“ನುಡಿ ನಮನ, ಭಾವ ನಮನ”

ಖ್ಯಾತ ಗಾಯಕರಾದ ಎಸ್ ಜಾನಕಿ ಅವರು ಸುಮಾರು ೪೮,೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ನುಡಿ ನಮನ, ಭಾವ ನಮನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕುರಿತು ದೇವರಾಜ ಚಾರ್ ಅವರು ತಮ್ಮ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ….

ಎಸ್ ಜಾನಕಿ ಅವರು ದೇಶದ ಹಿನ್ನೆಲೆ ಗಾಯಕಿ ‘ಜಾನಕಿ ಅಮ್ಮ’ ಎಂದೇ ಪರಿಚಿತರು. ದೇಶದ ನೈಟಿಂಗೆಲ್ ಎಂದು ಕರೆಯಲ್ಪಡುತ್ತಿದ್ದರು. ಆಂಧ್ರಪ್ರದೇಶದಲ್ಲಿ ಹುಟ್ಟಿ ತಮ್ಮ ಕಂಠ ಸಿರಿಯಿಂದ ದಕ್ಷಿಣ ಭಾರತದಲ್ಲಿ ಪ್ರಸಿದ್ಧರು. ಕನ್ನಡ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ಸುಮಾರು 48,000 ಹಾಡುಗಳನ್ನು ಹಾಡಿದ್ದಾರೆ.

ಕನ್ನಡ ಭಾಷೆ ಒಂದರಲ್ಲಿ ಸುಮಾರು ನಾಲ್ಕು ಸಾವಿರ ಹಾಡುಗಳನ್ನ ಹಾಡಿ ತಮ್ಮ ಮಧುರವಾದ ಕಂಠಸಿರಿಯಿಂದ ನೂರಾರು ಕಲಾವಿದರಿಗೆ ಜೀವ ತುಂಬಿದ್ದಾರೆ. 2017 ರಲ್ಲಿ ಮೈಸೂರಿನಲ್ಲಿ ನಡೆಸಿಕೊಟ್ಟ ಸಾರ್ವಜನಿಕ ಸಂಗೀತ ಕಾರ್ಯಕ್ರಮ ಕೊನೆಯದು. ಅಲ್ಲಿಂದ ಮೈಸೂರಿನಲ್ಲಿ ವಾಸವಿದ್ದರು. ಅವರ ಅಭಿಮಾನಿ ನವೀನ್ ಎಂಬುವವರ ನಿಗಾದಲ್ಲಿ ವಾಸವಿದ್ದರು ಎಂದು ಹೇಳುತ್ತಾರೆ.

ಸಾಕು ಮಗನೆಂದು ಅವರು ಒಪ್ಪಿಕೊಂಡಿದ್ದರು. ನವೀನ್ ಮತ್ತು ಅವರ ಗೆಳೆಯರು ಅವರನ್ನು ಜೋಪಾನವಾಗಿ ನೋಡಿಕೊಂಡಿದ್ದರೆಂದು ಹೇಳುತ್ತಾರೆ. ಜಾನಕಿ ಅಮ್ಮನವರ ಮಗ ಇದೇ ವರ್ಷ ಮೈಸೂರಿನಲ್ಲಿ ತೀರಿಕೊಂಡಿದ್ದರು.

ಎಸ್. ಜಾನಕಿಯವರು  ಜುಲೈ 11, 2026 ರಂದು ಮೈಸೂರಿನಲ್ಲಿ ತೀರಿಕೊಳ್ಳುತ್ತಾರೆ. ಅವರಿಗೆ ನಾಲ್ಕು ರಾಷ್ಟ್ರಮಟ್ಟದ ಪ್ರಶಸ್ತಿಗಳ, 33 ಬೇರೆ ಬೇರೆ ರಾಜ್ಯದ ಫಿಲಂ ಅವಾರ್ಡ್ಸ್, ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ, ಕರ್ನಾಟಕ ರಾಜ್ಯ ಪ್ರಶಸ್ತಿ ಹೀಗೆ ಹತ್ತಾರು ಬಿರುದುಗಳನ್ನು ತಮ್ಮದಾಗಿಸಿಕೊಂಡಿದ್ದರು.

ಮೈಸೂರಿನ ನವೀನ್ ಎಂಬುವವರು ತಮ್ಮ ಕಿರಿಯ ವಯಸ್ಸಿನಿಂದ ಜಾನಕಿ ಅಮ್ಮನವರ ಅಭಿಮಾನಿಯಾಗಿದ್ದರಂತೆ. ಅವರ ಅಭಿಮಾನ ಎಷ್ಟರ ಮಟ್ಟಿಗೆ ಹೋಯಿತಂದರೆ ನವೀನ್ ನನ್ನ ಸಾಕು ಮಗನೆಂದು ಸಾರ್ವಜನಿಕವಾಗಿ ಶ್ರೀಮತಿ ಎಸ್ ಜಾನಕಿಯವರು ಒಪ್ಪಿಕೊಂಡಿರುತ್ತಾರೆ. ಅಮ್ಮನ ಹೆಸರಿನಲ್ಲಿ ಅವರು ಫರ್ನಿಚರ್ ಅಂಗಡಿಯೊಂದನ್ನು ಇಟ್ಟುಕೊಂಡಿದ್ದಾರೆ.

ಅವರ ಅಂತ್ಯಸಂಸ್ಕಾರವನ್ನು ತಾವೇ ಮುಂದೆ ನಿಂತು ತಮ್ಮ ಜಮೀನಿನಲ್ಲಿ ನಡೆಸಿಕೊಡುತ್ತಾರೆ. ಸರ್ಕಾರವ ಗೌರವದೊಡನೆ ಅವರ ಸಂಸ್ಕಾರ ನಡೆಯುತ್ತದೆ. ಅವರ ಸೊಸೆ, ಮೊಮ್ಮಗ, ಮೊಮ್ಮಗಳ ಪತಿ ಮುಂದೆ ನಿಂತು ವಿಧಿವಿಧಾನ ನಡೆಸಿಕೊಟ್ಟಿರುತ್ತಾರೆ.

ಇದೇ ಜುಲೈ22, 2026 ರಂದು ಮೈಸೂರಿನ ಸಾರಾ ಕನ್ವೆನ್ಷನ್ ಹಾಲ್ನಲ್ಲಿ ಅದ್ದೂರಿ “ನುಡಿ ನಮನ” ಕಾರ್ಯಕ್ರಮ ನಡೆಯುತ್ತದೆ. ಹೆಸರಾಂತ ಗಾಯಕರು, ಗಾಯಕಿಯರು ಹಂಸಲೇಖರವರ ನೇತೃತ್ವದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿರಾರು ಅಭಿಮಾನಿಗಳು ಜಾನಕಿ ಅಮ್ಮ ಹಾಡಿದ್ದ ಹಾಡುಗಳನ್ನು ಮತ್ತೆ ಕೇಳಿ
ಪುಳಕಿತಗೊಂಡು ತಮ್ಮ ಭಾವ ನಮನವನ್ನು ಅರ್ಪಿಸುತ್ತಾರೆ.

ಅದೇ ಸಭಾಂಗಣದಲ್ಲಿ ಸಾವಿರಾರು ಅಭಿಮಾನಿಗಳಿಗೆ ಭೋಜನ ನೀಡಿ ಸಂತೃಪ್ತರಾಗುತ್ತಾರೆ. ಇದೆಲ್ಲಾ ಕಾರ್ಯಕ್ರಮಗಳನ್ನು ನವೀನ್ ಮತ್ತು ಸಂಗಡಿಗರು ನಡೆಸಿಕೊಟ್ಟರು ಎಂದು ತಿಳಿಸಲು ಸಂತೋಷವಾಗುತ್ತಿದೆ.ಸಮಾರಂಭದ ಕೆಲವು ತುಣುಕುಗಳನ್ನು ಕೆಳಗೆ ಕೊಟ್ಟಿರುತ್ತೇನೆ.


  • ದೇವರಾಜ ಚಾರ್ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading