“ಲಂಡನ್ ಪ್ರವಾಸ” ಕಥನ – ದೇವರಾಜಾಚಾರ್



ಲಂಡನ್ ಪ್ರವಾಸದ ಕುರಿತು ಅನೇಕ ಲೇಖನಗಳನ್ನು ಓದಿದ್ದೇವೆ. ಆದರೆ ಅಲ್ಲಿಯ ದಿನನಿತ್ಯದ ಬದುಕು ಹೇಗಿರುತ್ತದೆ, ಅಲ್ಲಿಯ ವ್ಯವಸ್ಥೆ ಹೇಗಿರುತ್ತದೆ ಎನ್ನುವುದನ್ನು ಲೇಖಕರಾದ ದೇವರಾಜಾಚಾರ್ ಅವರು ತಮ್ಮ ಅನುಭವ ಕಥನವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.

(ಲಂಡನ್ ನಲ್ಲಿ 4 ತಿಂಗಳು ವಾಸವಾಗಿದ್ದಾಗ ಕಲೆಹಾಕಿದ್ದು )

ಫೆಬ್ರುವರಿ- ಮಾರ್ಚ್ ತಿಂಗಳಲ್ಲಿ ಹವಾಮಾನ 2 ಡಿಗ್ರಿಯಿಂದ 13 ಡಿಗ್ರಿವರೆಗೆ ಇರುತ್ತವೆ. ಕೆಲವು ದಿನಗಳಲ್ಲಿ snow, ಮಳೆ ಸಹ ಇರುತ್ತದೆ. ಚಳಿ, ತಣ್ಣನೆಯ ಗಾಳಿಯೂ ಇದ್ದರೂ ಕೂಡಾ ನಮ್ಮಂಥವರು 10 ಡಿಗ್ರಿಯಿಂದ 13 ಡಿಗ್ರಿಯಲ್ಲಿ ಹೊರಗಡೆ ಓಡಾಡಬಹುದು. ಮನೆ, ಮಾಲ್ ,ಹೋಟೆಲ್, ವಾಹನ ,ಮ್ಯೂಸಿಯಂಗಳಲ್ಲಿ 21ಡಿಗ್ರಿ ಇರುವಂತೆ ವ್ಯವಸ್ಥೆ ಮಾಡಿರಲಾಗುತ್ತದೆ. ಮೆಟ್ರೋ,  ಬಸ್,ಟ್ಯಾಕ್ಸಿಗಳು ವ್ಯವಸ್ಥೆ ಉತ್ತಮವಾಗಿದೆ. ಮೆಟ್ರೋ ವ್ಯವಸ್ಥೆ ಬೆಳಗಿನ ಜಾವದಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ಇರುತ್ತದೆ. ಒಂದಾದ ಮೇಲೊಂದು ಮೆಟ್ರೋ ಟ್ರೈನ್ ಬರುತ್ತಲೇ ಇರುತ್ತವೆ.ಕಾಯುತ್ತೀವಿ ಎಂದರು ಅಬ್ಬಬ್ಬಾ ಎಂದರೆ ಐದು ನಿಮಿಷಗಳು ಮಾತ್ರ . ಹೀಥ್ರೂ ಅಂತರರಾಷ್ಟ್ರೀಯ ವಿಮಾನನಿಲ್ದಾಣವಲ್ಲದೆ ಇನ್ನೂ 5 ವಿಮಾನ ನಿಲ್ದಾಣವಿದೆ. ಸೈಕಲ್ ನ್ನು ನಿರ್ಭಿತಿಯಿಂದ ಇಲ್ಲಿನ ರಸ್ತೆಗಳಲ್ಲಿ ಓಡಿಸಿಕೊಂಡು ಹೋಗಬಹುದು  ಆದರೆ ಇಲ್ಲಿ ಮೋಟರ್ ಬೈಕ್ ಗಳಿಲ್ಲ.

ಥೇಮ್ಸ್ ನದಿಯು ಲಂಡನ್ ಮಧ್ಯದಲ್ಲಿ ಸದಾಕಾಲ ತುಂಬಿ  ಹರಿಯುತ್ತದೆ. ಇದರಲ್ಲಿ ಸ್ವಚ್ಚಂದವಾಗಿ ಕ್ರೂಷರ್ ಓಡಾಡುತ್ತಿರುತ್ತದೆ. ಥೇಮ್ಸ ನದಿಗೆ ಅಡ್ಡಲಾಗಿ ಒಂದು ಸಣ್ಣ ಅಣೆಕಟ್ಟು ಕಟ್ಟಲಾಗಿದೆ. ಈ ಅಣೆಕಟ್ಟಿನ ವಿಶೇಷತೆಯೇನೆಂದರೆ ಉತ್ತರ ಸಮುದ್ರದ ಏರಿಳಿತಗಳು ಈ ನದಿಯ ಮೇಲೆ ಅಡ್ಡ ಪರಿಣಾಮ ಬಿರುವುದರಿಂದ  ಸಮುದ್ರದ ನೀರು  ಹಿಮ್ಮುಖವಾಗಿ ನದಿಯಲ್ಲಿ ಪ್ರವಾಹ ಹೆಚ್ಚುವಂತೆ ಮಾಡುತ್ತದೆ. ಈ ರೀತಿ ಆದಾಗ ಅಣೆಕಟ್ಟಿನ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಇದರಿಂದ ಸಮುದ್ರದ ನೀರು ನದಿಗೆ ಬರುವುದಿಲ್ಲ. ಒಂದು ವೇಳೆ ನದಿಯಲ್ಲಿ ಪ್ರವಾಹ ಹೆಚ್ಚಾದಾಗ ಡ್ಯಾ ಬಾಗಿಲನ್ನು ತೆಗೆಯುತ್ತಾರೆ.

ಫೋಟೋ ಕೃಪೆ : theguardian

ಇಲ್ಲಿಯ ವ್ಯಾವಹಾರಿಕ ಭಾಷೆ ಇಂಗ್ಲಿಷ್. ಇಂಗ್ಲಿಷ್ ಬಾರದವರಿಗೆ ಸ್ವಲ್ಪ ಕಷ್ಟವಾದರೂ ಅಲ್ಲಿನ ಜನ ಭಾರತೀಯರಿಗೆ ಗೌರವಿಸುವುದರಿಂದ ಸನ್ನೆಯ ಮೂಲಕ ಅವರೇ ಅರ್ಥಮಾಡಿಕೊಳ್ಳುತ್ತಾರೆ. ಯಾವುದೇ ಭಯವಿಲ್ಲದೆ ಓಡಾಡಬಹುದು. ಸ್ವಚ್ಛವಾದ ದೇಶ. ರಸ್ತೆ ಮಧ್ಯೆ ಹಸುಗಳು,ನಾಯಿಗಳು ಮಲಗುವುದು ಎಲ್ಲಿಯೂ ಕಾಣಸಿಗುವುದಿಲ್ಲ. ಕಂಡರೆ ಅದು ಸಾಕುಗಳು ಮಾತ್ರ,ಅದು ಅಲ್ಲೊಂದು ಇಲ್ಲೊಂದು. ಸೊಳ್ಳೆ ,ನೊಣ ,ಇರುವೆ, ಧೂಳು ಎಲ್ಲಿಯೂ ಕಾಣುವುದಿಲ್ಲ. ಆ ಚಳಿಗೆ ಸದಾ ಬೆಚ್ಚಗಿನ ಬಟ್ಟೆಗಳನ್ನು ತೊಡಬೇಕು. ಕೋಟು ಅಥವಾ ಜರ್ಕಿನ್, ಕೈಗವಚ ,ಕಾಲಿಗೆ ಸಾಕ್ಸ್, ಟೋಪಿ ಸೇರಿ ನಮ್ಮ ದೇಹದ ಮೇಲೆ ೧೦ ಕೆಜಿ ಮೇಲೆಯೇ ಭಾರ ಇದ್ದೆ ಇರುತ್ತದೆ.

ಇಲ್ಲಿ ನಮ್ಮ ದೇಶದವರು ಸುಮಾರು ಜನ ಇರುವುದರಿಂದ ಮಿನಿ ಇಂಡಿಯಾವನ್ನೇ ಕಾಣಬಹುದು. ಕನ್ನಡಿಗರೂ ಸಹ ಇದ್ದಾರೆ. ದಕ್ಷಿಣ ಭಾರತೀಯರಿಗಾಗಿ ಬೇರೆ ಮಾರ್ಕೆಟ್ಟಿದೆ .ಇದು ಈಸ್ಟ್ ಹ್ಯಾಮ್ ಮೆಟ್ರೋ ನಿಲ್ದಾಣದ ಹತ್ತಿರವಿದ್ದು, ಇಂಡಿಯಾದಲ್ಲಿ ಸಿಗುವಂಥ ದಿನಷಿ ,ತರಕಾರಿಗಳು ಎಲ್ಲಾ ಸಿಗುತ್ತದೆ .ಹೋಟೆಲ್ ಸಹ ಇದೆ. 1ಮಹಾಲಕ್ಷ್ಮಿ ಲಕ್ಷ್ಮಿನಾರಾಯಣ ದೇವಸ್ಥಾನವಿದೆ .ಈ ರಸ್ತೆಯ ಎರಡೂ ಕಡೆ ಇಂಡಿಯಾದವರಿಗೆ ಬೇಕಾಗುವಂಥ ದಿನಸಿ ಅಂಗಡಿ ,ಬೇಕರಿ, ಹೋಟೆಲ್, ಇತರೆ ವಸ್ತುಗಳು ಸಿಗುವಂಥ ಅಂಗಡಿಗಳು ಇವೆ .ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೆ .



ಭಾರತವು ಐದೂವರೆ ಗಂಟೆ ಮುಂದಿದೆ. ಭಾರತದಲ್ಲಿ ಬೆಳಿಗ್ಗೆ ಹನ್ನೊಂದು ಮೂವತ್ತಿದ್ದರೆ, ಲಂಡನ್ ನಲ್ಲಿ ಬೆಳಗಿನ ಆರು ಘಂಟೆ ಆಗಿರುತ್ತೆ. ಅದೇ ಮಾರ್ಚ್೨೫ರಿಂದ ಅಕ್ಟೋಬರ್ ೨೬ ವರೆಗೆ ಹಗಲು ಹೆಚ್ಚಾಗಿರುವುದರಿಂದ ಈ ವ್ಯತ್ಯಾಸ ನಾಲ್ಕೂವರೆ ಗಂಟೆ ಇರುತ್ತದೆ. ಇಲ್ಲಿ ಟಿಶ್ಯೂ ಪೇಪರ್ ಇಲ್ಲದೆ ಜೀವನ ಮುಂದೆ ಸಾಗುವುದಿಲ್ಲ. ನಮ್ಮ ದೇಶದಲ್ಲಿ ನೀರನ್ನು ಎತೇಚ್ಛವಾಗಿ ಹೇಗೆಂದರೆ ಹಾಗೆ ಬಳಸುವವರಿಗೆ ಈ ದೇಶದಲ್ಲಿ ಕಷ್ಟವಾಗಬಹುದು. ಮಕ್ಕಳಿಗೆ soft ಟಿಶ್ಯೂ, ಅಡುಗೆಮನೆಗೆ ಟಿಶ್ಯೂ ಟವೆಲ್, ಪಾಕೆಟ್ ಟಿಶ್ಯೂ , ವೆಟ್ ಟಿಶ್ಯೂ , ಟಾಯ್ಲೆಟ್ ಪೇಪರ್, ಫೇಶಿಯಲ ಟಿಶ್ಯೂ & nose ಟಿಶ್ಯೂ ಹೀಗೆ  ಬೆಳಗ್ಗೆಯಾದರೆ ಇಲ್ಲಿ ಟಿಶ್ಯೂ ಪೇಪರ್ ಯಿಂದಲೇ ದಿನ ಶುರುವಾಗುತ್ತದೆ. ಮತ್ತು ನ್ಯೂಸ್ ಪೇಪರ್ ಓದುವ ಅಭ್ಯಾಸವಿರುವವರಿಗೆ ಎರಡು ಹೊತ್ತು ಬಿಸಿ ಬಿಸಿ ಸುದ್ದಿಗಳನ್ನು ಆಸ್ವಾಧಿಸಬಹುದು. ಬೆಳಿಗ್ಗೆ ಒಂದು ಪತ್ರಿಕೆ ಮತ್ತು ಸಂಜೆ ಮತ್ತೊಂದು ಪತ್ರಿಕೆ. ಇದನ್ನು ಅಲ್ಲಿಯ ಸರ್ಕಾರವೇ ಮುದ್ರಿಸುತ್ತದೆ ಮತ್ತು ಪತ್ರಿಕೆಗಳನ್ನು ಉಚಿತವಾಗಿ ಹಂಚುತ್ತಾರೆ.

ಇನ್ನು ಭಿಕ್ಷುಕರ ಬಗ್ಗೆ ಹೇಳಬೇಕೆಂದರೆ ಅಲ್ಲೊಬ್ಬರು ಇಲ್ಲೊಬ್ಬರು ಸ್ಟ್ಯಾಂಡರ್ಡ್ ಭಿಕ್ಷುಕರನ್ನು ಕಾಣಬಹುದು. ರಸ್ತೆಯ ಮಧ್ಯೆದಲ್ಲಿ ಎಲೆಂದರಲ್ಲಿ ಕಸ ಹಾಕಿದರೆ ಸರಿಯಾದ ದಂಡ ಬೀಳುತ್ತದೆ, ಹಾಗಾಗಿ ಎಲ್ಲಿಯೂ ಪ್ಲಾಸ್ಟಿಕ್ ಕವರ್, ತ್ಯಾಜ್ಯ ವಸ್ತುಗಳು ಕಾಣುವುದಿಲ್ಲ. ಮನೆಗಳಲ್ಲಿ ಎರಡು ಬಣ್ಣದ ಕಸದ ಬುಟ್ಟಿಗಳಿರುತ್ತವೆ. ಹಸಿರು ಮತ್ತು ಕೇಸರಿ. ಹಸಿ ಕಸ, ಒಣ ಕಸ ಎಂದು ವಿಂಗಡಿಸಿದ್ದಾರೆ, ಅದಕ್ಕೆ ತಕ್ಕಂತೆ ಜನ ಸ್ಪಂದಿಸುತ್ತಾರೆ. ತಪ್ಪು ಮಾಡಿದರೆ ಶಿಕ್ಷೆ ಗ್ಯಾರಂಟಿ.

ಫೋಟೋ ಕೃಪೆ : therealdeal

ಮನೆಯ ದರೋಡೆ ಮಾಡುವುದು ಕೂಡಾ ಸುಲಭವಿಲ್ಲ, ಮನೆಗಳು ಸುರಕ್ಷಿತವಾಗಿವೆ. ಅಪರಿಚಿತ ವ್ಯಕ್ತಿಗಳು ಮನೆಯೊಳಗೇ ನುಗ್ಗಲು ಸಾಧ್ಯವಿಲ್ಲ. ಪ್ರತಿ ಅಪಾರ್ಟ್ ಮೆಂಟ್ ನ ಪ್ರವೇಶದ್ವಾರದಲ್ಲಿ ಒಂದು ದೊಡ್ಡ ಬಾಗಿಲಿರುತ್ತದೆ. ಮನೆಯ ಕೀ ಇರುವವರು ಅಚ್ಚಿಗೆ ತಗುಲಿಸಿದರೆ ಬಾಗಿಲು ಎಳು ಸೆಕೆಂಡ್ ತೆರೆದುಕೊಳ್ಳುತ್ತದೆ. ಒಂದು ವೇಳೆ ಹೊರಗಿನ ವ್ಯಕ್ತಿಗಳು ಬಂದರೆ ಡಯಲ್ ಪ್ಯಾಡ್  ನಿಂದ ಕರೆ ಮಾಡಬಹುದು. ಆಗ ಮನೆಯವರು ಓಕೆ ಕೊಟ್ಟರೆ ಹೊರಗಿನ ವ್ಯಕ್ತಿ ಮುಖ ಕಾಣಿಸುತ್ತದೆ. ಮಹಿಳೆಯರಿಗೆ, ವಯಸ್ಕರಿಗೆ ಸುರಕ್ಷಿತವಾಗಿದೆ.

ಮನೆಗೆ ಬಿಸಿನೀರು ,ತಣ್ಣಗಿನ ನೀರು agency ಎಲ್ಲಿಂದಲೋ ಸಪ್ಲೈ ಮಾಡುತ್ತಾರೆ .ಬಿಸಿ ನೀರಿಗೆ ಮೀಟರ್ ಬೇರೆ, ತಣ್ಣಗಿನ ನೀರಿಗೆ ಬೇರೆ ಮೀಟರ್ ಇರುತ್ತದೆ . ಇದೇ ರೀತಿ ವಿದ್ಯುತ್ತನ್ನು ಸಹ ತಮಗೆ ಬೇಕಾದ ಏಜೆನ್ಸಿ ಮೂಲಕ ಸಂಪರ್ಕ ಪಡೆದುಕೊಳ್ಳಬಹುದು. ಡಿಟಿಎಚ್ ಸೇವೆ ಇರುವುದಿಲ್ಲ .ಕೇಬಲ್ ಮೂಲಕ ತಮಗೆ ಬೇಕಾದ ವಾಹಿನಿಗಳನ್ನು ಅಳವಡಿಸಿಕೊಳ್ಳಬಹುದು .ಪ್ರತಿ ಮನೆಯಲ್ಲೂ ವಾಷಿಂಗ್ ಮೆಷಿನ್, ಡಿಶ್ ವಾಷರ್, ಟಿವಿ ಕೇಬಲ್ ,ನೀರಿನ ಸಂಪರ್ಕ ,ವಿದ್ಯುತ್ ಸಂಪರ್ಕ, ಥರ್ಮೋಸ್ಟಾಟ್ ,ಕುಕ್ಕಿಂಗ್ ಟಾಪ್ ,ಎಗ್ಸಾಸ್ಟ್ ಫ್ಯಾನ್ ,ಓವನ್ ಹೀಗೆ ಎಲೆಕ್ಟ್ರಿಕ್ ಮೇಲೆಯೇ ಜೀವನ

ಇಲ್ಲಿಯ ಇನ್ನೊಂದು ವಿಶೇಷ ಸಂಗೀತ ವಾರದ ಕೊನೆಯಲ್ಲಿ ಅಥವಾ ದಿನಾಲು ಸಂಜೆಯ ವೇಳೆ ರಸ್ತೆಯ ಮೇಲೆ ಅಥವಾ ಮುಖ್ಯವಾದ ವೃತ್ತಗಳಲ್ಲಿ ಸಂಗೀತ ನುಡಿಸುತ್ತಾರೆ. ನುಡಿಸುವ ಕಲಾವಿದರನ್ನು ನೋಡಬಹುದು, ಅವರ ಹಾಡನ್ನು ಆಸ್ವಾದಿಸಬಹುದು. ಕೇಳಲು ಬಹಳ ಇಂಪಾಗಿರುತ್ತದೆ .


  • ದೇವರಾಜಾಚಾರ್, (ಕೆಪಿಸಿಎಲ್ ನಿವೃತ್ತ ಅಧಿಕಾರಿ, ಲೇಖಕರು)ಮೈಸೂರು

0 0 votes
Article Rating

Leave a Reply

1 Comment
Inline Feedbacks
View all comments

[…] ರಾಜಕಾರಣಿಗಳು, ಸಿನಿಮಾದವರು, ಇತರೆ #ಸಾಧಕರು ಸತ್ತಾಗ ಸಿಗುವ ವ್ಯವಸ್ಥೆಗಳನ್ನೂ ನೋಡಿದಾಗ […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW