ಪತ್ರಕರ್ತರು ಮತ್ತು ಅವರ ಜವಾಬ್ದಾರಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೀದರ್ ನಲ್ಲಿ ನಡೆದ ೪೦ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ನಾಗರೀಕ ಪ್ರಪಂಚದಲ್ಲಿ ವೃತ್ತ ಪತ್ರಿಕೆಗಳಿಗೆ ಹಾಗು ಪತ್ರಕರ್ತರಿಗೆ ವಿಶೇಷ ಸ್ಥಾನಮಾನವಿದೆ, ಆಧುನಿಕ ಕನ್ನಡ ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡ ಪತ್ರಕರ್ತರ ಕೊಡುಗೆ ಅಪಾರವಾಗಿದೆ. ಪತ್ರಕರ್ತರು ಸಮಾಜದ ಕಣ್ಣು ಹಾಗು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ, ನೇರ, ನಿಖರ, ಪಕ್ಷಪಾತವಿಲ್ಲದ ಸತ್ಯದ ಅನ್ವೇಷಣೆ ನಿಟ್ಟಿನಲ್ಲಿ ಸಮಾಜದ ಸಾರ್ವಜನಿಕ ಸಮಸ್ಯೆಗಳಿಗೆ ದ್ವನಿಯಾಗಿ ಸರ್ಕಾರದ ಕಣ್ಣು ತೆರೆಸುವ, ಹಾಗು ಸ್ಥಳೀಯ, ಗ್ರಾಮೀಣ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರವಹಿಸುವ ಜೊತೆಗೆ ಪರಿಸರ, ಕೃಷಿ, ಜನರ ಅರೋಗ್ಯ ಜಾಗೃತಿ ಮೂಡಿಸುವ ಹಾಗು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತ ಕಂಗಲಾದರೆ ರೈತ ಮತ್ತು ಆಡಳಿತ ವ್ಯವಸ್ಥೆಯ ಕೊಂಡಿಯಾಗಿ ಭ್ರಷ್ಟಾಚಾರ ಮತ್ತು ರಾಜಕೀಯ ವ್ಯವಸ್ಥೆ ಮುಂತಾದ ವಿಷಯಗಳನ್ನು ಸಮಾಜದ ಮುಂದೆ ಇಡುವಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುವರಾಗಿರುತ್ತಾರೆ.

ಪತ್ರಿಕೋದ್ಯಮ ಬೆಳೆದು ಬಂದ ಹಾದಿ

ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದದ್ದೂ ಸ್ವಾತಂತ್ರ ಪೂರ್ವ ೧೮೪೩ ನೇ ಜೂಲೈ ೧ ರಂದು ಅಂದಿನ ಪತ್ರಿಕಾ ಸಂಪಾದಕರಾದ “ಹರ್ಮನ್ ಮೂಗ್ಲಿಂಗ್” ಅವರು ಪ್ರಥಮ ಬಾರಿಗೆ ಮಂಗಳೂರಿನಲ್ಲಿ “ಮಂಗಳೂರು ಸಮಾಚಾರ” ಅನ್ನುವ ಪಾಕ್ಷಿಕ ಪತ್ರಿಕೆಯನ್ನು ಪ್ರಾರಂಭಿಸಿದರು ತದನಂತರ ಅದು ಬಳ್ಳಾರಿಗೆ ವರ್ಗವಾಗಿ ಮಂಗಳೂರು ಸಮಾಚಾರ ಪತ್ರಿಕೆಯು “ಕನ್ನಡ ಸಮಾಚಾರ” ಅನ್ನುವ ಹೊಸ ನಾಮಕರಣ ಪಡೆದು ಪತ್ರಿಕೆ ಪ್ರಕಟಣೆಗೊಂಡಿತು. ತರುವಾಯ ಮುಂದೆ ಕನ್ನಡ ಪತ್ರಿಕೆ, ಸತ್ಯ ದೀಪಿಕೆ, ಕ್ರಿಸ್ತ ಸಭಾಪತ್ರ ಎಂಬ ವಿವಿಧ ಹೆಸರಲ್ಲಿ ಕ್ರಿ. ಶಕ ೧೯೪೦ ರ ವರಗೆ ಮುಂದುವರಿಯತು. ಹಾಗಾಗಿ ‘ಹರ್ಮನ್ ಮೊಗ್ಲಿoಗ್’ ಅವರನ್ನು ಕನ್ನಡದ ಪತ್ರಿಕೋದ್ಯಮದ ಪಿತಾಮಹವೆಂದು ಕರೆಯುವರು.

ಆಧುನಿಕ ಕನ್ನಡ ಪತ್ರಿಕೋದ್ಯಮದ ಪಿತಾಮಹ

ಮಂಗಳೂರು ಸಮಾಚಾರ ಪತ್ರಿಕೆಯ ಸಂಪಾದಕರಾದ ಹರ್ಮನ್ ಮೊಗ್ಲಿoಗ್ ಅವರನ್ನು ಕನ್ನಡ ಪತ್ರಿಕೋದ್ಯಮ ಪಿತಾಮಹವೆಂದು ಕರೆದರೆ, ಎಂ. ವೆಂಕಟೇಶಯ್ಯರವರನ್ನು “ಆಧುನಿಕ ಕನ್ನಡ ಪತ್ರಿಕೋದ್ಯಮದ ಪಿತಾಮಹ” ನೆಂದು ಕರೆಯುವರು, ಇವರು ೧೮೮೫ ರಲ್ಲಿ ‘ವೃತ್ತಾಂತ ಚಿಂತಾಮಣಿ’ ಪತ್ರಿಕೆ ಸಂಪಾದಕರಾಗಿ ಮೈಸೂರಿನಲ್ಲಿ ಪತ್ರಿಕೆ ಪ್ರಾರಂಭಿಸಿದರು.

ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಪತ್ರಿಕೆಗಳು

ಕನ್ನಡ ಪತ್ರಿಕೋದ್ಯಮವು ೧೮೪೩ ರಲ್ಲಿ ಮಂಗಳೂರು ಸಮಾಚಾರದೊಂದಿಗೆ ಆರಂಭಗೊಂಡು ಸ್ವಾತಂತ್ರ್ಯ ಹೋರಾಟಗಾರರ ಸಮಯದಲ್ಲಿ ರಾಷ್ಟೀಯಯತೆ, ಸಮಾಜ ಸುಧಾರಣೆ, ಮತ್ತು ಕರ್ನಾಟಕ ಏಕೀಕರಣಕ್ಕೆ ಪತ್ರಿಕೆಗಳು ಬುನಾದಿಯಾದವು, ಅಂದಿನ ನಡೆಗನ್ನಡಿ, ಸೂರ್ಯೋದಯ, ಪ್ರಕಾಶಿಕ, ಕರ್ನಾಟಕ ವೈಭವ ವಿಶ್ವ ಕರ್ನಾಟಕ ಕರ್ಮವೀರ ಮೂಲಕ ಬೆಳೆದು ಸ್ವಾತಂತ್ರ್ಯ ನಂತರದಲ್ಲಿ ಪ್ರಜಾವಾಣಿ, ವಿಜಯಕರ್ನಾಟಕ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಉದಯವಾಣಿ, ವಿಶ್ವವಾಣಿ, ವಿಜಯವಾಣಿ, ಮುಂತಾದ ಪತ್ರಿಕೆಗಳು ಪ್ರಮುಖ ದೈನಿಕಗಳಾಗಿ ಇಂದಿನ ಡಿಜಿಟಲ್ ಯುಗದ ಮಾಧ್ಯಮದ ವರೆಗೂ ವಿಕಸನಗೊಂಡಿವೆ.

ಬೀದರ ಜಿಲ್ಲೆಯ ಸ್ಥಳೀಯ ಪತ್ರಿಕೆಗಳು

ಅಂದಿನ ಕಾಲದಲ್ಲಿ ಸ್ಥಳೀಯ ಪತ್ರಿಕೆಗಳು, ನಿರ್ದಿಷ್ಟ ಸುದ್ದಿಗಳು, ಜನರ ಸಮಸ್ಯೆಗಳು, ಮತ್ತು ಸಂಸ್ಕೃತಿಯ ಪ್ರಸಾರ ಮಾದ್ಯಮಗಳಾಗಿ ಬೀದರ ಜಿಲ್ಲೆಯಲ್ಲಿ ಪ್ರಾಮುಖ್ಯತೆ ಹೊಂದಿದ ದಿನಪತ್ರಿಕೆಗಳಾಗಿದ್ದವು. ನಾ ಕಂಡಂತೆ ಅಂದಿನ ಶಿವಶರಣಪ್ಪಾ ವಾಲಿ ಅವರ ಸಂಪಾದತ್ವ ದಲ್ಲಿ ಉತ್ತರ ಕರ್ನಾಟಕ ಜಿಲ್ಲೆಯ ಪ್ರಮುಖ ದಿನ ಪತ್ರಿಕೆಯಾಗಿತ್ತು, ತದನಂತರ ದಮನ್, ಮಲ್ಲಿಕಾರ್ಜುನ ಸ್ವಾಮಿ ಅವರ ಜನದನಿ, ಗಂಧರ್ವ ಸೇನಾ ಅವರ ಪಬ್ಲಿಕ್ ದಿನಪತ್ರಿಕೆ, ಪರಿಹಾರ, ವಚನ ಕ್ರಾಂತಿ, ಮುಂತಾದ ಪತ್ರಿಕೆಗಳು ಪ್ರಮುಖ ಸುದ್ದಿ ಬಿತ್ತರಿಸುವ ಮಾಧ್ಯಮವಾದರೆ, ಇಂದು ವಿಜಯಕುಮಾರ ಸೋನಾರೆ ಅವರ ಸೋನಾರೆ ಎಕ್ಸ್ಪ್ರೆಸ್, ಸುನಿಲ್ ಭಾವಿಕಟ್ಟಿ ಅವರ ನಮ್ಮ ಕನ್ನಡಿಗರ ದ್ವನಿ, ಕ್ರಾಂತಿ ಭೂಮಿ, ಸುದ್ದಿ ಜಗತ್ತು ನ್ಯೂಸ್, ಮಾಣಿಕ ಮರ್ಕಲೆ ಅವರ ಬಸವ ವಾಣಿ, ಮುಂತಾದ ಪತ್ರಿಕೆಗಳು ಸ್ಥಳೀಯ ಸಾಮಾಜಿಕ ಆರ್ಥಿಕ ಶೈಕ್ಷಣಿಕ, ಸಂಸ್ಕೃತಿಕ ಸಾಹಿತ್ಯದ ಚಟುವಟಿಕೆಗಳನ್ನು ಪ್ರಕಟಿಸುವ ಜೊತೆಗೆ ಸಾರ್ವಜನಿಕ ಸಮಸ್ಯೆಗಳ ಧ್ವನಿಯಾಗಿ ಪತ್ರಿಕೆಗಳ ಮತ್ತು ಪತ್ರಕರ್ತರ ಸಾಮಾಜಿಕ ಕಳಕಳಿಯನ್ನು ಮೆರೆಯುತ್ತಿದ್ದಾರೆ.

ಹಾಗಾಗಿ ಆತ್ಮೀಯ ಬಾಂಧವರೇ ಇದೆ ಏಪ್ರಿಲ್ ತಿಂಗಳ ೧೧ ಮತ್ತು ೧೨ ರಂದು ರಾಜ್ಯದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಶಿವಾನಂದ ತಗಡೂರ ಹಾಗು ಜಿಲ್ಲಾ ಅಧ್ಯಕ್ಷರಾದ ಶ್ರೀ ಆನಂದ ದೇವಪ್ಪ ಅವರ ನೇತೃತ್ವದಲ್ಲಿ ಎರಡು ದಿನದ ೪೦ ನೇ ಪತ್ರಕರ್ತರ ಸಮ್ಮೇಳನ ಬೀದರನಲ್ಲಿ ನಡೆಯಲಿದ್ದು ಸಮ್ಮೇಳನದಲ್ಲಿ ಸಾಧನೆ ತೋರಿದ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಹಾಗು ಸನ್ಮಾನ ಕಾರ್ಯಕ್ರಮ, ಮತ್ತು ವಿವಿಧ ಗೋಷ್ಠಿಗಳು ನಡೆಯಲಿದ್ದು ಪೂಜ್ಯ ಬಸವಲಿಂಗ ಪಟ್ಟದೇವರು, ನಿಜಗುಣ ಪ್ರಭು ಸ್ವಾಮಿಗಳು ಬೇಲೂರು ಮಠ, ರಾಜ್ಯದ ಮುಖ್ಯ ಮಂತ್ರಿಗಳು ಹಾಗು ಜಿಲ್ಲೆಯ ರಾಜಕಾರಣಿಗಳು, ಸಾಹಿತಿಗಳು, ವಿವಿಧ ಮಠಾಧೀಶರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಎಲ್ಲಾ ಪತ್ರಕರ್ತ ಬಾಂಧವರು ಭಾಗವಹಿಸಲಿದ್ದಾರೆ ಬನ್ನಿ ನಾವು ನೀವೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ.


  • ಓಂಕಾರ ಪಾಟೀಲ – ಕಾರ್ಯದರ್ಶಿಗಳು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW