ಪದ್ಮಭೂಷಣ ಡಾ.ಬಿ.ಎಂ.ಹೆಗಡೆ ಪುಸ್ತಕ ಪರಿಚಯ



‘ಬೇಕಾದರೆ ಸಮಾಲೋಚನಾ ಶುಲ್ಕ ಹೆಚ್ಚು ತೆಗೆದುಕೊಳ್ಳಿ, ಶಸ್ತ್ರಚಿಕಿತ್ಸೆ ಮಾಡಿ ಅನಾವಶ್ಯಕವಾಗಿ ರೋಗಿಗಳಿಗೆ ತೊಂದರೆ ಮಾಡಬೇಡಿ’ – ಡಾ.ಬಿ.ಎಂ.ಹೆಗಡೆ, ರಘುನಾಥ್ ಕೃಷ್ಣಮಾಚಾರ್ ಅವರ ಲೇಖನಿಯಲ್ಲಿ ಕಲಾಭಾಗ್ವತ್ ಅವರ ರಚಿತ ‘ಪದ್ಮಭೂಷಣ ಡಾ.ಬಿ.ಎಂ.ಹೆಗಡೆ’ ಪುಸ್ತಕ ಪರಿಚಯ, ಮುಂದೆ ಓದಿ…

ಪುಸ್ತಕ : ಪದ್ಮಭೂಷಣ ಡಾ.ಬಿ.ಎಂ.ಹೆಗಡೆ
ಲೇಖಕರು : ಶ್ರೀಮತಿ ಕಲಾಭಾಗ್ವತ್

ಮುಂಬಯಿ ಕನ್ನಡ ಲೋಕ: ಶಿಕ್ಷಣ:  : ಬಹುಮುಖಿ ಪ್ರತಿಭಾವಂತೆ ಕಲಾ ನನ್ನ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ. ಅವರು ಮೊದಲು ವರ್ಷದಲ್ಲಿ ಇರುವಾಗಲೇ ಅವರ ವಿವಿಧ ‌ಮುಖಗಳ‌ ಪರಿಚಯ. ಅದಕ್ಕೆ ಕಿರೀಟವಿಟ್ಟಂತೆ ಅವರು ಅಧ್ಯಯನ ದ ಭಾಗವಾಗಿ ಪ್ರಕಟಿಸಿರುವ ಮೇಲಿನ ಕೃತಿ. ಇದರ ಮೂಲ ಸ್ವರೂಪವನ್ನು ಹಸ್ತಪ್ರತಿಯಲ್ಲಿ ಇರುವಾಗಲೇ ನೋಡುವ ಭಾಗ್ಯವನ್ನು ಅವರು ಒದಗಿಸಿಕೊಟ್ಟಿದ್ದರು.

(ಫೋಟೋ ಕೃಪೆ : google)

ಅವರ ಗುರುಗಳಾದ ಡಾ.‌ ಗಣೇಶ ಉಪಾಧ್ಯರ ಸಲಹೆಯ ಮೇರೆಗೆ ಬಿ.ಎಂ.ಹೆಗಡೆಯವರ ದೀರ್ಘ ಸಂದರ್ಶನ ಮಾಡಿ ಈ ಹೊತ್ತಗೆಯನ್ನು ಸಿದ್ದಪಡಿಸಿ ದ್ದಾರೆ.‌ಕಳೆದವಾರ ಇದನ್ನು ಬಿಡುಗಡೆ ಮಾಡಲಾಯಿತು. ವೈದ್ಯ್ಯೋ ನಾರಾಯಣೊ ಹರಿ: ಎನ್ನುವ ಮಾತೊಂದು ಪ್ರಚಲಿತವಿದೆ. ವೈದ್ಯರನ್ನು ನಾರಾಯಣನ ಜೊತೆಗೆ ಹೋಲಿಸಲಾಗುತ್ತದೆ. ತ್ರಿಮೂರ್ತಿಗಳಲ್ಲಿ ನಾರಾಯಣ ನ ಪಾತ್ರವೆಂದರೆ ‌ಲೋಕದ ಯೋಗಕ್ಷೇಮದ ಪಾಲನೆ. ಆದರೆ ಈ ಮಾತಿಗೆ ತಕ್ಕ ವೈದ್ಯರು ಇರುವುದು ವಿರಳ. ಅಂತಹ ವಿರಳ ವೈದ್ಯರಲ್ಲಿ ಡಾ .ಬಿ.ಎಂ.ಹೆಗಡೆಯವರು ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ ಎನ್ನುವುದನ್ನು ಈ ಕಲಾ ಅವರ ಈ ಪುಸ್ತಕ ಸಾಬೀತು ಪಡಿಸುತ್ತದೆ.

ಲೇಖಕಿ ಕಲಾಭಾಗ್ವತ್ ಅವರೊಂದಿಗೆ ಪದ್ಮಭೂಷಣ ಡಾ.ಬಿ.ಎಂ.ಹೆಗಡೆ ಅವರು  (ಫೋಟೋ ಕೃಪೆ : google)

ಈ ಪುಸ್ತಕದಲ್ಲಿ ಡಾ.ಬಿ.ಎಂ.ಹೆಗಡೆಯವರ ವ್ಯಕ್ತಿತ್ವದ ಹಲವು ಮುಖಗಳು ಅನಾವರಣಗೊಂಡಿವೆ. ಅವುಗಳ ಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ.

  •  ಅವರ ವೈಯಕ್ತಿಕ ಜೀವನದ ವಿವರಗಳು. ಇದರಲ್ಲಿ ಅವರ ಹುಟ್ಟಿದ ಊರು, ತಂದೆ ತಾಯಿ, ಅವರ ಪ್ರಭಾವ. ಅವರ ವಿದ್ಯಾರ್ಥಿ ಜೀವನ. ಉನ್ನತ ಶಿಕ್ಷಣಕ್ಕಾಗಿ ಅವರ ಪರಿಶ್ರಮ ಸಾಧನೆ ಸಿದ್ದಿಗಳನ್ನು ಒಳಗೊಂಡಿದೆ.
  • ಅವರು ವೈದ್ಯರಾಗಿ ಸಲ್ಲಿಸಿದ ಸೇವೆ . ಅದರಲ್ಲಿ ಮುಖ್ಯವಾಗಿ ರೋಗಿಗಳ ಜತೆಗೆ ವೈದ್ಯರು ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಅವರು ವಹಿಸಿದ ಕಾಳಜಿ. ವೈದ್ಯರು ಪ್ರೀತಿ, ದಯೆ ‌,ಕರುಣೆಗಳ ಮೂಲಕ ರೋಗವನ್ನು ಅರ್ಧ ವಾಸಿಮಾಡಬಹುದು ಎಂಬುದು ಅವರು ಕಂಡುಕೊಂಡ ಸತ್ಯ . ಅದನ್ನು ಅವರು ಇತರ ವೈದ್ಯರಲ್ಲಿ ಮೂಡಿಸಲು ಮಾಡಿದ ಪ್ರಯತ್ನ.

ಅವರಿಗೆ ಹೇಳುವ ಕಿವಿ ಮಾತು : “ಬೇಕಾದರೆ ಸಮಾಲೋಚನಾ ಶುಲ್ಕ ಹೆಚ್ಚು ತೆಗೆದುಕೊಳ್ಳಿ, ಶಸ್ತ್ರಚಿಕಿತ್ಸೆಗೆ ಅನಾವಶ್ಯಕವಾಗಿ ರೋಗಗಳನ್ನು ದೂಡಬೇಡಿ ” ಎನ್ನುವಲ್ಲಿ ವ್ಯಕ್ತವಾಗುವ ಅವರ ಕಾಳಜಿ ಅನನ್ಯ.

  • ಸಂಶೋಧನೆ: ಬೆಳ್ಳುಳ್ಳಿ, ತೆಂಗಿನ ಎಣ್ಣಿ ,,ಇವುಗಳ ನ್ನು ಔಷದಿಗಳಾಗಿ ಹೇಗೆ ಬಳಸಬಹುದು ಮತ್ತು ರೋಗಗಳನ್ನು ವಾಸಿಮಾಡಬಹುದು ಎಂದು ಪತ್ತೆ ಮಾಡಿ ಅದನ್ನು ಪಾಶ್ಚಾತ್ಯ ದೇಶಗಳೂ ಒಪ್ಪಿಕೊಳ್ಳುವ ಹಾಗೆ ಮಾಡುವುದರ ಮೂಲಕ ಭಾರತೀಯ ಸಾಮಾನ್ಯ ಪದಾರ್ಥಗಳ ಅಸಾಮಾನ್ಯತೆಯನ್ನು ಎತ್ತಿ ಹಿಡಿಯುತ್ತ ವಿಶ್ವ ಮಾನ್ಯತೆ ತಂದುಕೊಟ್ಟ ಸಾಧನೆ ಅವರದು.ಅವರ ಪಾಲನಾಶಕ್ತಿಯ ನಾಲ್ಕು ಮುಖಗಳು.
  • ಅ) ರೋಗದ ಮೂಲ ಕಾರಣಗಳು: ಬಹುತೇಕ ಜನರಿಗೆ ಮೂಲಭೂತ ಆವಶ್ಯಕತೆಗಳಾದ ಶುದ್ಧವಾದ ನೀರು, ಗಾಳಿ, ಮೂರು ಹೊತ್ತು ಊಟ, ತಲೆಯ ಮೇಲೆ ಮಾಡು ಮತ್ತು ಶೌಚಾಲಯಗಳು ಇನ್ನೂ ದೊರೆಯದಿರುವುದು.
  • ಬ) ಅದನ್ನು ಒದಗಿಸುವುದು ಆಡಳಿತ ವ್ಯವಸ್ಥೆ ಯ ಜವಾಬ್ದಾರಿಯಲ್ಲಿ ವಿಫಲವಾಗಿರುವುದರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಾರೆ‌.
  • ಕ) ಸಾರ್ವಜನಿಕರ ಪಾತ್ರ ಮತ್ತು ಜಾಗೃತಿ ಅತ್ಯಂತ ಅವಶ್ಯ ಎಂಬುದರ ಕಡೆ ಗಮನ ಸೆಳೆಯುತ್ತಾರೆ.
  • ಡ) ಅನಾವಶ್ಯಕ ಔಷಧಗಳ ಉತ್ಪಾದನೆ ಮಾಡಿ ಅದನ್ನು ವೈದ್ಯರ ಮೂಲಕ ಜನರ ಮೇಲೆ ಹೇರುವ ಆ ಉದ್ಯಮದ ಮೇಲೆ ಕಿಡಿಕಾರುತ್ತಾರೆ.

(ಫೋಟೋ ಕೃಪೆ : google)

  • ಭಾರತದ ಪಾರಂಪಾರಿಕ ವೈದ್ಯ ಪದ್ಧತಿಗಳ ಆಳವಾದ ತಿಳಿವಳಿಕೆ ಮತ್ತು ಅವುಗಳನ್ನು ಬಳಸಬಹುದಾದ ವಿಧಾನಗಳನ್ನು ಕುರಿತು ಅವರು ಕೊಡುವ ಸಲಹೆಗಳು ಅವರ ವಿಶಾಲ ಮನೋಧರ್ಮ ಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಅವು ಅತ್ಯಂತ ವೈಜ್ಞಾನಿಕ ಪದ್ದತಿಗಳು ಎಂದು ತೋರಿಸಿಕೊಡುತ್ತಾರೆ.
  • ಶಿಕ್ಷಣ ತಜ್ಞರಾಗಿ ಅವರು ಗಳಿಕೆಯನ್ನು ಧ್ಯೇಯವನ್ನಾಗಿಸಿಕೊಂಡ ನಮ್ಮ ಶಿಕ್ಷಣ ಪದ್ದತಿಯ ದೋಷಗಳನ್ನು ತೋರಿಸುವುದಲ್ಲದೆ ವಿದ್ಯಾರ್ಥಿ ವ್ಯಕ್ತಿತ್ವದ ವಿಕಾಸವನ್ನು ಕೇಂದ್ರವನ್ನಾಗಿಸಿಕೊಂಡ ಶಿಕ್ಷಣ ಕೊಡುವ ಆವಶ್ಯಕತೆಯನ್ನು ಒತ್ತಿಹೇಳುತ್ತಾರೆ. ಇದರಲ್ಲಿ ಸರ್ಕಾರದ ಮತ್ತು ಖಾಸಗಿಯವರ ಪಾತ್ರಕ್ಕೆ ಒತ್ತು ನೀಡುತ್ತಾರೆ. ‌‌‌‌
  • ಹೆಣ್ಣು ಮಕ್ಕಳ ಬಗ್ಗೆ ಅವರಿಗೆ ವಿಶೇಷ ಕಾಳಜಿ. ಗರ್ಭಿಣಿಯರಾದಾಗ ಮಾತ್ರವಲ್ಲ ,ಅವರ ಋತುಸ್ರಾವಕ್ಕೆ ಕಾರಣವನ್ನು ಮತ್ತು ಆಗ ತಂದೆ ತಾಯಿಗಳು ಅವರ ಬಗ್ಗೆ ವಹಿಸಬೇಕಾದ ಕಾಳಜಿ , ಕೊಡಬೇಕಾದ ಪೋಷಕ ಆಹಾರಗಳನ್ನು ತಿಳಿಸಿ ಆಗ ಮಾತ್ರ ಅವರಿಗೆ ಮುಂದೆ ಶಕ್ತಿ ಒದಗಿಬರುತ್ತದೆ ಎಂದು ತಿಳಿಸುವುದು, ಹೆಣ್ಣು ಮಕ್ಕಳಿಗೆ ಹೊಗೆಯಿಲ್ಲದ ಅಡುಗೆಯ ಮನೆಗಳನ್ನು ಒದಗಿಸುವ ಆವಶ್ಯಕತೆಯನ್ನು ಒತ್ತು ಕೊಟ್ಟು ಹೇಳುತ್ತಾರೆ. ಹೊಗೆ ಭರಿತ ಅಡುಗೆ ಮನೆಗಳು ಹಲವು ರೋಗಗಳಿಗೆ ಮೂಲ ಎಂದು ಅದಕ್ಕೆ ಕಾರಣವನ್ನು ಹೇಳುತ್ತಾರೆ.
  • ಎಲ್ಲರಿಗೂ ಸೂಕ್ತವಾದ ಸರಳ ವ್ಯಾಯಾಮವಾದ ನಡಿಗೆಯ ಮಹತ್ವದ ಮನವರಿಕೆ ಮಾಡಿಕೊಟ್ಟಿರುವುದು ಎಲ್ಲರೂ ಅನುಸರಿಸಬಹುದಾದ ಸರಳ ಮಾರ್ಗ ವಾಗಿದೆ. ಸಂದರ್ಶನಲ್ಲಿ ಕಲಾ ಅವರು ಕೇಳುವ ಪ್ರಶ್ನೆಗಳು ಸಾರ್ವಜನಿಕ ಸ್ವಾಸ್ಥ್ಯ ದ ಕುರಿತು ಅವರಿಗೆ ಇರುವ ಕಾಳಜಿಗೆ ನಿದರ್ಶನವಾಗಿರುವಂತೆ ,ಹೆಗಡೆಯವರ ತಿಳಿಸಿ ಹೇಳುವ ಕಾಳಜಿ ಕೂಡ ಪ್ರಕಟವಾಗುತ್ತದೆ .ಹತ್ತು ಹಲವು ರೋಗಿಗಳಿಗೆ ಅವರು ಮನೆಯ ಮದ್ದಿನಲ್ಲೆ ಸರಿಪಡಿಸಲು ಸೂಚಿಸಿರುವುದು, ಜನರು ಅನಾವಶ್ಯಕ ವಾಗಿ ಆಸ್ಪತ್ರೆಗೆ ಹೋಗಿ, ಅಲ್ಲಿ ಹೇಳುವ ವಿವಿಧ ತಪಾಸಣೆಗಳಿಗೆ ಒಳಗಾಗಿ ಹೊಸ ರೋಗಗಳನ್ನು ಕೈಮಾಡಿ ಕರೆದುಕೊಳ್ಳುವ ಅಪಾಯದಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ.



ಕೊನೆಯ ಭಾಗದಲ್ಲಿ ಅವರು ಬರೆದಿರುವ ಹಲವಾರು ಪುಸ್ತಕಗಳ ಮಾಹಿತಿಯನ್ನು ನೀಡಿರುವುದಲ್ಲದೆ, ಅವುಗಳ ಮಹತ್ವವನ್ನು ಪರಿಚಯಿಸಿದ್ದಾರೆ. ಪುಸ್ತಕದಲ್ಲಿ ಅಳವಡಿಸಿದ ಹಲವಾರು ಭಾವಚಿತ್ರಗಳು ಬಿ,ಎಂ.ಹೆಗಡೆಯವರ ಬದುಕಿನ ವಿವಿಧ ಸಾಧನೆ ಗಳನ್ನು ಸಮರ್ಥವಾಗಿ ಸೆರೆಹಿಡಿದಿವೆ. ಇಂತಹ ಮಹತ್ವದ ಪುಸ್ತಕ ರಚಿಸಿದ ಕಲಾಗೆ ಅಭಿನಂದನೆ. ಅವರು ಪುಸ್ತಕ ಕಳುಹಿಸಿ ಇದು ಅಂಬೆಗಾಲಿನ ಪ್ರಯತ್ನ ಎಂದು ವಿನಯವನ್ನು ಮೆರೆದಿದ್ದಾರೆ. ಸಹಜವಾಗಿಯೇ ಕೆಲವು ತಪ್ಪುಗಳು ಉಳಿದುಕೊಂಡಿವೆ.ಇದು ಮೊದಲ ಪುಸ್ತಕವಾದ್ದರಿಂದ ಅವು ಗೌಣ. ಮುಂದೆ ಅವರು ಅವುಗಳನ್ನು ಸರಿಪಡಿಸಿಕೊಂಡು ದಾಪುಗಾಲು ಇಡುತ್ತಾರೆ ಎಂಬ ಭರವಸೆ ನನಗಿದೆ.


  • ರಘುನಾಥ್ ಕೃಷ್ಣಮಾಚಾರ್ (ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading