ಹೊಯ್ಸಳ ಶಿಲ್ಪಕಲಾ ಕೆತ್ತನೆಯ ಮುತ್ತು – ಬಾಲು ದೇರಾಜೆ

ಶ್ರೀ ಕರಿಯಪ್ಪ ಆಚಾರ್ಯ ಹಾಗೂ ಶ್ರೀಮತಿ ಪಾಪಮ್ಮ ದಂಪತಿಯರ ಮಗನಾದ ಶ್ರೀಮುತ್ತು ರಾಜ್  ಆಚಾರ್ಯ ಪರಂಪರಾಗತವಾಗಿ ಬಂದ ಕಸುಬು ‘ಹೊಯ್ಸಳ ಶಿಲ್ಪ ಕಲಾ ಕೆತ್ತನೆ’ ಜೀವನ ವೃತ್ತಿಯನ್ನಾಗಿ ಮುಂದುವರೆಸಿದರು, ಅವರ ಕುರಿತು ಲೇಖಕ ಬಾಲು ದೇರಾಜೆ ಅವರು ಬರೆದ ಲೇಖನವನ್ನು ತಪ್ಪದೆ ಓದಿ…

ಶ್ರೀ ಮುತ್ತುರಾಜ್ ಕಲೆ, ಸಂಸ್ಕೃತಿಗಳ ಬೀಡು, ಹೊಯ್ಸಳರ ನಾಡು. ಹಿಂದಿನ ಅರಸರಾದ ವಿಷ್ಣು ವರ್ಧನರ ಕಾಲದಲ್ಲಿಯೇಶಿಲ್ಪಕಲೆಗೆ ಪ್ರಾಮುಖ್ಯತೆಯನ್ನು ಪಡೆದಿದ್ದು, ದೇವಾಲಯವು ಶಿಲ್ಪಕಲಾ ಕೆತ್ತನೆ ಗಳಿಂದ ಕೂಡಿದೆ. ಹಳೇಬೀಡು ಹೊಯ್ಸಳ ಶಿಲ್ಪ ಕಲಾ ಕೆತ್ತನೆ ಕೇಂದ್ರವಾಗಿ ಪರಿಣಮಿಸಿದೆ ಸುಮಾರು ನೂರಾರು ವರ್ಷಗಳ ಹಿಂದೆ ಹಾಸನಜಿಲ್ಲೆಯ ಹಳೇಬೀಡುನಲ್ಲಿ ವಾಸಿಸುತ್ತಿದ್ದ ಶ್ರೀ ಇರುಳಪ್ಪ ಆಚಾರ್ಯ ಹಾಗೂ ಶ್ರೀಮತಿ ಲಕ್ಷ್ಮಿದಂಪತಿಯರು ತಮ್ಮಜೀವನಕ್ಕಾಗಿ ಕಸುಬಾದ “ಹೊಯ್ಸಳ ಶಿಲ್ಪಕಲಾ ಕೆತ್ತನೆ” ಯನ್ನು ಶ್ರೀಯುತರು ಆರಂಭಿಸಿ,ಇದರಲ್ಲೇ ತಮ್ಮ ಜೀವಿತಾವಧಿಯನ್ನು ಕಳೆದ ನಂತರ ಇವರ ಮಗನಾದ ಶ್ರೀಕರಿಯಪ್ಪ ಆಚಾರ್ಯ ಈ ಕಸುಬನ್ನುಪತ್ನಿ ಶ್ರೀಮತಿ ಪಾಪಮ್ಮಜೊತೆಯಾಗಿ ಮುಂದುವರೆಸಿ, ಸುಮಾರು 20ವರ್ಷಗಳ ಹಿಂದೆಯೇ ತೀರಿ ಕೊಂಡಿದ್ದರು.

ಶ್ರೀ ಕರಿಯಪ್ಪ ಆಚಾರ್ಯ ಹಾಗೂ ಶ್ರೀಮತಿ ಪಾಪಮ್ಮ ದಂಪತಿಯರ ಮಗನಾದ ಶ್ರೀಮುತ್ತುರಾಜ್  ಆಚಾರ್ಯ ಪರಂಪರಾಗತವಾಗಿ ಬಂದ ಕಸುಬು ಹೊಯ್ಸಳ ಶಿಲ್ಪ ಕಲಾ ಕೆತ್ತನೆಯ
ಕೇಂದ್ರವಾಗಿಸಿ ಈ ಕಾಯಕವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ವೃತ್ತಿಯನ್ನಾಗಿ ಮುಂದುವರೆಸಿದರು. ಇವರ ಪತ್ನಿ ಶ್ರೀಮತಿ ಹಾಗೂ ನಂದನ್-ಚಂದನ್ ಇಬ್ಬರು ಗಂಡು ಮಕ್ಕಳು. ಶಾಲಾದಿನಗಳ ರಜೆಯಲ್ಲಿ ನಂದನ್ ತಂದೆಯೊಡನೆ ಕಾಯಕದಲ್ಲಿ ಭಾಗಿಯಾಗಿ ತರಬೇತಿಗೊಳ್ಳುತ್ತಿದ್ದಾನೆ.

41ನೇ ವರ್ಷ ಪ್ರಾಯದ ಶ್ರೀಮುತ್ತುರಾಜ್ ರು ಶ್ರೀ ವಿಶ್ವನಾಥ ಆಚಾರ್ಯರನ್ನು ಗುರುವೆಂದು ಪರಿಗಣಿಸಿದ್ದು ಅವರ ಭಾವಚಿತ್ರವನ್ನು ತಮ್ಮ ಕಲಾಕೇಂದ್ರ ದಲ್ಲಿಟ್ಟುಕೊಂಡಿದ್ದಲ್ಲದೆ ಡಾ/ ರಾಜ್ ಕುಮಾರ ರ ಭಕ್ತರಾಗಿದ್ದು ಕನ್ನಡ ಪದ್ಯಗಳನ್ನು ಗುನುಗುತ್ತಾ ಕೆತ್ತನೆಯ ಕೆಲಸದಲ್ಲಿ ತೊಡಗುತ್ತಾರೆ.ಇವರಿಗೆ ಕಳೆದ ವರ್ಷ “ಕಾಯಕ ಯೋಗಿ” ಎಂಬ ರಾಜ್ಯ ಪ್ರಶಸ್ತಿಯೂ ದೊರಕಿದೆ.

This slideshow requires JavaScript.

 

ಶ್ರೀ ಪರಮೇಶ್ ಆಚಾರ್ಯರು ಶ್ರೀ ಮುತ್ತುರಾಜ್ ರ ದೊಡ್ಡಪ್ಪನ ಮಗನಾಗಿದ್ದು ಅಣ್ಣನ ಜೊತೆಯಲ್ಲೇ ಈ ಕೆತ್ತನೆಯ ಕಾಯಕದಲ್ಲಿ ಕೈ ಜೋಡಿಸುತ್ತಿದ್ದಾರೆ. ಇವರ ಪತ್ನಿ ವಿದ್ಯಾ ಹಾಗೂ ಲಿಖಿತ್-ಧನ್ಯಾ ಚಿಕ್ಕಮಕ್ಕಳಿದ್ದಾರೆ. ಅಲ್ಲದೆ ಇವರ ಶಿಲ್ಪಕಲಾ ಕೇಂದ್ರದ ಪಕ್ಕದಲ್ಲೇ ಭಾವರಾದ ಶ್ರೀ ಚಂದ್ರು ಆಚಾರ್ಯ ರೂ ಕೆತ್ತನೆ ಯಲ್ಲಿ ತೊಡಗಿದ್ದಾರೆ… ಇಲ್ಲಿನ ದೊಡ್ಡ ವಿಗ್ರಹ ಇತ್ಯಾದಿಗಳನ್ನು ಗ್ರಾಹಕರ ಅಪೇಕ್ಷೆಯಂತೆ ಅಡಿಯ ಲೆಕ್ಕಾಚಾರದಲ್ಲಿ ರೂಪಿಸಿಕೊಡುತ್ತಾರೆ.

ಸ್ಥಳೀಯ ಸೇರಿದಂತೆ ಹಾಸನ, ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಕೋಲಾರ ಮೊದಲಾದ ಕಡೆಗಳಿಗೆ ಮಾರಾಟವಾಗುತ್ತಿದೆ. ಅಲ್ಲದೆ ಚಿಕ್ಕ,ಚಿಕ್ಕ ಕೆತ್ತನೆಯ ಮೂರ್ತಿ ಇತ್ಯಾದಿಗಳನ್ನು ದೇವಾಲಯದ ಎದುರುಗಡೆ ಮುತ್ತುರಾಜ್ ರ ಪತ್ನಿ ಗಾಯತ್ರಿ ಹಾಗೂ ಇವರ ತಂಗಿ ಶ್ರೀಮತಿ ರಾಧಾ ದಿನವಿಡೀ ಕುಳಿತು ಮಾರಾಟದ ಕಾಯಕದಲ್ಲಿ ತೊಡಗುತ್ತಾರೆ..
ಇವರ ಮಾತಿನಂತೆ ಚಿಕ್ಕ ವಯಸ್ಸಿನಲ್ಲೇ ತಂದೆಯವರನ್ನು ಕಳಕೊಂಡು ಬಡತನದಿಂದ ಬೆಳೆದವರು . ಕಷ್ಟದ ದಿನಗಳನ್ನು ಕಂಡವರು. ನಮ್ಮ ಸುಮಾರು 2 ಗಂಟೆಗಳ ಕಾಲದ ಮಾತುಕತೆಯಲ್ಲಿ ಪ್ರೀತಿ ವಾತ್ಸಲ್ಯ ವು ಕಂಡು ಬಂದು, ಸಜ್ಜನರಾಗಿರುವ ಇವರು ಸಜ್ಜನಿಕೆಯ ವರ್ತನೆಯಿಂದಾಗಿ ಸಮಯ ಮೀರಿತ್ತು . ಮಳೆಯೂ ಅರಂಭವಾಗಿತ್ತು ಇವರು ಕಸುಬಿನ ಮೂಲಕವಲ್ಲದೆ ತಮ್ಮ ಆಚಾರದಿಂದಲೂ ಆಚಾರ್ಯರೇ..

ಇಲ್ಲಿ ಸುತ್ತಮುತ್ತಲಿನ ಪ್ರದೇಶದಿಂದ ಕಲ್ಲುತಂದು ವಿಗ್ರಹಗಳನ್ನು ಕೃಷ್ಣಶಿಲೆ ,ಅಮೃತ ಶಿಲೆಗಳಲ್ಲಿ ನಾಜೂಕಿನಿಂದ ಸುಂದರವಾಗಿ ಕೆತ್ತಲ್ಪಡುವುದರಿಂದ ಈ ವಿಗ್ರಹ ಇತ್ಯಾದಿಗಳಲ್ಲಿ ಕಲಾವರಣಗೊಂಡು ಕಣ್ಮನ ಸೆಳೆಯುವಂತಾಗಿ ಇನ್ನೂ ಹೆಚ್ಚಿನ ನಾಡಿನಾದ್ಯಂತ ಗ್ರಾಹಕರು ಬಂದು ಖರೀದಿಗೊಳಪಟ್ಟರೆ ನಮ್ಮ ಜೀವನ ಸುಗಮವಾಗಬಹುದೆಂದು ಅವರೆಲ್ಲರ ಆಶಯ.
ಇವರ ಹಾಗೂ ಇಂತಹ ಶಿಲ್ಪ ಕಲಾ ಕೆತ್ತನೆ ಕಲೆಯ ಕಲಾವಿದರ ಮೇಲೆ ಶ್ರೀ ಹೊಯ್ಸಳೇಶ್ವರ ಕೃಪೆ ತೋರಲಿ ಎನ್ನುವುದು ನಮ್ಮೆಲ್ಲರ ಆಶಯ….

ಶಿಲೆಗಳು ಸಂಗೀತವ ಹಾಡಿದೇ…


  • ಲೇಖನ ಮತ್ತು ಕ್ಯಾಮೆರಾ ಹಿಂದಿನ ಕಣ್ಣು : ಬಾಲು ದೇರಾಜೆ, ಸುಳ್ಯ.

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW