ಇಂಥವರೂ ಇದ್ದಾರಾ……!!!! –  ಡಾ. ಪ್ರಕಾಶ ಬಾರ್ಕಿ



ಗುರು ಪರಮಾತ್ಮನ ಇನ್ನೊಂದು ಸ್ವರೂಪ ಎನ್ನುವುದನ್ನುಈ ಕತೆ ನಿರೂಪಿಸುತ್ತದೆ. ಡಾ.ಪ್ರಕಾಶ ಬಾರ್ಕಿಯವರು ಬರೆದ ಈ ಸುಂದರ ಕತೆಯನ್ನು ತಪ್ಪದೆ ಓದಿ…

ನಿನ್ನೆ ರಾತ್ರಿಯಿಂದಲೇ ವಾಟ್ಸ್ ಆಫ್ , #ಫೇಸ್ಬುಕ್ ಗೇ ತಲೆ ಚಿಟ್ಟು ಹಿಡಿಯುವಂತೆ ಬಂದು ಬೀಳುವ Happy new year ತರಹೇವಾರಿ ಸಂದೇಶಗಳು. ಪೂರ್ತಿ ದಿನ Mobile ಟುಂಯ್ಯಗುಟ್ಟತಲೆ ನಡುಗುತ್ತಿತ್ತು.

ಆವಾಗಲೇ.. ಒಂದು Audio clipನ್ನು ಹಿರಿಯ ವೈದ್ಯರಾದ ಡಾ.ವಿ ಡಿ ಕಿರಣ್ ಕುಮಾರ್ ಕೆಂಪೇಗೌಡ ನನ್ನವಾಟ್ಸ್ ಆಫ್ ಗೆ ಸುರಿದಿದ್ದರು. “ಬದುಕಿಗೊಂದು ಆದರ್ಶವಿರಲಿ” ಎಂಬ ತಲೆಬರಹದಡಿ. ಈ ಸಂಭಾಷಣೆ ಡಾ.ಕಿರಣ ಕುಮಾರ ಮತ್ತು ಅವರ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕರ ನಡುವಿನದು. ಇದರೊಳಗಣ ಸಂದೇಶ ಆದರ್ಶಮಯ.

ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕ ಕೆಲ ತಿಂಗಳುಗಳ ಹಿಂದೇ ಯಕೃತ್ತ್ ಮೇಲೆ ಬೆಳೆದ ಕ್ಯಾನ್ಸರ್ ಗಂಟುಗಳಿಂದ (Hepatic Tumours) ತೀರಾ ಅನಾರೋಗ್ಯಕ್ಕಿಡಾದರು. ವೈದ್ಯರ ಅಣತಿ #ಕಿಮೋಥೆರಪಿ_ಚಿಕಿತ್ಸೆಯು ಮುಗಿಯುವವರೆಗೂ.. ಸರ್ಕಾರ ಸಂಬಳದ ಜೊತೆ ರಜೆ ಘೋಷಿಸಿತು.

ಫೋಟೋ ಕೃಪೆ : narayanahealth.org

ಇವರಿಗೆ 20 ದಿನಕ್ಕೊಮ್ಮೆ “ರಾಸಾಯನಿಕ” ಇಂಜೆಕ್ಷನ್ ದೇಹದೊಳಗೆ ಹರಿಸಿ ಲಿವರ್ ಮೇಲಿನ ಕ್ಯಾನ್ಸರ್ ಗಂಟು ಕರಗಿಸುವ ಚಿಕಿತ್ಸೆ “#ಕಿಮೋಥೆರಪಿ“. ಇದರಿಂದ ಮೈ- ಮನಸ್ಸು ತೀವ್ರ ಘಾಸಿಗಿಡಾಗುತ್ತೆ‌. ಶುದ್ದ ನರಕಯಾತನೆ.

ಜೀವನದಲ್ಲಿ ಇನ್ನೇನೂ..!?! ಹದಗೆಟ್ಟ ಆರೋಗ್ಯ, ದೇಹದೊಳು ಹೊಕ್ಕ ಕ್ಯಾನ್ಸರ್ ಮಾರಿಗೆ ಹಣ್ಣು ಹಣ್ಣಾಗಿ ಮೂಲೆ ಗುಂಪಾಗಿ, ಸಾವಿನ ಮನೆಯತ್ತ ದಾಪುಗಾಲಿಡುತ್ತಿರುವಂತ ಮನಸ್ಥಿತಿ ಅರಳುವ ಹೊತ್ತು. ಜೀವ ಹಿಂಡುವ ಸಮಯ.

ಆದರೆ….

ಆ ಪ್ರಾಧ್ಯಾಪಕರು “ಕಿಮೋಥೆರಪಿ” ತೆಗೆದುಕೊಂಡ ದಿನ ಸುಸ್ತಾಗಿ ಮಲಗಿದ್ದವರೆ, ಸರ್ಕಾರ ರಜೆ ನೀಡಿದ್ದರೂ…. ಮಾರನೆಯ ದಿನ ಕಾಲೇಜಿನಲ್ಲಿ ಹಾಜರ್.



“ಸರ್..!! ನೀವು Rest ಮಾಡೋದಲ್ಲವೇ?. ಆರೋಗ್ಯದ ಕಡೆ ಗಮನ ನೀಡಿ. ರಜೆ ಬೇರೆ ಇದೆ” ಎಂದಾಗ.

“ಓ.. ಹಾಗಾ.. ! ಜನವರಿ, ಫೆಬ್ರವರಿ.. ತಿಂಗಳಲ್ಲಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಗಳಿವೆ. ಅವರ ಭವಿಷ್ಯದ ಬದುಕು ಮುಖ್ಯ, ನಮಗೆ ಕಾಯಿಲೆ ಕಸಾಲೆ ಇದ್ದದ್ದೆ. ಮಕ್ಕಳಿಗೆ ನನ್ನಿಂದ ದ್ರೋಹ ಆಗಬಾರದು‌.
ನಾನು ಕೆಲಸ ಮಾಡದಿದ್ದರೂ… ಸರ್ಕಾರ ಚಿಕಿತ್ಸೆಗಾಗಿ ಸಂಬಳದ ಜೊತೆ ರಜೆ ನೀಡುವಾಗ, ತೆಗೆದುಕೊಳ್ಳುವ ವೇತನಕ್ಕೆ, ತಿನ್ನುವ ಅನ್ನಕ್ಕೆ ನ್ಯಾಯ ಒದಗಿಸಬೇಕು.. ಮಾರ್ಚ್ ತಿಂಗಳಿಗೆ “ಕಿಮೋಥೆರಪಿ” ಮುಗಿಯುತ್ತೆ. ಆವಾಗ Rest ಮಾಡ್ತಿನಿ ಬಿಡಿ” ಎಂದು ಪ್ರಾಧ್ಯಾಪಕರು ಮುಗುಳ್ನಗುತ್ತಲೆ ಮಾತಾಡಿದರು. ಅವರೊಳಗಿನ ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತನ ಪ್ರಜ್ವಲಿಸುತಿತ್ತು..

ದೇಹವನ್ನು ಅನಾಮತ್ತಾಗಿ ತಿಂದು ಹಾಕಿದ್ದ ಕ್ಯಾನ್ಸರ್, ಅವರ ಪ್ರಾಮಾಣಿಕತನ, ಕರ್ತವ್ಯ ಪ್ರಜ್ಞೆ ಮತ್ತು ಅವರೊಳಗಿನ ಮುಗ್ಧ ನಗುವಿನ ಮುಂದೆ “ಎರಡೂ ಕೈ ಮೇಲೆತ್ತಿ ಸೊಲೊಪ್ಪಿಕೊಂಡತಿತ್ತು”.
ಇಂತಹ “ಕರ್ತವ್ಯ ಪ್ರಜ್ಞೆ” ಈಗಿನ ಬೆರಳೆಣಿಕೆ ಜನರ ಹೊರತುಪಡಿಸಿ ಇನ್ನೂಳಿದ ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಅಕ್ಷರಸ್ಥರಲ್ಲಿ ದುರ್ಭಿನು ಹಾಕಿ ಹುಡುಕಿದರೂ ಸಿಗದು. ಪ್ರಾಧ್ಯಾಪಕರಂತೆ ನಮ್ಮ ದೇಶದ ಎಲ್ಲರ ಮನಸ್ಥಿತಿ ಹೀಗೇ ಇದ್ದಿದ್ದರೆ.. ಅಬ್ಬಾ..!! ದೇಶದ ಪ್ರಗತಿ ಊಹಿಸಲೂ ಅಸಾಧ್ಯ.

ಪ್ರಾಧ್ಯಾಪಕರಂತೆ ನಮ್ಮೊಳಗೆ ಒಂದಿಷ್ಟು ಪ್ರಾಮಾಣಿಕ ಕರ್ತವ್ಯ ಪ್ರಜ್ಞೆ ಉದಯಿಸಲಿ.

ಫೋಟೋ ಕೃಪೆ : english.jagran

ಭಗವಂತನೇ … ಇಂತಹ ಆದರ್ಶಮಯ ಪ್ರಾಮಾಣಿಕ ಮಹಾ ಗುರುವನ್ನು ಬೇಗನೆ ಗುಣಪಡಿಸಿ ಬಿಡು…

ಗುರು ಬ್ರಹ್ಮ
ಗುರು ವಿಷ್ಣು
ಗುರು ದೇವೋ ಮಹೇಶ್ವರ.
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ

2022 ವರುಷದ ಆರಂಭ ಹೀಗೊಂದು ಗುರುವಿನ ಅನುಕರಣೀಯ ಜೀವನಾನುಭವದ ಜೊತೆಗೆ…

Thank you Dr. Kiran Kumar sir.


  •  ಡಾ. ಪ್ರಕಾಶ ಬಾರ್ಕಿ  (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.

One thought on “ಇಂಥವರೂ ಇದ್ದಾರಾ……!!!! –  ಡಾ. ಪ್ರಕಾಶ ಬಾರ್ಕಿ”

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading