‘ಆಂಧ್ರ ಸ್ಟೈಲ್ ಪಪ್ಪು’ ಮಾಡುವ ವಿಧಾನ

ಹೆಸರು ಬೆಳೆ ಮತ್ತು ಪಾಲಕ ಹಾಕಿ ಪಪ್ಪು ಮಾಡಿದ್ರೆ ಬಲು ರುಚಿ. ರಾಜು ಅವರ ಕೈ ರುಚಿಯಲ್ಲಿ ‘ಆಂಧ್ರ ಸ್ಟೈಲ್ ಪಪ್ಪು’ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಕಾಗುವ ಸಾಮಗ್ರಿಗಳು :

ಹೆಸರು ಬೆಳೆ – ಸ್ವಲ್ಪ
ಟಮೋಟೋ – ಮೂರು
ಹಸಿಮೆಣಸಿನಕಾಯಿ – ರುಚಿಗೆ ತಕ್ಕಷ್ಟು
ಖಾರದ ಪುಡಿ – ಸ್ವಲ್ಪ
ಸಾಸಿವೆ – ಸ್ವಲ್ಪ
ಜೀರಿಗೆ – ಸ್ವಲ್ಪ
ಬೆಳ್ಳುಳ್ಳಿ – ಸ್ವಲ್ಪ
ಕರಿಬೇವು – ಸ್ವಲ್ಪ

ಮೊದ್ಲು ಹೆಸರು ಬೆಳೆಯನ್ನು ತೊಳೆದಿಟ್ಕೊಂಡು ಅದ್ಕೇ ಒಂದೆರಡು ಮೂರು ಟಮೋಟೋ, ಹಸಿಮೆಣಸಿನಕಾಯಿ ಕಟ್ ಮಾಡಿ, ಒಂದ ಚಮಚ ಹರಿಸಿಣ ಪುಡಿ ಕುಕ್ಕರನಲ್ಲಿ ಎರಡ್ ವಿಜಲ್ ಹೊಡ್ಸಿ.

ಒಂದು ಪಾತ್ರೆಯಲ್ಲಿ ಚೂರು ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಹಾಕಿ, ಅದರ ಮೇಲೆ ಒಣಗಿದ ಮೆಣಸಿನಕಾಯಿ, ಒಂದ ಬೆಳ್ಳುಳ್ಳಿ ಚಚ್ಚಿ ಬಿಸಾಕಿ. ಕಟ್ಮಾಡಿಟ್ಟ ಈರುಳ್ಳಿನೂ ಹಾಕಿ. ಕರಿ ಬೇವಾಕಿ ಹೊಂಬಣ್ಣ ಬರ್ತಿದ್ದಂಗೆ ಚೂರು, ಧನಿಯಾ ಎರಡು ಚಮಚ ಖಾರದ ಪುಡಿ ಸೇರಿಸಿ. ಮೇಲೊಂದಷ್ಟು ಇಂಗು ಹಾಕಿ, ರುಚಿಗೆಷ್ಟು ಬೇಕೋ ಅಷ್ಟು ಉಪ್ಪು ಹಾಕಿ. ಕತ್ತರಿಸಿದ ಪಾಲಕ್ ಹಾಕಿ ಒಂದ್ಸಲ ಮೊಗ್ಚಿ ಹಾಕಿ. ಒಂದೆರಡು ನಿಮಿಷ ಬಿಟ್ಟು ಕುಕ್ಕರಲ್ಲಿ ಕುದ್ದಿರೋದ್ನೆಲ್ಲಾ ಪಾತ್ರೆಗೆ  ಸುರಿದು ಒಂದ ಕುದಿ ಕುದಿಸಿ, ಮೇಲೆ ಕೊತ್ತಂಬರಿ ಕತ್ತರಿಸಿ ಬಿಸಾಕಿ.

ಬೇಕನಿಸಿದ್ರೇ‌ ನಿಂಬೆ ಹುಳಿ ಹಿಂಡಿ. ಅನ್ನ ಚಪಾತಿ ಮುದ್ದೆ ಜೊತೆ ಬಾಯ್ ಚಪ್ಪರಿಸಿ…


  • ರಾಜು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading