ಕಲಬುರ್ಗಿ ಜಿಲ್ಲೆ ಯಡ್ರಾಮಿ ಪಟ್ಟಣದ ಕಸ್ತೂರಬಾ ಕಂಪ್ಯೂಟರ್ ಅಕಾಡೆಮಿ, ಆಯೋಜಿಸಿದ ಉಚಿತ ಕಂಪ್ಯೂಟರ್ ತರಬೇತಿ ಹಾಗು ವಾರ್ಷಿಕೋತ್ಸವ ಸಮಾರಂಭದಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಯುವ ಸಾಹಿತಿ, ಪತ್ರಕರ್ತ ಡಾ. ಮಲ್ಲಿಕಾರ್ಜುನ. ಎಸ್. ಆಲಮೇಲ ಅವರು.
ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್, AI ( ಕೃತಕ ಬುದ್ದಿಮತ್ತೆ) ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಮನುಷ್ಯನ ಅವಿಭಾಜ್ಯ ಅಂಗವಾಗುತ್ತಿದೆ. ಕಾರಣವದು ಕ್ಲಿಷ್ಟಕರವಾದ ಕಾರ್ಯಗಳನ್ನು ಕ್ಷಣಮಾತ್ರದಿ ಮಾಡುವದರಿಂದ, ಮನುಕುಲಕ್ಕೆ ಬಹಳಷ್ಟು ಉಪಯೋಗಯಾಗಿದೆ. ಶಿಕ್ಷಣ, ಬ್ಯಾಂಕಿಂಗ್, ವೈದ್ಯಕೀಯ ಸಾಫ್ಟವೇರ್, ಹಾರ್ಡವೇರ್. ಇನ್ನೂ ಮನರಂಜನಾ ಕ್ಷೇತ್ರದಲ್ಲಿ ಇದರ ಕಾರ್ಯ ಅಮೋಘವಾಗಿದೆ, ಆದರಿಂದ ತಂತ್ರಜ್ಞಾನವಿಲ್ಲದ ಜಗತ್ತು ಊಹಿಸಿಕೊಳ್ಳುವದಕ್ಕೂ ನಮಗೆಲ್ಲ ಅಸಾಧ್ಯವಾಗಿದೆ. ಆದರೆ ಅತಿಯಾದರೆ, ಅಮೃತವು ವಿಷವಾಗುವದು ಅನ್ನುವಂತೆ, ಟಕ್ನೋಲಜಿಯನ್ನು ನಾವು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡರೆ, ನಮ್ಮ ಬಾಳು ಉಜ್ವಲವಾಗುವದು, ಅದೇ ದುರುಪಯೋಗಪಡಿಸಿಕೊಂಡರೆ ನಮ್ಗಳ ಜೀವನವೇ ದುಃಸ್ಥಿತಿಗೆ ತಲುಪುವದೆಂದು ಎಚ್ಚರಿಕೆಯ ಸಂದೇಶ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷರಾದ, ಅಶೋಕ ಕೆಂಭಾವಿ,ಅಕಾಡೆಮಿ ನಡೆದು ಬಂದ ಬಗ್ಗೆ ವಿವರಿಸಿ ವಿದ್ಯಾರ್ಥಿಗಳು,ಈ ಉಚಿತ ಕಂಪ್ಯೂಟರ್ ತರಬೇತಿಯ ಪ್ರಯೋಜನ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿರೆಂದು ಹೇಳಿದರು. ಇದೆ ಸಂದರ್ಭದಿ ರಸಪ್ರಶ್ನೆ ಹಾಗು ಕಂಪ್ಯೂಟರ್ ಕ್ಲಾಸ್ ನಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆ,ಮತ್ತು ವಂದನಾರ್ಪಣೆಯನ್ನು ಶ್ರೀಮತಿ ಕಾವೇರಿ ಕಿರಣಗಿ ಶಿಕ್ಷಕಿಯರು,ನಿರ್ವಹಿಸಿದರು. ಸಂಸ್ಥೆಯ ಸಂಸ್ಥಾಪಕರಾದ ಶ್ರೀ, ಶಿವಶರಣ ಕೆ ಯಡ್ರಾಮಿ, ಮತ್ತು ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಪೂಜಾ ಪತ್ರಿಗಿಡ. ಭಾಗ್ಯಶ್ರೀ, ಮತ್ತು ಶಿವಕುಮಾರ್ ಪತ್ತಾರ್, ಮಡಿವಾಳಪ್ಪ ಕುಂಬಾರ್. ವಿದ್ಯಾರ್ಥಿ /ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
- ಆಕೃತಿಕನ್ನಡ ನ್ಯೂಸ್
