ಓ ಹಣವೇ … – ಪ್ರೀತಿಯ ಹುಡುಗ



ಹಣಕ್ಕೆ ಸಾಕಷ್ಟು ಗೌರವ ಕೊಡುವ ಮನುಷ್ಯ, ಅದು ಜೇಬಿನಲ್ಲಿದ್ದಾಗ ಧೈರ್ಯದ ಜೊತೆಗೆ ಅತಿ ಹೆಚ್ಚು ತೊಂದರೆ ಕೊಡುವ ವಸ್ತುವೆಂದರೆ ಇದೆ ಹಣ.ಹಣದ ಮಹತ್ವ ಮತ್ತು ಅದರ ಇನ್ನೊಂದು ಮುಖದ ಕುರಿತು ಬಶೀರ್ ಅವರು ಬರೆದ ಕವಿತೆಯಿದು…

ಓ ಹಣವೇ
ನಿನಗೆಷ್ಟು ಹೆಸರು???

ಆರಾಧನಾಲಯಗಳಲ್ಲಿ ‘ಹರಕೆ’
ಶಾಲೆಯಲ್ಲಿ ಕಟ್ಟಿದರೆ ‘ಶುಲ್ಕ’
ಮದುವೆಯಲ್ಲಿಕೊಟ್ಟರೆ ‘ವರದಕ್ಷಿಣೆ’
ವಿಚ್ಛೇದನದಲ್ಲಿ ನೀಡಿದರೆ ‘ಜೀವನಾಂಶ’
ಅಕಾಲಿಕ ಸಾವು ಸಂಭವಿಸಿದಲ್ಲಿ
‘ಪರಿಹಾರ’
ಬೇಡುವವರಿಗೆ ನೀಡಿದರೆ ‘ಭಿಕ್ಷೆ’
ಮರುಪಾವತಿಸಬೇಕೆಂದು ಯಾರಿಗಾದರೂ ನೀಡಿದರೆ ‘ಸಾಲ’
ರಾಜಕೀಯ ಪಕ್ಷಗಳಿಗೆ ನೀಡಿದರೆ ‘ದೇಣಿಗೆ’
ಅನಾಥಾಶ್ರಮಗಳಿಗೆ ಕೊಟ್ಟರೆ ‘ದಾನ’
ನ್ಯಾಯಾಲಯದಲ್ಲಿ ಪಾವತಿಸಿದರೆ ‘ದಂಡ’
ಸರಕಾರಕ್ಕೆ ಕೊಟ್ಟಾಗ ‘ತೆರಿಗೆ’
ಕೆಲಸ ಮಾಡುವವರಿಗೆ ‘ಸಂಬಳ’
ಹೋಟೆಲಲ್ಲಿ ನೀಡಿದಾಗ ‘ಬಿಲ್’
ವೈಟರ್ ನಿಗೆ ನೀಡಿದಾಗ ‘ಟಿಪ್ಸ್’
ನಿವೃತ್ತಿಯ ನಂತರ ‘ಪಿಂಚಣಿ’
ಕಾರ್ಮಿಕರಿಗೆ ‘ವೇತನ’
ಅಕ್ರಮವಾಗಿ ಪಡೆದರೆ
‘ಲಂಚ’


  • ಪ್ರೀತಿಯ ಹುಡುಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading