ಲುಕ್ಕಾಸ್ ವರ್ಲ್ಡ್ ಸಿನಿಮಾ ಸುತ್ತ…

‘ಲುಕ್ಕಾಸ್ ವರ್ಲ್ಡ್’ ಚಿತ್ರವನ್ನು ಏನೋ ಅಂತ ಒಂದಿಷ್ಟು ಹಿಂಜರಿಕೆಯಿಂದ ನೋಡಿದ ಮೇಲೆ ಇಷ್ಟವಾಯಿತು, ಓಟಿಟಿ ಪ್ರಿಯರು ನೋಡಬಹುದಾದ ಸಿನಿಮಾ ಎನ್ನುತ್ತಾರೆ ಲೇಖಕಿ ರಶ್ಮಿ ಉಳಿಯಾರು ಅವರು, ಸಿನಿಮಾದ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಇಂಗ್ಲಿಷ್ ಸಿನಿಮಾ ನೋಡುವುದು ಕಡಿಮೆ. ಇದು ಚೆನ್ನಾಗಿದೆ. ಬಹಳ ಹೃದಯಸ್ಪರ್ಶಿ ಅನ್ನಿಸಿತು.

ನೋಡಿದ ಮೇಲೆ ಅಂತರ್ಜಾಲದಲ್ಲಿ ಹುಡುಕಿದಾಗ ಇದು ಮೆಕ್ಸಿಕೊದ ಪತ್ರಕರ್ತೆ ಬಾರ್ಬರಾ ಆಂಡರ್ಸನ್ ಅವರ ವೈಯಕ್ತಿಕ ಅನುಭವ ಕಥನ, ಅವರ ಸ್ಪಾನಿಶ್ ಪುಸ್ತಕ “ದ ಟು ಹೆಮೋಸ್ಪಿಯರ್ಸ್ ಆಫ್ ಲುಕ್ಕಾ” ದ ಸಿನಿಮಾ ಅವತರಣಿಕೆ ಎಂಬುದು ತಿಳಿಯಿತು. ಲೇಖಕಿ ಹೇಳುವಂತೆ ಬ್ರೂಟಲೀ ಹಾನೆಸ್ಟ್ ಆಗಿ ಚಿತ್ರಿಸಲಾಗಿದೆ.

ಫೋಟೋ ಕೃಪೆ : google

ಜನನ ಸಮಯದಲ್ಲಿ ಆದ ತೊಂದರೆಯಿಂದ ಉಂಟಾದ ಮತ್ತೆ ಸರಿಪಡಿಸಲು ಅಸಾಧ್ಯ ಎನ್ನಿಸಿದ ಸೆರಿಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುವ ಮೊದಲ ಮಗನೊಂದಿಗಿನ ಅವರ ಬದುಕಿನ ಪಯಣದ ಕಥೆ ಇದು. ಹೆರಿಗೆ ಸಮಯದಲ್ಲಿ ನೋವು ತಡೆಯದೇ ಪ್ರಜ್ಞೆ ಕಳೆದುಕೊಂಡ ತನ್ನ ತಪ್ಪಿನಿಂದ ಮಗನಿಗೆ ಹೀಗೆ ಆಗಿದ್ದು ಎಂದು ಕೊರಗುವ ಆಕೆ ಐ ವಿಲ್ ಫಿಕ್ಸ್ ಇಟ್ ಎನ್ನುವ ದೃಢ ನಿರ್ಧಾರ ತಾಳಿ ತನ್ನೆಲ್ಲವನ್ನೂ ಪಣಕಿಡುತ್ತಾಳೆ. ಒಬ್ಬ ತಾಯಿ ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಬಲ್ಲುಳು ಅಲ್ಲವೇ… ತನ್ನ ವೃತ್ತಿ ಬದುಕು, ಅರೆ ನಿರುದ್ಯೋಗಿ ಪತಿ, ಎರಡನೇ ಮಗು, ಅಸಹಾಯಕ ಅವಲಂಬಿತ ಮಗುವಿನ ಅಸಂಖ್ಯಾತ ಕೆಲಸಗಳು, ಆಗಾಗ ಬರುವ ಫಿಟ್ಸ್, ಸರಿ ಹೋಗುವ ಭರವಸೆ ನೀಡದ ಚಿಕಿತ್ಸೆ… ಒಬ್ಬ ವ್ಯಕ್ತಿ ಸಿಡಿದು ಹೋಗಲು ಬೇಕಾದಷ್ಟಾದ ವಿಷಮ ಪರಿಸ್ಥಿತಿಗಳ ಮಧ್ಯೆ ದಂಪತಿಯ ನಡುವಿನ ಅಪಾರ ತಾಳ್ಮೆ, ಪ್ರೀತಿ, ಸಹಕಾರ… ಎಲ್ಲವೂ ಮನಸೂರೆಗೊಳ್ಳುತ್ತದೆ. ನಾಯಕಿ ಪಾತ್ರ ದಿ ಬೆಸ್ಟ್.

ಫೋಟೋ ಕೃಪೆ : google

ನಮ್ಮ ಬೆಂಗಳೂರಿನ ಚಿತ್ರಣವೂ ಇಲ್ಲಿದೆ. ಅದು ಖುಷಿಯಾಯಿತು. ಸಿನಿಮಾದಲ್ಲಿ ಆ ದೃಶ್ಯಗಳಲ್ಲಿ ಹಿಂದಿ ಜಾನಪದ ಗೀತೆಯನ್ನು ಬಳಸಿದ್ದಾರೆ. ಏಕೆಂದರೆ ಅವರಿಗೆ ಇದು ಭಾರತೀಯ ಸಿನಿಮಾ. ಅಲ್ಲದಿದ್ದರ ಕನ್ನಡ ಹಾಡನ್ನು ಬಳಸಬಹುದಾಗಿತ್ತು. ಬೆಂಗಳೂರಿನ ಡಾ. ರಾಜಾ ವಿಜಯ್ ಕುಮಾರ್ (ಸಿನಿಮಾದಲ್ಲಿ ಡಾ. ಕುಮಾರ್) ಅವರು ಸಂಶೋಧಿಸಿದ ಕಾನ್ಸರ್ ಮತ್ತು ನರವ್ಯೂಹ ಪುನರುಜ್ಜೀವನಕ್ಕೆ ಸಂಬಂಧಿಸಿದ ನೂತನ ಅವಿಷ್ಕಾರಿ ಚಿಕಿತ್ಸೆ Cytotron ಲುಕ್ಕಾನಿಗೆ ಸಹಾಯವಾಗಬಹುದು ಎನ್ನುವ ನಂಬಿಕೆಯ ಬೆನ್ನೇರಿ ಹೊರಡುವ ಬಾರ್ಬರಾ ಮತ್ತವಳ ಕುಟುಂಬಕ್ಕೆ ಜಯ ಸಿಗುವುದೇ… ತಿಳಿಯಲು ಸಿನಿಮಾ ನೋಡಿ. ಈ ತರಹದ ಹಲವಾರು ಮಕ್ಕಳಿಗೆ ದೇವರಾದ ಕರ್ನಾಟಕದ ಡಾ.‌ಕುಮಾರ್ ಅವರಿಗೆ ಒಂದು ಹಾಟ್ಸ್ ಆಫ್ ಸಲ್ಲಲೇ ಬೇಕು. ಸ್ಪಾನಿಶ್ ಸಿನಿಮಾ ಇಂಗ್ಲಿಷ್ ಆಡಿಯೋ ಇದೆ. ಮಕ್ಕಳ ಜೊತೆಗೆ ನೋಡಬಹುದೇ? It depends. ಸಿನಿಮಾದಲ್ಲಿ ಐದಾರು ಸಲ ದಂಪತಿಗಳು ಮುತ್ತಿಡುವ ದೃಶ್ಯಗಳಿವೆ.

ಅದು ಪಾಶ್ಚಾತ್ಯರಲ್ಲಿ ಸಹಜ. ವಲ್ಗರ್ ದೃಶ್ಯಗಳು ಏನಿಲ್ಲ. ಈ 13+ 16+ ಎಲ್ಲ ಭಾರತೀಯ ಮಾನದಂಡಗಳಲ್ಲ. ನಿಮ್ಮ ಮಕ್ಕಳಿಗೆ ಈ ಬಗ್ಗೆ ಆರೋಗ್ಯಕರ ವಿವರಣೆ ನೀಡಿದ್ದರೆ ಜೊತೆಗೆ ನೋಡಬಹುದು.


  • ರಶ್ಮಿ ಉಳಿಯಾರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW