ಚಿದು ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಬೆಳಕಿನ ಹುಳುವಿನ ಸುಂದರ ಚಿತ್ರಗಳು ಕಣ್ಣಿಗೆ ಆನಂದ ಕೊಡುವುದಷ್ಟೇ ಅಲ್ಲ, ಆಶ್ಚರ್ಯವನ್ನು ಕೂಡಾ ಉಂಟು ಮಾಡುತ್ತದೆ.
ಸಣ್ಣ ಬೆಳಕು ಹೊಸದಾದ ಪ್ರಪಂಚವನ್ನೇ ಪರಿಚಯಿಸಿತು. ಮಿಂಚುಹುಳುಗಳು ತನ್ನೆಡೆ ಮತ್ತೊಂದು ಹುಳುವನ್ನು ಆಕರ್ಷಿಸಲು ತಮ್ಮ ಬೆಳಕನ್ನು ಉಪಯೋಗಿಸಿಕೊಳ್ಳುತ್ತಾ ಕತ್ತಲೆ ಘಾಡವಾದಷ್ಟು ರಮಣೀಯ ಗೊಳಿಸುತ್ತದೆ.
ಈ ಸಣ್ಣ ಬೆಳಕನ್ನು ಗಮನಿಸದೆ ಇದ್ದರೆ ನಮಗೆ ತಿಳಿಯದ ದೊಡ್ಡ ಪ್ರಪಂಚವನ್ನೇ ನೋಡದ ನಷ್ಟ ಅನುಭವಿಸಿದಂತೆ ಎಂದು ನಾನು ಭಾವಿಸಿಕೊಳ್ಳುತ್ತೇನೆ. ಈ #ಫೋಟೋದಲ್ಲಿ ಕಾಣುತ್ತಿರುವ ಸಂದರ್ಭ ಪುರುಷ ಹುಳುವನ್ನು ಆಕರ್ಷಿಸಲು ಬೆಳಕನ್ನು ಹೊರಸೂಸುತ್ತಿರುವ ವಯಸ್ಕ ಹೆಣ್ಣು ಹುಳುವಿನ ಚಿತ್ರಗಳು.
- ಕ್ಯಾಮೆರಾ ಹಿಂದಿನ ಕಣ್ಣು : ಚಿದು ಯುವ ಸಂಚಲನ (ಪರಿಸರವಾದಿಗಳು, ಲೇಖಕರು) ದೊಡ್ಡಬಳ್ಳಾಪುರ
