‘ಮಾಟಗಾತಿ’ ಕವನ – ಕಲ್ಲೇಶ್ ಕುಂಬಾರ್



‘ಕರುಣೆ ಇಲ್ಲದ ಮಾಟಗಾತಿ ನೀನು’…ಕವಿ ಕಲ್ಲೇಶ್ ಕುಂಬಾರ್ ಅವರ ‘ಮಾಟಗಾತಿ’ ಸುಂದರ ಕವನ ಓದುಗರಿಗಾಗಿ, ಓದಿ ನಿಮ್ಮ ಅಭಿಪ್ರಾಯವನ್ನು ತಪ್ಪದೆ ಹಂಚಿಕೊಳ್ಳಿ,ಮುಂದೆ ಓದಿ…

ಸೂಜಿ ಮೊನೆಯ ಮೇಲೆ ಉಸಿರಾಡುತಿವೆ ಅಸಂಖ್ಯ
ನಕ್ಷತ್ರಗಳು ಈಗಲೂ ನನ್ನ ಎದೆಯಲಿ ಹಳಸಿದ
ಬೆಳಂದಿಗಳು ಕೂಡ ಕಣ್ಣೀರಾಗಿ ಹರಿದು ಹೋಗಿದೆ ದೂರ ದೂರಕೆ
ಕಪ್ಪು ಕಡಲಲಿ ಹಾಯಿ ದೋಣಿಯೊಂದು
ಬಿರುಗಾಳಿಗೆ ಎದೆಯೊಡ್ಡಿ ತೇಲುತಿದೆ

ಅಲ್ಲಿ ಊರು ಹೊಕ್ಕ ನವಿಲೊಂದು
ಕಾಂತದಂತೆ ಸೆಳೆಯುತಿದೆ: ಒಡೆದ ಕನ್ನಡಿಯ
ಚೂರಿನಲ್ಲಿ ಕಂಡ ಮುಖ ನಿನ್ನದೇ ಆಗಿರಲು ಇಲ್ಲಿ
ತಂಗಾಳಿ ತೀಡುವ ರಾತ್ರಿಯಲಿ ಅರಳಿದ ಕನಸುಗಳ
ಕೊಳ್ಳೆ ಹೊಡೆಯಲೆಂದು ಬಂದ ಸಾವಿರಾರು ಕೈಗಳಿಗೆ
ನನ್ನದೇ ಗುಂಡಿಗೆಯ ಬಿಸಿ ನೆತ್ತರು ಮೆತ್ತಿದೆ-
ಹೀಗೆ ಅನುಗಾಲವೂ ನಿನಗಾಗಿ ಮಿಡಿವ ಹೃದಯವನ್ನು
ಕಿರಾತಕರು ಕಿತ್ತೆಸೆದಾಗಲೂ ಇಳಿಸಂಜೆಯನ್ನೇ ಸುಡುವ ನಿನ್ನ ಕೆಂಡ
ದಂಥ ಕಣ್ಣುಗಳಲಿ ಕಾರ್ಕೋಟಕ ವಿಷ ತುಂಬಿದೆ!

ಕರುಣೆ ಇಲ್ಲದ ಮಾಟಗಾತಿ ನೀನು
ನನಗಾಗಿ ಸುಖದ ಬುನಾದಿ ತೋಡುತ್ತಲೇ
ಯಾತನೆಯ ಕಮರಿಗೆ ತಳ್ಳಿದ ನಿನ್ನ ದುರುಳತನಕ್ಕೆ ಧಿಕ್ಕಾರ
ಕೂಗಬೇಕೆಂದರೆ ನನ್ನ ಗಂಟಲು ಸೋತಿದೆ

ಹೀಗೆ,
ನನ್ನೆಲ್ಲ ನೋವುಗಳ ಮೇಲೆ ಸ್ಥಾಪಿತವಾದ ಸಾಮ್ರಾಜ್ಯವನು
ಒಂದಾನೊಂದು ದಿನ ಸರ್ವನಾಶ ಮಾಡಲೆಂದು

ದಿನ ದಿನವೂ ಉಸಿರಾಡುತಿರುವೆ!


  • ಕಲ್ಲೇಶ್ ಕುಂಬಾರ್ (ಕವಿಗಳು, ಲೇಖಕರು) ಬೆಳಗಾವಿ ಜಿಲ್ಲೆ- ಹಾರೂಗೇರಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading