ರಾಜಮಂಡ್ರಿ ಕಾರಾಗ್ರಹದಲ್ಲಿ ಈ ಇಬ್ಬರು ಲೇಖಕರು



ಅಪರಾಧ ಮಾಡಿದವನಿಗೆ ಜೈಲು, ಅಪರಾಧವೇ ಮಾಡದೇ ಜೈಲಿನ ಅನುಭವವನುಂಡು ಸಂತೋಷದಿಂದ ಹೊರಬಂದ ಈ ಜೋಡಿ ಬೇರ್ಯಾರು ಅಲ್ಲ ಖ್ಯಾತ ಲೇಖಕರಾದ ಡಾ.ಸ್ವಾಮಿ ಎಚ್ ಆರ್ ಮತ್ತು ಕೇಶವ ಹಂದ್ರಾಳ ಅವರು,ರಾಜಮಂಡ್ರಿ ಕಾರಾಗ್ರಹದ ಸುತ್ತ, ಮುಂದೆ ಓದಿ…

ನೀರು ಕುಡಿದು ಮಲಗಿದ ನಮಗೆ ಎಚ್ಚರವಾಗಿದ್ದು ಹಿಮ ತುಂಬಿದ ರೈಲ್ ಸೂರ್ಯನ ದರ್ಶನವಾದಾಗ, ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂ ಬೆಟ್ಟದ ತಪ್ಪಲಿನ ನದಿ ದಡದಲ್ಲಿ,ಆಟೋನಿಲ್ಲಿಸಿ ಚಾಲಕನನ್ನು ಕೇಳಿದಾಗ ಇದು ಪಂಪಾನದಿ ಸರ್ ಎಂದಾಗ ಶಬರಿಮಲೆಯಲ್ಲಿ ಇರೋದು ಇದೇ ಹೆಸರಿನ ನದಿ !ದೇಶದ ನೀರೆಲ್ಲ ಗಂಗೆಯಂತೆ ಇದೂ ಕೂಡ ಎಂದುಕೊಂಡು, ಅಲ್ಲಿಂದ ನೇರ ನಮ್ಮ ಪ್ರಯಾಣ #ರಾಜಮಂಡ್ರಿಯ ಕಾರಾಗ್ರಹಕ್ಕೆ ಅಂದೇ ಬೇಟಿ ನೀಡಬೇಕೆಂದು ಬಸ್ ಹಿಡಿದು ಬಂದು ತಲುಪಿದೆವು.

ಹಂದ್ರಾಳರ ಗೆಳೆಯರಾದ ಶ್ರೀ ಕೃಷ್ಣರಾಜ್ ನಿವೃತ್ತ I P S ಅಧಿಕಾರಿಗಳ ಪೋನ್ ಕರೆಯ ಮೇರೆಗೆ ಮೋಬೈಲ್, ಹ್ಯಾಂಡ್ ಬ್ಯಾಗ್ ಹೊರತು ಪಡಿಸಿ ಒಳಬಿಟ್ಟರು, ಡಚ್ಚರ ಕಾಲದ ಕಾರಾಗೃಹವನ್ನು ಅಮೂಲಾಗ್ರವಾಗಿ ಬದಲಾವಣೆ ಮಾಡಿದ ಶ್ರೇಯಸ್ಸು ನಿಷ್ಠಾವಂತ , ಪ್ರಾಮಾಣಿಕ ಅಧಿಕಾರಿಯನ್ನು ಅಲ್ಲಿನ ಜೈಲರ್ಗಳು ನೆನದದ್ದು ಕರ್ನಾಟಕಕ್ಕೆ ಹೆಮ್ಮೆಎನಿಸಿತು.ಅಲ್ಲಿನ ಊಟ, ತಿಂಡಿ, ಸ್ವಚ್ಛತೆಯನ್ನು ನೋಡಿ ಇದು” ಸೆರೆಮನೆಯಲ್ಲ ಅರಮನೆ “ಎಂದು ಸಹಪಾಠಿ ಯಾಗಿದ್ದ ಕೃಷ್ಣರಾಜರನ್ನು ಹೃದಯ ತುಂಬಿ ಹಂದ್ರಾಳ ಹೋಗಳಿದರು.

ಶ್ರೀ ಕೃಷ್ಣರಾಜ್ ನಿವೃತ್ತ I P S ಅಧಿಕಾರಿ

ಸೆರೆಮನೆಯಲ್ಲಿರುವವರ ಆಸಕ್ತಿಯನ್ನು ಗುರುತಿಸಿ, ಕೌಶಲ್ಯಕ್ಕೆ ತಕ್ಕಂತೆ , ಕಾರ್ಪೆಂಟರಿ, ಫ್ಯಾಬ್ರಿಕ್, ಬಟ್ಟೆ ನೂಲುವ,ನೆಯ್ಯುವ, ತೆಂಗಿನ ನಾರನ್ನು ಹೆಣೆಯುವವರಿಗೆ ದಿನದಕೂಲಿ ಅವರ ಖಾತೆಗೆ ಜಮಾವಾಗುವುದು, ತರಕಾರಿ ಕೈತೋಟ ನೋಡಿ ಸುಂದರ ಉದ್ಯಾನವನದಲ್ಲಿ ನಡೆದಂತಹ ಅನುಭವವಾಯಿತು. ಬಯಲು ರಂಗಮಂದಿರ, ಶಿಲ್ಪ ಕಲೆಗಳು, ಮಸ್ಜಿದ್, ಎಲ್ಲವೂಗಳಮೇಲೆ ಅವರದೇ ಶ್ರಮದ ಕುರುಹುಗಳು ಅವರ ಕೌಶಲ್ಯಕ್ಕೆ ಸಾಕ್ಷಿಯಾಗಿದ್ದವ.

ಓದುವವರಿಗೆ ಶಿಕ್ಷಣ,ಸುಸಜ್ಜಿತ ಗ್ರಂಥಾಲಯ, ಕ್ರೀಡೆ ನಮ್ಮ ವಿಶ್ವವಿದ್ಯಾಲಯಗಳನ್ನು ನಾಚಿಸುವಂತ್ತಿತ್ತು ವಿಶೇಷವೆಂದರೆ ಖೈದಿಗಳ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಡೆಯುತ್ತಿರುವುದು…. ತಿರ್ಮಾನವಾಗದ ಹದಿಹರೆಯದ ಕಂದಮ್ಮಗಳು ,ಶಿಕ್ಷೆ ಅನುಭವಿಸುತ್ತಿರುವ , ವಯೊವೃದ್ದರು , ನಮ್ಮನ್ನು ಕಂಡು ವಿನಮ್ರವಾಗಿ ಕೈಮುಗಿಯುದ್ದರು.

ಮುಗ್ಧರನ್ನು ಕಂಡು ಸಿನಿಮಾಗಳಲ್ಲಿ ನೋಡುವ ಜೈಲು, ಖೈದಿಗಳ ಕ್ರೌರ್ಯ ದೃಶ್ಯಗಳನ್ನು ತಲೆಯಲ್ಲಿ ತುಂಬಿಕೊಂಡು ಹೋಗಿದ್ದ ನನಗೆ ನಿರಾಸೆಯಾಗಿದ್ದಂತ್ತು ಸತ್ಯ..ನಾನು ಎಣಿಸಿದಂತೆ ಬಹುಪಾಲು ಅಪರಾಧಿಗಳು ದಲಿತರೆ ಎಂದು ತಿಳಿಯಿತು. ಮಾಜಿ ಅಪರಾಧಿ ಬುಡಕಟ್ಟಿನವನಾದ ನಾನು ಕುತೂಹಲದಿಂದಲೇ ಕೇಳಿದ್ದೆ. ನಾವು ಒಳ ಹೋದಾಗ ಗೌರವದಿಂದ ಕಂಡು ನಮಗಾಗಿ ಟೀ ತರಲು ಸೂಚಿಸಿದ ಜೈಲರ್ ಎದುರಿಗೆ ಕುಳಿತಿದ್ದ ನಮ್ಮ ಮುಂದೆ ತನಗೆ ಮಾತ್ರ ಬಂದ ಊಟವನ್ನು ತಿನ್ನಲು ಶುರುಮಾಡಿದರು. ನಮಗೇನು ಹಸಿವಿರಲಿಲ್ಲ ಆದರೂ ನಾನು ಕೇಳಿಯೇಬಿಟ್ಟೆ ‘ಏನ್ ಸಾರ್ ಇಷ್ಟು ತಡವಾಗಿ ಊಟ ಮಾಡುತ್ತಿದ್ದೀರ?’ ಎಂದು. ಆಗಲೆ ನನಗೆ ತಿಳಿದಿದ್ದು , ಖೈದಿಗಳಿಗೆ ಸಂಜೆ 6 ಗಂಟೆಯೊಳಗೆ ಊಟ ಸರಬರಾಜಾಗಬೇಕು. ಖೈದಿಗಳೇ ಮಾಡಿದ ಅಡಿಗೆಯಾದರೂ ಮೊದಲು ಜೈಲರ್ ಆಹಾರದ ರುಚಿ ನೋಡಿದ ನಂತರವೇ ಅವರಿಗೆ ಬಡಿಸಬೇಕೆಂಬ ನಿಯಮ, ಆಗಾಗಿ ಅವರಿಗೆ ರುಚಿ ನೋಡಲಷ್ಟೆ ಊಟ ತಂದಿದ್ದೆಂಬುದು ತಿಳಿದದ್ದು …

ಸಮಯವಾಯಿತು ಎಂದು ಹೊರಬರುವಾಗ ಉದ್ಘಾಟನೆಗಾಗಿ ಕಾಯುತ್ತಿದ್ದ ಸುಸಜ್ಜಿತ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡವನ್ನು ತೋರಿಸಿ ಬೀಳ್ಕೊಟ್ಟರು… ಖೈದಿಗಳೇ ನೆಯ್ಯಿದಿದ್ದ ಬೆಡ್ಶೀಟ್, ಟವೆಲ್ ಕೊಂಡುಕೊಟ್ಟ ರೆಡ್ಡಿ ಬರುವಾಗ ಜೈಲಿನಲ್ಲಿರುವ ಮೂರು ಧರ್ಮಗಳಿದ್ದ ಲಾಂಛನದ ಶಿಲ್ಪ ಚಿತ್ರದ ಫೋಟೋ ಕಳುಹಿಸಿ ಕೊಡಿ ಎಂದು ಜೈಲರ್ಗೆ ರಿಕ್ವೆಸ್ಟ್ ಮಾಡಿದ್ದು… ಸೂಪರ್…

  • ಡಾ.ಸ್ವಾಮಿ ಎಚ್ ಆರ್ (ಹಿರಿಯ ಸಾಹಿತಿಗಳು, ಲೇಖಕರು, ಬರಹಗಾರರು )

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading