“ಮನಲೋಕ” ಪುಸ್ತಕ ಏಕೆ ಓದಬೇಕು




ವೀರಪ್ಪನ್ ಎಂಬ ಅಪರಾಧಿಯನ್ನು ವ್ಯವಸ್ಥಿತವಾಗಿ ರೂಪಿಸಿದ ಗುರುನಾಥಾಚಾರಿ, ಮುಂಬಯಿ ದಾಳಿ, ಹಿರೋಷಿಮಾ ಬಾಂಬ್ ದಾಳಿ ಹೀಗೆ ಸಾಕಷ್ಟು ರೋಚಕ ವಿಷಯಗಳು  ಮನಲೋಕ ಪುಸ್ತಕದಲ್ಲಡಗಿದೆ. ಸಾಹಿತ್ಯಾಸಕ್ತರು ಓದಲೇ ಬೇಕಾದಂತಹ ಪುಸ್ತಕ.

ಪುಸ್ತಕ – ಮನಲೋಕ

ಲೇಖಕರು – ಮುಷ್ತಾಕ್ ಹೆನ್ನಾಬೈಲ್

ಪ್ರಕಾಶಕರು –  ಸಾಹಿತ್ಯಸುಧೆ

ಪುಸ್ತಕದ ಬೆಲೆ – 150 ರೂಪಾಯಿ

ಇಸ್ರೇಲ್ ಪ್ಯಾಲೆಸ್ಟೈನ್ ವಿವಾದದ ಮೂಲ, ಯಹೂದಿಗಳು ಮತ್ತು ಮುಸ್ಲಿಮರ ನಡುವಿನ ವೈರತ್ವದ ಇತಿಹಾಸ, ಅದಕ್ಕೆ ಪರಿಹಾರಗಳ ಕುರಿತಾಗಿ ಲೇಖಕ ಮುಷ್ತಾಕ್ ಹೆನ್ನಾಬೈಲ್ ಬಹಳ ಅದ್ಭುತವಾಗಿ ತಮ್ಮ ಕೃತಿ ಮನಲೋಕದಲ್ಲಿ ಬರೆದಿದ್ದಾರೆ. ಈ ವಿವಾದದ ರಾಜಕೀಯ, ಧಾರ್ಮಿಕವಾದ ಸಂಪೂರ್ಣ ಮತ್ತು ನೈಜ ಚಿತ್ರಣ ಈ ಕೃತಿಯಲ್ಲಿ ಕಾಣಸಿಗುತ್ತದೆ.

ಈ ಪುಸ್ತಕದಲ್ಲಿ ಇಲ್ಲಿಯವರೆಗೆ ಎಲ್ಲೂ ಕಾಣದ ಮಹತ್ವದ ರೋಚಕ ಮಾಹಿತಿಗಳಿವೆ. ವೀರಪ್ಪನ್ ಎಂಬ ಅಪರಾಧಿಯನ್ನು ವ್ಯವಸ್ಥಿತವಾಗಿ ರೂಪಿಸಿದ ಗುರುನಾಥಾಚಾರಿ ಎಂಬವನ ವಿಚಾರಗಳು ಮನಲೋಕದಲ್ಲಿದೆ. ಧೋನಿ, ವಾಜಪೇಯಿ, ಇಂದಿರಾಗಾಂಧಿ, ಎಸ್ ಪಿ ಬಾಲಸುಬ್ರಹ್ಮಣ್ಯಂ ಮುಂತಾದವರ ಬಗ್ಗೆ ಈವರೆಗೆ ಯಾರೂ ಎಲ್ಲಿಯೂ ಕೇಳಿರದ ರೋಚಕ ವಿಚಾರಗಳಿವೆ. ಶೋಲೆ ಚಲನಚಿತ್ರದ ಶೂಟಿಂಗಿನ ಸುತ್ತ ನಡೆದ ವಿಶೇಷ ವರದಿಯಿದೆ. ಈ ವರದಿ ಓದಿದ ಮೇಲೆ ಆ ಚಿತ್ರವನ್ನು ಖಂಡಿತ ನೀವು ನೋಡದೇ ಇರಲಾರಿರಿ.


ಮುಂಬಯಿ ದಾಳಿ, ಹಿರೋಷಿಮಾ ಬಾಂಬ್ ದಾಳಿಯ ಕುರಿತಾದ ವಿವರಗಳು ಅತೀ ವಿಶೇಷವಾಗಿ ಮೂಡಿಬಂದಿವೆ. ನಿಖರ ಕಾಲಜ್ಞಾನಿ ನಾಸ್ಥ್ರಾಡ್ರಾಮಸ್ 21 ನೇ ಶತಮಾನದ ಮಧ್ಯಭಾಗದಲ್ಲಿ ದೊಡ್ಡಗಾತ್ರದ ಆಕಾಶಕಾಯವೊಂದು ಭೂಮಿಯತ್ತ ಧಾವಿಸಿಬರಲಿದೆ ಎಂಬ ಭವಿಷ್ಯವಾಣಿಯನ್ನು 460 ವರ್ಷಗಳ ಹಿಂದೆಯೇ ಹೇಳಿದ್ದ. ಇತ್ತೀಚೆಗೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ವೈಜ್ಞಾನಿಕವಾಗಿ ಅದನ್ನು ಖಚಿತಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಇಂತಹ ಮೈನವಿರೇಳಿಸುವ ವಿಚಾರಗಳ ಆಗರ ಈ ಪುಸ್ತಕ.

ಕೇವಲ 150 ರೂಪಾಯಿಯ ಈ ಕೃತಿ ಓದುಗರಿಗೆ ವಿಶೇಷ ಜ್ಞಾನವನ್ನು ಒದಗಿಸಲಿದೆ. ಎಲ್ಲರೂ ಒಮ್ಮೆ ಓದಲೇಬೇಕಾದ ಕನ್ನಡ ಸಾಹಿತ್ಯಲೋಕದಲ್ಲಿ ಸಂಚಲನ ಮೂಡಿಸಬಲ್ಲ ಪುಸ್ತಕವಿದು. ಎಲ್ಲರೂ ಹೇಳಿದ್ದನ್ನು ತಾನು ಹೇಳಿದರೆ ಏನು ಪ್ರಯೋಜನವಿಲ್ಲವೆಂದು ಯಾರೂ ಹೇಳದ ಎಲ್ಲಿಯೂ ಕೇಳದ ರಣರೋಚಕ ವಿಚಾರಗಳನ್ನು ಲೇಖಕ ಮುಷ್ತಾಕ್ ಹೆನ್ನಾಬೈಲ್ ಈ ಪುಸ್ತಕದಲ್ಲಿ ಹೇಳಿದ್ದಾರೆ.


  • ಆಕೃತಿಕನ್ನಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading