‘ಓ ಗೆಳತಿ’ ಕವನ – ಸಿದ್ದು ಚಲವಾದಿ



ಯುವಕವಿ ಸಿದ್ದು ಚಲವಾದಿ ಅವರು ‘ನಾಯಿ ಗುತ್ತಿ’ ಎನ್ನುವ ಕಾವ್ಯನಾಮದಡಿಯಲ್ಲಿ ಅವರ ಗೆಳತಿಗಾಗಿ ಬರೆದ ಸುಂದರ ಕವನವನ್ನು ಓದುಗರ ಮುಂದಿಟ್ಟಿದ್ದಾರೆ,  ತಪ್ಪದೆ ಓದಿ ಮತ್ತು ಪ್ರೋತ್ಸಾಹಿಸಿ…

ಈ ಹುಣ್ಣಿಮೆಯ ತಂಗಾಳಿಯಲಿ
ಮುಂಗುರುಳು ಹಾರಿ ಹಾರಿ
ಕೊಂದು ಹಾಕುವ ಮುನ್ನ
ಹಾಗೆ ಸುಮ್ಮನೆ

ವಿನಾ ಕಾರಣ, ಪ್ರೀತಿಯಿಂದ
ಜಡೆ ಹೆಣೆದು ಬಿಡುವೆ ಗೆಳತಿ

***

ಕೊನೆಗೂ ನೋಡದೆ
ಹೋರಟು ಹೋದವಳು

ಸರಿ
ಮತ್ತೊಮ್ಮೆ ಬರುವಾಗ
ನಿಮ್ಮ ಗೆಳತಿಗೆ ಹೇಳು

ಹೂಗುಚ್ಚ ಕೊಡದೆ
ಮಾತನಾಡದೆ ಮೊನ್ನೆಯಂತೆ
ನಿನ್ನನ್ನು ನೋಡುತ್ತಾ ಕಳೆದೊಗುವೆ.

ಚೌರಸ್ತಾ ದಾಟಿದ ಮೇಲೆ ನಿನ್ನ ಮನೆ
ಐದಾರು ದಾರಿಗಳು,
ನೀನು ಮಾಮೂಲಿ‌ ದಾರಿಯಲಿ ಬಾ

ಅಲ್ಲಿ ನಿನ್ನಷ್ಟು ಸುಂದರವಲ್ಲದ ಗುಲಾಬಿ ಗಿಡ
ನಿನ್ನ ಬೆವರಷ್ಟು ಸುಗಂಧವಿಲ್ಲದ ಮಲ್ಲಿಗೆ ಬಳ್ಳಿ
ಸಾವಿಲ್ಲದ ಪ್ರೀತಿಯ ಸಂತರ ಗೋರಿಯಿದೆ.

ನಾಳೆ ಬಂದಾಗ
ಒಮ್ಮೆ ತಿರುಗಿ ನೋಡು ಗೆಳತಿ
ಮತ್ತಿಷ್ಟು ವರ್ಷ ನೆನೆದು ತೋಚಿದ್ದು
ಗೀಚಬಹುದು


  • ಸಿದ್ದು ಚಲವಾದಿ (ಯುವ ಕವಿ)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading