‘ಮಳೆಹನಿಯ ಹಾಗೆ’ ಕವನ – ಅಪ್ಪಯ್ಯ ಯು ಯಾದವ್

‘ಸ್ವಾತಿ ಮಳೆ ಹನಿಯೊಂದು ಕಡಲನ್ನೆ ಸೀಳಿ ಚಿಪ್ಪೊಳಗೆ ಕುಳಿತಿತಂತೆ ಮಳೆಹನಿ’…ಕವಿ ಅಪ್ಪಯ್ಯ ಯು ಯಾದವ್ ಅವರ ಕವನವನ್ನು ತಪ್ಪದೆ ಮುಂದೆ ಓದಿ…

ಮುಂಜಾನೆ ಬಿದ್ದ
ಮಳೆಹನಿಯ ಹೀರಿ
ಒಣಹುಲ್ಲುಚಿಗುರಿದಂತೆ/

ಕಪ್ಪಾದ ಮೋಡ ಮನಕರಗಿತಾನು
ಮಳೆಯಾಗಿಸುರಿಸಿದಂತೆ /

ಮಣ್ಣಕಣ ತೊಯ್ದು
ಚಿಗುರೊಡಯಲಾಗ
ಒಣ ಮರಕೂ ಚಿಗುರುವಾಸೆ/

ಬತ್ತಿ ಹೋಗಿಹ ಒರತೆ
ಜೀವಕಳೆ ಪಡೆದು
ಜಿಗಿಜಿಗಿದು ಮೇಲೆ
ಬರಲು/

ತೊರೆಯೆಲ್ಲ ತುಂಬಿ
ನದಿಯೊಡನೆ ಬೆರೆತು
ಕಡಲಲೊಳಗೆ
ಬೆರೆಯೊ ತವಕ/

ಈ ಜೀವ ಹಾಗೆ
ಉತ್ಸಾಹ ಇರಲು
ನೀರಹನಿಯಂತೆ ಬದುಕು/

ಹನಿಯೊಂದು ತೊರೆಯಾಗಿ
ನದಿಯಾಗಿ ದುಮ್ಮಿಕ್ಕಿ
ಸಾಗರವೆ ಆಗುವಂತೆ/

ಛಲದಿಂದ ಬಾಳು
ಅಚಲ ವಿಶ್ವಾಸವಿರೆ
ಜನಸಾಗರದಿ ನೀನು ಬೆರೆವೆ/

ಸ್ವಾತಿ ಮಳೆ ಹನಿಯೊಂದು
ಕಡಲನ್ನೆ ಸೀಳಿ
ಚಿಪ್ಪೊಳಗೆ ಕುಳಿತಿತಂತೆ/

ಅವಿರತದ ತಪದಿ
ಮುತ್ತಾಗಿ ಜಗಕೆ
ಪರಿಚಯಿಸಿ ಕೊಂಡಿತಂತೆ/


  • ಅಪ್ಪಯ್ಯ ಯು ಯಾದವ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading