶುಗರ್ ಕೂಡ ಸೇರಿ ಜೀವನ ನರಕ ಮಾಡುತ್ತದೆ. ಸ್ಥೂಲ ಕಾಯ ನಿರಂತರ ಸಾಧನೆಯಿಂದ ಮಾತ್ರ ನಿಯಂತ್ರಣ ಮಾಡಲು ಮತ್ತು ಕಡಿಮೆ ಮಾಡಲು ಸಾಧ್ಯ.


  • ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW