ಮಂಗಳೂರು ಸಿಟಿಯಿಂದ 5-6 ಕಿಮೀ ದೂರದ ಅಂತರದಲ್ಲಿ ಕದ್ರಿ ದೇವಸ್ಥಾನವಿದೆ, ದೇವಸ್ಥಾನದ ಹಿಂಬದಿ ದೊಡ್ಡ ಗುಡ್ಡ, ಆ ಗುಡ್ಡಕ್ಕೆ ನೂರೆಂಟು ಮೆಟ್ಟಿಲುಗಳಿವೆ, ಕದ್ರಿ ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಒಂದು ರೀತಿಯ ಭಯ-ಭಕ್ತಿ ಇರುತ್ತದೆ, ಶ್ರೀಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ಕುರಿತು ಸೌಮ್ಯ ಸನತ್ ಅವರು ಬರೆದ ಒಂದು ಲೇಖನ ತಪ್ಪದೆ ಮುಂದೆ ಓದಿ…
ದಕ್ಷಿಣ ಭಾರತ ದೇವಸ್ಥಾನಗಳ ತವರೂರು. ಇಲ್ಲಿ ರಾಜರ ಕಾಲದಿಂದಲೇ ನಿರ್ಮಿತವಾದ ಅನೇಕ ದೇವಸ್ಥಾನಗಳು ಪ್ರಸಿದ್ಧಿ. ಸುಂದರ ಕೆತ್ತನೆಗಳಿಂದ ನಿರ್ಮಿತವಾದ ದೇವಸ್ಥಾನಗಳು ಆಕರ್ಷಕ, ನಯನ ಮನೋಹರ. ಅವುಗಳ ಬಗೆಗಿನ ದಂತಕತೆಗಳು, ಐತಿಹ್ಯಗಳು ಇನ್ನೂ ರೋಚಕ. ಸುತ್ತ ಹಸಿರು ಕಾನನ, ಅದರ ಮಧ್ಯೆ ದೇವಸ್ಥಾನ, ದೇವಸ್ಥಾನದ ಹಿಂಬದಿ ದೊಡ್ಡ ಗುಡ್ಡ, ಆ ಗುಡ್ಡಕ್ಕೆ ನೂರೆಂಟು ಮೆಟ್ಟಿಲುಗಳು. ಮೆಟ್ಟಿಲು ಏರುತ್ತಾ ಹೋದಂತೆ ಸುತ್ತಲೂ ಕಾಣುವ ಮಂಗಳೂರು ನಗರ, ಅಲ್ಲಿನ ಕಾಂಕ್ರೀಟ್ ಕಟ್ಟಡಗಳು ಹೀಗೆ ಸಾಗುತ್ತಾ ಹೋದಂತೆಲ್ಲಾ ಪ್ರಕೃತಿ ಸೌಂದರ್ಯದ ಜತೆಗೆ ಅಲ್ಲಿಯೇ ಒಂದಷ್ಟು ಹೊತ್ತು ಕಾಲ ಕಳೆಯುವ ಮನಸ್ಸಾಗುವುದು.
ಕದ್ರಿ ದೇವಸ್ಥಾನಕ್ಕೆ ಬಂದರೂ ಮನಸ್ಸಿಗೆ ನೆಮ್ಮದಿ. ಭೇಟಿ ಕೊಟ್ಟಾಗ ಒಂದು ರೀತಿಯ ಭಯ-ಭಕ್ತಿಯ ಮನಸ್ಸು ಜಾಗೃತವಾಗುತ್ತದೆ.
ಮಂಗಳೂರು ಸಿಟಿಯಿಂದ 5-6 ಕಿಮೀ ದೂರದ ಅಂತರದಲ್ಲಿ ಇರುವುದರಿಂದ ಒಂದು ಯಾತ್ರೆಯನ್ನು ಕೈಗೊಂಡರೆ ಸಾಕು; ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡಿ ಬರಬಹುದು.ಸುತ್ತ ಹಸಿರು ಕಾನನ, ಅದರ ಮಧ್ಯೆ ದೇವಸ್ಥಾನ, ದೇವಸ್ಥಾನದ ಹಿಂಬದಿ ದೊಡ್ಡ ಗುಡ್ಡ, ಆ ಗುಡ್ಡಕ್ಕೆ ನೂರೆಂಟು ಮೆಟ್ಟಿಲುಗಳು. ಮೆಟ್ಟಿಲು ಏರುತ್ತಾ ಹೋದಂತೆ ಸುತ್ತಲೂ ಕಾಣುವ ಮಂಗಳೂರು ನಗರ, ಅಲ್ಲಿನ ಕಾಂಕ್ರೀಟ್ ಕಟ್ಟಡಗಳು ಹೀಗೆ ಸಾಗುತ್ತಾ ಹೋದಂತೆಲ್ಲಾ ಪ್ರಕೃತಿ ಸೌಂದರ್ಯದ ಜತೆಗೆ ಅಲ್ಲಿಯೇ ಒಂದಷ್ಟು ಹೊತ್ತು ಕಾಲ ಕಳೆಯುವ ಮನಸ್ಸಾಗುವುದು.
ಕದ್ರಿ ದೇವಸ್ಥಾನಕ್ಕೆ ಬಂದರೂ ಮನಸ್ಸಿಗೆ ನೆಮ್ಮದಿ. ಭೇಟಿ ಕೊಟ್ಟಾಗ ಒಂದು ರೀತಿಯ ಭಯ-ಭಕ್ತಿಯ ಮನಸ್ಸು ಜಾಗೃತವಾಗುತ್ತದೆ.
ಚಾರಿತ್ರಿಕ ಹಿನ್ನೆಲೆ :
ಕದ್ರಿ ದೇವಸ್ಥಾನದ ಬಗ್ಗೆ ಹೀಗೊಂದು ನಂಬಿಕೆಯಿದೆ. ಪರಶುರಾಮ ಸಹ್ಯಾದ್ರಿ ತಪ್ಪಲಿನಲ್ಲಿ ವಾಸಿಸುತ್ತಿದ್ದ. ಅಲ್ಲಿ ಕ್ರೂರಿಗಳಾಗಿದ್ದ ಕ್ಷತ್ರಿಯರನ್ನು ಪರಶುರಾಮ ನಾಶ ಮಾಡಿ ಭೂಮಿಯನ್ನು ಕಶ್ಯಪನಿಗೆ ದಾನ ಮಾಡಿದನಂತೆ. ನಂತರ ಪರಶುರಾಮ ಭಗವಂತ ಶಿವನನ್ನು ಪ್ರಾರ್ಥಿಸಿ, ವಾಸಿಸುವುದಕ್ಕೆ ನೆಲ ಕಲ್ಪಿಸುವಂತೆ ಪ್ರಾರ್ಥಿಸಿದ. ಪರಶುರಾಮನ ಭಕ್ತಿಗೆ ಮೆಚ್ಚಿದ ಶಿವ ಪ್ರತ್ಯಕ್ಷನಾಗಿ ಕದಲಿ ಕ್ಷೇತ್ರದಲ್ಲಿ ವಾಸಿಸುವುದಕ್ಕೆ ಅನುವು ಮಾಡಿಕೊಡುತ್ತಾನೆ. ಲೋಕೋದ್ಧಾರಕ್ಕಾಗಿ ಮಂಜುನಾಥನನ್ನು ಪ್ರತಿಷ್ಠಾಪಿಸಿ ಪೂಜಿಸುವಂತೆ ಶಿವ ಕೇಳಿಕೊಂಡನಂತೆ. ಶಿವನ ಆಜ್ಞೆಯಂತೆ ಪರಶುರಾಮ ಕೊಡಲಿಯನ್ನು ಸಮುದ್ರಕ್ಕೆ ಎಸೆದು ಭಕ್ತಿಯಿಂದ ಪ್ರಾರ್ಥಿಸಿದಾಗ ಶಿವ ಪಾರ್ವತಿ ಸಮೇತನಾಗಿ ಮಂಜುನಾಥನ ರೂಪದಲ್ಲಿ ಪ್ರತ್ಯಕ್ಷನಾದನಂತೆ. ಜಗದೋದ್ಧಾರಕನಾಗಿ ಮಂಜುನಾಥ ಕದ್ರಿಯಲ್ಲಿ ನೆಲೆನಿಂತ ಎಂಬುದನ್ನು ಇತಿಹಾಸ ಹೇಳುತ್ತದೆ. ದೇವಸ್ಥಾನದ ಹಿಂಭಾಗದಲ್ಲಿ ಮೆಟ್ಟಿಲುಗಳನ್ನು ಏರಿ ಹೋದರೆ ಅಕ್ಷಯ ಪುಷ್ಕರಣಿಗಳಿವೆ. ಕೆರೆಯ ಸುತ್ತ ಸುಂದರ ಹೂ ತೋಟವಿದೆ. ಎತ್ತರದ ದೀಪದ ಕಂಬ ನಮ್ಮನ್ನು ಎದುರುಗೊಳ್ಳುತ್ತದೆ.
ಇಲ್ಲಿನ ವಿಶೇಷತೆ :
ಇಲ್ಲಿ ಕಾರ್ತೀಕ ಮಾಸದಂದು ದೀಪೋತ್ಸವ ಹಮ್ಮಿಕೊಳ್ಳಲಾಗುತ್ತದೆ. ದೇವಸ್ಥಾನದಲ್ಲಿ ಮಚ್ಛೇಂದ್ರನಾಥ, ಗೊರಕನಾಥ, ಲೋಕೇಶ್ವರ ಮತ್ತು ಬುದ್ಧನ ವಿಗ್ರಹಗಳಿವೆ. ದೇವಸ್ಥಾನದ ಪಶ್ಚಿಮಕ್ಕೆ ದುರ್ಗಾದೇವಿ ದೇವಸ್ಥಾನ, ಉತ್ತರಕ್ಕೆ ಗಣಪತಿ ದೇವಸ್ಥಾನ ಇದೆ. ದೇವಸ್ಥಾನದಲ್ಲಿ ವರ್ಷಪೂರ್ತಿ ಹಬ್ಬಗಳು, ಉತ್ಸವಗಳು ನಡೆಯುತ್ತವೆ. ದೇವಸ್ಥಾನದಲ್ಲಿ ಗಣೇಶ ಚತುರ್ಥಿ, ಶ್ರೀ ಕೃಷ್ಣ ಜನ್ಮಾಷ್ಟಮಿ, ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯಂದು ಧ್ವಜಾರೋಹಣ ಮಾಡಲಾಗುತ್ತದೆ. ನವರಾತ್ರಿಯಂದು ಒಂಬತ್ತು ದಿನ ಧರ್ನುಪೂಜೆ ನಡೆಯುತ್ತದೆ. ಪ್ರತಿದಿನ ಮಂಜುನಾಥನಿಗೆ ರುದ್ರಾಭಿಷೇಕ ನಡೆಯುತ್ತದೆ.
ದೇವಾಲಯ ತೆರೆಯುವ ಸಮಯ:
ಎಲ್ಲಾ ದಿನಗಳಲ್ಲಿಯೂ ತೆರೆದಿರುತ್ತದೆ. ಬೆಳಿಗ್ಗೆ 5.40 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ.
ಮುಖ್ಯ ದೇವರು : ಮಂಜುನಾಥ (ಶಿವ) ಹಾಗೂ ದೇವಾಲಯದೊಳಗೆ ಗಣಪತಿ ಮತ್ತು ದುರ್ಗಾಪರಮೇಶ್ವರಿಯರು ಇದ್ದಾರೆ.
ಮಹಾಸೇವೆಗಳು:
- ಮಹಾಶಿವರಾತ್ರಿ: ಶಿವ ಮತ್ತು ಶಕ್ತಿಯ ವಿಶೇಷ ಆರಾಧನೆಯಾಗಿದೆ.
- ನಾಗರಪಂಚಮಿ: ಈ ದಿನದಂದು ಹಿಂದೂ ಸಂಪ್ರದಾಯದಂತೆ ನಾಗರಕಲ್ಲಿಗೆ ಮತ್ತು ಹುತ್ತಕ್ಕೆ ಹಾಲನ್ನು ಎರೆಯುತ್ತಾರೆ.
- ಗಣೇಶ ಚತುರ್ಥಿ: ಈ ದಿನದಂದು 108 ತೆಂಗಿನ ಕಾಯಿಯನ್ನು ಒಡೆದು ಗಣಹೋಮವನ್ನು ಮಾಡಿ, ಗಣೇಶನ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ.
- ನವರಾತ್ರಿ: ದುರ್ಗಾದೇವಿಯನ್ನು 9 ದಿನಗಳವರೆಗೆ ಅಲಂಕರಿಸಿ ಈ ವಿಶೇಷ ಪೂಜೆಯನ್ನು ನೆರವೇರಿಸಲಾಗುತ್ತದೆ.
- ಕಾರ್ತಿಕ ಸೋಮವಾರ: ಕಾರ್ತಿಕ ಮಾಸದ ಎಲ್ಲಾ ಸೋಮವಾರದಂದು ಶತರುದ್ರಾಭಿಷೇಕದೊಂದಿಗೆ ವಿಶೇಷವಾಗಿ ಶಿವನ ಆರಾಧನೆಯನ್ನು ನೆರವೇರಿಸಲಾಗುತ್ತದೆ.
- ಲಕ್ಷ ದೀಪೋತ್ಸವ: ಕಾರ್ತಿಕ ಮಾಸ, ಅಮಾವಾಸ್ಯೆಯ ರಾತ್ರಿಯಂದು ದೇವಾಲಯದ ಒಳಗು ಮತ್ತು ಹೊರಗು ಮಣ್ಣಿನ ದೀಪಗಳನ್ನು ಹಚ್ಚಿ, ಮಂಜುನಾಥನನ್ನು ದೀಪಾವಳಿ ಕಟ್ಟೆಯವರೆಗೆ ಮೆರವಣಿಗೆ ಮಾಡಲಾಗುತ್ತದೆ.
- ವಾರ್ಷಿಕ ಪೂಜೆ: ವಿಶೇಷವಾಗಿ 9 ದಿನಗಳು ನಡೆಯುವ ಪೂಜೆಗಳಲ್ಲಿ, ಮಹಾಪೂಜೆ, ಅಭಿಷೇಕ ಮತ್ತು ಬೆಳ್ಳಿ ಪಲ್ಲಕ್ಕಿ ಉತ್ಸವವನ್ನು ಆಚರಿಸಲಾಗುತ್ತದೆ.
- ವಿಶೇಷ ಸೇವೆಗಳು: ರುದ್ರಾಭಿಷೇಕ, ಶತರುದ್ರಾಭಿಷೇಕ, ಅಪಾರಕ್ರಿಯ ಕಾಣಿಕೆ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ದೂರ್‍ವಯುಷ್ಯ ಹೋಮ, ಶನಿಪೂಜಾ.
ವಿಳಾಸ: ಕದ್ರಿ ಮಂಜುನಾಥೇಶ್ವರ ದೇವಸ್ಥಾನ, ಕದ್ರಿ, ಮಂಗಳೂರು – 575002
ಕದ್ರಿ ಪಾರ್ಕ್ :
ಇಲ್ಲಿಯೇ ಇರುವ ಇನ್ನೊಂದು ಆಕರ್ಷಣೀಯ ಸ್ಥಳ ಕದ್ರಿ ಪಾರ್ಕ್. ಕದ್ರಿ ದೇವಸ್ಥಾನಕ್ಕೆ ಭೇಟಿ ನೀಡಿದರೆ ಕದ್ರಿ ಉದ್ಯಾನವನದ ಸೌಂದರ್ಯವನ್ನು ಆಸ್ವಾದಿಸಬಹುದು. ಸುಂದರ ಉದ್ಯಾನವನದಲ್ಲಿ ಹೂಗಳ ರಾಶಿ ಇದೆ. ತೋಟಗಾರಿಕೆ ಇಲಾಖೆ ವತಿಯಿಂದ ಇಲ್ಲಿ ವರ್ಷಕ್ಕೊಮ್ಮೆ ಫಲಪುಷ್ಪ ಪ್ರದರ್ಶನ ನಡೆಯುತ್ತದೆ. ಮಂಗಳೂರಿನಲ್ಲಿ ಹೆಚ್ಚು ವಿಸ್ತೀರ್ಣ ಹೊಂದಿರುವ ಉದ್ಯಾನವನಗಳಲ್ಲಿ ಕದ್ರಿ ಪಾರ್ಕ್ ಒಂದಾಗಿದೆ. ಮಂಗಳೂರಿಗೆ ಭೇಟಿ ಕೊಟ್ಟರೆ ಕದ್ರಿ ಮಂಜುನಾಥ ದೇವಸ್ಥಾನದ ಜತೆಗೆ ಕುದ್ರೋಳಿ ದೇವಸ್ಥಾನ, ಗಣಪತಿ ದೇವಸ್ಥಾನ ಕಾರ್‌ಸ್ಟ್ರೀಟ್, ಮಂಗಳಾದೇವಿ ದೇವಸ್ಥಾನ, ಉದ್ಯಾನವನಗಳು, ಬಿಜೈಯಲ್ಲಿರುವ ಶ್ರೀಮಂತಿ ಬಾಯಿ ಮ್ಯೂಸಿಯಂ, ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಿ ಬರಬಹುದು.
ಮಂಗಳೂರು ಸಿಟಿಯಿಂದ 5-6 ಕಿಮೀ ದೂರದ ಅಂತರದಲ್ಲಿ ಇರುವುದರಿಂದ ಒಂದು ಯಾತ್ರೆಯನ್ನು ಕೈಗೊಂಡರೆ ಸಾಕು; ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ನೋಡಿ ಬರಬಹುದು.
- ಸೌಮ್ಯ ಸನತ್