ಕನ್ನಡ ಅಕ್ಷರ ಕಲಿತವರೆಲ್ಲ ಆಗುವರು ಬಲು ಜಾಣ…ಅಪ್ಪಯ್ಯ ಯು ಯಾದವ್ ಅವರ ಕನ್ನಡಾಭಿಮಾನದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಕನ್ನಡ ಕನ್ನಡ ಹಾ ಸವಿಗನ್ನಡ
ಅ ಆ ಇ ಈ ಕನ್ನಡ ಅಕ್ಷರ
ರತ್ನದ ಮಣಿಯಂತೆ l
ಕನ್ನಡ ನುಡಿಗಳು
ನಾಲಗೆಗೆ ಅದು
ಜೇನಿನ ಹನಿಯಂತೆ l
ಕನ್ನಡನಾಡಲಿ ಹುಟ್ಟುವ
ಮಕ್ಕಳು
ಪುಣ್ಯಮಾಡಿದಂತೆ l
ಅವರಾಡುವ ತೊದಲು
ನುಡಿಯನು ಕೇಳಲು
ವೀಣೆನಾದದಂತೆ l
ಕನ್ನಡ ಶಾಲೆಯ ಆವರಣವೆ
ದೇವರಿರುವ ತಾಣ l
ಕನ್ನಡ ಅಕ್ಷರ ಕಲಿತವರೆಲ್ಲ
ಆಗುವರು ಬಲು ಜಾಣ l
ಪಂಪರನ್ನರು ರತ್ನ ಮಣಿಗಳು
ಕನ್ನಡಮ್ಮನ ಮುಕುಟದಲಿl
ಕುವೆಂಪು ಬೇಂದ್ರೆ
ಸೂರ್ಯ ಚಂದ್ರರೊಲು
ಹೊಳೆದರು ಕನ್ನಡ ಕಾವ್ಯದಲಿ l
ಕನ್ನಡಕುವರರೆ ಬನ್ನಿರೆಲ್ಲರು
ತೇರನೆಳೆಯೋಣ l
ಕನ್ನಡಮ್ಮನ ಹೊನ್ನ ಮುಕುಟಕೆ
ಜ್ಯೋತಿಯ ಬೆಳಗೋಣ l
ಕನ್ನಡ ಕನ್ನಡ ಹಾ ಸವಿಕನ್ನಡ
ಎನ್ನುತ ಹಾಡಿ ಕುಣಿಯೋಣ
- ಅಪ್ಪಯ್ಯ ಯು ಯಾದವ್
