ಮೂರು ಲೋಕದ ಅಂದಗಾತಿ

ಹೊಳಪು ತುಂಬ್ಯಾನ್ ಎಷ್ಟೊಂದು ಹೊಳಪು ತುಂಬ್ಯಾನ್, ಸಾವಿರಾರು ತಾರೆಗಳ ಹೊಳಪೆಲ್ಲ ನಿಂಗೆ ತುಂಬ್ಯಾನ್…ಕವಿ ಶಿವಾ ಮದಭಾoವಿ ಅವರ ಜಾನಪದ ಶೈಲಿಯ ಹಾಡು ತಪ್ಪದೆ ಮುಂದೆ ಓದಿ…

ಎಷ್ಟೊಂದು ಇಟ್ಟಾನ ಒಡತಿ ಎಷ್ಟೊಂದು ಇಟ್ಟಾನ
ಚೆಂದ ಚೆಂದ ಬಣ್ಣ ಎಲ್ಲಾ ನಿಂಗ್ ಕೊಟ್ಟಾನ ||ಪ||

ರಂಬೆ ಮೇನಕೆ ಊರ್ವಶಿ ದೆಲ್ಲ ರೂಪ ಒಟ್ಟಿಗೆ ಇಟ್ಟಾನ
ಎಲ್ಲೂ ಇಲ್ಲದ ಗೊಂಬೆ ಯನ್ನ ಸೃಷ್ಟಿ ಮಾಡ್ಯಾನ

ರೂಪದಾಗು ರೂಪವಂತಿ ಗುಣದಲ್ಲೂ ಗುಣವಂತಿ
ಎಷ್ಟು ಬೇಕು ಅಷ್ಟೇ ಎಲ್ಲಕ್ಕೂ ತೂಕ ಇಟ್ಟಾನ

ಹೆಸರು ಇಟ್ಟಾನ ಆದಕೊಂದ ಒಳ್ಳೆ ಅರ್ಥ ಇಟ್ಟಾನ
ಹೆಸರಿಗೆ ತಕ್ಕಂಗ ಸವಿಯಾದ ಇಂಪಾದ ಧ್ವನಿಯು ಕೊಟ್ಟಾನ

ಹೊಳಪು ತುಂಬ್ಯಾನ್ ಎಷ್ಟೊಂದು ಹೊಳಪು ತುಂಬ್ಯಾನ್
ಸಾವಿರಾರು ತಾರೆಗಳ ಹೊಳಪೆಲ್ಲ ನಿಂಗೆ ತುಂಬ್ಯಾನ್

ಮೂರು ಲೋಕದ ಸುಂದರಿಯರ ಮೀರಿಸುವಂತ ಚೆಲುವ ತುಂಬ್ಯಾನ್
ಆ ನಿನ್ನೆಲ್ಲ ಚೆಲುವ ಸವಿಯಲು ನನ್ನ ರಸಿಕನ ಮಾಡ್ಯಾನ್

ನಿನ್ನ ಅಂದ್ ಚೆಂದ ಎಲ್ಲಾ ಸವಿಯಲು ನನಗೆ ಆ ಭಗವಂತ ಹಕ್ಕು ನಿಡ್ಯಾನ್
ನಿನ್ನನ್ನು ಸೃಷ್ಟಿಸಿ ಜೊತೆ ಜೊತೆಗೆ ನಿನ್ನ ಸೌಂದರ್ಯ ಸವಿಯಲು ನನಗೆ ಅದೃಷ್ಟ ನಿಡ್ಯಾನ್


  • ಶಿವಾ ಮದಭಾoವಿ – ಗೋಕಾಕ

Leave a Reply

Home
Search
Menu
Recent
About
×