ಜಪಾನಿನ ‘ರೆಸ್ಟೋರೆಂಟ್ ಆಫ್ ಮಿಸ್ಟೇಕನ್ ಆರ್ಡರ್’ ವಿಶೇಷತೆ ಏನು ಅಂದರೆ ಮಾನವೀಯ ಮೌಲ್ಯ ಸಾರುವ ಹೋಟೆಲ್ ಅದು. ಅಲ್ಲಿ ಮುದು ಮುದುಕ – ಮುದು ಮುದುಕಿಯರು ಸಪ್ಲೈಯರುಗಳು. ಇದರ ಕುರಿತು ಇನ್ನಷ್ಟು ವಿಷಯವನ್ನು ಪ್ರೊ. ರೂಪೇಶ್ ಪುತ್ತೂರು ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ ಮತ್ತು ತಪ್ಪದೆ ಶೇರ್ ಮಾಡಿ..
“ಸಾರ್… ನಾನು 2009ರ ನಿಮ್ಮ ಸ್ಟೂಡೆಂಟ್. ನನ್ನ ಮಗಳಿಗೆ ಈವಾಗ ನಾಲ್ಕು ವಯಸ್ಸು ಅವಳಿಗೆ ನಿಮ್ಮ ಆಶೀರ್ವಾದ ಬೇಕು… ಲ್ಯಾಬ್ ನಲ್ಲಿ ರೆಕಾರ್ಡ್ ಸರಿಯಾಗಿ ಬರೆಯದಿದ್ದಕ್ಕೆ ನನ್ನ ಬೈದವರು ನೀವು. ಆ ದಿನದ ನಂತರ ನಾನು ತುಂಬಾ ಬದಲಾದೆ, ಡಾಕ್ಟರ್ ಆದೆ. ನಿಮ್ಮ ಬಗ್ಗೆ ನನ್ನ ಗಂಡನಲ್ಲೂ ಹೇಳಿದ್ದೆ ಅವರಿಗೂ ನಿಮ್ಮನ್ನು ನೋಡಬೇಕು…” ಹಿಂಗೆ ಹೇಳಿದವಳು ನನ್ನ ವಿದ್ಯಾರ್ಥಿನಿ. ನಂತರ ಅವಳ ಹೆಸರು ಶೋಭಿತ ಎಂದು ಗೊತ್ತಾಯಿತು. ಯಾಕೆಂದರೆ ನಾನು ನನ್ನ ಯಾವ ವಿದ್ಯಾರ್ಥಿಗಳ ಹೆಸರೂ ನೆನಪಿಟ್ಟುಕೊಳ್ಳದವ.
ಕೊನೆಗೆ ಅವಳನ್ನು ಭೇಟಿಯಾಗಿ ಅವಳ ಮುದ್ದು ಮಗಳ ಮೃದು ಹಣೆಗೆ ನಾನೊಂದು ಚುಂಬನ ಕೊಟ್ಟೆ. ಆಶೀರ್ವಾದ ಕೊಡಲು ನಾನೇನೂ ಅನುಗ್ರಹಿತನಲ್ಲ ಎಂದು ಅವರಿಬ್ಬರಿಗೂ ಮನವರಿಕೆ ಮಾಡಲು ಹೋಗಿ ಸೋತೆ….!!!!
ಫೋಟೋ ಕೃಪೆ : google
ಹೊರಡುವಾಗ ” ಸಾರ್ … ನೀವು ಜಪಾನಿಗೆ ಒಂದ್ಸಲ ಬರಬೇಕು.” ಅಂದ್ರು.
ನಾನು ಅವಸರದಿ ಕೇಳಿದೆ ” ಈ ಜಪಾನಿನ ರೆಸ್ಟೋರೆಂಟ್ ಆಫ್ ಮಿಸ್ಟೇಕನ್ ಆರ್ಡರ್ ಎಂಬ ಹೋಟೆಲಿನ ಬಗ್ಗೆ ನಿಮಗೇನಾದರೂ ಗೊತ್ತೇ!!!?” ಎಂದೆ.
ಅವರಿಬ್ಬರು ಆ ಹೋಟೇಲಿನ ಬಗ್ಗೆ ಸಂತೋಷದಿಂದ ವಿವರಿಸಿದರು…
ಅದೊಂದು ಅದ್ಭುತವಾದ ಮಾನವೀಯ ಮೌಲ್ಯ ಸಾರುವ ಹೋಟೆಲ್. ಅಲ್ಲಿ ಮುದು ಮುದುಕ – ಮುದು ಮುದುಕಿಯರು ಸಪ್ಲೈಯರುಗಳು. ಅವರೆಲ್ಲಾ ಡಿಮೆನ್ಶಿಯ ಬಾದಿತರು.(ಡಿಮೆನ್ಶಿಯ ಅಂದರೆ ಜ್ಞಾಪಕ ಶಕ್ತಿ ಕಳೆದುಕೊಂಡವರು, ಭಾಷೆ ಪ್ರಾಯಶಃ ಮರೆಯುತ್ತಿರುವವರು,…..ಹಲವು ಮರೆವು ಹೊಂದಿದವರು)
ಅವರಲ್ಲಿ ನೀವು ದೋಸೆ ಕೇಳಿದರೆ ಸ್ವಲ್ಪ ಹೊತ್ತಿನಲ್ಲಿ ಊಟ ಅಥವಾ ಕಾಫಿ ಅಥವಾ ನೀವು ಹೇಳದೇ ಇರೋದನ್ನು ತಂದುಕೊಡುತ್ತಾರೆ. ಅಥವಾ ನೀವು ಹೇಳಿದುದನ್ನು ಇನ್ನೊಂದು ಟೇಬಲಿಗೆ ತಂದು ಕೊಡುತ್ತಾರೆ. ಬಿಲ್ ಕೂಡಾ …..
ಫೋಟೋ ಕೃಪೆ : google
ಆದರೆ ಅಲ್ಲಿ ಬರುವ ಗ್ರಾಹಕರು ತುಂಬಾ ಕ್ಷಮೆ ತಾಳ್ಮೆ ಹೊತ್ತವರು. ಕ್ಷಮೆ ತಾಳ್ಮೆ ಇಲ್ಲದ ಅರಿಯದೆ ಹೊಸದಾಗಿ ಹೋದವರಿಗೆ ಆ ವಾತಾವರಣ ಹಿರಿಯರ ಬಗ್ಗೆ ಗೌರವ ಹೊಂದುವ ಪರಿಪಾಠ ಹೇಳಿಕೊಡುತ್ತದೆ. ಅಲ್ಲಿ ಸೇರಿದ ಗ್ರಾಹಕರು, ಈ ಹಿರಿಯ ಸಪ್ಲೈಯರುಗಳ ಡಿಮೆನ್ಶಿಯ ವನ್ನು ನಗು ನಗುತ್ತಾ ಸಹಿಸಿ, ತಮ್ಮ ಆರ್ಡರನ್ನು ಬೇರೆ ಟೇಬಲಿನಲ್ಲಿಟ್ಟರೆ, ಅಲ್ಲಿಂದ ತಮ್ಮ ಟೇಬಲಿಗೆ ತಂದು ಇಟ್ಟು ಸಹಕರಿಸುವ ಅದಕ್ಕೆ ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ. , ತಮ್ಮ ಬಿಲ್ಲು ಇಲ್ಲಿ ಬರಲಿ ಎಂದು ಕೂಗಿ ಹಿರಿಯರಿಗೆ ಸಹಕರಿಸುವುದು ಕಂಡಾಗ…. ಮನುಷ್ಯ ಜೀವನ ಎಷ್ಟು ಸುಂದರ…… ಮರೆತು ಹುಟ್ಟಿ…. ಮರೆತು ಸಾಯುವ ನಡುವೆ ನೆನಪು ಮಾಡುವುದನ್ನು ಬಿಟ್ಟು ಹೋಗಬೇಕಾದುದು ಸುಖವಾಗಿರಬೇಕು ಎಂಬ ನೀತಿ ಈ ಹೋಟೇಲು ಹೇಳುತ್ತದೆ.
ಹೀಗೆ ಡಿಮೆನ್ಶಿಯ ಬಾದಿತ ಹಿರಿಯರು ಮಾಡುವುದನ್ನು ಚಪ್ಪಾಳೆ ಹೊಡೆದು ಸ್ವಾಗತಿಸುವ ಗ್ರಾಹಕರು. ಮರಳುವಾಗ ಆ ಹಿರಿಯ ಸಪ್ಲೈಯರುಗಳಿಗೆ ವಂದಿಸಿ ಮರಳುತ್ತಾರೆ. ಅಲ್ಲಿ ಆಹಾರ ಸೇವಿಸಲು ಸೀಟು ಸಿಗಲು ಮುಂಗಡವಾಗಿ ಮೊದಲೇ ಕೋರಿಕೆ ಸಲ್ಲಿಸಬೇಕು. ಹೋಟೆಲ್ ಎಲ್ಲಾ ಹೊತ್ತು ನಗು ಹಾಗೂ ಚಪ್ಪಾಳೆಯ ಸದ್ದಿನಿಂದ ಕೂಡಿರುವುದರಿಂದ ಈ ರೆಸ್ಟೋರೆಂಟಿನಲ್ಲಿ ಸಂಗೀತ ಹಾಡು ಇರುವುದಿಲ್ಲ.
ಜೀವನದ ಮೌಲ್ಯ ಒಂದು ಕ್ಷಣ ಅರಿಯುವ ಅಮೂಲ್ಯ ತಾಣವೇ ಈ Restaurant of Mistaken Order.
ಎಂದಾದರೂ ಜಪಾನಿಗೆ ಹೋಗಬಹುದು ಎಂಬ ಡಿಮೆನ್ಶಿಯದೊಂದಿಗೆ…..
ನಿಮ್ಮವ ನಲ್ಲ
ರೂಪು
- ಪ್ರೊ. ರೂಪೇಶ್ ಪುತ್ತೂರು