ಸವಿ ನೆನಪು, ಹೃದಯದಾಳದಿಂದ ಕವಿತೆಯಾಗಿ ಬಂತು, ಸಂತಸದಿಂದ…ಕವಿ ಪುಣ್ಯವತಿ ಬಿ.ವಿ ಕೃಷ್ಣವೇಣಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಆಹಾ….. ಆಹಾಹ…..ಆಹಹಾ….
ಸವಿ ನೆನಪು, ಹೃದಯದಾಳದಿಂದ
ಕವಿತೆಯಾಗಿ ಬಂತು, ಸಂತಸದಿಂದ||2||
ಏನೆಂದು ಹೇಳಲಿ, ನಾನಿಂದು
ನನ್ನ ಕನಸಿನ, ಪ್ರೀತಿಯ ಪುಟವೊಂದು
ಮನದಲ್ಲಿ ನೂರಾರು, ನೆನಪುಗಳು ಇಂದು
ಭಾವನೆಗಳು, ಹೊಸ ಬೆಳಕು ತಂದು||
ಹಗಲಿರುಳು, ಒಲವಿನ ವಿಷಯ
ಮನದಲಿ, ಸಾವಿರಾರು ಆಶಯ
ಕಂಡಂತ ಕನಸು, ನವಿರಾದ ನನಸು
ಎಂದೂ, ಹೀಗೆ ಚಿಗುರಲಿ…
ಬಾಳೆಂದು ಹಸಿರಾಗಿರಲಿ…||
ಸವಿ ನೆನಪು, ಹೃದಯದಾಳದಿಂದ
ಕವಿತೆಯಾಗಿ ಬಂತು, ಸಂತಸದಿಂದ||2||
ಹೊಸರಾಗ ನಾವಿಂದು ಹಾಡುತಲಿ
ಈ ಆನಂದದ ಕ್ಷಣವು ಸವಿಯುತಲಿ
ಪ್ರೀತಿಯ ಅಪ್ಪುಗೆ ಮುತ್ತಾಗಲಿ
ಸವಿ ನೆನಪು ಸಿಹಿ ಜೇನಾಗಲಿ
ನಾವೆಂದಿಗೂ ಹೀಗೆ ಜೊತೆಯಾಗಲಿ||
ಎಂದೆಂದಿಗೂ ಈ ನಮ್ಮ ಬಂಧ
ದಿವ್ಯ ಮಧುರ ಅನುಬಂಧ
ಮೂರು ಗಂಟಿನ ನಂಟಿನಲಿ
ಸಾವಿರ ಜನ್ಮದ ಜೊತೆಯಲಿ
ಬಿಡಿಸಲಾಗದ ಆತ್ಮ ಬಂಧನದಲಿ||
ಸವಿ ನೆನಪು,ಹೃದಯದಾಳದಿಂದ
ಕವಿತೆಯಾಗಿ ಬಂತು, ಸಂತಸದಿಂದ||2||
- ಪುಣ್ಯವತಿ ಬಿ.ವಿ ಕೃಷ್ಣವೇಣಿ – ಕವಯಿತ್ರಿ, ಸಾಹಿತಿಗಳು,ಕೋಲಾರ.
