ಹಣಕ್ಕಿಂತ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡಬೇಕು …ಕವಿ ನಾಗರಾಜ್ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಸಂಬಂಧಗಳ ಬಂಧದ ಬಿಗಿಹಿಡಿತ
ಎಲ್ಲೋ ಕೈ ತಪ್ಪಿ ಹೋಗುತ್ತಿದೆ
ಆಸ್ತಿ ಸಂಪತ್ತಿನ ಮೇಲಿನ ಹುಚ್ಚು ಆಸೆ
ತನ್ನ ಕದಂಬ ಬಾಹುವಿನಿಂದ ಅಪ್ಪುತ್ತಿದೆ
ಅಪ್ಪ ಅಮ್ಮ ಸಹೋದರ ಸಹೋದರಿಯರ
ಮೇಲಿನ ಪ್ರೀತಿ ಪ್ರೇಮ ವಾತ್ಸಲ್ಯ ನಶಿಸುತ್ತಿದೆ
ಸ್ವಾರ್ಥ ದುರಾಸೆ ಹೆಡೆ ಎತ್ತಿ ಮೆರೆಯುತ್ತ
ಎಲ್ಲರ ಮೇಲೆ ವಿಷಪ್ರಾಶನ ಮಾಡುತ್ತಿದೆ
ಹಣದ ತೆವಲಿಗೆ ಬಿದ್ದ ದುಷ್ಟ ಮನಸ್ಸು
ಘನಘೋರ ದುಷ್ಕೃತ್ಯವ ಮಾಡಿಸುತ್ತಿದೆ
ಕರುಣೆ ಅಂತಃಕರಣ ಪಾಪ ಪುಣ್ಯ ಮರೆತು
ಮಾಡಬಾರದನ್ನೆಲ್ಲ ಮಾಡಿ ಮುಗಿಸುತ್ತಿದೆ
ಮೋಸ ದಗ ವಂಚನೆ ಎಲ್ಲಾ ಮಾಮೂಲು
ಎಲ್ಲದಕ್ಕೂ ಕಾರಣ ನಮ್ಮ ಸಡಿಲ ಕಾನೂನು
ಕೊಲೆ ಪಾತಕರಿಗಾಗಬೇಕು ಕಠಿಣತಿ ಕಠಿಣ ಶಿಕ್ಷೆ
ಕೊಡಬಾರದು ಅವರಿಗೆ ಯಾವುದೇ ಜೀವ ಭಿಕ್ಷೆ
ಸಾಮಾಜಿಕ ಮೌಲ್ಯಕ್ಕೆ ಹೆಚ್ಚು ಒತ್ತು ಕೊಡಬೇಕು
ನೈತಿಕ ಶಿಕ್ಷಣವನ್ನ ಬಾಲ್ಯದಿಂದಲೇ ಕಲಿಸಬೇಕು
ಸಾಮಾಜಿಕ ಮಾಧ್ಯಮಗಳ ಮೇಲೆ ಬೇಕು ನಿಗಾ
ಹಣಕ್ಕಿಂತ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡಬೇಕು
- ನಾಗರಾಜ್ ಜಿ.ಎನ್.ಬಾಡ, ಕುಮಟ
