ವಿಜಯ ಕರ್ನಾಟಕ ವಿಕ – ಪಾಕ ಶಾಲಾ ಕ್ವೀನ್ 2023 ಸ್ಪರ್ಧೆಯ ಮೊದಲನೆಯ ರನ್ನರ್ ಆಫ್ ಆಗಿ ಹರ್ಷಿಯ ಬೇಗಂ ಅವರು ಆಯ್ಕೆಯಾಗಿದ್ದು, ಅವರು ಈ ಸ್ಪರ್ಧೆಯಲ್ಲಿ ರಾಗಿ ರೊಟ್ಟಿಯನ್ನು ಉತ್ತರಕರ್ನಾಟಕ ಶೈಲಿಯಲ್ಲಿ ಬಡೆದು, ಬಾಳೆಯಲ್ಲಿ ಪ್ರಸ್ತುತ ಪಡಿಸಿ ತೀರ್ಪುಗಾರರ ಗಮನ ಸೆಳೆದಿದ್ದಾರೆ…
ಈ ಸ್ಪರ್ಧೆಯು ಮೈಸೂರಿನಲ್ಲಿ ಏಪ್ರಿಲ್ ೨೬,೨೦೨೩ ರಂದು ‘ಪೂಜಾ ಭಗವತ್ ಮೆಮೋರಿಯಲ್ ಮಹಾಜನ್ ಪೋಸ್ಟ್ ಗ್ರಾಜುಯೇಷನ್ ಸೆಂಟರ್, ಮೆಟಗಳ್ಳಿ’ ಯಲ್ಲಿ ನಡೆದಿತ್ತು. ಹರ್ಷಿಯಾ ಅವರು ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾಗಿದ್ದು, ಪತಿಯ ಉದ್ಯೋಗದ ಕಾರಣ ಇಬ್ಬರು ಮಕ್ಕಳೊಂದಿಗೆ ಸುಮಾರು ವರ್ಷಗಳಿಂದ ಮೈಸೂರಿನಲ್ಲಿ ವಾಸವಾಗಿದ್ದಾರೆ. ನಿತ್ಯವೂ ಮನೆಯಲ್ಲಿ ಮಕ್ಕಳಿಗೆ ರುಚಿ ರುಚಿಯಾದ ಅಡುಗೆ ಮಾಡಿಕೊಡುವುದು ನನ್ನ ಹವ್ಯಾಸವಾಗಿತ್ತು, ಆದರೆ ಅದು ಇಂದು ವಿಜಯ ಕರ್ನಾಟಕ ವಿಕ – ಪಾಕ ಶಾಲಾ ಕ್ವೀನ್ ಸ್ಪರ್ಧೆಯಲ್ಲಿ ವಿಜೇತಳನ್ನಾಗಿ ಮಾಡುತ್ತದೆ ಎಂದು ನಾನು ಭಾವಿಸಿರಲಿಲ್ಲ, ವಿಜಯ ಕರ್ನಾಟಕ ವಿಕ ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ, ಅವರ ಈ ಪ್ರೋತ್ಸಾಹ ನನ್ನಲ್ಲಿ ಇನ್ನಷ್ಟು ಉತ್ಸಾಹ ತುಂಬಿದೆ ಎಂದು ಹರ್ಷಿಯ ಬೇಗಂ ಅವರು ತಮ್ಮ ಸಂತೋಷವನ್ನು ವ್ಯಕ್ತ ಪಡಿಸುತ್ತಾರೆ.
ಈ ಹಿಂದೆ ಸಾಕಷ್ಟು ಸ್ಪರ್ಧೆಗಳಿಗೆ ಭಾಗವಹಿಸಿದ್ದರು, ಸ್ಪರ್ಧೆಗಳಲ್ಲಿ ಅಡುಗೆ ರುಚಿ, ಶುದ್ದತೆಗಳಿಗಿಂತ ತೋರಿಕೆಗಳಿಗೆ ಹೆಚ್ಚು ಆದ್ಯತೆ ಇದ್ದಕಾರಣ ಹರ್ಷಿಯ ಅವರಿಗೆ ಬೇಸರವಾಗಿತ್ತು. ಆದರೆ ಈ ಸ್ಪರ್ಧೆ ಮನಸ್ಸಿಗೆ ತುಂಬಾ ಖುಷಿ ನೀಡಿದೆ ಎನ್ನುತ್ತಾರೆ.
ಸಾಂಬಾರ್ ಪೌಡರ್, ಉಪ್ಪು, ಖಾರ, ಹುಳಿ ಇದ್ದರೇ ಅಷ್ಟೇ ಅಡುಗೆ ರುಚಿಯಾಗದು ಅಡುಗೆ ಮಾಡುವರ ಹೃದಯದಲ್ಲಿ ಮಮತೆ, ಶ್ರದ್ದೆಯಿರಬೇಕು ಅಂದಾಗಲೇ ಅಡುಗೆ ರುಚಿಕರವಾಗುತ್ತದೆ ಎಂದು ಅಡುಗೆ ಮಾಡುವವರಿಗೆ ಒಂದು ಟಿಪ್ಸ್ ಕೊಡುತ್ತಾರೆ.
ಹರ್ಷಿಯಾ ಮೇಡಂ, ನಿಮಗೊಂದು ರುಚಿತಪೂರಿತ ಸೆಲ್ಯೂಟ್.
- ರೇಶ್ಮಾ ಗುಳೇದಗುಡ್ಡಾಕರ್