ದೊಡ್ಡವರ ಸಹವಾಸ ಉಪಯೋಗವಿಲ್ಲ – ಪದ್ಮನಾಭ. ಡಿ

ಒಂದು ಕತೆ ಜೀವನಕ್ಕೆ ಪಾಠ ಹೇಳಿಕೊಡುತ್ತದೆ, ಆ ಕತೆಯಿಂದ ನೂರಾರು ಬದುಕಿಗೆ ನೀತಿಪಾಠವಾಗುತ್ತದೆ ಅಂತಹ ಕತೆಯೊಂದು ಕತೆಗಾರ ಪದ್ಮನಾಭ. ಡಿ ಅವರು ಬರೆದಿರುವ ‘ದೊಡ್ಡವರ ಸಹವಾಸ ಉಪಯೋಗವಿಲ್ಲ’ ಕತೆಯನ್ನು ತಪ್ಪದೆ ಓದಿ…

ಕಾಡಿನ ಸಮೀಪ ಇರುವ ಹಳ್ಳಿಯಲ್ಲಿ ಒಂದು ಹಸು ಮತ್ತು ಕುದುರೆ ಇದ್ದವು. ಜೊತೆಯಲ್ಲಿ ಮೇಯಲು ಹೋಗುತ್ತಿದ್ದವು. ಪಕ್ಕದಲ್ಲೇ ಒಬ್ಬ ಅಗಸ ಒಂದು ಕತ್ತೆಯನ್ನು ಕುರಿಯನ್ನು ಸಾಕಿದ್ದನು. ಮೇವಿಗಾಗಿ ಅವೆರಡೂ ಕುದುರೆ ಹಸುಗಳ ಜೊತೆ ಹೋಗುತ್ತಿದ್ದುದ್ದರಿಂದ ಗೆಳೆಯರಾದವು . ಆ ಕಾಡಿನಲ್ಲಿ ನಾಯಿಗಳಿಗೆ ಹೆದರುವ ಒಂದು ಮೊಲ ಇತ್ತು. ಈ ನಾಲ್ಕು ದೊಡ್ಡ ಪ್ರಾಣಿಗಳ ಸಹವಾಸ ಮಾಡಿದರೆ ನನ್ನ ಭಯ, ಕಷ್ಟ ದೂರಾಗುವುದೆಂದು ತಿಳಿದು ಅವುಗಳ ಮುಂದೆ ಜಿಗಿಯುವುದು, ಶಬ್ದ ಮಾಡುವುದು, ಕುಪ್ಪಳಿಸುವುದು ಮಾಡುತ್ತಿತ್ತು. ಹಾಗೆಯೇ ಅವುಗಳ ಜೊತೆ ಸ್ನೇಹ ಬೆಳೆಯಿತು.


ಫೋಟೋ ಕೃಪೆ : google

ಒಂದು ದಿನ. ಬೇಟೆ ನಾಯಿಯೊಂದು ಮೊಲವನ್ನು ಅಟ್ಟಿಸಿಕೊಂಡು ಬಂದಿತು. ಆಗ ಮೊಲ ಹಸುವಿನ ಬಳಿ ಹೋಗಿ ನನ್ನನ್ನು ಕಾಪಾಡು ಎಂದು ಕೇಳಿತು. ಹಸುವು “ಅಯ್ಯಾ ನನಗೆ ಹೊತ್ತಾಯಿತು ಕರುವಿಗೆ ಹಾಲುಣಿಸಬೇಕು” ಎಂದು ಹೊರಟು ಹೋಯಿತು. ಮೊಲವು ಕುದುರೆಯ ಬಳಿ “ನನ್ನನ್ನು ಬೆನ್ನ ಮೇಲೆ ಕೂರಿಸಿಕೊ ನಾಯಿಯಿಂದ ಕಾಪಾಡು” ಎಂದಾಗ ಕುದುರೆ ” ಅಯ್ಯೋ ನನಗೆ ವಯಸಾಗಿದೆ ವೇಗವಾಗಿ ಓಡಲಾರೆ, ಭಾರ ಹೊರಲಾರೆ ಅಲ್ಲದೆ ನಿನಗಾಗಿ ಯಾರಿಗೂ ಒದ್ದು ನಿಷ್ಠೂರ ಮಾಡಿಕೊಳ್ಳಲಾರೆ” ಎಂದಿತು.

ಕೊನೆಗೆ ಕತ್ತೆಯ ಬಳಿ ಬಂದು ಗೋಗರೆಯಿತು. ಕತ್ತೆಯು “ಯಜಮಾನ ನನ್ನನ್ನು ಹೊಡೆಯುತ್ತಾರೆ. ತಡವಾದರೆ ನಿನಗಾಗಿ ನಾನು ಪೆಟ್ಟು ತಿನ್ನಲೇ?” ಎಂದಿತು ಮೊಲಕ್ಕೆ ನಿರಾಸೆಯಾಯಿತು. ನಾಯಿಯೋ ಹಿಂದೆಯೇ ಬರುತ್ತಿದೆ. ಒಂದೇ ಮನಸ್ಸಿನಿಂದ ತನ್ನ ಶಕ್ತಿಯನ್ನೆಲ್ಲಾ ಬಳಸಿ, ಓಡಿಹೋಗಿ ಪೊದೆಯಲ್ಲಿ ಅವಿತುಕೊಂಡು ಬಚಾವಾಯಿತು. ಸ್ವಲ್ಪ ಹೊತ್ತು ನಿರಾಳವಾದ ನಂತರ ಯೋಚಿಸಿತು.

ಫೋಟೋ ಕೃಪೆ : google

“ಕಷ್ಟಕಾಲದಲ್ಲಿ ಯಾರಬಳಿಗೂ ಹೋಗಬಾರದು. ಅತಿಯಾಗಿ ಯಾರನ್ನು ನಂಬಬಾರದು. ನಿಜ ಅಲ್ಲವೇ ಯೋಚಿಸಿ ನೋಡಿ ಸಮಯ ಕಳೆಯಲು ಮಾಡುವ ಒಡನಾಟ, ನಿಜವಾದ ಗೆಳೆತನವಲ್ಲ. ಏನೋ ಖುಷಿಯಿಂದ ದೊಡ್ಡವರೆನಿಸಿಕೊಂಡವರ ಒಡನಾಟಕ್ಕೆ ಸಾಮೀಪ್ಯಕ್ಕೆ ಬಯಸುತ್ತೇವೆ. ಆದರೆ ಅವರ ದೊಡ್ಡಸ್ತಿಕೆಯಿಂದ ನಮಗೇನೂ ಉಪಯೋಗವಿಲ್ಲ. ದೊಡ್ಡವರ ಸಹವಾಸ ನಮ್ಮ ಬಾಳಲ್ಲಿ ಸಮಯಕ್ಕೆ ಎಂದೂ ಒದಗದು.”. ನಮ್ಮ ಉದ್ದಾರ ನಮ್ಮ ಕೈಯಲ್ಲೇ.

ಇದನ್ನೇ ಗೀತೆಯಲ್ಲಿ ಶ್ರೀ ಕೃಷ್ಣ ಹೀಗೆ ಹೇಳಿದ್ದಾನೆ ಆತ್ಮನಾ ಆತ್ಮಾನಂ ಉದ್ಧರೇತ್ ಆತ್ಮ ಏವ ಬಂಧು ಆತ್ಮ ಏವ ಸಖಾ..


  • ಪದ್ಮನಾಭ. ಡಿ – ನಿವೃತ್ತ ಪೋಸ್ಟ್ ಮಾಸ್ಟರ್, ಸಾಹಿತ್ಯ ಕೃತಿಗಳು, ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018, ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ – 2022 ಕವಿಗಳು, ಲೇಖಕರು, ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading