ದಾಸವಾಳದ ಹೂವಿನ ಜ್ಯೂಸ್

ಬೇಸಿಗೆ ಬಂದ್ರೆ ದಿನಕ್ಕೊಂದು ಜ್ಯೂಸ್ ಕೈಯಲ್ಲಿರಬೇಕು…ಆಗಲೇ ಹೊಟ್ಟೆ ಸಂತೋಷಪಡುವುದು. ಜ್ಯೋತಿಲಕ್ಷ್ಮಿ ಶೆಟ್ಟಿಗಾರ್ ಅವರು ವಿಭಿನ್ನ ಬಗೆಯ ಜ್ಯೂಸ್ ನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮಾಡಿ ಕುಡಿದು ಹೇಳಿ…

ಅಬ್ಬಾ ಎಂಥ ಬೇಸಿಗೆ ಬಿರುಬಿಸಿಲು.. ಸಮಾಧಾನವಾಗಲೊಲ್ಲದು ಜೀವ ತಂಪಾಗದ ಒಡಲು…. ಈ ಸಮಯದಲ್ಲಿ ಮನೆಗೆ ಮದುವೆ, ಮುಂಜಿ ಮುಂತಾದ ಆಮಂತ್ರಣ ನೀಡಲು ಬರುವ ನೆಂಟರಿಗೆ ಚಾ, ಕಾಫಿ ಕೊಡಲು ಸಾಧ್ಯವಾ?.

ರಾಗಿ, ಎಳ್ಳು, ಉದ್ದು, ಹೆಸರು, ನಿಂಬೆ ಜ್ಯೂಸುಗಳನ್ನೆಲ್ಲಾ ದಿನಕ್ಕೊಂದರಂತೆ ಮಾಡಿ ಮಾಡಿ ಫ್ರಿಡ್ಜ್ ನಲ್ಲಿಡೋದು ನಾನು. ಅದಕ್ಕೊಂದು ಹೊಸ ಸೇರ್ಪಡೆ ದಾಸವಾಳದ ಹೂವಿನ ಜ್ಯೂಸ್.

ಏನು… ಏನು… ಅಂತ ಕಣ್ಣರಳಿಸಬೇಡಿ, ಅದೇ ದಾಸವಾಳ ಹೂವಿನ ಜ್ಯೂಸ್.

ಬೇಕಾಗುವ ಸಾಮಾನು ಏನು ಗೊತ್ತಾ :

ಕೆಂಪು ದಾಸವಾಳ – ಸ್ವಲ್ಪ
ಬೆಲ್ಲ – ರುಚಿಗೆ ತಕ್ಕಸ್ಟು
ಕಾಳುಮೆಣಸಿನ ಪುಡಿ – ರುಚಿಗೆ ತಕ್ಕಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಶಿಯಾ ಸೀಡ್ಸ್ – ಸ್ವಲ್ಪ
ಲಿಂಬೆ ರಸ – ಸ್ವಲ್ಪ

ಮಾಡೋದು ಹೇಗೆ ಗೊತ್ತಾ ?

ಈ ಸಮಯದಲ್ಲಿ ಸಿಕ್ಕಾಪಟ್ಟೆ ಅರಳುವ ಒಂದಷ್ಟು ಕೆಂಪು ದಾಸವಾಳ ಹೂಗಳನ್ನು ತಂದು ಎರಡು ಲೀಟರ್ ನೀರಿಗೆ ಹಾಕಿ ಕುದಿಸಿ. ಕುದಿಯುವಾಗ ಬೆಲ್ಲ (ನಮ್ಮನೆ ಸಕ್ಕರೆ ನಿಷಿದ್ಧ) ಅರ್ಧ ಚಮಚ ಕಾಳುಮೆಣಸಿನ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹತ್ತು ನಿಮಿಷ ಕುದಿಸಿ ಇಳಿಸಿದ ನಂತರ ಇದ್ದರೆ ನೆನೆಸಿಟ್ಟ ಶಿಯಾ ಸೀಡ್ಸ್ ಹಾಕಬಹುದು. ಒಂದು ಲಿಂಬೆ ಹಿಂಡೋದು ಮರೀಬೇಡಿ.

ಈಗ ನೋಡಲು ಆಕರ್ಷಕವಾದ ಕುಡಿಯಲು ತಂಪಾದ ಆರೋಗ್ಯಕರ ದಾಸವಾಳ ಹೂವಿನ ಜ್ಯೂಸ್ ರೆಡಿ.


  • ಜ್ಯೋತಿಲಕ್ಷ್ಮಿ ಶೆಟ್ಟಿಗಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading