ವೀಳ್ಯದೆಲೆ ಚಟ್ನಿಪುಡಿ

ವೀಳ್ಯದೆಲೆ ಎಂದರೆ ಕೇವಲ ಬಾಯಲ್ಲಿ ಹಾಕಿ ಜಗಿಯುವದಕ್ಕೆ ಅಷ್ಟೇ ಅಲ್ಲ. ಅದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಲಾಭವಿದೆ. ಡ್ರೈ ಬೀಡಾ ಮತ್ತು ವೀಳ್ಯದೆಲೆ ಚಟ್ನಿಪುಡಿ ಮಾಡುವ ಕುರಿತು ನಳಪಾಕ ಪ್ರವೀಣೆ ಶಕುಂತಲಾ ಸವಿ ಹಂಚಿಕೊಂಡಿದ್ದಾರೆ ತಪ್ಪದೆ ಮಾಡಿ ನೋಡಿ…

ಈಗಿನವರಿಗೆ ಎಲೆ ಅಗಿದು ತಿನ್ನುವುದು ಅಂದರೆ ಕಷ್ಟ ಅಲ್ವ, ಅದಕ್ಕೆ ನಾನು”ಡ್ರೈ ಬೀಡಾ” ಮಾಡಿ ಇಡುತ್ತೇನೆ. ಮಗಳು ಬಾಣಂತನದಲ್ಲೂ ಇದೆ ಕೊಟ್ಟಿದ್ದು. ಎಲೆ ಇದ್ದಾಗೆಲ್ಲ ಮಾಡಿ ಇಡುತ್ತೇನೆ.

ಮೊದಲಿಗೆ ಬಾಣಲಿಗೆ ಎರಡು ಚಮಚ ತುಪ್ಪ ಹಾಕಿ. ಅದಕ್ಕೆ ಸ್ವಲ್ಪ ಜಜ್ಜಿದ 20 ಬಟ್ಟಲಡಿಕೆ ಸ್ವಲ್ಪ ಹುರಿದು ಕೊಳ್ಳಿ. ನಂತರ ಇದಕ್ಕೆ 5 ಏಲಕ್ಕಿ, 8 ಲವಂಗ, 2 ಜಾಪತ್ರೆ, ಅರ್ಧ ಜಾಯಿಕಾಯಿ ಹಾಕಿ ಹುರಿದು ತೆಗೆದಿಟ್ಟು ಕೊಳ್ಳಿ. ನಂತರ ಅದೇ ಬಾಣಲಿಗೆ 25 ವೀಳ್ಯದೆಲೆಯನ್ನು ಸ್ವಲ್ಪ ಚೂರು ಮಾಡಿ 1 ಕಪ್ ಸಕ್ಕರೆ, ಅರ್ಧ ಚಮಚ ಸುಣ್ಣ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಎಲ್ಲ ಹುರಿದ ಸಾಮಾಗ್ರಿ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಸಿಹಿ ಕಮ್ಮಿ ಅನ್ನಿಸಿದರೆ ಸಕ್ಕರೆ ಹಾಕಿ. ಪುನ ಮಿಕ್ಸಿ ಮಾಡಿ. ಕೊಬ್ಬರಿ ತುರಿ, ಸೋಂಪು, ಹಾಕಿ. ಒಳ್ಳೆ ಬೀಡಾ ರೆಡಿ. ಬೇಕಾದ್ರೆ ಜೀರಿಗೆ ಮಿಠಾಯಿ, ಡೈಮಂಡ್ ಸಕ್ಕರೆ ಹಾಕಿ ಕೊಳ್ಳಿ.

ವೀಳ್ಯದೆಲೆ ಚಟ್ನಿಪುಡಿ :

ಮಾಡುವ ವಿಧಾನ :

15 ವೀಳ್ಯದೆಲೆಗಳನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಒರೆಸಿ ಬಿಸಿ ತವಾ ಮೇಲೆ ಸುತ್ತಲೂ ಜೋಡಿಸಿ. ಅದು ಬ್ರೌನ್ ಆಗುವ ತನಕ ತಿರುಗಿಸಿ ಹಾಕುತ್ತೀರಿ. ಈಗ 1 ಕಪ್ ಕಡ್ಲೆಬೇಳೆ, ಅರ್ಧ ಕಪ್ ಉದ್ದಿನಬೇಳೆ, ಕೆಂಪಗೆ ಹುರಿದುಕೊಳ್ಳಿ. 15 ಒಣಮೆಣಸಿನಕಾಯಿ (ಬ್ಯಾಡಗಿ ಗುಂಟೂರು ಸೇರಿಸಿ).

ಉಪ್ಪು , ಹುಣಸೆ ಹಣ್ಣು, ಅರ್ಧ ಅಚ್ಚು ಬೆಲ್ಲ ..ಇಷ್ಟನ್ನು ಮಿಕ್ಸಿ ಮಾಡಿ ಲಾಸ್ಟ್ 2 ರೌಂಡ್ ಇರುವಾಗ ಬಿಸಿ ಯಾದ ವೀಳ್ಯದೆಲೆಯನ್ನು ಹಾಕಿ ಮಿಕ್ಸಿ ಮಾಡಿ ..ಕೊಬ್ಬರಿ ತುರಿದು ಹಾಕಿ. ಚಟ್ನಿಪುಡಿ ರೆಡಿ. ಜೊತೆಗೆ ಚಟ್ನಿ ಪುಡಿ ಕೂಡ ಮಾಡಿದ್ದೇನೆ. ಇದನ್ನು ಬಾಣಂತಿಗೆ ಕೊಡಬಹುದು. ಜೊತೆಗೆ ಜ್ಯೂಸ್, ಚಿತ್ರಾನ್ನ, ರೊಟ್ಟಿ ಎಲ್ಲದಕ್ಕೂ ಬಳಸುತ್ತೇನೆ ನಾನು,ನೀವು ಕೂಡ ಮಾಡಿ ನೋಡಿ…


  • ಶಕುಂತಲಾ ಸವಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading