‘ಕನ್ನಡಮ್ಮನ ತೇರು’ ಪ್ರಥಮ ವಾರ್ಷಿಕೋತ್ಸವದ ಸಂಭ್ರಮ

ಸ್ನೇಹಜೀವ ಬಳಗ, ಅಭಿನಂದನಾ ಆಡಿಯೋ ಮತ್ತು ವಿಡಿಯೋ, ಎಚ್ ಎಸ್ ಆರ್ ಎ ಪ್ರಕಾಶ ಸಹಯೋಗದಲ್ಲಿ ‘ಕನ್ನಡಮ್ಮನ ತೇರು’ ಪ್ರಥಮ ವಾರ್ಷಿಕೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಯಿತು, ಕಾರ್ಯಕ್ರಮದ ಕುರಿತು ನನ್ನ ಎರಡು ಮಾತು…

‘ತೇರು’ ಅಂದಾಗ ನಮ್ಮ ನೆನಪಿಗೆ ಬರೋದು ಜಾತ್ರೆ, ಸಂಭ್ರಮ, ಸಂತೋಷ, ಉತ್ಸಾಹ. ಬಾಲ್ಯದಲ್ಲಿ ಅಜ್ಜಿ ಊರಲ್ಲಿ ನಡೆಯುತ್ತಿದ್ದ  ಹೂಲಿ ಮಠದ ಜಾತ್ರೆಗೆ ತಪ್ಪದೆ ಹೋಗುತ್ತಿದ್ದೆ.  ಯಾವಾಗ ಅಜ್ಜಿ  ಈ ಭೂಮಿಗೆ ಟಾಟಾ ಬೈಬೈ ಹೇಳಿದ್ಲೋ… ಅಲ್ಲಿಗೆ ನಮ್ಮ ಊರಿನ ಜಾತ್ರೆಗೂ ನಾನು  ಟಾಟಾ ಬೈ ಬೈ ಹೇಳಿದೆ.

ಆದರೆ ಮೊನ್ನೆ ಎಷ್ಟೋ ವರ್ಷದ ನಂತರ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಮತ್ತು ಮೀನಾ ಅವರಿಂದ ಜಾತ್ರೆಗೆ  ಆಹ್ವಾನ ಬಂತು. ಅದು ಕಾಂಕ್ರಿಟ್ ನಾಡಲ್ಲಿ ಜಾತ್ರೆ. ನನ್ನ ಅಜ್ಜಿ ಊರಿನ ಜಾತ್ರೆಗೂ ಈ ಜಾತ್ರೆಗೂ ಇದ್ದ ವ್ಯತ್ಯಾಸವೆಂದರೆ ಆ ಜಾತ್ರೆಯಲ್ಲಿ ಪುಸ್ತಕ, ಸಾಹಿತಿಗಳು, ಊಟ, ಹರಟೆ, ಚಿಂತನೆಗಳು, ಕವನವಾಚನ, ಸೆಲ್ಫಿಗಳ ಆರ್ಭಟ, ಸಂತೋಷದಿಂದ ತುಂಬಿತ್ತು,  ಜಾತ್ರೆಯ ಈ ತೇರಿನ ಉತ್ಸಹಮೂರ್ತಿಯಾಗಿದ್ದು ಖ್ಯಾತ ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡರು ಮತ್ತು ಡಾ.ಬೈರಮಂಗಲ ರಾಮೇಗೌಡರು, ಹೂಲಿಶೇಖರ್, ಶಕುಂತಲಾ ಆಚಾರ್, ಲತಾ ಜೋಶಿ, ಬುಕ್ಕಾಪಟ್ಟಣ ವಾಸು ಇವರೆಲ್ಲ ತೇರಿನ ಮುತ್ತು, ರತ್ನಗಳಂತೆ ವೇದಿಕೆಯ ಮೇಲೆ ಶೋಭಿಸುತ್ತಿದ್ದರು.

This slideshow requires JavaScript.

ಕತೆಗಾರರ ಪುಸ್ತಕ ಬಿಡುಗಡೆ, ಬಹುಮಾನ, ಸನ್ಮಾನ ಈ ಜಾತ್ರೆಯಲ್ಲಿ ಸಡಗರಕ್ಕೆ ಕಾರಣವಾಗಿತ್ತು.  ಈ ತೇರಿನ ಸಂಪೂರ್ಣ ಜವಾಬ್ದಾರಿಯನ್ನು ಸ್ನೇಹ ಜೀವಿ ಬಳಗ ಮತ್ತು ಅಭಿನಂದನ್ ಆಡಿಯೋ ವಿಡಿಯೋ ಪ್ರಾಯೋಜಕತ್ವವನ್ನು ಹೊಣೆ ಹೊತ್ತಿತ್ತು.  ಶಶಿಕಾಂತ ರಾವ್ , ಚನ್ನಕೇಶವ ಜಿ ಲಾಳನಕಟ್ಟೆ, ಮೀನಾ ಇವರು ಈ ತೇರಿನ ಚಕ್ರಗಳೆಂದರೆ ತಪ್ಪಿಲ್ಲ.

ಅಂದ ಹಾಗೆ ಇಷ್ಟೆಲ್ಲಾ ಸಂತೋಷವನ್ನು ಕೊಟ್ಟಂತಹ ಈ ಜಾತ್ರೆಯ ಹೆಸರೇ ‘ಕನ್ನಡಮ್ಮನ ತೇರು’. ಈ ಕನ್ನಡಮ್ಮನ ತೇರಿಗೆ ಮೊದಲ ವರ್ಷದ ಸಂಭ್ರಮ. ಒಂದು ದಿನ ನಗು, ಸಂತೋಷದಲ್ಲಿ ನಾನು ತೇಲಿ ಹೋಗಿದ್ದೆ, ಅಜ್ಜಿಯ ಜಾತ್ರೆಯ ನೆನಪಿನ ಜೊತೆಗೆ ಕನ್ನಡಮ್ಮನ ಮಕ್ಕಳಿಂದ ಪ್ರೀತಿ ಗಳಿಸಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. ಕನ್ನಡಮ್ಮನ ತೇರು ಕೇವಲ ಒಂದೇ ಸ್ಥಳಕ್ಕೆ ಸೀಮಿತವಾಗದೆ ನಾಡ ಹಬ್ಬದಂತೆ ಮೆರೆಯಲಿ ಎಂದು ಶುಭ ಹಾರೈಸುತ್ತಾ.

ನನಗೆ ಪ್ರೀತಿಯನ್ನು ಕೊಟ್ಟಂತಹ ಕನ್ನಡಮ್ಮನ ತೇರು ಬಳಗಕ್ಕೆ ಧನ್ಯವಾದಗಳು


  • ಶಾಲಿನಿ ಹೂಲಿ ಪ್ರದೀಪ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading