ನಿಮ್ಮ ಜೀವನದಲ್ಲಿ ಆದ ಅನುಭವಗಳನ್ನು ಹಂಚಿಕೊಳ್ಳುವಾಗ ಬೇರೆಯವರಿಗೆ ಅದೇ ಅನುಭವ ಆಗಿರಬೇಕೆಂದಿಲ್ಲ. ಅವರವರ ಜೀವನ ಅವರವರದು. ಬಿಟ್ಟಿ ಸಲಹೆಗಳನ್ನು ಯಾರಿಗೂ ಕೊಡಬಾರದು, ಕೊಟ್ಟರೂ ನೀವೂ ಜೊತೆಯಾಗಿ ಸಲಹೆ ಸ್ವೀಕರಿಸುವ ಮನಸು ಇರಲಿ. ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣದಲ್ಲಿ ‘ಅಸಹಜ ಮನಸ್ಥಿತಿ…..ಆತ್ಮಹತ್ಯೆ’ ತಪ್ಪದೆ ಮುಂದೆ ಓದಿ…
ದಿನನಿತ್ಯದ ಬದುಕಲ್ಲಿ ಶಿಸ್ತು ಪಾಲನೆ. ನಮ್ಮ ಜೀವನ ಹೀಗಿರಬೇಕು, ಹಾಗಿರಬೇಕು, ಅವರಂತಿರಬೇಕು, ಇವರಂತಿರಬೇಕು ಎಂದೆಲ್ಲಾ ಯೋಚಿಸುತ್ತೇವೆ. ಆದರೆ ನಮ್ಮ ನಡೆ ನುಡಿ ಯಾರಿಗೂ ಬೇಸರ ತರಿಸದಂತೆ ಇರಬೇಕು. ನಿಜ ಕೆಲವೊಮ್ಮೆ ನಾವಂದುಕೊಂಡಂತೆ ಇರಲಾಗದು ಆದರೆ ಒಂದು ಕ್ರಮಬದ್ಧವಾದ, ಶಿಸ್ತುಬದ್ಧವಾದ ಜೀವನ ತಿಳಿದುಕೊಳ್ಳಬಹುದು ಅಲ್ವಾ?
ಶಿಸ್ತಾಗಿರುವುದನ್ನು ಒಬ್ಬರಿಂದ ನೋಡಿ ಕಲಿಯಬಹುದು ಅಥವಾ ಸ್ವಭಾವತಃ, ಮನೆಯ ವಾತಾವರಣ ಹಾಗು ಸುತ್ತಮುತ್ತಲಿನ ಜನರ ಅನುಭವದಿಂದ ಕಲಿಯಬಹುದು. ಹೀಗೆ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಕೆಲವು ಅಂಶಗಳು. ಅನಾವಶ್ಯಕ ಮಾತು ಬೇಡ ಮಾತನಾಡಿದರೂ ಅರ್ಥಪೂರ್ಣವಾಗಿರಲಿ. ಬೇರೆಯವರ ಮಾತಿಗೆ ಆಸ್ಪದ ಕೊಡಬೇಕು. ಮಾತು ಪೂರ್ತಿಯಾಗಿ ಕೇಳಿಸಿಕೊಂಡ ಮೇಲೆ ಪ್ರತಿಕ್ರಿಯಿಸಬೇಕು.
ನಿಮ್ಮ ಜೀವನದಲ್ಲಿ ಆದ ಅನುಭವಗಳನ್ನು ಹಂಚಿಕೊಳ್ಳುವಾಗ ಬೇರೆಯವರಿಗೆ ಅದೇ ಅನುಭವ ಆಗಿರಬೇಕೆಂದಿಲ್ಲ. ಅವರವರ ಜೀವನ ಅವರವರದು. ಬಿಟ್ಟಿ ಸಲಹೆಗಳನ್ನು ಯಾರಿಗೂ ಕೊಡಬಾರದು, ಕೊಟ್ಟರೂ ನೀವೂ ಜೊತೆಯಾಗಿ ಸಲಹೆ ಸ್ವೀಕರಿಸುವ ಮನಸು ಇರಲಿ. ಅತಿಥಿಗಳು ಮನೆಗೆ ಬಂದಾಗ ನಗು ನಗುತಾ ಸ್ವಾಗತಿಸಬೇಕು. ಅವರಿಗೆ ಆತಿಥ್ಯ ಮಾಡುವುದು ಸಹಜ ಆದರೆ ಬಲವಂತವಾಗಬಾರದು. ಅವರು ಹೊರಡುವ ಆತುರ ತೋರಿದರೆ ಅವರಿಗೆ ಬೇರೆ ಕೆಲಸವಿದೆ ಎಂದು ಅರಿತು ಮತ್ತೊಮ್ಮೆ ಬಂದಾಗ ನಮ್ಮ ಆತಿಥ್ಯ ಸ್ವೀಕರಿಸಲೇಬೇಕು ಎಂದು ಬೀಳ್ಕೊಡಬೇಕು.

photo credit : ಗೂಗಲ್
ಬಂದ ಅತಿಥಿಗಳ ಮುಂದೆ ಮದುವೆ ಮುಂಜಿಯ ಆಲ್ಬಂ ಹಿಡಿದಾಗ ಅವರಿಗೆ ನೋಡಲು ಸಮಯವಿಲ್ಲದಿರಬಹುದು ಅವರು ಹೊರಡಲು ಅವಸರಿಸಿದಾಗ ಖಂಡಿತಾ ಅವರಿಗೆ ಹೋಗಲು ಅನುಮತಿ ಕೊಡಿ. ನಿಮಗೆ ಖುಷಿಯಿದ್ದರೆ ನೀವು ಫೋಟೋಗಳನ್ನು ನೋಡಿಕೊಳ್ಳಬೇಕು ಆದರೆ ಅದು ಬೇರೆಯವರಿಗೆ ಬೇಸರವಾಗಬಾರದು.
ಯಾವುದಾದರೂ ವೈದ್ಯರ ಬಗ್ಗೆ ಕೇಳಿದಾಗ ನಿಮಗೆ ಗೊತ್ತಿರುವ ವೈದ್ಯರ ಬಗ್ಗೆ ಹೇಳಿ ಆದರೆ ಯಾಕೆ, ಯಾರಿಗೆ ಎಂದು ಕೇಳಲಿಕ್ಕೆ ಹೋಗಬಾರದು. ಯಾರೇ ಆಗಲಿ ಅವರ ಆರೋಗ್ಯದ ಸಮಸ್ಯೆ ಹೇಳಿಕೊಳ್ಳುವಾಗ ಅವರಿಗೆ ಧೈರ್ಯ ಹೇಳಬೇಕು ಅದು ಬಿಟ್ಟು ನಮಗೆ ಗೊತ್ತಿರುವವರಿಗೆ ಹೀಗೆ ಆಗಿತ್ತು ಅವರು ಹೋಗೇ ಬಿಟ್ಟರು, ಹುಷಾರೇ ಆಗಲ್ಲ, ತುಂಬಾ ಕಷ್ಟ ಈ ರೀತಿ ಆದ್ರೆ ಅಂತ ಅವರಿಗೆ ನೆಗಟೀವ್ ಪ್ರತಿಕ್ರಿಯೆ ಕೊಟ್ಟರೆ ಮೊದಲೇ ನೊಂದಿರುವವರು ಈ ಮಾತುಗಳನ್ನು ಕೇಳಿದ ಮೇಲೆ ಅವರ ಮನಸಿನ ಮೇಲೆ ಪರಿಣಾಮವಾಗಿ ಇನ್ನೂ ಕುಗ್ಗಿಹಗುವ ಸಂಭವ ಹೆಚ್ಚು. ಯಾರೇ ಆಗಲಿ ಅವರ ದೌರ್ಬಲ್ಯವೇನೇ ಇದ್ದರೂ ಅದನ್ನು ಅವರ ಮುಂದೆ ಹಂಗಿಸದೆ ಅವರಿಗೆ ಸಂಕೋಚವಿಲ್ಲದ ಮಾತುಕತೆಗೆ ಅವಕಾಶ ಕೊಡಬೇಕು. ಇಲ್ಲಿ ಯಾರೂ perfect ಇಲ್ಲ.
ಯಾರಾದರೂ ಹೇಗಿದ್ದೀರಿ ಎಂದಾಗ ಸಕಾರಾತ್ಮಕವಾಗಿರಬೇಕು ಉತ್ತರ. ಅಯ್ಯೋ ಏನೋ ಇದೀವಿ ಊರು ಹೋಗು ಅಂತಿದೆ ಕಾಡು ಬಾ ಅಂತಿದೆ ಅಂದರೆ ಕೇಳಿದವರಿಗೆ ಮುಜುಗರವಾಗುತ್ತದೆ. ನಿಮಗೆ ಏನೇ ತೊಂದರೆ ಇದ್ದರೂ ಚೆನ್ನಾಗಿದೀವಿ, ನಿಮ್ಮ ಕಾಳಜಿಗೆ ಧನ್ಯವಾದಗಳು ಅಂತ ತಿಳಿಸಬೇಕು. ಯಾರೊಂದಿಗೂ ಹಣಕಾಸಿನ ಬಗ್ಗೆ ಹಾಗು ತೊಂದರೆಗಳ ಬಗ್ಗೆ ಹೇಳಿಕೊಳ್ಳಬಾರದು. ತುಂಬಾ ಆತ್ಮೀಯರಾಗಿ, ನಿಮ್ಮ ವಿಷಯ ಬೇರೆಯವರಿಗೆ ಹೇಳುವುದಿಲ್ಲ ಎಂದು ಖಚಿತವಾಗಿದ್ದರೆ ಮಾತ್ರ ಹಂಚಿಕೊಳ್ಳಬೇಕು.
ತಮ್ಮ ಮಕ್ಕಳ ಎದುರಿಗೇ ಅವರ ದೌರ್ಬಲ್ಯದ ಬಗ್ಗೆ ಯಾರಲ್ಲಿಯೂ ಹೇಳಬಾರದು. ಇದು ಮಕ್ಕಳ ಮನಸಿನ ಮೇಲೆ ಬಹಳವಾಗಿ ಪರಿಣಾಮ ಬೀರುತ್ತದೆ. ಯಾರ ಮನೆಯ ಮಕ್ಕಳ ಮದುವೆ ತಡವಾಗಿದ್ದರೆ ಪದೇ ಪದೇ ಅದರ ಬಗ್ಗೆ ಕೇಳಬಾರದು. ಅವರ ಮನೆಯ ಪರಿಸ್ಥಿತಿ ಹೇಗಿರುತ್ತದೋ ಏನೋ ಹೇಳಿದರೆ ಮಾತ್ರ ಪ್ರತಿಕ್ರಯಿಸಬೇಕು. ಯಾರನ್ನು ದಪ್ಪ, ಸಣ್ಣ, ಕರಿ, ಬಿಳಿ ಎಂಬ ಪೂರ್ವಪ್ರತ್ಯಯ (prefix) ದಿಂದ ಹಾಗು ಪ್ರತ್ಯಯ(suffix)ನಿಂದ ಕರೆಯಬಾರದು. ಅಪರೂಪಕ್ಕೊಮ್ಮೆ ಸಿಕ್ಕಿದಾಗ ಉಭಯ ಕುಶಲೋಪರಿ ವಿಚಾರಿಸಬೇಕು ಅದು ಬಿಟ್ಟು ಹಂಗಿಸಿವುದುಕ್ಕಾಗಿಯೇ ಏನು ಇಷ್ಟು ದಪ್ಪ ಆಗಿದೀರ, ಏನು ತಿನ್ನೋದೆ ಇಲ್ಲವ ಇಷ್ಟು ಸಣ್ಣ ಇದೀರ ಎಂದು ಹೇಳಬಾರದು.
ಈ ವಿಷಯಗಳೆಲ್ಲ ಸಣ್ಣದಾಗಿ ಕಾಣಬಹುದು ಆದರೆ ಬದುಕಲ್ಲಿ ಎಷ್ಟು ಪ್ರಾಮುಖ್ಯತೆ ಎಂಬುದು ನಮಗೆ ಅರಿವಾದಾಗಲೇ ನಮ್ಮ ಘನತೆ ಕಾಪಾಡಿಕೊಳ್ಳಬಹುದು. ಯಾರಾದರೂ ಸರಿ ಮಾತು ಆಡುತಿದ್ದರೆ ಮತ್ತೆ ಕೇಳುವಂತಿರಬೇಕು ದೂರುವಂತಿರಬಾರದು.
ಕಷ್ಟಗಳು ಎಲ್ಲರಿಗೂ ಇರುತ್ತದೆ ಆನೆಗೆ ಅದರದೇ ಚಿಂತೆ, ಇರುವೆಗೆ ಅದರದೇ ಚಿಂತೆ ಹಾಗಾಗಿ ಯಾರ ಬಗ್ಗೆಯೂ ಕೇವಲವಾಗಿ ಮಾತನಾಡದೆ, ಬೇಡದ ವಿಷಯಕ್ಕೆ ತಲೆಹಾಕದೆ, ಮತ್ತೊಬ್ಬರನ್ನು ಅವರ ಕಳೆದು ಹೋದ ದಿನಗಳ ಬಗ್ಗೆ ಹಂಗಿಸದೆ ಒಳ್ಳೆಯ ಮನಸಿನ ಮನುಷ್ಯರಾದರೆ ಸಾಕು.
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು :
- ಚಂಪಾ ಚಿನಿವಾರ್ (ಆಪ್ತ ಸಮಾಲೋಚಕಿ) ಪರಿಚಯ
- ಮಾನಸ….ಇದು ಮನಸಿನ ಮಾತು (ಭಾಗ-೧)
- ಮಾನಸ….ಇದು ಮನಸಿನ ಮಾತು (ಭಾಗ-೨)
- ಮಾನಸ….ಇದು ಮನಸಿನ ಮಾತು (ಭಾಗ-೩)
- ಮಾನಸ….ಇದು ಮನಸಿನ ಮಾತು (ಭಾಗ-೪)
- ಮಾನಸ….ಇದು ಮನಸಿನ ಮಾತು (ಭಾಗ-೫)
- ಮಾನಸ….ಇದು ಮನಸಿನ ಮಾತು (ಭಾಗ-೬)
- ಮಾನಸ….ಇದು ಮನಸಿನ ಮಾತು (ಭಾಗ-೭)
- ಮಾನಸ….ಇದು ಮನಸಿನ ಮಾತು (ಭಾಗ-೮)
- ಮಾನಸ….ಇದು ಮನಸಿನ ಮಾತು (ಭಾಗ-೯)
- ಮಾನಸ….ಇದು ಮನಸಿನ ಮಾತು (ಭಾಗ-೧೦)
- ಮಾನಸ….ಇದು ಮನಸಿನ ಮಾತು (ಭಾಗ-೧೧)
- ಮಾನಸ….ಇದು ಮನಸಿನ ಮಾತು (ಭಾಗ-೧೨)
- ಮಾನಸ….ಇದು ಮನಸಿನ ಮಾತು (ಭಾಗ-೧೩)
- ಮಾನಸ….ಇದು ಮನಸಿನ ಮಾತು (ಭಾಗ-೧೪)
- ಮಾನಸ….ಇದು ಮನಸಿನ ಮಾತು (ಭಾಗ-೧೫)
- ಮಾನಸ….ಇದು ಮನಸಿನ ಮಾತು (ಭಾಗ-೧೬)
- ಮಾನಸ….ಇದು ಮನಸಿನ ಮಾತು (ಭಾಗ-೧೭)
- ಮಾನಸ….ಇದು ಮನಸಿನ ಮಾತು (ಭಾಗ-೧೮)
- ಮಾನಸ….ಇದು ಮನಸಿನ ಮಾತು (ಭಾಗ-೧೯)
- ಮಾನಸ….ಇದು ಮನಸಿನ ಮಾತು (ಭಾಗ-೨೦)
- ಮಾನಸ….ಇದು ಮನಸಿನ ಮಾತು (ಭಾಗ-೨೧)
- ಮಾನಸ….ಇದು ಮನಸಿನ ಮಾತು (ಭಾಗ-೨೨)
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ.
