‘ಸಮಚಿತ್ತ’ ಕವನ –  ಮಂಗಳಾ ಶಂಕರ್

ತೂರದಿರು ಗಾಳಿಗೆ ಮೃದು ಮನವ, ಜತಿನದಿ ಕಾಪಿಡು ನಿರ್ಮಲ ಮನವ… ಕವಿ ಮಂಗಳಾ ಶಂಕರ್ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಮನವು ಸಂತಸದ ಕಡಲಾದೊಡೆ
ನಿರ್ಮಲ ಚಿತ್ತವು ನಲಿದಾಡುವುದು
ನೋವಿಗೆಡೆ ಮಾಡದೆ ಸಮಚಿತ್ತ
ದಿಂದಿರೆ ಮನವು ನಲಿದಾಡುವುದು

ಚಿತ್ತವು ಅಯೋಮಯ ವಾದೊಡೆ
ಮನವು ಗಾಳಿಗೆ ತೂರಿದ ತರಗೆಲೆ
ತೂರದಿರು ಗಾಳಿಗೆ ಮೃದು ಮನವ
ಜತಿನದಿ ಕಾಪಿಡು ನಿರ್ಮಲ ಮನವ

ನಿರ್ಮಲ ಚಿತ್ತದಿ ಭಗವಂತನ ಭಜಿಸೆ
ಬೇಗನೆ ಬರುವನು ನಮ್ಮೆಡೆಗೆ
ಕೇಳಿದ ವರಗಳ ಕೊಡುತಲಿ ಅವನು
ಕಾಯ್ವನು ನಮ್ಮನು ಧರೆಯೊಳಗೆ


  •  ಮಂಗಳಾ ಶಂಕರ್ – ಮೈಸೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading