ಸೋಲು ಎಂಬುವುದು ಎಷ್ಟೇ ಬಾರಿಯಾದರೂ ಕುಗ್ಗದೆ, ಅದೇ ಜಾಗದಲ್ಲಿ ಧೈರ್ಯವಾಗಿ ಎದೆ ಉಬ್ಬಿಸಿ ನಡೆಯಿರಿ. ಅಲ್ಲಿಯೇ ಗೆಲುವು ನಿಮ್ಮದಾಗುವುದು ಎನ್ನುವ ತಾತ್ಪರ್ಯದ ಸುಂದರ ಕವನ. ಕವಿಯತ್ರಿ ಅಮೃತ ಅವರು ಬರೆದಿದ್ದಾರೆ ಓದಿ ನಿಮ್ಮ ಅಭಿಪ್ರಾಯವನ್ನು ಕವನದ ಮೂಲಕ ಹಂಚಿಕೊಳ್ಳಬಹುದು…
ಬಿದ್ದ ಜಾಗದಲ್ಲೇ ಗೋಪುರದ ಒಡ್ಡೋಲಗ ಹೊರಡಿಸು
ಕುಸಿದು ನಿಂತ ಸ್ಥಳದಲ್ಲೇ ಗೆಲುವಿನ ಶಿಖರವ ರೂಪಿಸು
ಮೇಲೆರಲು ಹುರಿದುಂಬಿಸುವುದಿರಲಿ ಪ್ರೋತ್ಸಾಹಿಸುವುದಿಲ್ಲ
ನಿನ್ನ ಬದುಕಿನ ಶಿಲ್ಪಿ ನೀನೇ ಎಂಬುದನ್ನು ನಿರೂಪಿಸು
ಕಾಡು ಹರಟೆಗಳ ಅಸಂಬದ್ಧ ಮಾತುಗಳ ಅವಶ್ಯಕತೆ ಇಲ್ಲ
ಸಾಧಿಸುವ ಗುರಿಹೊತ್ತು ನೆಟ್ಟ ದೃಷ್ಟಿಯ ಚಲಿಸದೆ ಸಾಗಿಸು
ಕೊಳೆತು ನಾರುವಲ್ಲಿ ಉತ್ತಮ ಆಲೋಚನೆಗಳ ಸಂಚಾರವೆಲ್ಲಿ..?
ಊಹಾಪೋಹಗಳ ಸಂಗಡವೇಕೆ ನಿನ್ನ ಅಸ್ತಿತ್ವವ ಬದುಕಿಸು
ಅಮ್ಮು ನೂರು ಬಾರಿ ಗೆದ್ದವಳಲ್ಲ ಸಾವಿರ ಸಲ ಸೋತವಳು
ಅಪಮಾನಾಗೊಂಡ ಜಾಗದಲ್ಲೇ ಎದ್ದು ನಿಂತು ಸಾಧಿಸು
- ಅಮೃತ ಎಂ ಡಿ (ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಮಂಡ್ಯ)