ಈ ಮನೆಯಲ್ಲಿ ತಯಾರಿಸಿದ ಚಾಕೊಲೇಟ್ ಕೇಕ್ ರುಚಿಕರ. ನಳಪಾಕ ಪ್ರವೀಣೆ ಶಕುಂತಲಾ ಸವಿ ಅವರು ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಬೇಕಾಗುವ ಪದಾರ್ಥಗಳು :
- ಪಿಲ್ಸ್ ಬರೀ ಚಾಕೋ ಪೌಡರ್
- ಹಾಲಿನಪುಡಿ – ಹತ್ತು ರೂಪಾಯಿ
- ಪ್ಯಾಕೆಟ್ – ಒಂದು
- ಡೈರಿ ಮಿಲ್ಕ್ ಬಾರ್ – ಒಂದು
- ಮಂಚ್ – ಒಂದು
- ಹರ್ಷಿಸ್ ಹಾಟ್ ಚಾಕಲೇಟ್ ಪೌಡರ್ – ಮೂರು ಸ್ಪೂನ್
ಒಂದು ಬಟ್ಟಲಿನಲ್ಲಿ, ¾ ಕಪ್ ಪಿಲ್ಸ್‌ಬರೀ ಚೋಕೋ ಪೌಡರ್, ½ ಕಪ್ ಹಾಲು ಮತ್ತು 2 ½ ಚಮಚ ಎಣ್ಣೆಯನ್ನು ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ಒಂದು ನಿಮಿಷ ವಿಶ್ರಾಂತಿಗೆ ಬಿಡಿ. ಮಿಶ್ರಣವು ತುಂಬಾ ದಪ್ಪವಾಗಿರಬಾರದು ಅಥವಾ ತುಂಬಾ ತೆಳುವಾಗಿರಬಾರದು.

ತಟ್ಟೆ ಇಡ್ಲಿ ಪ್ಲೇಟ್ ಗಳನ್ನೂ ತೆಗೆದುಕೊಂಡು ಎಣ್ಣೆಯಿಂದ ಗ್ರೀಸ್ ಮಾಡಿ. ಹಿಟ್ಟಿನ ಮಿಶ್ರಣದೊಂದಿಗೆ ಕೇಕ್ ಅಚ್ಚಿನ ¾ ಭಾಗದಷ್ಟು ಹಾಕಿ ಇಡ್ಲಿ ಪಾತ್ರೆ ಒಳಗೆ ಸ್ಟ್ಯಾಂಡ್ ನಲ್ಲಿ
ಇರಿಸಿ. ಸುಮಾರು 30-35 ನಿಮಿಷಗಳ ಕಾಲ ಅದನ್ನು ಸ್ಟೀಮ್ ಮಾಡಿ.
ಈಗ ಟೂತ್‌ಪಿಕ್ ಸ್ವಚ್ಛವಾಗಿ ಹೊರಬಂದಾಗ ಕೇಕ್ ರೆಡಿಯಾಗಿದೆ ಅಂತ ಅರ್ಥ. ಕೇಕ್ ತಣ್ಣಗಾದ ನಂತರ ಒಂದೊಂದೇ ಪ್ಲೆಟ್ ನಿಂದಾ ಕೇಕ್ ತೆಗೆದು ಒಂದು ಪ್ಲೇಟ್ ಗೆ ಒಂದರ ಮೇಲೆ ಒಂದು ಜೋಡಿಸಿ.
ವಿಡಿಯೋ ದಲ್ಲಿ ತೋರಿಸಿರುವಂತೆ ಪ್ರತಿ ಕೇಕ್ ಬೇಸ್ ಇಡುವಾಗಲೂ ಚಾಕಲೇಟ್ ಸಿರಪ್ ಹಾಕಿ . ಕೊನೆಯಲ್ಲಿ ನಿಮಗೆ ಬೇಕಾದ ಹಾಗೆ ಅಲಂಕರಿಸಿ.
- ಶಕುಂತಲಾ ಸವಿ – ನಳಪಾಕ ಪ್ರವೀಣೆ, ಮೈಸೂರು.
