ಮನೆ ಸಾಲದ ಬಗ್ಗೆ ಒಂದೆರಡು ಮಾಹಿತಿ – ದೇವರಾಜಾಚಾರ್




ಸುಂದರ ಮನೆ ಕಟ್ಟುವುದು ಎಲ್ಲರ ಕನಸು, ಅದಕ್ಕಾಗಿ ಸಾಲ ಸೋಲ ಮಾಡಿ ಮನೆ ಕಟ್ಟುವ ಮಧ್ಯಮವರ್ಗದ ಜನ ಬ್ಯಾಂಕ್ ನ ಸರಿಯಾದ ಮಾಹಿತಿಯನ್ನು ತಿಳಿಯದೆ, ಒಂದಕ್ಕೆ ಎರಡು ಪಟ್ಟು ಬಡ್ಡಿ ಕಟ್ಟುತ್ತಾ ಹೋಗುತ್ತಾರೆ, ಅಂತವರಿಗೆ ಲೇಖಕರಾದ ದೇವರಾಜಾಚಾರ್ ಅವರ ಕಿವಿಮಾತು…

ಒಂದು ನಿವೇಶನ ಕೊಳ್ಳಲು ಮಧ್ಯಮ ವರ್ಗದ ಜನ #ಸಾಲ ಮಾಡಿಯಾದರೂ ಒಂದು ಕನಸಿನ ಮನೆಯನ್ನು ಕಟ್ಟಿಕೊಳ್ಳ ಬಯಸುತ್ತಾರೆ. ಬಡ್ಡಿ ಎಷ್ಟಾದರೂ ಸರಿ, ಗೃಹ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಾರೆ. ಸಾಲದ ಮೇಲಿನ ಬಡ್ಡಿ ಬಗ್ಗೆ ಮೊದಲು ವಿಚಾರ ಮಾಡುವುದಿಲ್ಲ. ರಣಹದ್ದಿನಂತೆ ರಾಷ್ಟ್ರೀಕೃತ ಬ್ಯಾಂಕುಗಳು ಇಂತಹವರನ್ನು ಗಾಳಹಾಕಲು ಕಾಯುತ್ತಿರುತ್ತಾರೆ. ಮನೆ ಸಾಲ ಕೊಡುವ ಬಗ್ಗೆ ವಿಶೇಷ ಮೇಳಗಳನ್ನು ಇಟ್ಟು ಆಕರ್ಷಿಸುತ್ತಾರೆ.

ಫೋಟೋ ಕೃಪೆ : protechgroup

ಗೃಹಸಾಲದಲ್ಲಿ ಸಾಕಷ್ಟು ಸ್ಕೀಮ್ ಗಳು ಇರುತ್ತವೆ – 

  • ಫಿಕ್ಸೆಡ್ ಇಂಟರೆಸ್ಟ್ ಸಾಲ: ತೆಗೆದು ಕೊಳ್ಳುವಾಗ ಇರುವ ಬಡ್ಡಿಯೇ ಕೊನೆ ತನಕ ಇರುತ್ತದೆ.
  • ಫ್ಲೋಟಿಂಗ್ ಇಂಟರೆಸ್ಟ್ ಸಾಲ : RBI ಅಲ್ಲಲ್ಲಿ ಬಡ್ಡಿಯನ್ನು ಹೆಚ್ಚಿಸುವ, ಕಡಿಮೆ ಮಾಡುವ ವ್ಯವಸ್ಥೆ ಇರುತ್ತದೆ. ಆದರೆ ಬ್ಯಾಂಕುಗಳು ತಕ್ಷಣವೇ ಕಡಿಮೆ ಮಾಡುವುದಿಲ್ಲ .ಅವರಿಗೆ ಅವರದೇ ಆದ ಪ್ರೊಸೀಜರ್ ಗಳಿರುತ್ತೆ.
  • ಎಂಸಿಎಲ್ಆರ್ ಸಾಲ:ಈ ಸ್ಕೀಂನಲ್ಲಿ ಬ್ಯಾಂಕನವರೆ ಬಡ್ಡಿಯನ್ನು ಫಿಕ್ಸ್ ಮಾಡುತ್ತಾರೆ.
  • ರೆಪೋ ರೇಟ್ ಸಾಲ: ಆರ್ ಬಿಐ ಪ್ರಕಾರ ಬಡ್ಡಿ ಇರುತ್ತೆ .

ಮೇಲೆ ತಿಳಿಸಿದ ಮೊದಲ, ಎರಡನೆಯ ಮತ್ತು ಮೂರನೆಯ ಸ್ಕೀಮಿನಲ್ಲಿ ಬಡ್ಡಿ ಜಾಸ್ತಿ ಅಂತ ಕಂಡು ಬಂದರೆ, ನಾವು ಬ್ಯಾಂಕ್ ನವರನ್ನು ರೆಪೋ ರೇಟ್ ಗೆ ಕನ್ವರ್ಟ್ ಮಾಡ್ಕೊಡಿ ಅಂತ ಅರ್ಜಿ ಹಾಕಿಕೊಳ್ಳಬೇಕು ಅಥವಾ ಕಡಿಮೆ ಬಡ್ಡಿ ಇರುವ ಬ್ಯಾಂಕ್ ಗಳಿಗೆ ವರ್ಗಾಯಿಸಿಕೊಳ್ಳಬೇಕು. ಇದು ಗ್ರಾಹಕರು ತಿಳಿದಿರಬೇಕಾದ ವಿಚಾರ.

ಒಂದೊಂದು ಸ್ಕೀಮ್ ನಲ್ಲೂ ಒಂದೊಂದು ಪರ್ಸೆಂಟೇಜ್ ಬಡ್ಡಿ ಇರುತ್ತೆ. ಸಾಲ ಮುಗಿಯುವವರೆಗೆ ಸಮನಾದ ಕಂತು ಇರುತ್ತೆ. ಬ್ಯಾಂಕ್ ನವರು ಅಗ್ರಿಮೆಂಟ್ ಮಾಡಿಸಿಕೊಳ್ಳುವ ಸಮಯದಲ್ಲಿ EMI ಇಷ್ಟು ಅಂತ ಫಿಕ್ಸ್ ಮಾಡುತ್ತಾರೆ. EMI ನಲ್ಲಿ ತೆಗೆದುಕೊಂಡ ಸಾಲ ಮತ್ತು ಬಡ್ಡಿ ಸೇರಿರುತ್ತೆ. ಮೊದಲ ಕಂತುಗಳಲ್ಲಿ ಬಡ್ಡಿಗೆ ಜಾಸ್ತಿ ಹೋಗಿ ,ಅಸಲಿಗೆ ಕಡಿಮೆ ಹೋಗುತ್ತೆ .ನೂರಿಪ್ಪತ್ತು ಕಂತು ಅಂತ ಫಿಕ್ಸ್ ಮಾಡಿದರೆ ಅಷ್ಟಕ್ಕೆ ಮುಗಿಯುತ್ತದೆ ಅಂತ ತಿಳಿಯುವ ಆಗಿಲ್ಲ. ಕಂತುಗಳು ಜಾಸ್ತಿ ಆಗಬಹುದು.

ಉದಾಹರಣೆಗೆ ನನ್ನದೇ ಒಂದು ಸ್ವಂತ ಅನುಭವವಿದೆ. ನಾನು 2010 ರಲ್ಲಿ 14 ಲಕ್ಷ ಸಾಲ ತೆಗೆದುಕೊಂಡಿದ್ದೆ. EMI 17, 500 ರೂ ಗಳನ್ನು ಫಿಕ್ಸ್ ಮಾಡಿ 125 ಕಂತುಗಳನ್ನು ಕಟ್ಟಬೇಕೆಂದು ತಿಳಿಸಿದ್ದರು. ಆದರೆ 125 ಕಂತುಗಳಲ್ಲಿ ಈ ಸಾಲ ಮುಗಿಯದೆ, ಇನ್ನೂ ಹತ್ತು ಕಂತುಗಳನ್ನು ಹೆಚ್ಚಿಗೆ ಕಟ್ಟಬೇಕಾಯಿತು. ಅಂದರೆ 1,75,000 ರೂಗಳ ಬಡ್ಡಿ ಜಾಸ್ತಿಯಾಯಿತು. ಇದಕ್ಕೆ ಯಾರು ಹೊಣೆ ಗೊತ್ತಿಲ್ಲ .ಹತ್ತು ವರ್ಷಗಳ ಅವಧಿಗೆ ಹತ್ತು ಲಕ್ಷ ಬಡ್ಡಿ ಕಟ್ಟಬೇಕಾಯಿತು. ನನ್ನ ಸಾಲದ ಸ್ಕೀಮ್ ಎಂಸಿಎಲ್ಆರ್ ಅಂತ ಇತ್ತು.ಇದರ ಬಡ್ಡಿ ದರವನ್ನು ಬ್ಯಾಂಕಿನವರು ಫಿಕ್ಸ್ ಮಾಡುತ್ತಾರೆ. ಈ ಸ್ಕೀಮ್ ನಲ್ಲೂ ಸಹ ಆರ್ ಬಿಐನವರು ಬಡ್ಡಿ ಕಡಿಮೆ ಮಾಡಿದರೆ ಇವರೂ ಸಹ ಕಡಿಮೆ ಮಾಡಬಹುದು .ಆದರೆ ಅವರನ್ನು ನಾವು ಹೋಗಿ ಅರ್ಜಿ ಮುಖಾಂತರ ಕೇಳಿಕೊಳ್ಳಬೇಕು .ಇಲ್ಲದಿದ್ದರೆ ಅವರು ಬದಲಾವಣೆ ಮಾಡುವುದಿಲ್ಲ. ಅದಕ್ಕೆ ಫೀಸ್ ಸಹ ತೆಗೆದುಕೊಳ್ಳುತ್ತಾರೆ. ಮೊದಮೊದಲು ಇದು ನನಗೆ ಗೊತ್ತೇ ಆಗುತ್ತಿರಲಿಲ್ಲ .



ನಂತರದಲ್ಲಿ ಬ್ಯಾಂಕಿಗೆ ಹೋಗಿ ವಿಚಾರಿಸಲಾಗಿ ಈ ರೀತಿಯ ಒಂದು ವ್ಯವಸ್ಥೆ ಇದೆ ಅಂತಲ್ಲ ನಮಗೆ ಏಕೆ ತಿಳಿಸಲಿಲ್ಲ ಎಂದರೆ, ನಾವು ಪ್ರತಿಯೊಬ್ಬರಿಗೂ ತಿಳಿಸುವುದಿಲ್ಲ. ನೀವೇ ಬ್ಯಾಂಕಿನ ಬದಲಾವಣೆಯನ್ನು ತಿಳಿದುಕೊಳ್ಳಬೇಕು. ಪೇಪರ್ ನಲ್ಲಿ ಮತ್ತು ಟೀವಿಗಳಲ್ಲಿ ಬರುತ್ತದೆ. ಅದನ್ನ ನೀವು ತಿಳಿದುಕೊಳ್ಳಬೇಕು ಎಂದು ಬ್ಯಾಂಕಿನ ಸಿಬ್ಬಂದಿ ನನ್ನ ಜತೆ ವಾದ ಮಾಡಿದರು. ನಾವು ಬದಲಾವಣೆಗೆ ಅರ್ಜಿ ಕೊಟ್ಟರೂ ಅವರು ಎಫೆಕ್ಟ್ ಡೇಟ್ ನಿಂದ ಬಡ್ಡಿಯನ್ನು ಕಡಿಮೆ ಮಾಡುವುದಿಲ್ಲ. ಇದು ಗ್ರಾಹಕರಿಗೆ ಆಗುವ ಒಂದು ರೀತಿಯ ಅನ್ಯಾಯ.

ದೊಡ್ಡ ದೊಡ್ಡ ಶ್ರೀಮಂತರುಗಳಿಗೆ ಕೋಟ್ಯಾಂತರ ರೂಪಾಯಿ ಸಾಲ ಕೊಟ್ಟು ಅವರು ಮರು ಪಾವತಿ ಮಾಡದಿದ್ದರೂ ಸಹ, ಅವರಿಗೆ ಏನಾದರೂ ಉಪಯೋಗ ಆಗುವಂಥ ಕಾನೂನನ್ನು ಹೇಳಿಕೊಡುತ್ತಾರೆ. ನಮ್ಮಂತ ಮಧ್ಯಮ ವರ್ಗದವರಿಗೆ ಯಾವುದೇ ಸಹಾಯ ಮಾಡುವುದಿಲ್ಲ .ಇದು ಕಂಡುಕೊಂಡ ಸತ್ಯ.

ದೈನಂದಿನ ಪತ್ರಿಕೆಯೊಂದರಲ್ಲಿ ಇದೆ ವಿಚಾರವಾಗಿ  ಗ್ರಾಹಕರೊಬ್ಬರು #ಕೋರ್ಟ್ ಮೆಟ್ಟಿಲೇರಿದ್ದು,ಕೋರ್ಟ್ ಗ್ರಾಹಕರ ಪರವಾಗಿ ತೀರ್ಪು ನೀಡಿತು ಎನ್ನುವ ವರದಿ ನೋಡಿದೆ. ಅದರಲ್ಲಿ ಕೋರ್ಟ್ .  ಹಾಕಿದರೆ ಸಾಲದು .ಯಾವುದೇ ಬ್ಯಾಂಕ್ ಬಡ್ಡಿದರ ಕಡಿಮೆ ಗೊಳಿಸಿದ ಸುತ್ತೋಲೆಯನ್ನು ಕೇವಲ ತಮ್ಮ ನೋಟಿಸ್ ಬೋರ್ಡ್ ನಲ್ಲಿ ಹಾಕದೆ, ಪ್ರತಿಯೊಬ್ಬ ಗ್ರಾಹಕನಿಗೂ ಮಾಹಿತಿ ತಲುಪಿಸಬೇಕು ಎಂದು ಆದೇಶವನ್ನು ಹೊರಡಿಸಿತು.

ಕನಸಿನ ಮನೆ ಕಟ್ಟುವ ಆತುರದಲ್ಲಿ ಬ್ಯಾಂಕ್ ಗಳು ನೀಡುವ ಸಾಲದ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿ, ತಿಳಿದುಕೊಳ್ಳಿ. ಇಲ್ಲವಾದರೆ ಜೀವನ ಪೂರ್ತಿ ಸಾಲಕ್ಕೆ ತಲೆಯೊಡ್ಡಬೇಡಿ.


  • ದೇವರಾಜಾಚಾರ್ (  (ಕೆಪಿಸಿಎಲ್ ನಿವೃತ್ತ ಭೂವಿಜ್ಞಾನಿ ಅಧಿಕಾರಿ, ಲೇಖಕರು )ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW