“ತೂರಿ ಬಿಡು ಸುಳ್ಳಿನ ಹೊಟ್ಟು” ಕವನ

ಮದ ಮತ್ಸರಗಳಿದ್ದರೆ ಹೊರಗಟ್ಟು, ಕಷ್ಟಗಳೆದುರು ಬಂದರೆ ಕಾಲಕೆಳಗೆ ಮೆಟ್ಟು…ಕವಿ ಡಾ. ಅಶೋಕ ಕುಮಾರ ಎಸ್ ಅವರು ಲೇಖನಿಯಲ್ಲಿ ಅರಳಿದ ಸುಂದರ ಕವಿತೆಯನ್ನು ತಪ್ಪದೆ ಓದಿ…

ತೂರಿ ಬಿಡು ಸುಳ್ಳಿನ ಹೊಟ್ಟು
ದುಡಿಮೆಯಲ್ಲಿ ನಂಬಿಕೆಯನಿಟ್ಟು
ಮೋಸ ವಂಚನೆ ಮಾಡುವುದು ಬಿಟ್ಟು.

ಬಿಟ್ಟರೊಳಿತು ಸಿಟ್ಟು
ಓಡುವ ಮನಸಿಗೆ ಹಿಡಿದು ಕಟ್ಟು
ಸುರಿದರೊಳಿತು ಬೆವರಿನ ಹನಿ ತೊಟ್ಟು.

ಅರಿತರೊಳಿತು ಬದುಕಿನ ಗುಟ್ಟು
ಮರೆತರೊಳಿತು ನೋವಿನ ಹುಟ್ಟು
ಮೂರ್ತಿ ತಿಂದರೊಳಿತು ಉಳಿ ಸುತ್ತಿಗೆ ಪೆಟ್ಟು.

ಭಾವದಲ್ಲಿ ಭಕ್ತಿಯನಿಟ್ಟು
ಮದ ಮತ್ಸರಗಳಿದ್ದರೆ ಹೊರಗಟ್ಟು
ಕಷ್ಟಗಳೆದುರು ಬಂದರೆ ಕಾಲಕೆಳಗೆ ಮೆಟ್ಟು.

ಮನಸಿನ ದುರ್ಗುಣವ ಬಿಟ್ಟು
ಬಡ ಬದುಕಿನ ಹೊಸ ಸೌಧವ ಕಟ್ಟು
ಮನದೊಳಗಿನ ಮದ ಮೋಹಗಳ ಸುಟ್ಟು.

ಕಾಮ ಕ್ರೋಧವ ಬಿಟ್ಟು
ಸುಖ ನೆಮ್ಮದಿಯ ಕದವ ತಟ್ಟು
ಜೀವನದಲ್ಲಿ ದುಡಿದು ತಿನ್ನುವ ಪಣವ ತೊಟ್ಟು.


  • ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು, ಮುದ್ನಾಳ, ಯಾದಗಿರಿ ಜಿಲ್ಲೆ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading