ಮನೆಯ ಮುಂದೆ ನಾಯಿ ಇರಬೇಕು. ಅದು ರಕ್ಷಣೆಗೆ ಇರಬೇಕು ಮತ್ತು ನೋಡಲು ಸುಂದವಾಗಿಯೂ ಇರಬೇಕು. ಅದರ ಬೆಲೆ ಎಷ್ಟೇ ಇದ್ದರೂ ಶ್ವಾನ ಪ್ರಿಯರು ದುಡ್ಡುಕೊಟ್ಟು ಕೊಳ್ಳುತ್ತಾರೆ. ಶ್ವಾನ ಕೊಳ್ಳುವ ಮುಂಚೆ ಈ ಲೇಖನವೊಮ್ಮೆ ಓದಿ. ಶ್ವಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಶುವೈಧ್ಯಾಧಿಕಾರಿ ಡಾ. ಎನ್.ಬಿ.ಶ್ರೀಧರ ಅವರು ನೀಡಿದ್ದಾರೆ.
ನಿಜ. ಅನೇಕ ಶ್ವಾನ ಪ್ರೇಮಿಗಳಿಗೆ ಈ ಪ್ರಶ್ನೆ ಬರುವುದು ಸಹಜ. ಯಾವ ತಳಿ ಸಾಕಬೇಕು? ಎನ್ನುವುದು. ತಳಿಯ ಆಯ್ಕೆಅವರವರ ಅಭಿರುಚಿಯಂತೆ ಇರುವುದು. ಕೆಲವರಿಗೆಅಲಂಕಾರಕ್ಕೆ ನಾಯಿ ಬೇಕಾದರೆ, ಕೆಲವರಿಗೆ ಮನೆ ಕಾಯಲಿಕ್ಕೆ ನಾಯಿ ಬೇಕು. ಮತ್ತನೇಕರಿಗೆಅವರ ಹೊಲದಲ್ಲಿ ಮಂಗಗಳನ್ನು ಬೆದರಿಸಲು, ಕಳ್ಳಕಾಕರಿಂದ ದೂರವಿರಿಸಲು ಬೇಕು. ಇನ್ನು ಕೆಲವರಿಗೆ ಸ್ನೇಹಜೀವಿಯಾಗಿರುವ ಗೆಳೆಯನ ಗುಣದ ನಾಯಿ ಬೇಕು. ಪೊಲೀಸ್ ಇಲಾಖೆಯವರಿಗೆ, ಸೈನ್ಯದವರಿಗೆ ಬಾಂಬು ಪತ್ತೆ ಹಚ್ಚಬಲ್ಲ ಪತ್ತೆದಾರ ನಾಯಿಯೇ ಬೇಕು. ಸಿನಿಮಾರಂಗದವರಿಗೆ ಅವರದೇ ಆಯ್ಕೆಯಿದೆ. ಹೀಗೆ ನಾಯಿಯ ತಳಿಯ ಆಯ್ಕೆಅದರ ಗುಣ, ಬಣ್ಣ, ರೂಪ, ಎತ್ತರ, ಗಾಂಭೀರ್ಯತೆ ಇತ್ಯಾದಿ ಅನೇಕ ಗುಣಗಳನ್ನು ಅವಲಂಭಿಸಿದೆ.
ಮನುಷ್ಯರಲ್ಲಿ ಹೇಗೆ ಶಾಂತಸ್ವಭಾವದವರು, ವ್ಯಗ್ರರೂಪಿಗಳು, ಕುಳ್ಳರು, ಎತ್ತರದವರು, ಸ್ಪುರದ್ರೂಪಿಗಳು, ಕುರೂಪಿಗಳು ಇತ್ಯಾದಿ ಬಗೆ ಬಗೆಯಗುಣದವರುಇರುತ್ತಾರೆಯೋ ಹಾಗೆಯೇ ಶ್ವಾನಗಳಲ್ಲಿಯೂ ಸಹ ವಿವಿಧಗುಣಧರ್ಮದವು ಇವೆ.
ರೂಪ, ಆಕಾರ ಮತ್ತು ಗುಣಗಳಲ್ಲಿ ಸಾಮ್ಯತೆಇರುವ ನಾಯಿಗಳನ್ನು ಒಂದು ತಳಿಗೆ ಸೇರಿದವುಎಂದು ಹೇಳಬಹುದು.ಮನುಷ್ಯ-ನಾಯಿಯರ ಗೆಳೆತನ ಏರ್ಪಟ್ಟಾಗಿನಿಂದ ಇಂದಿನವರೆಗೂಒಂದು ನಿರ್ದಿಷ್ಟಕಾರ್ಯಕ್ಕಾಗಿಒಂದುಜಾತಿಯನ್ನುಉತ್ತಮಪಡಿಸುವ ಕೆಲಸ ನಿರಂತರವಾಗಿ ಸಾಗುತ್ತಲೇಇದೆ. ಹೀಗೆ ಒಂದು ಕೆಲಸ ಮಾಡುವುದರಲ್ಲಿ ಹೆಚ್ಚು ನುರಿತ ನಾಯಿಗಳನ್ನು ಪಂಗಡಗಳಾಗಿ ವಿಂಗಡಿಸಲಾಯಿತು. ಅನೇಕ ರೀತಿಯ ವಿಂಗಡಣೆ ಸಾಧ್ಯವಿದ್ದರೂ ಮುಖ್ಯವಾಗಿ ನಾಲ್ಕು ಪಂಗಡಗಳನ್ನು ಕಾಣಬಹುದು. ಅವೆಂದರೆ, ಕೆಲಸಗಾರ ನಾಯಿಗಳು, ಬೇಟೆ ನಾಯಿಗಳು, ಮುದ್ದು ನಾಯಿಗಳು ಮತ್ತುಇತರ ನಾಯಿಗಳು.
೧.ಕೆಲಸಗಾರ ನಾಯಿಗಳು : ರಾಟ್‍ವೀಲರ್, ಪುಲಿ, ಅಲ್ಸೇಷಿಯನ್, ಡಾಬರ್‍ಮನ್, ಬಾಕ್ಸರ್, ಬುಲ್‍ಡಾಗ್, ಗ್ರೇಟ್‍ಡೇನ್, ಡಾಲ್‍ಮೇಷಿಯನ್, ಕಾಲಿ, ಬುಲ್‍ಮಾಸ್ಟಿಫ್, ಸೇಂಟ್ ಬರ್ನಾರ್ಡ್ ಮುಂತಾದವುಗಳು.
೨.ಬೇಟೆ ನಾಯಿಗಳು : ಲಾಬ್ರ ಡಾರ್‍ರಿ ಟ್ರೈವರ್, ಗೋಲ್ಡನ್ ರಿಟ್ರೈವರ್, ಡಾಷ್ ಹಂಡ್, ಕಾಕರ್ ಸ್ಟೇನಿಯಲ್, ಆಫ್ಘಾನ್ ಹೌಂಡ್, ಫಾಕ್ಸ್ ಟೆರಿಯರ್, ಐರಿಷ್ ಸೆಟ್ಟರ್, ಬೀಗಲ್, ಸಲುಕಿ, ಬ್ಲಡ್‍ಹೌಂಡ್, ಪಾಯಿಂಟರ್, ವೈಮರಾನರ್, ಮುದ್ಹೋಳ್‍ಹೌಂಡ್ ಮುಂತಾದವುಗಳು.
೩. ಮುದ್ದು ನಾಯಿಗಳು : ಪೊಮರೇನಿಯನ್, ಸ್ಟಿಟ್ಜ್, ಲ್ಹಾಸಾಫ್ಸೋ, ಪಗ್, ಪೆಕಿಂಗೀಸ್, ಪೂಡಲ್, ಚಿಹುವಾಹುವ ಮುಂತಾದವುಗಳು.
ನಮ್ಮದೇಶದಲ್ಲಿ ಜನಪ್ರಿಯವಾಗಿರುವ ಕೆಲವು ತಳಿಗಳ ಕಿರು ವಿವರವನ್ನುಇಲ್ಲಿಕೊಡಲಾಗಿದೆ. ಈ ಅಂಶಗಳು, ನಾಯಿ ಮರಿಗಳ ಆಯ್ಕೆಯಕಾಲದಲ್ಲಿ ಸಹಾಯಕವಾಗುತ್ತವೆ.

ಫೋಟೋ ಕೃಪೆ : Pinterest
ಅಲ್ಸೇಷಿಯನ್ : ಜರ್ಮನ್ ಶೆಪರ್ಡ್‍ಎಂದೂಕರೆಯಲ್ಪಡುವ ಈ ನಾಯಿ ತಳಿ ಪ್ರಪಂಚಾದ್ಯಂತಅತ್ಯಂತಜನಪ್ರಿಯವಾಗಿದೆ. ಇದು ಬಹಳ ಎಚ್ಚರಿಕೆ, ನಂಬಿಕೆ ಹಾಗೂ ಚಟುವಟಿಕೆಯುಳ್ಳದ್ದು. ತನ್ನಒಡೆಯನಿಗಾಗಿ ಪ್ರಾಣವನ್ನಾದರೂಕೊಡಬಲ್ಲದು. ಹಾಗಾಗಿಯೇ ಇವು ಅತ್ಯುತ್ತಮಕಾವಲುಗಾರ ನಾಯಿಗಳಾಗಿ ಮತ್ತುಕುರುಡರಿಗೆಆಸರೆಯಾಗಿ ಹೆಸರು ಗಳಿಸಿವೆ.
ಜರ್ಮನಿ-ಫ್ರಾನ್ಸ್‍ಗಡಿಯಾದಅಲ್ಸೇಸ್-ಲೋರೈನ್ ಪ್ರದೇಶದಿಂದ ಬಂದಿರುವುದರಿಂದಅಲ್ಸೇಷಿಯನ್‍ಎಂದುಕರೆಯಲ್ಪಡುವ ಈ ನಾಯಿಗಳು ಜರ್ಮನಿಯ ವಿವಿಧ ಭಾಗಗಳಲ್ಲಿ ಹಿಂದಿದ್ದ ಶೆಫರ್ಡ್ ನಾಯಿಗಳ ಸಂಮಿಶ್ರಣ. ಹಾಗಾಗಿ ಅವುಗಳಲ್ಲಿ ಕಪ್ಪು, ಬೂದು, ಕಂದು, ಕಿತ್ತಳೆ, ಮತ್ತು ಹಳದಿ ಬಣ್ಣಗಳ ಮಿಶ್ರಣಇದೆ.
ಎತ್ತರ : ೧೯- ೨೫ ಅಂಗುಲ ತೂಕ : ೨೮ – ೪೦ ಕಿಲೋ
ಅಲ್ಸೇಷಿಯನ್‍ಗಳಲ್ಲಿ ಹೆಚ್ಚು ಕೂದಲುಳ್ಳ ಮತ್ತುಗಿಡ್ಡ ಕೂದಲುಳ್ಳ ವಿಧಗಳಿವೆ. ಹೆಚ್ಚು ಕೂದಲುಳ್ಳ ನಾಯಿಗಳನ್ನು ದಿನವೂ ಬ್ರಷ್ ಮಾಡುವುದುಅಗತ್ಯ. ಕಿವಿಯನ್ನು ಸಹ ಆಗಾಗ ಸ್ವಚ್ಛಗೊಳಿಸುತ್ತಿರಬೇಕು.
ಡೋಬರ್‍ಮನ್ : ಈ ತಳಿಯ ಮೂಲ ಜರ್ಮನಿ ದೇಶ. ಲೂಯಿಸ್‍ಡೋಬರ್‍ಮನ್ ಎಂಬ ತೆರಿಗೆಅಧಿಕಾರಿಯು ಈ ತಳಿಯನ್ನು ಅಭಿವೃದ್ಧಿಪಡಿಸಿದ್ದರಿಂದಾಗಿ ಆ ಹೆಸರು ಬಂದಿದೆ. ಬಹಳ ಬುದ್ಧಿವಂತ ನಾಯಿಗಳಿವು. ಸರಿಯಾಗಿ ಸಾಕಿದಲ್ಲಿಅತ್ಯುತ್ತಮಕಾವಲುಗಾರ ನಾಯಿಗಳು. ತಮ್ಮಚುರುಕುತನ ಮತ್ತು ಸಾಹಸ ಪ್ರವೃತ್ತಿಗಳಿಂದಾಗಿ ಪೊಲೀಸ್ ತಂಡಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿವೆ.
ಬಣ್ಣ : ಕಪ್ಪು, ಕಂದು ನೀಲಿ ಅಥವಾ ಬೂದು ಬಣ್ಣದ್ದಾಗಿರಬಹುದು.
ಎತ್ತರ : ೨೫-೨೭ ಅಂಗುಲ ತೂಕ : ೨೦ – ೨೮ ಕಿಲೋ.
ಕೆಲವೊಂದುಡೋಬರ್‍ಮನ್ ಪ್ರಬೇಧಗಳು ಶೀಘ್ರಕೋಪಿಗಳಾಗಿರುವುದರಿಂದ ಅವುಗಳಿಗೆ ವಿಧೇಯವಾಗಿರುವಂತೆತರಬೇತಿಕೊಡಿಸುವುದುಅತ್ಯಗತ್ಯ.

ಫೋಟೋ ಕೃಪೆ : Resue
ಕಾಲಿ: ಇಂಗ್ಲೆಂಡ್‍ದೇಶದ ನಾಯಿ ಇದು. ಮನೆಯಲ್ಲಿಜೊತೆಗಾರನಾಗಿ ಸಾಕಲು ಮತ್ತು ಕಾವಲಿಗೆ ಒಳ್ಳೆಯ ನಾಯಿ. ಇವುಗಳಲ್ಲಿ ಉದ್ದಕೂದಲಿನ ಕಾಲಿ ಮತ್ತುಗಿಡ್ಡಕೂದಲಿನ ಕಾಲಿ ಎಂಬ ಎರಡು ವೈವಿಧ್ಯಗಳಿವೆ.
ಬಣ್ಣ : ಬಿಳಿ, ನೀಲಿ, ಕಪ್ಪು ಅಥವಾ ಕಂದುವರ್ಣಗಳ ವಿವಿಧ ಛಾಯೆಗಳ ಮಿಶ್ರಣ.
ಎತ್ತರ : ೨೦-೨೬ ಅಂಗುಲ, ತೂಕ : ೨೫ – ೩೦ ಕಿಲೋ
ಕಾಲಿಗಳ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಫೋಟೋ ಕೃಪೆ : American kannel club
ಬುಲ್‍ಮಾಸ್ಟಿಫ್ : ಬುಲ್‍ಡಾಗ್ ಮತ್ತು ಮಾಸ್ಟಿಫ್‍ಗಳಿಂದ ಉತ್ಪನ್ನಗೊಳಿಸಲಾದ ಬ್ರಿಟನ್‍ದೇಶದ ನಾಯಿ ಇದು. ಬಲಿಷ್ಠ ದೇಹದ ಈ ನಾಯಿಗಳು ಸಹಿಷ್ಣುತೆ ಮತ್ತು ಚಟುವಟಿಕೆಗಳಿಗೆ ಹೆಸರಾದವು.
ಬಣ್ಣ : ಕೆಂಪು ಕಂದು ವರ್ಣಗಳಲ್ಲಿ ಪಟ್ಟಿಗಳನ್ನು ಹೊಂದಿಯೂಇದ್ದು ಮೂತಿ ಮಾತ್ರ ಕಪ್ಪಗಿರುತ್ತದೆ.
ಎತ್ತರ : ೨೫ – ೨೭ ಅಂಗುಲ ತೂಕ : ೪೦ – ೫೦ ಕಿಲೋ ಇವುಗಳಿಗೆ ಉತ್ತಮಆಹಾರ ಮತ್ತು ಸಾಕಷ್ಟು ವ್ಯಾಯಾಮಕೊಡಬೇಕು.

ಫೋಟೋ ಕೃಪೆ : Rover.com
ಡಾಷ್ ಹಂಡ್ : ಈಜಿಪ್ತ ದೇಶದಲ್ಲಿಅಭಿವೃದ್ಧಿ ಪಡಿಸಲ್ಪಟ್ಟ ಈ ನಾಯಿಗಳು ಗಿಡ್ಡನೆಯಉದ್ದದೇಹವನ್ನು ಹೊಂದಿವೆ. ಮನೆಗಳಲ್ಲಿ ಮುದ್ದಿಗಾಗಿ ಸಾಕಲ್ಪಡುತ್ತವೆ. ಮಕ್ಕಳಿಗೆ ಒಳ್ಳೆಯ ಜೊತೆಗಾರ.
ಬಣ್ಣ : ಬಿಳಿ, ಹಳದಿ, ಕಂದು, ಕೆಂಪು ಕಪ್ಪುಅಥವಾ ಈ ವರ್ಣಗಳ ಮಿಶ್ರಣ.
ಎತ್ತರ : ೮ – ೧೧ ಅಂಗುಲ ತೂಕ : ೫ – ೧೧ ಕಿಲೋ.
ಇವುಗಳಿಗೆ ಸಾಕಷ್ಟು ವ್ಯಾಯಾಮದಅಗತ್ಯವಿದೆ. ಇವುಗಳ ಚರ್ಮದಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಫೋಟೋ ಕೃಪೆ : indiatime
ಮುದ್ಹೋಳ ಹೌಂಡ್ : ಕರ್ನಾಟಕದ ಹೆಮ್ಮೆಯ ನಾಯಿ ಇದು. ಬಾಗಲಕೋಟೆಜಿಲ್ಲೆಯ ಮುದ್ಹೋಳ (ಕವಿ ರನ್ನನ ಜನ್ಮಸ್ಥಳ)ದಲ್ಲಿಅಭಿವೃದ್ಧಿ ಹೊಂದಿದಂತವು. ಒಳ್ಳೆಯ ಬೇಟೆ ನಾಯಿ. ಈಗ ಹೆಚ್ಚಾಗಿ ಕಾವಲು ನಾಯಿಯಾಗಿ ಬಳಕೆಯಾಗುತ್ತಿದೆ.
ಬಣ್ಣ : ಬಿಳಿ, ಹಳದಿ, ಕಂದು, ಕೆಂಪು, ಕಪ್ಪುಅಥವಾ ಈ ವರ್ಣಗಳ ಮಿಶ್ರಣ.
ಎತ್ತರ : ೨೩ – ೨೮ ಅಂಗುಲ ತೂಕ : ೨೨ – ೮೨ ಕಿಲೋ.

ಫೋಟೋ ಕೃಪೆ : american kannel club
ಆಫ್ಘನ್ ಹೌಂಡ್ : ಸಿನಾಯಕ್ ಪರ್ಯಾಯ ದ್ವೀಪ ಪ್ರದೇಶಗಳಲ್ಲಿ ಉತ್ಪನ್ನವಾದ ಪುರಾತನ ಪೀಳಿಗೆ ನಾಯಿಗಳಿವು. ಅಫ್ಘಾನಿಸ್ತಾನದರಾಜ ಮನೆತನದವರು ಬೇಟೆಗಾಗಿ ಇವುಗಳನ್ನು ಅಭಿವೃದ್ಧಿಗೊಳಿಸಿದರು. ಇವು ಮೈಮೇಲೆ ನೀಳ ರೇಷ್ಮೆಯಂತಹ ಕೂದಲನ್ನು ಹೊಂದಿ ಆಕರ್ಷಕವಾಗಿ ಕಣುತ್ತವೆ. ಶಾಂತ ಪ್ರವೃತ್ತಿಯ ಉತ್ತಮ ಕಾವಲ ನಾಯಿಗಳಿವು.
ಬಣ್ಣ : ಬಿಳಿ, ಕಂದು, ಕೆನೆ ಅಥವಾ ಈ ವರ್ಣಗಳ ಮಿಶ್ರಣ.
ಎತ್ತರ : ೨೭ – ೩೨ ಅಂಗುಲ ತೂಕ : ೩೦ – ೩೫ ಕಿಲೋ.
ಈ ನಾಯಿಗಳ ಕೂದಲಿನ ಆರೋಗ್ಯದ ಬಗ್ಗೆ ಗಮನಹರಿಸಬೇಕು.

ಫೋಟೋ ಕೃಪೆ : wikipedia
ಐರಿಷ್ ಸೆಟ್ಟರ್: ಐರ್‍ಲೆಂಡ್ ಮೂಲದ ಈ ಸುಂದರ ನಾಯಿ ಮೂಲತಃಉತ್ತಮ ಬೇಟೆಗಾರ ನಾಯಿ. ಇತ್ತೀಚೆಗೆ ಹೆಚ್ಚಾಗಿ ತೋರ್ಕೆ ನಾಯಿಯಾಗಿಜನಪ್ರಿಯವಾಗಿದೆ.
ಬಣ್ಣ : ಕೆಂಪು ಅಥವಾಕಂದು
ಎತ್ತರ : ೨೫ – ೨೭ ಅಂಗುಲ ತೂಕ : ೨೭ – ೩೨ ಕಿಲೋ
ಈ ನಾಯಿಗಳ ಕೂದಲಿನ ಮತ್ತುಕಿವಿಯಆರೋಗ್ಯದ ಬಗ್ಗೆ ಗಮನವಿಡಬೇಕು.

ಫೋಟೋ ಕೃಪೆ : metalfos
ಬೀಗಲ್ : ಇಂಗ್ಲೆಂಡ್ ದೇಶದ ಈ ನಾಯಿಗಳು ಮೊಲ ಬೇಟೆಗಾಗಿ ಉತ್ಪನ್ನ ಮಾಡಿದಂತವು. ದೃಢ ದೇಹವುಳ್ಳ ಇವು ಶಾಂತ ಸ್ವಭಾವದವು. ಹೆಚ್ಚು ಬುದ್ಧಿಯುಳ್ಳವು ಸಹ. ಇವುಗಳ ಬೊಗಳುವಿಕೆ ಗಂಟೆಯ ನಾದವನ್ನು ನೆನಪಿಗೆ ತರುತ್ತದೆ.
ಬಣ್ಣ : ಕಪ್ಪು, ಬಿಳಿ, ತಿಳಿ ಹಳದಿ, ಕೆನೆ ಅಥವಾ ಈ ವರ್ಣಗಳ ಮಿಶ್ರಣ.
ಎತ್ತರ : ೧೨ – ೧೭ ಅಂಗುಲ ತೂಕ : ೧೪ – ೧೭ ಕಿಲೋ.

ಫೋಟೋ ಕೃಪೆ : All Things Dogs
ಪೊಮೆರೇನಿಯನ್ : ಜರ್ಮನ್ ಮೂಲದ ಈ ಸಣ್ಣಗಾತ್ರದ ನಾಯಿಗಳು ಮುದ್ದಿಗಾಗಿ ಎಲ್ಲೆಡೆ ಸಾಕಲ್ಪಡುತ್ತವೆ. ಹೆಚ್ಚು ಚಟುವಟಿಕೆಯುಳ್ಳ ಈ ನಾಯಿಗಳು ಬೊಗಳುವುದು ಹೆಚ್ಚು. ಬಹಳ ಬುದ್ಧಿಯುಳ್ಳ ಇವು ಕಸರತ್ತುಗಳನ್ನು ಬೇಗ ಕಲಿಯುವುದರಿಂದ ಸರ್ಕಸ್‍ಗಳಲ್ಲಿ ಇವುಗಳಿಗೆ ಬಲು ಬೇಡಿಕೆ.
ಬಣ್ಣ :ಕಪ್ಪು, ಕಂದು, ಬಿಳಿ ಅಥವಾ ಹಲವು ವರ್ಣಗಳ ಮಿಶ್ರಣ.
ಎತ್ತರ : ೯ – ೧೧ ಅಂಗುಲ ತೂಕ : ೧.೫ – ೩.೫ ಕಿಲೋ. ಇವುಗಳ ಹಲ್ಲು, ಕಣ್ಣು ಮತ್ತುಕೂದಲಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು.

ಫೋಟೋ ಕೃಪೆ : Daily paws
ಸ್ಪಿಟ್ಜ್ : ಇವೂ ಸಹ ಉತ್ತಮ ಮನೆ ನಾಯಿಗಳು. ಜರ್ಮನ್ ಮೂಲದವು. ಕೆಲವು ಸ್ಪಿಟ್ಜ್ ನಾಯಿಗಳು ಶೀಘ್ರ ಕೋಪಿಗಳು ಮತ್ತು ತಮ್ಮಿಚ್ಛೆ ಬಂದಂತೆ ನಡೆಯುತ್ತವೆ. ಹಾಗಾಗಿ ಇವುಗಳಿಗೆ ತರಬೇತಿ ಅತ್ಯಗತ್ಯ.
ಬಣ್ಣ : ಬಿಳಿ, ಕೆಂಪು, ಕಪ್ಪುಕಂದುಅಥವಾ ಈ ವರ್ಣಗಳ ಮಿಶ್ರಣ.
ಎತ್ತರ : ೧೦ – ೧೮ ಅಂಗುಲ ತೂಕ : ೮ – ೧೫ ಕಿಲೋ. ಇವುಗಳ ಕಣ್ಣಿನಆರೋಗ್ಯದ ಬಗ್ಗೆ ನಿಗಾ ವಹಿಸಬೇಕು.
.
ಬಣ್ಣ : ಅನೇಕ ವರ್ಣಗಳ ಮಿಶ್ರಣ. ಎತ್ತರ ಮತ್ತು ತೂಕ : ಯಾವುದೇ ನಿರ್ದಿಷ್ಠ ಮಾನಕ ಇಲ್ಲ.

ಫೋಟೋ ಕೃಪೆ : vetstreet
ಸೇಂಟ್ ಬರ್ನಾರ್ಡ್: ನೋಡಿದಾಕ್ಷಣ ‘ಅಬ್ಬಾ’ ಎನಿಸುವಂತಹ ನಾಯಿ ತಳಿಯಿದು. ಸ್ವಿಟ್ಜರ್‍ಲ್ಯಾಂಡ್‍ನ ಪರ್ವತಗಳಲ್ಲಿ ಮಂಜಿನಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣೆಗೆಧಾವಿಸುತ್ತಿದ್ದ ಈ ತಳಿ ಇಂದು ಪ್ರಪಂಚದ ಅನೇಕ ಕಡೆ ಪ್ರೀತ್ಯಾದರಗಳಿಂದ ಸಾಕಲ್ಪಡುತ್ತಿದೆ. ರಕ್ಷಣಾ ಕಾರ್ಯಗಳಿಗೆ ಹೇಳಿ ಮಾಡಿಸಿದಂತ ಚುರುಕು ಬುದ್ಧಿ, ಶಕ್ತಿ ಮತ್ತು ತಾಳ್ಮೆಯನ್ನು ಹೊಂದಿದೆ.
ಬಣ್ಣ : ಕಿತ್ತಳೆ, ಕೆಂಪು, ಕಂದು, ಬಿಳಿ ಮತ್ತುಕಪ್ಪು ಬಣ್ಣಗಳ ಮಿಶ್ರಣ.
ಎತ್ತರ : ೨೪ – ೩೬ ಅಂಗುಲ ತೂಕ : ೭೦ – ೯೫ ಕಿಲೋ ದೈತ್ಯ ದೇಹಿಗಳಾದ ಇವುಗಳನ್ನು ಸಾಕಲು ಸಾಕಷ್ಟು ಸ್ಥಳ ಬೇಕು. ಬೆಳೆಯುವ ವಯಸ್ಸಿನಲ್ಲಿ ಉತ್ತಮ ಆಹಾರ ಮತ್ತು ವ್ಯಾಯಾಮ ಅತ್ಯವಶ್ಯಕ. ಕೀಲುಗಳ ಆರೋಗ್ಯದ ಬಗ್ಗೆ ನಿಗಾ ಇರಲಿ.

ಫೋಟೋ ಕೃಪೆ : vetstreet
ರಾಟ್ ವೀಲರ್ : ಇತ್ತೀಚಿನ ದಿನಗಳಲ್ಲಿ ಕಾವಲುಗಾರ ನಾಯಿಯಾಗಿ ಹೆಚ್ಚು ಜನಪ್ರಿಯವಾಗಿರುವ ತಳಿ ರಾಟ್‍ವೀಲರ್. ಆರ್ಮನಿ ಮೂಲದ ಈ ನಾಯಿ ದೃಢಕಾಯವನ್ನು ಹೊಂದಿದ್ದು ಮಧ್ಯಮಗಾತ್ರದ್ದಾಗಿರುತ್ತದೆ. ಶಕ್ತ ಕೆಲಸಗಾರ ನಾಯಿಯಾದಇದನ್ನು ಸುಲಭವಾಗಿ ತರಬೇತುಗೊಳಿಸಬಹುದು. ಸ್ವಭಾವತಕ್ರೂರಿಯಲ್ಲದ ಈ ನಾಯಿಯನ್ನು ಶಿಸ್ತುಬದ್ಧವಾಗಿ ಬೆಳೆಸಬೇಕಾದದ್ದು ಅತ್ಯಗತ್ಯ.
ಬಣ್ಣ : ಕಪ್ಪು ಮತ್ತು ಕಂದುಗಳ ಮಿಶ್ರಣ
ಎತ್ತರ : ೨೩ – ೨೮ ಅಂಗುಲ ತೂಕ : ೪೦ – ೫೦ ಕಿಲೋ ಉತ್ಸಾಹಿಯಾದ ಈ ನಾಯಿಯ ವ್ಯಾಯಾಮಕ್ಕಾಗಿ ಹೆಚ್ಚು ಸ್ಥಳಾವಕಾಶವಿರಬೇಕು.

ಫೋಟೋ ಕೃಪೆ : americankannelclub
ಬುಲ್ ಮಾಸ್ಟಿಫ್ : ದೈತ್ಯಗಾತ್ರದ ನಾಯಿ ತಳಿಪ್ರಿಯರ ಆಯ್ಕೆ ಈ ತಳಿ. ಇಟಲಿ ದೇಶಇದರತವರೂರು. ಜೋತು ಬಿದ್ದಂತಿರುವ ತುಟಿಗಳು ಮತ್ತು ಸಡಿಲವಾದಚರ್ಮದ ಮಡಿಕೆಗಳನ್ನು ಹೊಂದಿ ವಿಶಿಷ್ಟವಾದ ಆಕರ್ಷಣೆಯನ್ನು ಹೊಂದಿರುವ ನಾಯಿ ಈ ಮಾಸ್ಟಿಫ್. ಸ್ವಭಾವತ ಸಾಧು. ಆಕ್ರಮಣಕಾರಿಯಾಗಿ ಬೆಳೆಸಿದಲ್ಲಿ ಭಾರಿಜೋರು.
ಬಣ್ಣ : ಕಪ್ಪು, ಬೂದು, ನೀಲಿ, ಕಂದು ಮತ್ತು ಕೆಂಪು.
ಎತ್ತರ : ೨೬ -೨೯ ಅಂಗುಲ ತೂಕ ೫೦ – ೭೦ ಕಿಲೋ.

ಫೋಟೋ ಕೃಪೆ : americankannelclub
ಕಾಕರ್ ಸ್ಟೇನಿಯಲ್ : ಉದ್ದವಾಗಿ ಇಳಿಬಿಟ್ಟಿರುವ ನಾಲಗೆ, ಅದಕ್ಕಿಂತಲೂಉದ್ದವಾದಕೂದಲುಭರಿತ ಕಿವಿಗಳು, ನಿಲ್ಲದೆಅಲುಗಾಡುತ್ತಲೇಇರುವ ಬಾಲ, ಸ್ನೇಹಪೂರ್ಣ ಕಣ್ಣುಗಳು, ಒಟ್ಟಾರೆಯಾಗಿ ನೋಡಿದಾಕ್ಷಣಎದೆತುಂಬಿ ಬರುವಂತೆಮಾಡುವ ನಾಯಿ, ಅದುವೇಕಾಕರ್ ಸ್ಟೇನಿಯಲ್. ಮೂಲತಃ ‘ವುಡ್‍ರಾಕ್’ ಎನ್ನುವ ಪಕ್ಷಿಯನ್ನು ಬೇಟೆಯಾಡಲೆಂದುಅಭಿವೃದ್ಧಿಪಡಿಸಲ್ಪಟ್ಟ ಈ ತಳಿ ಬೇರೆ ಪಕ್ಷಿಗಳನ್ನೂ ಬೇಟೆಯಾಡಬಲ್ಲದು. ಅಲ್ಲದೆ ಬೇಟೆಯಜಾಡು ಹಿಡಿಯುವುದು, ಹೆಕ್ಕಿ ತರುವುದು ಮುಂತಾದ ಕೆಲಸಗಳಲ್ಲಿ ಎತ್ತಿದ ಕೈ. ಇತ್ತೀಚೆಗೆ ಹೆಚ್ಚಾಗಿ ಜೊತೆಗಾರ ನಾಯಿಯಾಗಿ ಸಾಕಲ್ಪಡುತ್ತಿದೆ. ಅಮೇರಿಕಾದಲ್ಲೀಗಇದುಎರಡನೇಅತಿಜನಪ್ರಿಯ ನಾಯಿ.
ಹೆಸರೇ ತಿಳಿಸುವಂತೆ ಸ್ಟೇನ್‍ದೇಶದ ನಾಯಿ ಇದು. ಮಧ್ಯಮಗಾತ್ರದ ಈ ನಾಯಿಯ ಪ್ರಮುಖಆಕರ್ಷಣೆಕುತ್ತಿಗೆಯವರೆಗೂ ಇಳಿಬಿದ್ದಿರುವರೋಮಭರಿತ ಕಿವಿಗಳು. ದೇಹದ ಕೆಳಭಾಗ ಮತ್ತು ಕಾಲುಗಳು ಸಹ ರೋಮಭರಿತವಾಗಿರುತ್ತವೆ. ಕೂದಲಿನ ಬಣ್ಣಕಪ್ಪು, ಕೆಂಪು, ಕಂದು, ಚಿನ್ನ, ಕಿತ್ತಳೆ, ನೀಲವರ್ಣಅಥವಾ ಇವುಗಳ ಮಿಶ್ರಣದಲ್ಲಿರಬಹುದು.
ಗಂಡುನಾಯಿಗಳು ೧೬ – ೧೭ ಅಂಗುಲ ಎತ್ತರವಿದ್ದು ೧೩ – ೧೬ ಕಿಲೋ ತೂಗುತ್ತವೆ. ಹೆಣ್ಣುಗಳು ೧೫ – ೧೬ ಅಂಗುಲ ಎತ್ತರವಿದ್ದು ೧೨ – ೧೫ ಕಿಲೋ ತೂಕಇರುತ್ತವೆ.
ಜೀವಕಳೆ ತುಂಬಿದಂತಿರುವ ಈ ನಾಯಿಗಳು ಬಹಳ ಸ್ನೇಹಶಾಲಿಗಳು. ಒಡೆಯನನ್ನು ಸಂತೋಷಪಡಿಸಲುತುಡಿಯುತ್ತಿರುತ್ತವೆ. ಮಕ್ಕಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ತುಂಬಾ ವಿಧೇಯತೆಯುಳ್ಳ ಇವು ಅಪರಿಚಿತರೊಂದಿಗೂ ಸ್ನೇಹದಿಂದಿರುತ್ತವೆ.
ಕಾಕರ್ ಸ್ಟೇನಿಯಲ್ ನಾಯಿಗಳ ಉದ್ದಕೂದಲನ್ನು ದಿನವೂ ಬಾಚಿ ಬ್ರಷ್ ಮಾಡಬೇಕು. ಕಿವಿಗಳನ್ನು ಆಗಾಗ ಶುದ್ಧಗೊಳಿಸಿ ಪರೀಕ್ಷಿಸುತ್ತಿರಬೇಕು. ಕಾಲ್ಬೆರಳ ಬಳಿಯಿರುವ ಕೂದಲನ್ನುಚಿಕ್ಕದಾಗಿ ಕತ್ತರಿಸಿ ಬ್ರಷ್ ಮಾಡುತ್ತಿರಬೇಕು. ಊಟವನ್ನು ಆಳವಾದ ಮತ್ತುಕಿರಿದಾದ ಪಾತ್ರೆಗಳಲ್ಲಿ ಕೊಡುವುದರಿಂದ ಕಿವಿಗಳು ಒದ್ದೆಯಾಗುವುದನ್ನುತಪ್ಪಿಸಬಹುದು. ಈ ನಾಯಿಗಳಿಗೆ ಪ್ರತಿನಿತ್ಯ ವ್ಯಾಯಾಮ ಮಾಡಿಸುವುದು ಅಗತ್ಯ.

ಫೋಟೋ ಕೃಪೆ : americankannelclub
ಗೋಲ್ಡನ್ ರಿಟ್ರೈವರ್: ರಾಮಾಯಣದಲ್ಲಿ ಸೀತೆ ಚಿನ್ನದಜಿಂಕೆಯೊಂದನ್ನು ಕಂಡು ಆಸೆ ಪಟ್ಟ ಘಟನೆ ನಿಮಗೆಲ್ಲಾಗೊತ್ತಿರಬಹುದು. ಅಂತಹ ಹೊಂಬಣ್ಣದ ಜಿಂಕೆ ಇತ್ತೋ ಇಲ್ಲವೋ, ಅಷ್ಟೇ ಆಕರ್ಷಕವಾದ ನಾಯಿ ತಳಿಯೊಂದಿದೆ. ಅದುವೇ ಗೋಲ್ಡನ್‍ರಿಟ್ರೈವರ್. ಹೆಸರೇ ಸೂಚಿಸುವಂತೆ ಬಂಗಾರದ ಬಣ್ಣವಿರುವ ಈ ನಾಯಿಗಳು ಬೇಟೆಯನ್ನು ಹೆಕ್ಕಿ ತರುವುದಕ್ಕಾಗಿ ಉಪಯೋಗಿಸಲ್ಪಡುತ್ತಿದ್ದಂತವು. ಅತ್ಯಂತ ಕುಶಾಗ್ರಮತಿಗಳೂ ಮತ್ತುಅತ್ಯುತ್ತಮಘ್ರಾಣಶಕ್ತಿ ಉಳ್ಳಂತಹವೂ ಆದ ಈ ನಾಯಿಗಳು ಬೇಟೆಯಾಡಲ್ಪಟ್ಟ ಪ್ರಾಣಿಯನ್ನುತಂದುಕೊಟ್ಟುಒಡೆಯನಿಂದ ಹೊಗಳಿಸಿಕೊಳ್ಳಲು ಕಾತುರವಾಗಿರುತ್ತವೆ. ಸ್ಕಾಟ್‍ಲ್ಯಾಂಡ್‍ನ ಲಾರ್ಡ್‍ಟ್ವೀಡ್‍ಮೌತ್‍ಎಂಬಾತರಷ್ಯಾದೇಶದ ಸರ್ಕಲ್‍ತಂಡವೊಂದರಿಂದಕೊಂಡ ನಾಯಿಗಳ ಮೂಲಕ ಈ ತಳಿಯನ್ನು ಅಭಿವೃದ್ಧಿಪಡಿಸಿದರು. ಇದೊಂದು ತಳಿ ಎಂದುಗುರುತಿಸಲ್ಪಟ್ಟದ್ದು ೧೯೧೩ ರಲ್ಲಿ.
ಪರಮ ಸಾಧುವೂ, ಮೃದು ಸ್ವಭಾವದವೂ ಹಾಗೂ ತುಂಬಾ ಚೆನ್ನಾಗಿ ಹೊಂದಿಕೊಳ್ಳುವಂತಹ ಸ್ವಭಾವವನ್ನು ಹೊಂದಿರುವಂತಹವೂ ಆದ ಈ ತಳಿಯ ನಾಯಿಗಳನ್ನು ಕುಟುಂಬದ
ಸದಸ್ಯರನ್ನಾಗಿಸಿಕೊಳ್ಳುವುದು ಅತಿ ಸುಲಭ. ಮಕ್ಕಳಿಗಂತೂ ಈ ತಳಿ ಅತ್ಯಂತ ಅಚ್ಚುಮೆಚ್ಚು.
ಗೋಲ್ಡನ್ ರಿಟ್ರೈವರ್ ನಾಯಿಗಳು ಚಟುವಟಿಕೆ ಬಯಸುವಂತಹವಾದ್ದರಿಂದ ಹೊರಾಂಗಣದ ವ್ಯಾಯಾಮ ಅತ್ಯಗತ್ಯ. ಈಜುವುದೆಂದರೆ ಈ ನಾಯಿಗಳಿಗೆ ಬಲು ಇಷ್ಟ. ಅವುಗಳ ಕೂದಲನ್ನು ದಿನವೂ ಬಾಚುವುದುಅಗತ್ಯ. ಆಹಾರದ ವಿಷಯದಲ್ಲಿ ಕಟ್ಟುಪಾಡು ಇರಬೇಕು. ಇಲ್ಲದಿದ್ದಲ್ಲಿ ಇವು ಬಹುಬೇಗ ದಪ್ಪಗಾಗಿ ಬಿಡುತ್ತವೆ.
ಉತ್ತಮ ವಾಸನಾಶಕ್ತಿಯುಳ್ಳ ಈ ನಾಯಿಗಳನ್ನು ಮಾದಕ ದ್ರವ್ಯಗಳ ಪತ್ತೆಯಲ್ಲಿಉಪಯೋಗಿಸುತ್ತಾರೆ. ಕುರುಡರಿಗೆದಾರಿತೋರಲು, ಅಂಗವಿಕಲರಿಗೆ ಸಹಾಯಮಾಡಲು ಮತ್ತು ಮನೋವಿಕಲ್ಪವುಳ್ಳವರ ಚಿಕಿತ್ಸೆಯಲ್ಲಿಗೋಲ್ಡನ್‍ರಿಟ್ರೈವರ್ ನಾಯಿಗಳು ಬಹಳ ಉಪಯುಕ್ತ.

ಫೋಟೋ ಕೃಪೆ : inside dog world
ಚಾಕ್ ರಸೆಲ್‍ಟೆರಿಯರ್ : ನಮ್ಮದೇಶದಲ್ಲಿಇದೊಂದುಅತ್ಯಪರೂಪವಾದ ನಾಯಿ ತಳಿ. ಇಂಗ್ಲೆಂಡ್ ಮೂಲದ ಈ ತಳಿಯನ್ನು ರೆವರೆಂಡ್‍ಜಾನ್‍ರಸೆಲ್ ಎಂಬ ಪ್ರಾದಿಯೊಬ್ಬರು ಮೂಲತಃ ನರಿಬೇಟೆಗಾಗಿ ಅಭಿವೃದ್ಧಿಪಡಿಸಿದರು.
ಬೇಟೆ ನಾಯಿಗೆ ಮುಖ್ಯವಾಗಿಇರಬೇಕಾದಂತಹಆತ್ಮವಿಶ್ವಾಸ, ಕಾಯೋನ್ಮುಖತೆ ಮತ್ತು ಚುರುಕುತನಗಳನ್ನು ಮೈಗೂಡಿಸಿಕೊಂಡಂತಿರುವ ಜಾಕ್‍ರಸೆಲ್ ಟೆರಿಯರ್‍ಗಳು ಆಕಾರದಲ್ಲಿ ಮಧ್ಯಮಗಾತ್ರದವು. ನೆಲದ ಮೇಲೆ ಮತ್ತು ಬಿಲಗಳೊಳಗೂ ಬೇಟೆಯನ್ನು ಹಿಂಬಾಲಿಸಲು ಅನುಕೂಲವಾಗುವಂತಹ ಬಳುಕುವ ದೇಹ ಮತ್ತು ಸಾಕಷ್ಟು ಉದ್ದವಾದ ಕಾಲುಗಳಿವೆ. ಹನ್ನೆರಡರಿಂದ ಹದಿನಾಲ್ಕು ಅಂಗುಲ ಎತ್ತರದ ಇವು ಸುಮಾರು ಏಳೆಂಟು ಕಿಲೋ ತೂಕಇರುತ್ತವೆ. ಬಣ್ಣ ಬಿಳಿ, ಕಪ್ಪು ಮತ್ತುಕಂದು ವರ್ಣಗಳ ಮಿಶ್ರಣದಲ್ಲಿರಬಹುದು. ಸಾಹಸ ಪ್ರವೃತ್ತಿಯುಳ್ಳ ಇವು ಸ್ನೇಹಜೀವಿಗಳೂ ಹೌದು. ಸರಿಯಾಗಿ ಬೆಳೆಸಿದಲ್ಲಿ ಮನೆಯವರೊಂದಿಗೆ ಹೊಂದಿಕೊಂಡು ವಿಧೇಯವಾಗಿಯೂಇರುತ್ತವೆ. ಆಟಿಕೆಗಳೊಂದಿಗೆ ಆಡುವುದೆಂದರೆ ಈ ನಾಯಿಗಳಿಗೆ ಬಲು ಇಷ್ಟ. ಧೈರ್ಯಶಾಲಿಗಳಾದ ಜಾಕ್‍ರಸೆಲ್ ಟೆರಿಯರ್‍ಗಳನ್ನು ತರಬೇತುಗೊಳಿಸುವುದು ಅತ್ಯಗತ್ಯ. ಈ ನಾಯಿಗಳನ್ನು ಸಣ್ಣದೇಹದಲ್ಲಿರುವದೊಡ್ಡ ನಾಯಿ ಎಂದೇ ಹೇಳಬಹುದು. ಒಂದಡಿಎತ್ತರವಿರುವ ಇವು ಸುಲಭವಾಗಿಐದಡಿಎತ್ತರ ನೆಗೆಯಬಲ್ಲವುಎಂದರೆ ಇವುಗಳ ಶಕ್ತಿಯನ್ನು ನೀವೇ ಊಹಿಸಿಕೊಳ್ಳಿ. ಜಾಗಿಂಗ್‍ಗಂತೂ ಈ ತಳಿಯ ನಾಯಿ ಅತ್ಯುತ್ತಮಜೊತೆಗಾರ. ನಿಜವಾದ ಕೆಲಸಗಾರ ನಾಯಿಗಳಿವು.
ಏಪ್ರಿಲ್ ೧, ೨೦೦೩ ರಿಂದ ಈ ತಳಿಗೆ “ಪಾರ್ಸನ್ ರಸೆಲ್‍ಟೆರಿಯರ್” ಎಂದು ಮರು ನಾಮಕರಣ ಮಾಡಲಾಗಿದೆ.

ಬುಲ್ ಡಾಗ್ : ಬುಲ್‍ಡಾಗ್‍ಎಂದಾಕ್ಷಣ ಮನದಲ್ಲಿ ಮೂಡುವಚಿತ್ರ ಗೂಳಿಕಾಳಗದ್ದು. ಆ ರೋಷ, ಆ ಭೀಕರತೆ ಮತ್ತು ಹೃದಯ ವಿದ್ರಾವಕವಾದರಕ್ತ ಸಿಕ್ತ ಅಂತ್ಯ! ಅದನ್ನುಕಂಡವರು ಈ ಬುಲ್‍ಡಾಗ್‍ಎನುವುದುಅತ್ಯಂತಕ್ರೂರ ನಾಯಿ ಎಂದೇ ತಿಳಿದುಕೊಳ್ಳಬಹುದು. ನಿಜಸ್ಥಿತಿ ಏನೆಂದರೆ, ಆ ಕ್ರೌರ್ಯ ಈಗ ಇತಿಹಾಸ. ಮುಖ ಗಂಟಿಕ್ಕಿದಂತಿದ್ದರೂ ಸಹ ಇಂದಿನ ಬುಲ್‍ಡಾಗ್ ಶಾಂತ ಮೂರ್ತಿ! ಅದರಂತಹ ಸ್ನೇಹಜೀವಿ ಇನ್ನೊಂದಿಲ್ಲ.
ಇಂಗ್ಲೆಂಡಿನಲ್ಲಿ ಗೂಳಿಕಾಳಗ ನಿಷೇಧಿಸಲ್ಪಟ್ಟಿದ್ದು ೧೮೩೫ ರಲ್ಲಿ, ಆ ನಂತರ ಬುಲ್‍ಡಾಗ್‍ನ ಬಲ ಮತ್ತು ಕಷ್ಟ ಸಹಿಷ್ಣುತೆಗಳನ್ನು ಮೆಚ್ಚಿದ್ದಅದರ ಅಭಿಮಾನಿಗಳು ಈ ತಳಿ ನಶಿಸಿ ಹೋಗಲು ಬಿಡಲಿಲ್ಲ. ಅದರ ಒಳ್ಳೆಯ ಗುಣಗಳನ್ನು ಉಳಿಸಿಕೊಂಡು ಸೌಮ್ಯ ಸ್ವಭಾವಕ್ಕೆಒತ್ತುಕೊಟ್ಟು ವಂಶಾಭಿವೃದ್ಧಿ ಮಾಡಿದರುಅದರ ಫಲವೇ ಇಂದು ನಾವು ನೋಡುತ್ತಿರುವ ಬುಲ್‍ಡಾಗ್.
ಸ್ವಲ್ಪ ಸ್ಥೂಲಕಾಯದ ಮಧ್ಯಮಗಾತ್ರದ ನಾಯಿ ಇದು, ಗಿಡ್ಡ ಮೂತಿ ಮತ್ತುದಪ್ಪನೆಯತಲೆಇದೆ. ಅಗಲವಾದ ಭುಜಗಳು, ಎದೆ ಭಾಗ ಮತ್ತು ಬಲಿಷ್ಟವಾದ ಕಾಲುಗಳನ್ನು ಹೊಂದಿದೆ. ಕೆಳದವಡೆ ಮುಂಚಾಚಿದಂತಿರುವುದರಿಂದ ಮೇಲ್ಭಾಗದ ಮೂಗು ಹಿಂದಕ್ಕಿರುತ್ತದೆ. ಸೊಂಟದ ಭಾಗಕ್ಕಿಂತಲೂ ಭುಜಗಳು ಅಗಲವಾಗಿರುವುದರಿಂದ ಪ್ರಸವದ ವೇಳೆಯಲ್ಲಿ ತೊಂದರೆಗಳುಂಟಾಗುವ ಸಂಭವ ಹೆಚ್ಚು. ಆದ್ದರಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಬೇಕಾದಂತಹ ಪರಿಸ್ಥಿತಿಯೂ ಹೆಚ್ಚು.
ಬುಲ್‍ಡಾಗ್ ವಿಶ್ವಿಷ್ಟವಾದ ಉರುಳು ನಡಿಗೆಯನ್ನು ಹೊಂದಿದೆ. ಅದರ ಚರ್ಮಗಿಡ್ಡ ಕೂದಲುಗಳಂದ ಕೂಡಿದ್ದು ಹೊಳಪಾಗಿರುತ್ತದೆ. ಬಣ್ಣ ಬಿಳಿ, ಕೆಂಪು, ಅಥವಾ ಕೆನೆ ವರ್ಣಗಳಿಂದ ಕೂಡಿದ್ದು ಪಟ್ಟೆ ಪಟ್ಟೆಯಾಗಿ ಅಥವಾ ದೊಡ್ಡ ಮಚ್ಚೆಗಳಿಂದ ಕೂಡಿದಂತೆ ಇರಬಹುದು. ಎತ್ತರ ಸುಮಾರು ೧೮ ಅಂಗುಲ ಇದ್ದುತೂಕ ೨೦ -೨೫ ಕಿಲೋ ಇರಬಹುದು. ಸಾಧು ಸ್ವಭಾವದ ಧೈರ್ಯಶಾಲಿ ನಾಯಿಗಳಿವು. ಕ್ರೂರ ಸ್ವಭಾವದವಲ್ಲ.
ತನ್ನದೇಹ ರಚನೆಯಿಂದಾಗಿ ಬುಲ್‍ಡಾಗ್ ಕೆಲವು ಖಾಯಿಲೆಗಳಿಗೆ ಬೇಗ ತುತ್ತಾಗುತ್ತದೆ. ಉಸಿರಾಟದ ತೊಂದರೆ ಅವುಗಳಲ್ಲಿ ಮುಖ್ಯವಾದದ್ದು. ಹಾಗೆಯೇ ಈ ತಳಿ ಉಷ್ಣ ಪ್ರದೇಶಗಳಿಗೆ ಹೊಂದಿಕೊಳ್ಳಲಾರದು. ವ್ಯಾಯಾಮ ಮಿತವಾಗಿರಬೇಕು. ಚರ್ಮದ ಸುಕ್ಕುಗಳನ್ನು ಆಗಾಗ ಶುಚಿಗೊಳಿಸುತ್ತಿರಬೇಕು.

ಫೋಟೋ ಕೃಪೆ : vet voice
ಗ್ರೇಹೌಂಡ್ : ಕುದುರೆ ರೇಸ್‍ಗಳ ಬಗ್ಗೆ ಕೇಳಿದ್ದೀರಿ. ನಾಯಿ ರೇಸ್ ಬಗ್ಗೆ ಕೇಳಿದ್ದೀರಾ? ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದೊಂದು ಅತ್ಯಂತ ಜನಪ್ರಿಯ ಕ್ರೀಡೆ. ಇದರಲ್ಲಿಓಡುವ ನಾಯಿ ತಳಿಯ ಹೆಸರೇ “ಗ್ರೇ ಹೌಂಡ್”. ಅತ್ಯಂತ ಹಳೆಯ ತಳಿಗಳಲ್ಲಿ ಒಂದಾದ ಈ ನಾಯಿಗಳ ಚಿತ್ರಈಜಿಪ್ಟ್‍ನ ಪಿರಮಿಡ್‍ಗಳಲ್ಲಿ ಸಹ ಇದೆ. ಉತ್ತರಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಅಭಿವೃದ್ಧಿಪಡಿಸಲ್ಪಟ್ಟ ಈ ತಳಿಗೆ ಗ್ರೇಹೌಂಡ್ ಎಂಬ ಹೆಸರು ಬರಲುಅದರದೇಹದ ಬಣ್ಣವೇಕಾರಣವಿರಬಹುದು. “ಬೇಟೆ” ಎಂಬ ಅರ್ಥಕೊಡುವ “ಗ್ರೆಚ್” ಎನ್ನುವ ಪದದಿಂದಲೂಗ್ರೇಹೌಂಡ್ ಎಂಬ ಹೆಸರುಬಂದಿರಬಹುದು. ಬೇಟೆಯ ಹುಚ್ಚಿನ ಬ್ರಿಟಿಷರಿಗೆ ಈ ತಳಿ ಎಷ್ಟು ಹುಚ್ಚು ಹಿಡಿಸಿತ್ತೆಂದರೆ ಕೆಳ ವರ್ಗದಜನರು ಈ ತಳಿಯನ್ನು ಸಾಕುವುದನ್ನು ನಿಷೇಧಿಸುವಕಾನೂನನ್ನು ಸಹ ಜಾರಿಗೆತಂದಿದ್ದರು. ಅಲ್ಲದೆಗ್ರೇಹೌಂಡ್ ನಾಯಿಯನ್ನುಕೊಂದವರಿಗೆ ಮರಣದಂಡನೆ ಸಹ ವಿಧಿಸಲಾಗುತ್ತಿತ್ತು.
ಬೇಟೆ ನಾಯಿಗೆ ಇರಬೇಕಾದಂತಹಎತ್ತರದ ನಿಲುವು, ಆಳವಾದ ಎದೆ, ನೀಳ ಕಾಲುಗಳು ಮತ್ತು ಬಲಿಷ್ಟ ಸ್ನಾಯುಗಳನ್ನು ಹೊಂದಿರುವಗ್ರೇಹೌಂಡ್‍ಚೂಪಾದ ಮುಖ ಮತ್ತು ಅಗಲವಾದ ಮೂಗನ್ನು ಹೊಂದಿದೆ. ಓಡುವಾಗ ಮುದುರಿಕೊಳ್ಳುವ ಕಿವಿಗಳು ಅರಾಮ ಸ್ಥಿತಿಯಲ್ಲಿದ್ದಾಗ ನಿಂತಿರುತ್ತವೆ.
ಹೆಚ್ಚು ಕೂದಲಿಲ್ಲದ ಮೃದುಚರ್ಮದ ಬಣ್ಣ ಬಿಳಿ, ಕಪ್ಪು, ಫಾನ್, ಬೂದು, ಕಂದು, ಕೆಂಪು ವರ್ಣಅಥವ ಇವುಗಳ ಮಿಶ್ರಣದಲ್ಲಿರಬಹುದು. ಎತ್ತರ ೨೬ – ೩೦ ಅಂಗುಲ ಮತ್ತುತೂಕ ೨೪ – ೩೬ ಕಿಲೋ.
ನಾಯಿಗಳ ಪೈಕಿ ಇದುರಕ್ತದಾನಿ ಎನ್ನುವಖ್ಯಾತಿ ಪಡೆದಿದೆ. ಈ ತಳಿಯ ನಾಯಿಗಳಲ್ಲಿ ಕೆಂಪು ರಕ್ತಕಣ ಹೆಚ್ಚು ಉತ್ಪತ್ತಿಯಾಗುತ್ತದೆ.
ಸೂಕ್ಷ್ಮ ಪ್ರವೃತ್ತಿಯ ಈ ನಾಯಿಗಳಿಗೆ ಸದ್ದುಗದ್ದಲ ಇಷ್ಟವಾಗುವುದಿಲ್ಲ. ಮನೆಯಲ್ಲಿ ಸಾಕಬೇಕೆಂದಿದ್ದಾಗಅವನ್ನುಚಿಕ್ಕ ವಯಸ್ಸಿನಿಂದಲೇ ಜೊತೆಯಲ್ಲಿ ಬೆಳೆಸಬೇಕು. ಹಿರಿಯ ಮಕ್ಕಳೊಂದಿಗೆ ಇವು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಇವುಗಳಿಗೆ ವಿಧೇಯತೆಯತರಬೇತಿ ನೀಡುವುದುಅತ್ಯಗತ್ಯ. ಹಾಗೆಯೇ ವ್ಯಾಯಾಮ ಸಹ.
ಭಾಗ ೨ ರಲ್ಲಿ ಮುಂದೊರೆಯುವುದು…
- ಡಾ.ಎನ್.ಬಿ.ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ), ಶಿವಮೊಗ್ಗ.
