ಜೂನ್ಮಳೆಯ ನಗೆ ಬೆಳೆ

ಕವಿ ಬೆಂಶ್ರೀ ರವೀಂದ್ರ ಅವರು ತಮ್ಮ ಕವನದ ಮೂಲಕ ಗೋಪಿನಾಥ್ ಎಚ್.ವಿ ಅವರ ಪುಸ್ತಕ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಹ್ವಾನ ನೀಡಿದ್ದಾರೆ. ಶ್ರೀಗೋಪಿನಾಥ್ ಎಚ್.ವಿ ಅವರ ಮೊದಲ ಹಾಸ್ಯ ಕೃತಿ ‘ಸಂಸಾರದಲ್ಲಿ ಸಿಹಿ ಕಹಿ’ ಲೋಕಾರ್ಪಣೆಯ ಸಮಾರಂಭ ಜೂನ್ ೨೬,೨೦೨೪ ರಂದು ಬೆಳಗ್ಗೆ ೧೦.೩೦ ಕ್ಕೆ, ತಪ್ಪದೆ ಬನ್ನಿ…

ಬಂತೋ ಬಂತೋ ಗೋಪಣ್ಣನ ಗಾಡಿ
ಹೊತ್ತಿಹುದು ಸಿಹಿ ಕಹಿ ಸಂ ಸಾರಬುತ್ತಿ
ಸಿಹಿ ರುಚಿ ಕಹಿ ರುಚಿ ಸಿಕಹಿ ಕಸಿಹಿಯೋ
ಬಗೆ ವಗರೋ ತರತರವೋ ರುಚಿ ಗುತ್ತಿ

ಹಾಸ್ಯದ ಹೊನಲು ನೋವಿನ ಸವರು
ಬೇರಾರೂ ಇಲ್ಲವೋ ಅವರೂ ಇವರು
ಇರುವರು ಇಬ್ಬರೇ ಜನುಮದ ಜೋಡಿ
ನಿತ್ಯದ ನಡೆನುಡಿ ನಗುವಿನ ಗಡಿಬಿಡಿಯೋ

ಬನ್ನಿರಿ ಬನ್ನಿರಿ ಈ ಶನಿವಾರದ ಬೆಳಗಿಗೆ
ಹತ್ತೂಮುವ್ವತ್ತರ ಹರುಷದ ಸಮಯಕೆ
ಅರುಣರು ಹಂಚುವ ಹೊತ್ತಿಗೆ ಹೂರಣ
ಎಂಎಸ್ಎನ್ ಕಟ್ಟುವ ನಗೆ ನೆಗೆ ತೋರಣ

ಇಪ್ಪತ್ತೊಂಬರ ಬೆಳಗು ಗೋಪಿಯ ಬೆರಗು
ಜೂನ್ಮಳೆ ಮುಂಗಾರು ಬಂಗಾರದ ಹನಿಯು
ಸಸಕಸ ವೇದಿಕೆಯ ಮಳೆ ಸಿಹಿ ಕಹಿ ಬೆಳೆಯು
ಹಂಚುವ ಗೋಪಿ ಸವಿಯುವ ಬನ್ನಿರಿ ಬನ್ನಿರಿ


  • ಬೆಂಶ್ರೀ ರವೀಂದ್ರ – ಬೆಂಗ್ಳೂರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading