‘ನಾನು’ ಗಜಲ್ – ಅಮೃತ ಎಂ ಡಿ



ಅಮೃತ ಎಂ ಡಿ ಅವರ ‘ಭಾವನೆಗಳಿಲ್ಲದವಳ ತೀರ ಯಾನ’ ಗಜಲ್ ಸಂಕಲದಿಂದ ಆಯ್ದ ಗಜಲ್. ಮುಂದೆ ಓದಿ…

ಅದೆಷ್ಟೋ ಸವಿಗನಸಿನ ಸಿಹಿ ಸಲ್ಲಾಪವು ಮತ್ತೇರುತ್ತಿದೆ, ಅಮಲಿನಂತೆಯೇ #ನಾನು
ಅಸಂಬದ್ಧ ಆಲೋಚನೆಗಳು ಕೊಳೆಯುತ್ತಿದೆ, ಕಳೇಬರದಂತೆಯೇ ನಾನು…

ಕೋಟೆಕೊತ್ತಲಗಳ ಕಟ್ಟಿಸಿ ಸಂರಕ್ಷಿಸುವಷ್ಟು ಶಕ್ತಳು ನಾನಲ್ಲ
ಕುಡಿಕೆಯ ಗಂಜಿಯ ಮೃಷ್ಟಾನ್ನದವೆಂದ ಬಡವಳಂತೆಯೇ ನಾನು

ನಿರೀಕ್ಷೆಗಳ ಸದ್ದ ಶಮನ ಮಾಡಿದರು ಭಾವದೀಪ್ತಿ ತೊರೆಯಲಿಲ್ಲ
ಸ್ವಾಭಿಮಾನದೊಟ್ಟಿಗೆ ನಿಂತರು, ಬದುಕು ಅನ್ಯ ಸ್ಥಿತಿಯಲ್ಲಿರುವಂತೆಯೇ ನಾನು

ಉಸಿರ ಕಣ ಕಣದ ಜೀವದೀಪ್ತಿಯು ನಿನ್ನೊಲವ ಖಾತೆಗೆ ಜಮಗೊಂಡಿದೆ
ಸಾಯೋವಷ್ಟು ಪ್ರೀತಿಯ ಕಾಪಿಟ್ಟು #ಮುಗ್ಧ_ಮಗುವಿನಂತೆಯೇ ನಾನು

#ಶಬರಿ ಇಲ್ಲದ ಉಸಾಬರಿಯ ಗೋಜಲಿನ ಕಥೆಯ ಸಂಗಡವೇಕೆ?
ಕಿರು ಬೆರಳ ಹಿಡಿದು ನೆರಳಂತೆ ಕಾಯುವ ಯೋಧಳಂತೆಯೇ ನಾನು


  • ಅಮೃತ ಎಂ ಡಿ (ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ, ‘ಭಾವನೆಗಳಿಲ್ಲದವಳ ತೀರ ಯಾನ’ ಗಜಲ್ ಸಂಕಲವನ್ನು ಹೊರಗೆ ತಂದಿದ್ದು, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಅವರಿಂದ ಧನ ಸಹಾಯ ಪಡೆದ ಕೃತಿಯಾಗಿದೆ ) ಮಂಡ್ಯ.

One thought on “‘ನಾನು’ ಗಜಲ್ – ಅಮೃತ ಎಂ ಡಿ”

  1. ಅದೆಷ್ಟೋ ಸವಿಗನಸಿನ ಸಿಹಿ ಸಲ್ಲಾಪವು ಮತ್ತೇರುತ್ತಿದೆ, ಅಮಲಿನಂತೆಯೇ #ನಾನು
    ಅಸಂಬದ್ಧ ಆಲೋಚನೆಗಳು ಕೊಳೆಯುತ್ತಿದೆ, ಕಳೇಬರದಂತೆಯೇ ನಾನು…

    ಕೋಟೆಕೊತ್ತಲಗಳ ಕಟ್ಟಿಸಿ ಸಂರಕ್ಷಿಸುವಷ್ಟು ಶಕ್ತಳು ನಾನಲ್ಲ
    ಕುಡಿಕೆಯ ಗಂಜಿಯ ಮೃಷ್ಟಾನ್ನದವೆಂದ ಬಡವಳಂತೆಯೇ ನಾನು…

    ಈ ಸಾಲುಗಳು ಕಾಡುತ್ತಿವೆ..
    ಅದ್ಭುತವಾದ ನಿಮ್ಮ ಬರವಣಿಗೆಯಲ್ಲಿ ಅಡಗಿರುವ ಭಾವಗಳ ಭಂಡಾರಕ್ಕೆ ಕೊರತೆಯೇ ಇಲ್ಲ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading