‘ಮಾಯಾ ಜಿಂಕೆ’ ಕವನ – ಕಂಸ

ಅವಳೆಂದರೆ ಹತ್ತಿರ ಬಂದರೆ ಚಂಗನೆ ಜಿಗಿಯುವ ಮಾಯಾ ಜಿಂಕೆ….ಕಂಸ (ಕಂಚುಗಾರನಹಳ್ಳಿ ಸತೀಶ್ ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ….

ಅವಳೆಂದರೆ ಮಲ್ಲಿಗೆ ಹೂವಿನಂತೆ
ಸದಾ ಪರಿಮಳ ಬೀರುವಳು
ಕಂಡಾಗ ನಕ್ಕು ಕಣ್ಸನ್ನೆಯಲ್ಲೇ
ಕರೆಯುವವಳು

ಅವಳೆಂದರೆ ಹುಣ್ಣಿಮೆಯ ಚಂದ್ರ
ನಡೆದಾಗಲ್ಲೆಲ್ಲ ಬೆನ್ನ ಹಿಂದೆ ಬರುವವಳು
ನಿಂತರೆ ನಿಲ್ಲುವಳು
ಓಡಿದಾಗ ಓಡುವಳು

ಅವಳೆಂದರೆ ಚಿಗರೆಯಂತೆ
ಸುಮ್ಮನೆ ಮೆಲ್ಲುವಳು
ಹತ್ತಿರ ಬಂದರೆ ಚಂಗನೆ ಜಿಗಿಯುವ
ಮಾಯಾ ಜಿಂಕೆ

ಅವಳೆಂದರೆ ಸಾಗರದಂತೆ
ಹಗಲೆಲ್ಲ ಭೋರ್ಗರೆದು
ಮುಸ್ಸಂಜೆ ಶಾಂತವಾಗಿ
ಇರುಳಲ್ಲಿ ಮಲಗುವಳು

ಅವಳೆಂದರೆ ಹಕ್ಕಿಗಳಂತೆ
ಚಿಲಿಪಿಲಿ ಗುಟ್ಟುವ
ಸಂಗೀತ ಕಲರವ ಎಬ್ಬಿಸಿ
ಕಿವಿಗೆ ಇಂಪನ್ನು ನೀಡುವವಳು

ಅವಳೆಂದರೆ ಪರ್ವತಗಳ ಮೇಲಿನ ಹಿಮದಂತೆ
ತುಂತುರು ಹನಿಗಳ
ಚುಮು ಚುಮು ಚಳಿಯ
ಕಂಪನಕ್ಕೆ ಒಯ್ಯುವಳು

ಅವಳೆಂದರೆ ಕಾಡುವ ಕವಿತೆ
ಕವಿಗೆ ರಸದೌತಣ
ನೋಡಿದಾಗಲೆಲ್ಲ ತೋಚಿದ್ದು ಗೀಚುವ
ಸೌಂದರ್ಯದ ರಾಶಿ ಅವಳು


  • ಕಂಸ – (ಕಂಚುಗಾರನಹಳ್ಳಿ ಸತೀಶ್ )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading