‘ಎರಡು ತಲೆಮಾರು’ ಪುಸ್ತಕ ಪರಿಚಯ



ತೀರಿಹೋದ ತಮ್ಮ ತಂದೆಯನ್ನು ಶ್ರೀ ಅರವಿಂದ ಚೊಕ್ಕಾಡಿಯವರು ಕೃತಿಯ ಮೂಲಕ‌ ಚಿರಸ್ಥಾಯಿಗೊಳಿಸಿದ್ದಾರೆ. ಈ ಪುಸ್ತಕದ ಕುರಿತು ರೇಶ್ಮಾಗುಳೇದಗುಡ್ಡಾಕರ್ ಅವರು ಪುಸ್ತಕ ಪರಿಚಯ ಮಾಡಿದ್ದಾರೆ. ಮುಂದೆ ಓದಿ…

ಪುಸ್ತಕ: ಎರಡು ತಲೆಮಾರು
ಸಂಪಾದಕರು: ಶ್ರೀ ಅರವಿಂದ ಚೊಕ್ಕಾಡಿ
ಪ್ರಕಾಶನ : ಚಾಣಾಕ್ಯ ಪ್ರಕಾಶನ, ವಿಜಯಪುರ
ಬೆಲೆ: 275/-

ತಂದೆ – ತಾಯಿ ಪ್ರತಿ ಮಗುವಿನ ಅಭಾಜ್ಯ ಅಂಗಗಳು

ಇವರಿಂದ ನಡೆ-ನುಡಿಗಳು ಅನುಕರಣೆಯಿಂದಲೂ, ಅನುವಂಶೀಯತೆಯಿಂದಲೂ ಮಕ್ಕಳಲ್ಲಿ ಅವರ ವ್ಯಕ್ತಿತ್ವ ದ ಮೇಲೆ ಪರಿಣಾಮ ಬಿರುತ್ತದೆ. ಸಮಾಜದಲ್ಲಿ ಸಂಚಲನ ಮಾಡುತ್ತದೆ. ಇಂತಹ ಹಲವು ವಿಶೇಷ, ವಿಭಿನ್ನ ವಿಷಯವಸ್ತುವನ್ನು ಈ ಕೃತಿ ಓದುಗರ ಮುಂದಿಡುತ್ತದೆ.

ತೀರಿಕೊಂಡ ತಮ್ಮ ತಂದೆಯ ನೆನಪನ್ನು‌ ಕೃತಿಯ ಮೂಲಕ‌ ಚಿರಸ್ಥಾಯಿಯಾಗಿಸಿ ಲೇಖರಾದ ಶ್ರೀ ಅರವಿಂದ ಚೊಕ್ಕಾಡಿಯವರು ಈ‌ ಪುಸ್ತಕವನ್ನು ಕನ್ನಡದ ಓದುಗರ ಮಡಿಲಿಗೆ ನೀಡಿದ್ದಾರೆ. ಇದು ಒಂದು‌ ವಿನೂತನ ಕೃತಿ, ಈ ಹೊತ್ತಿಗೆಯನ್ನು ಓದಿದ ಎಲ್ಲಾ ಹಿರಿಯರಿಗೂ ಕಿರಿಯರಿಗೂ ಹಲವು ವಿಚಾರಗಳು ಅವರ ಭಾವನಾತ್ಮಕ ವಲಯವನ್ನು ಚಿಂತನೆಗೆ ಹಚ್ಚುತ್ತವೆ.

ಒಟ್ಟು 61 ಲೇಖನಗಳು ಇಲ್ಲಿ ಓದುಗರಿಗೆ ಕಾಣಸಿಗುತ್ತವೆ. ಪ್ರತಿ ಲೇಖನವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ! ಯಾವ ಲೇಖನ ಅಥವಾ ಯಾವ ಬದುಕು ಇಲ್ಲಿ ಸಾಮ್ಯವಾಗಿ ನೋಡಲಾಗದಿರುವುದೇ ಈ ಕೃತಿಯ ವಿಶಿಷ್ಟತೆ.

ಯಾವ ಬದುಕು ಶಾಪವಲ್ಲ, ಹಾಗೆಯೆ ಯಾವ ಬಾಳು ಹೋರಾಟ ಅಲ್ಲವೇ ಅಲ್ಲ ಎಂಬ ‘ಐಹಿತ್ಯ’ ಈ ಕೃತಿಯ ಸಾರ ಎಂಬಂತೆ ಇಲ್ಲಿನ ಕಥನಗಳು ಇವೆ. “ಸುಖ ಮತ್ತು ದುಃಖ ನಮ್ಮ ಮನಸ್ಸಿನ ಸ್ಥಿತಿ” ಎಂಬ ಬುದ್ದದೇವನ ನುಡಿ ಈ ಕೃತಿಯಲ್ಲಿ ಕಾಣಸಿಗುತ್ತದೆ.

ಮಮತೆ, ಪ್ರೀತಿ, ಛಲ, ವಾತ್ಸಲ್ಯ ನೋವು, ಈರ್ಷೆ, ಬವಣೆ, ಸಂಘರ್ಷ ಎಲ್ಲವು ಈ ಕೃತಿಯಲ್ಲಿ ಹಲವು ಮಜಲುಗಳಾಗಿ ಒಂದೊಂದು ವ್ಯಕ್ತಿತ್ವವನ್ನು ರೂಪಿಸಿವೆ. ಬಾಲ್ಯ, ಊರು, ಕುಟುಂಬ, ಪರಿಸರ ಅನುವಂಶೀಯತೆಯ ಪ್ರಭಾವಳಿ, ಒಂದೆಡೆಯಾದರೆ ಬದುಕಿನ ಅಸಂಗತ ತಿರುವುಗಳು, ಉತ್ತರ ಸಿಗದ ಪ್ರಶ್ನೆಗಳ ಮೌನದ ಪಾಠ ಬಾಳಿಗೆ ಹೊಸ ತಿರುವನ್ನೆ ನೀಡಿ ಬದ್ದತೆ, ಪ್ರಮಾಣಿಕತೆಯ ಮೂಲಕ ಜೀವನದ ಅಲೆಗಳನ್ನು ಎದುರಿಸುವ ಅಗೋಚರ ಬೆಂಬಲವನ್ನು ಹೃದಯಕ್ಕೆ ನೀಡಿ. ಸಮುದಾಯದಲ್ಲಿ ವ್ಯಕ್ತಿತ್ವವನ್ನು ಅನುರಣಿಸಿರುವ ಪರಿ ಓದುಗರನ್ನು ಬೆರಗುಗೊಳಿಸುತ್ತದೆ.

ಈ ಜೀವನಕ್ಕೆ ನಮ್ಮ ಹಿರಿಯರು ಸಹಜವಾಗಿ ಬಂಡಿ ಎನ್ನುವುದು ನಾವೇಲ್ಲಾ ಕೇಳಿ ಬೆಳೆದಿರುವೆವು. ಈ ಬಂಡಿಗೆ ತಂದೆ – ತಾಯಿ ಎಂಬ ಚಕ್ರಗಳು. ಆದರೆ ಪಡೆಯದೆ ಪಡೆದ ಬಾಳ ಗೋಳು ಪಿತೃತ್ವವನ್ನು ನೆನೆಯದಂತೆ ಮಾಡಿದ ಜೋತಿರ್ಮಯ ಅನುಭವ, ಸಂಪ್ರದಾಯದ ತೋಳಲಾಟದಲ್ಲಿ ನಡೆಸಿದ ಈ ಬದುಕಿನೊಂದಿಗೆ ಒಂದು ಸುದೀರ್ಘ ಸಂಭಾಷಣೆ, ನಾಕಾರತ್ಮ ಅನುಭವಗಳು ಸಹ ಮೊನಚಾಗಿ ಬಾಳನ್ನು ಸುಂದರ ಕಲಾಕೃತಿಮಾಡಲು ಅಗತ್ಯ ಎಂಬ ನಿಲುವು. ತಂದೆ ಸತ್ಯ… ತಾಯಿ ನಿತ್ಯ… ನಿಶ್ಚಿತ ಸದಾ ಮಮತೆಯ ಆಗರ, ಕಾಯಕದ ತತ್ವ ಮಾದರಿಯಾಗಿ ತಾಯಿ ಮಕ್ಕಳಲ್ಲಿ ಗತಿಸಿದ ನಂತರವು ಜೀವಂತವಾಗಿರುವ ಚೈತನ್ಯ. ಎದೆಗೆ ಬಿದ್ದ ಅಕ್ಷರಕ್ಕೆ ನೌಕರಿಯ ಪಾರುಪಥ್ಯವಿಲ್ಲದೆ ವಿವಾಹದ ಭಾಗ್ಯ ಒದಗಿಸಿದು. ಕಲಿಕೆಯ ಅದಮ್ಯ ಹಂಬಲದ ಜೊತೆ ತಾಯಿಯ ನಿರ್ಲಕ್ಷ್ಯ ಇದ್ದರೂ ಸಾಹಿತ್ಯದಲ್ಲಿ ಹೆಸರು ಅಳಿಯಂತೆ ಮಾಡಿದ ಆ ಶಕ್ತಿ ಓದುಗರ ಕಣ್ಣಾಲಿಗಳು ಆರ್ದ್ರ ಗೊಳಿಸುತ್ತವೆ. ಅವ್ವ ಎಂಬ ಗಟ್ಟಿ ನೆಲ, ತಾನು ಮಡಿವಂತಿಕೆಯ ಪಾಲಿಸುತ್ತಿದ್ದರು. ತನ್ನ ಮಗನಿಗೆ ಭಾವೈಕ್ಯತೆಯ ಅರಿವನ್ನು ಬೆಳೆಸಿದ ಮಾತೆ, ಮಾತಾಗದ ಮೌನಗಳ ನಡುವೆ ಕಾಡುವ ಅಪ್ಪನ ಅವ್ಯಕ್ತ ಭಾವ ಪ್ರಕಟವಾಗದ ಮಮತೆ ಅಪ್ಪನ ಗೈರಲ್ಲಿ ಅವರ ಕಾವ್ಯಕ್ಕೆ ಮಂತ್ರ ಮುಗ್ದಳಾದ ಮಗಳು, ಹೀಗೆ ಹಲವು ನೋವಿನ ಕುತುಹಲ ಕತೆಗಳು ಓದುಗರ ಚಿತ್ತಪಟದಲ್ಲಿ ನಿಲ್ಲುತ್ತವೆ.



ಬಾಲ್ಯ, ಆಟ, ಪಾಠ, ಅರಿಯದೆ ಪುಟ್ಟ ಮನದಲ್ಲಿ ನುಸುಳಿದ ಆಚಾರ, ಸಂಪ್ರದಾಯ, ಪದ್ದತಿಗಳು ಧಾರ್ಮಿಕ ಕಟ್ಟುಪಾಡುಗಳು ಅನಿರೀಕ್ಷಿತ ಸಾವು, ನೋವುಗಳು ಇವೆಲ್ಲವು ವಿಕಾಸದ ಹಾದಿಯಲ್ಲಿ ಸಾಗುತ್ತಾ ನಮ್ಮೊಳಗಿನ ಬೌದ್ದಿಕತೆಯನ್ನು ಒರೆಗೆ ಹಚ್ಚುತ್ತಲೇ ನಮ್ಮ ಅಸ್ತಿತ್ವ ಸೃಷ್ಟಿಸುವ ಈ ಬದುಕಿನ ಕಲೆಯೇ ಅನನ್ಯ.

ಜೀವನೋತ್ಸಾಹಕ್ಕೆ ಹಲವು ಪರಿಸರ, ವ್ಯಕ್ತಿತ್ವ, ಸಂದರ್ಭಗಳು ಪೂರಕವಾಗಿ, ನಿರಂತರ ಸಮರೋಪಾದಿಯಲ್ಲಿ ಹರಿದು ಬದುಕಿನ ಭಾಗವೇ ಅಗಿ ಪಯಣದ ಹಾದಿ ನಿತ್ಯವು ನೂತನವಾಗಿ ಸಾಗುತ್ತಲೆ ಇರುತ್ತದೆ. ಹೆಣ್ಣಿನ ಅಸೀಮ ಛಲ, ಗಟ್ಟಿತನ ಒಂದಷ್ಟು ಕತೆಗಳಲ್ಲಿ ಪ್ರಧಾನವಾದರೆ ಗಂಡಿನಲ್ಲಿರುವ ಮಾತೃ ಹೃದಯ , ನಿಗೂಢತೆ, ಭಾವಜ್ಞತೆ, ತಲ್ಲಣಗಳು ಮತ್ತೊಂದಷ್ಟು ಕತೆಗಳಲ್ಲಿ ನಾಯಕನಾಗಿ ವಿರಾಜಮಾನವಾಗಿದೆ.

ಒಂದೂಂದು ಪುಟವೂ ಭಾವಪೂರ್ಣ ತನ್ಮಯತೆಯಿಂದ ಓದುಗರನ್ನು ಹಿಡಿದಿಡುತ್ತದೆ.” ಎರಡು ತಲೆಮಾರು” ಕೃತಿ ಕಿರಿಯರು, ಹಿರಿಯರು ಓದಬಹುದಾಗಿದೆ. ಇಲ್ಲಿನ ಕತೆಗಳು ಕಾಲ್ಪನಿಕವಲ್ಲದ , ವ್ಯಕ್ತಿಗತ ಕತೆಗಳು. ಸಾದಾ ಕಾಡುತ್ತಲೆ ಓದುಗರಿಗೆ ಬದುಕಿನ ಬಗ್ಗೆ ಒಂದಷ್ಟು ಧನಾತ್ಮಕತೆಯನ್ನು ಧಾರಾಳವಾಗಿ ರವಾನಿಸುತ್ತದೆ.


  •  ರೇಶ್ಮಾಗುಳೇದಗುಡ್ಡಾಕರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading