ನಾನು ಹಾಗೆ ಮಾಡಬೇಕಿತ್ತು, ಹೀಗೆ ಮಾತಾಡಬೇಕಿತ್ತು ಎಂದು ಪಶ್ಚಾತ್ತಾಪ ಪಡುವುದಕ್ಜಿಂತ ಒಂದು ನಿಶ್ಚಿತ ಮನಸಿನಿಂದ ಗಟ್ಟಿ ನಿಲುವಿನಲಿ ಮಾತನಾಡಿದಾಗ ನಮ್ಮ ಘನತೆ ಹೆಚ್ಚುತ್ತದೆ.ಆಪ್ತ ಸಮಾಲೋಚಕಿ ಚಂಪಾ ಚಿನಿವಾರ್ ಅವರ ‘ಮಾನಸ….ಇದು ಮನಸಿನ ಮಾತು’ ಅಂಕಣವನ್ನು ತಪ್ಪದೆ ಓದಿ….
ನಾವು ದಿನನಿತ್ಯದ ಬದುಕಿನಲ್ಲಿ ಎಷ್ಟೋ ವಿಚಾರಗಳು ನಾವು ಉದಾಸೀನ ಮಾಡಿಕೊಂಡು ಬಂದಿರುತ್ತೇವೆ. ಯಾವುದೇ ಕೆಲಸ ಮಾಡುವಾಗಲಾಗಲಿ ಮಾತನಾಡುವಾಗಲಿ ಗೊಂದಲಗೊಂಡು ಕಾರ್ಯರೂಪಕ್ಕೆ ತರುವುದೇ ಇಲ್ಲ. ನಾನು ಹಾಗೆ ಮಾಡಬೇಕಿತ್ತು, ಹೀಗೆ ಮಾತಾಡಬೇಕಿತ್ತು ಎಂದು ಪಶ್ಚಾತ್ತಾಪ ಪಡುವುದಕ್ಜಿಂತ ಒಂದು ನಿಶ್ಚಿತ ಮನಸಿನಿಂದ ಗಟ್ಟಿ ನಿಲುವಿನಲಿ ಮಾತನಾಡಿದಾಗ ನಮ್ಮ ಘನತೆ ಹೆಚ್ಚುತ್ತದೆ.
ನಾವು ಮಾತನಾಡುವಾಗ ಸದಾ ಸಕಾರಾತ್ಮದ ಮಾತುಗಳು ಹಾಗು ಸಕಾರಾತ್ಮದ ಯೋಚನೆಗಳನ್ನು ಮಾಡಬೇಕು ನಮ್ಮೊಳಗಿನ ಮನಸು ನನ್ನಿಂದ ಸಾಧ್ಯ, ನಾನು ಮಾಡಬಲ್ಲೆ…. ಎಂದು ಹೇಳಿಕೊಳ್ಳುತ್ತಿರಬೇಕು. ಬೇರೆಯವರ ಬಳಿ ಮಾತನಾಡುವಾಗಲೂ ನಿಮ್ಮಿಂದ ಈ ಕೆಲಸ ಮಾಡಲು ಸಾಧ್ಯ ಎಂದು ಉತ್ತೇಜಿಸುವ ರೀತಿಯಲ್ಲಿ ಮಾತಿರಬೇಕೇ ಹೊರತು ಅವರ ಆತ್ಮಸ್ಥೈರ್ಯ ಕುಗ್ಗುವಂತೆ ಮಾತಿರಬಾರದು.
ನಕಾರಾತ್ಮಕ ಯೋಚನೆಗಳು ಬಂದಾಗ ಅದನ್ನು ಹೊರಗಟ್ಟಿ ಅದರ ಬದಲಿಗೆ ಸಕಾರಾತ್ಮಕವಾದ, ದೈವಿಕವಾದ ಯೋಚನೆಗಳು, ಹಾಗು ಸಂತೋಷದ ಕ್ಷಣಗಳನ್ನು ಯೋಚಿಸಬೇಕು ಹಾಗು ಮಾತನಾಡಬೇಕು. ಕುಗ್ಗಿದ ಮನಸಿನವರಿಗೂ ಸ್ಫೂರ್ತಿದಾಯಕ ಮಾತುಗಳನ್ನು ಆಡಬೇಕು.

ಫೋಟೋ ಕೃಪೆ : google (ಸಾಂದರ್ಭಿಕ ಚಿತ್ರ)
ನಾವು ಮತ್ತೊಬ್ಬರ ಬಳಿ ಮಾತನಾಡುವಾಗ ಹಿತಕರವಾದ ಸಂಭಾಷಣೆಯಾಗಿರಬೇಕು ಸಂತೋಷ ಕೊಡುವಂಥದ್ದು ಹಾಗು ಸಂತೋಷ ಪಡುವಂಥದ್ದಾಗಿರಬೇಕು. ನೋವಾಗವೂ ಯಾವುದೇ ಸಂಗತಿಯಿದ್ದರೂ ಮನಸಿನ ಸುತ್ತ ಬೇಲಿ ಹಾಕಿಕೊಂಡು ಬಿಡಬೇಕು. ಬೇಸರದ ಸಂಗತಿಗಳು ಮನುಷ್ಯನನ್ನು ಖಿನ್ನತೆಗೆ ಒಳಪಡುತ್ತದೆ ಹಾಗು ಮನೋಬಲ ಕುಗ್ಗಿಸುತ್ತದೆ.
ಸ್ಪೂರ್ತಿದಾಯಕವಾದ ಪುಸ್ತಕಗಳನ್ನು ಓದಬೇಕು ಹಾಗು ಪ್ರಸಿದ್ಧ ವ್ಯಕ್ತಿಗಳ ಕುರಿತಾಗಿ ಓದಿಕೊಂಡು ಅವರು ನುಡಿದ ಸ್ಪೂರ್ತಿದಾಯಕ ಮಾತುಗಳನ್ನು ಅಳವಡಿಸಿಕೊಂಡು ಮತ್ತೊಬ್ಬರಿಗೆ ನಾವು ಮಾದರಿಯಾಗಿರಬೇಕು.
ನಾವು ಸಕಾರಾತ್ಮಕ ವ್ಯಕ್ತಿಗಳ ಒಡನಾಟದಲ್ಲಿ ಇರಬೇಕು ಹಾಗು ಸಮಚಿತ್ತರಾಗಿ ನೋವು ನಲಿವೆರಡನ್ನು ಸಮನಾಗಿ ಕಂಡುಕೊಳ್ಳಬೇಕು. ಕೊಂಕು ಮಾತುಗಳನ್ನು ಆಡಬಾರದು.
ಯಾವುದೇ ಕೆಲಸ ಮಾಡಲು ಹೊರಟಾಗ ಮನಃಪೂರ್ವಕವಾಗಿ ಮಾಡಬೇಕು ನಿರೀಕ್ಷೆ ಪಡಬಾರದು. ಅತೀ ವ್ಯಾಮೋಹ ಮನಸಿಗೆ ನೋವುಂಟುಮಾಡುತ್ತದೆ ಹಾಗಾಗಿ ಪ್ರೀತಿ ತೋರಿ ವ್ಯಾಮೋಹ ಬಿಡಬೇಕು.
ಈ ಗುಣಗಳಲ್ಲ ನಮ್ಮಲ್ಲಿದ್ದರೆ ನಾವು ಯಾವ, ಯಾರ ಅಪೇಕ್ಷೆಯೂ ಪಡಬೇಕಾಗಿಲ್ಲ ತನ್ನಂತೆ ತಾನು ನಮಗೆ ಆಕರ್ಷಿತವಾಗುತ್ತದೆ/ ಆಗುತ್ತಾರೆ.. ಶುದ್ಧ ಮನಸ್ಸು, ಶುದ್ಧನಾಲಿಗೆ ಇದ್ದರೆ ಶತ್ರುಗಳೂ ಮಿತ್ರರಾಗುತ್ತಾರೆ.
- ಮಾತೇ ಮುತ್ತು ಮಾತೇ ಮೃತ್ಯು ಅನ್ನು ಹಾಗೆ ಮಾತು ಆಡಿದರೆ ಮತ್ತೊಮ್ಮೆ ಕೇಳುವಂತಿರಬೇಕು. ಅದು ಮನಸಿಗೆ ಚುಚ್ಚುವ ಹಾಗಿರಬಾರದು. ಮನಸಿಗೆ ದುಃಖವಿದ್ದಾಗ, ಕೋಪವಿದ್ದಾಗ ಪ್ರಶಾಂತ ರೀತಿಯಲ್ಲಿ ಇದ್ದುಬಿಡಬೇಕು.

ಫೋಟೋ ಕೃಪೆ : google
ಮಾನಸ….ಇದು ಮನಸಿನ ಮಾತು ಅಂಕಣದ ಹಿಂದಿನ ಸಂಚಿಕೆಗಳು:
- ಚಂಪಾ ಚಿನಿವಾರ್ – ಆಪ್ತ ಸಮಾಲೋಚಕಿ
