ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ಮನೆ ಸುತ್ತ



ಅಭಿನಯಸರಸ್ವತಿ, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಬಿ ಸರೋಜಾ ದೇವಿ ಇವರ ಹುಟ್ಟೂರು ಚನ್ನಪಟ್ಟಣ ತಾಲ್ಲೂಕಿನ ದಶಾವಾರ ಎಂದು ಎಷ್ಟೋ ಜನರಿಗೆ ತಿಳಿದಿಲ್ಲ. ಅವರ ಮನೆ ಕುರಿತು  ಡಾ.ಸ್ವಾಮಿ ಎಚ್ ಆರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ…

ಬೆಳಗಿನ ತಿಂಡಿಗೆಂದು ಹೋಗುವ ಹಾದಿಯಲ್ಲಿ ಅವರ ಹೆಸರಿರುವ ಮನೆಯೊಂದನ್ನು ಗೆಳಯರಾದ ರೆಡ್ಡಿ, ಸ್ವಾಮಿ ಆನಂದ, ತೋರಿಸಿ ಹೇಳಿದರು … ಊರಿಗೆ ಬಂದು ಗೆಳೆಯ ರೂಕ್ಕೋಜಿ ಪ್ರೀತಿಯಿಂದ ಕೊಟ್ಟಿರುವ ಡಾ.ರಾಜಕುಮಾರ್ ಸಮಗ್ರ ಚರಿತ್ರೆಯನ್ನು ತಿರುಗಿಸಿದಾಗ ..ಸಿಕ್ಕ ಮಾಹಿತಿ… ತಂದೆ ಬೈರಪ್ಪ ತಾಯಿ ರುದ್ರಮ್ಮ, ಸರೋಜಾದೇವಿಯವರು ನಾಲ್ಕನೆ ಹೆಣ್ಣುಮಗು ಬಡತನದ ಕಾರಣಕ್ಕೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದು ನೆಲೆಸಿದರು.

(`ಡಾ.ರಾಜಕುಮಾರ್ ಸಮಗ್ರ ಚರಿತ್ರೆ’ ಕೃತಿ ಲೇಖಕರಾದ ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ)

ಫೋಟೋ ಕೃಪೆ : facebook

ಇವರ ಮೊದಲ ಚಿತ್ರ ಶ್ರೀ ರಾಮಪೂಜಾ, ಹೊನ್ನಪ್ಪ ಭಾಗವತರು ಇವರ ಚೆಲುವು , ಪ್ರತಿಭೆಯನ್ನು ಕಂಡು ಮಹಾಕವಿ ಕಾಳಿದಾಸ ಚಿತ್ರದಲ್ಲಿ ನಾಯಕಿ ಪಾತ್ರ ನೀಡಿದರು.ಈ ಚಿತ್ರದಲ್ಲಿನ ಅಭಿನಯ ಇವರನ್ನು ಉದ್ಯಮದಲ್ಲಿ ನೆಲೆನಿಲ್ಲಿಸಿತು. ಇವರು ಕನ್ನಡವಲ್ಲದೆ ತೆಲುಗು, ತಮಿಳು, ಹಿಂದಿಯ ಚಿತ್ರಗಳಲ್ಲೂ ನಾಯಕಿ ಆಗಿ ಬೆಳಗಿದವರು.

ಇವರು ಕನ್ನಡದಲ್ಲಿ ಅಭಿನಯಿಸಿರುವ ಸಂಖ್ಯೆ 50 ಕ್ಕೂ ಹೆಚ್ಚು. ರಾಜಕುಮಾರ್ ಜೊತೆ 11 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿನ ಅಭಿನಯ ಮರೆಯಲಾಗದಂಥಾದ್ದು. ರಾಜಕುಮಾರ್ ಅಭಿನಯಿಸಬೇಕಾಗಿದ್ದ, ಕನ್ನಡದ ಮೊದಲ ವರ್ಣಚಿತ್ರ ‘ಪು ಪಿತೂರಿ’ಯಿಂದ ಕೈತಪ್ಪಿದ್ದು ಇತಿಹಾಸ.

ಆದರೆ ಮೊದಲ ವರ್ಣಚಿತ್ರ “ಅಮರಶಿಲ್ಪಿ ಜಕಣಾಚಾರಿ”ಯ ನಾಯಕಿ ಪಾತ್ರದಲ್ಲಿ ಅಭಿನಯಸಿದ್ದು, ಸರೋಜಾದೇವಿಯವರ ಹೆಗ್ಗಳಿಕೆ, ಮಾಹಿತಿಗಾಗಿ ಧನ್ಯ ರುಕ್ಕಾ…….ಅವರ ಊರ ಬಿಸಿ ಬಿಸಿ ಇಡ್ಲಿ ಚಿತ್ರಾನ್ನ ,ಬೆಲ್ಲದ ಟೀ ಪರಿಚಯಿಸಿದ ಗೆಳೆಯರಾದ ಗುರುಲಿಂಗಪ್ಪ ಮರೆಯಲಾಗದ …ಸವಿ.


  • ಡಾ.ಸ್ವಾಮಿ ಎಚ್ ಆರ್ (ಹಿರಿಯ ಸಾಹಿತಿಗಳು, ಲೇಖಕರು, ಬರಹಗಾರರು )

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading