ಅನಿರೀಕ್ಷಿತವಾಗಿ ಹೋದವರು, ಮರೆಯುವ ದಾರಿಯ ತಿಳಸದೆ ಹೋದರು… ಕವಿಯತ್ರಿ ರೇಷ್ಮಾ ಗುಳೇದಗುಡ್ಡಾಕರ್ ಅವರ ಭಾವನಾತ್ಮಕವಾದ ಕವನ. ಮುಂದೆ ಓದಿ…
ಹೇಳದೇ ಹೋದವರು
ಬರುವ ನಿರೀಕ್ಷೆಯ ಹುಸಿಮಾಡಿದವರು
ಎಲ್ಲ ಬಂಧಗಳ ಕಳಚಿ
ಎಲ್ಲವ ತೊರೆದು ಹೋದರು
ಕಾಲ ಸರಿದರು
ಮನದ ಗೋಡೆಯ ಬಣ್ಣ ಮಾಸಿಲ್ಲ
ನಳನಳಿಸುತ್ತಲೇ ಅವರ
ನೆನಪಿನ ಸುಮ ಅರಳುವದು
ವಿನಮ್ರವಾಗಿ …..
ಹೇಳದೇ ಹೋದವರು
ಅವರು ಎತ್ತಿ ಆಡಿಸಿ
ಕೈ ಹಿಡಿದು ನಡೆಸಿದ
ಅಂಗಳವೇ ಇಗ…. ನಮಗೆ ದುಃಖದ
ಮಡುವಾಗಿ ಉಳಿಸಿದರು ….
ಕಣ್ಣಹನಿಗಳು ಹೊಳೆಯಾಗಿ
ಹರಿದರು ಸೇರುವದಿಲ್ಲ
ಅವರ ಲೋಕವ
ಕಂಡು ಬಂದು ಹೇಳದವರಿಲ್ಲ
ಆ ನಾಕವ ….
ಹೋಗುವುದು ಸುಲಭ
ಮರೆಯುವ ದಾರಿಯ ತಿಳಸದೆ
ಬದುಕಿನಲ್ಲಿ ಭಾವಗಳೊಂದಿಗೆ
ಬೆರೆತು ಉರಿದರು
ಅಳಿಯಲಾರದು ಅವರ ನೆನಪು ….
- ರೇಶ್ಮಾ ಗುಳೇದಗುಡ್ಡಾಕರ್