ಬಿಸೆಲೆ ಕಡೆಗೆ ೧೪ ಕಿಮೀ ಕ್ರಮಿಸಿದರೆ ರಿಡ್ಜ್ ದೊರಕುತ್ತದೆ. ಇಲ್ಲೊಂದು ಪುಟ್ಟ ದಿಬ್ಬವಿದೆ. ದಿಬ್ಬದ ಪಶ್ಚಿಮದ ಕಡೆ ಏನಿದೆ? ಅಲ್ಲಿರುವ ಕಲ್ಲಿನ ವಿಶೇಷತೆಯನ್ನು ಹಿರಿಯ ಸಾಹಿತಿಗಳಾದ ಪುರುಷೋತ್ತಮ ಬಿಳಿಮಲೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ…
ಕೂಡು ರಸ್ತೆಯಿಂದ ವನಗೂರಿಗಾಗಿ ( ಹಳೆಯ ಹೆಸರು ಒಣಗೂರು) ಬಿಸೆಲೆ ಕಡೆಗೆ ೧೪ ಕಿಮೀ ಕ್ರಮಿಸಿದರೆ ರಿಡ್ಜ್ ದೊರಕುತ್ತದೆ. ಇಲ್ಲೊಂದು ಪುಟ್ಟ ದಿಬ್ಬವಿದೆ. ಈ ದಿಬ್ಬದ ಪೂರ್ವಕ್ಕೆ ಹರಿವ ಮಳೆನೀರು ಹೇಮಾವತಿ ಸೇರಿ, ಮಂದೆ ಕಾವೇರಿಯಾಗಿ ಪೂಂಪುಹಾರ್ ನಲ್ಲಿ ಕೋವಲನ್ ಮಾಧವಿಯರನ್ನು ನೆನಪಿಸಿ ಬಂಗಾಳಕೊಲ್ಲಿ ಸೇರುತ್ತದೆ.
ದಿಬ್ಬದ ಪಶ್ಚಿಮದ ಕಡೆ ಬೀಳುವ ಮಳೆನೀರು ಕುಮಾರಧಾರ ಸೇರಿ, ಉಪ್ಪಿನಂಗಡಿಯಲ್ಲಿ ನೇತ್ರಾವತಿಯೊಡನೆ ಐಕ್ಯಗೊಂಡು ಕುಡಲದಲ್ಲಿ ( ಮಂಗಳೂರಿನ ಸ್ಥಳೀಯ ಹೆಸರು, ಕೂಡುವ ನೀರು ಎಂಬರ್ಥದಲ್ಲಿ ಕುಡಲ, ಅಲ್ ಜಲವಾಚಕ) ಅರಬ್ಬೀ ಸಮುದ್ರವನ್ನು ಸೇರುತ್ತದೆ. ೧೮೬೦ರ ಸುಮಾರಿಗೆ ಬ್ರಿಟಿಷ್ ಅಧಿಕಾರಿಯೊಬ್ಬ ಈ ಎತ್ತರದ ಸ್ಥಳವನ್ನು ಗುರುತಿಸಿ, ಅಡ್ಡಲಾಗಿ ದಿಬ್ಬವೊಂದನ್ನು ಕಟ್ಟಿ ಕೆಳಗೆ ಕಾಣಿಸಿದ ಕಲ್ಲನ್ನು ನೆಡಿಸಿದ ಎಂದು ಹೇಳಲಾಗ್ತಿದೆ.
ಮಳೆ, ನೀರಿನ ಹರಿವು, ಎರಡು ಕಡಲುಗಳು, ಶಿಲಪ್ಪದಿಕಾರಂ ಇತ್ಯಾದಿಗಳನ್ನೆಲ್ಲ ಜೋಡಿಸುವ ಈ ಕಲ್ಲನ್ನು ಒಮ್ಮೆ ನೋಡಬಹುದು ( ಅಶೋಕವರ್ಧನರ ಜೊತೆಗಣ ಪಯಣದಲ್ಲಿ ಕಂಡದ್ದು)


- ಪುರುಷೋತ್ತಮ ಬಿಳಿಮಲೆ (ಖ್ಯಾತ ಲೇಖಕರು, ಚಿಂತಕರು)
