ದೇವರು ಇದ್ದಾನೆ! ಎನ್ನುವುದೇ ಒಂದು ಅದ್ಬುತ ಶಕ್ತಿ. ನಂಬಿಕೆಯಲ್ಲಿ ಅವಿತು ಕುಳಿತಿದ್ದಾನೆ. ವಾಣಿ ಕನ್ನಡತಿ ವಾಣಿ ಕನ್ನಡತಿ ಅವರು ದೇವರ ಕುರಿತು ಬರೆದ ಒಂದು ಪುಟ್ಟ ಲೇಖನವನ್ನು ತಪ್ಪದೆ ಮುಂದೆ ಓದಿ…
ದೇವರು ಇದ್ದಾನೆ! ದೇವರು ಇರುವನು ದೇವರೇ ನಂಬಿಕೆ. ಕಣ್ಣಿಗೆ ಕಾಣದ ಅದ್ಭುತ ಶಕ್ತಿ. ದೇವರು ಎನ್ನುವ ಸ್ವರವೇ ಸಾಕು, ಪುಳಕ ಮನದೊಳಗೆ ಭಕ್ತಿ ಸುಧೆಯ ಸಂಗೀತ ಮೈಮನವೆಲ್ಲ ಹರಿದಾಡಿ ಭಾವ ಪರವಶವಾಗುವುದರಲ್ಲಿ ಸಂದೇಹವೇ ಬೇಡ. ದೇವರ ಮಹಿಮೆಯೆ ಅಂತದ್ದು.
ಕಾಣದ ದೈವವನ್ನು ಮಂದಿರದಲ್ಲಿ ಹುಡುಕಿದರೆ ಸಿಗುವುದೇ ದೇವರು? ನಂಬಿಕೆಯಲ್ಲಿ ಅವಿತು ಕುಳಿತಿದ್ದಾನೆ. ಕಷ್ಟ- ಕಾರ್ಪಣ್ಯದಲ್ಲಿ ಬರುವವರು ದೇವರ ಸ್ವರೂಪ ಎನ್ನುವುದು ನಂಬಿಕೆಯು ದೇವರು.
ನೆಮ್ಮದಿ ಶಾಂತಿ ಅರಸುತ್ತ ಪಾಪ ಕರ್ಮಗಳನ್ನು ಮಾಡಿ ದೇವರ ಹುಂಡಿಗೆ ತಪ್ಪು ಕಾಣಿಕೆಯ ಹಾಕಿ ದೈವ ಮಂದಿರದಲ್ಲಿ ಹುಡುಕಿದರೆ ಸಿಗುವುದೇ ನೆಮ್ಮದಿ ..? ಪಶ್ಚಾತ್ತಾಪದ ಭುಗಿಲಲ್ಲಿ ಅಡಗಿದ್ದ ಭಗವಂತ. ಮಾಡಿದ ತಪ್ಪಿಗೆ ಪಶ್ಚಾತಾಪವಾದಷ್ಟು ಮನಸ್ಸು ನಿಶ್ಚಿಂತೆ ಆಗಿ ನೆಮ್ಮದಿಯ ದಾರಿ ಸಿಗಬಹುದು.
ಕಷ್ಟ ಪಟ್ಟ ದುಡಿಮೆಯಲ್ಲಿ ಹುಡುಕು ಸಿಗುವುದು ನೆಮ್ಮದಿಯ ದೇವರು. ಹಸಿದ ಹೊಟ್ಟೆಗೆ ತುತ್ತು ಅನ್ನವ ಕೊಟ್ಟು ನೋಡು ಅವನ ಕಣ್ಣಲಿ ಕಾಣುವ ಕೃತಘ್ನತೆಯ ಬೆಳಕೇ ದೇವರಿರಬಹುದೇನೋ? ಹೆತ್ತವಳ ಪ್ರೀತಿ ಮಮತೆಯಲ್ಲಿ ಅಡಗಿದೆ ದೇವತೆಗಳ ಸ್ವರೂಪ. ನೊಂದವರ ಬಾಳಿಗೆ ಸಾಂತ್ವಾನದ ದೀಪ ಹಚ್ಚಿ ನೋಡು ದೇವರು ಇದ್ದಾನೆ ನೆಮ್ಮದಿಯ ರೂಪದಲ್ಲಿ.
ದಾನ ಧರ್ಮ ಮಾಡಿದ ಪುಣ್ಯದಲ್ಲಿ ದೇವರು ಜೀವಿಸುತ್ತಿದ್ದ. ಶುದ್ಧಿ ಇರದ ಮನದಲ್ಲಿ ಶುದ್ಧಿ ಮಾಡ ಹೊರಟೆ, ಆದರೂ ನೆಮ್ಮದಿ ಸಿಗಲಿಲ್ಲವೆಂದು ಅಲೆದಾಡಿದೆ? ಹಗಲಿರುಳು ಕಾಣದ ಬಯಕೆಗಳ ಬೆನ್ನಟ್ಟಿ ಹೊರಟೆ? ಮಣ್ಣಗಾಗುವ ದೇಹಕ್ಕೆ ಹೊನ್ನಿನ ಮೋಹ ದಾಹ ಆಸೆಗಳ ಸುಳಿಯಲ್ಲಿ ಸಿಲುಕಿ ಮತ್ತಷ್ಟು ಮೊಗದಷ್ಟು ಬೇಕು ಎಂದು ದೇವರಿಗೆ ಮೊರೆಯಿಟ್ಟು ಸಿಗದೆ ಇರುವುದ ಬಯಸಿ ನೆಮ್ಮದಿಯೆ ಇಲ್ಲವೆಂದು ಬೆಂದು ಬಳಲಿದೆ. ಕೊನೆಗೆ ಬೇಡುತ್ತ ದೇವರ ಮೊರೆ ಹೊರಟರೇ ಸಿಗುವುದೇ ನೆಮ್ಮದಿಯ ಉಸಿರು. ನಾವು ಬದುಕುವ ರೀತಿಯಲ್ಲಿ ದೇವರು ಜತೆಗೆ ಇರುತ್ತಾನೆ ಅದಕ್ಕೆ ಸಾಧ್ಯವಾದಷ್ಟು ಒಳ್ಳೆಯತನದಲ್ಲಿ ಬದುಕುವುದು ದೇವರಿಗೆ ಹತ್ತಿರವಾದಂತೆ.
- ವಾಣಿ ಕನ್ನಡತಿ – ಮೈಸೂರು.
