‘ಸಂಧಿಗ್ಧ’ ಕವನ – ಡಾ. ಗಿರಿಜಾ ಶಾಸ್ತ್ರಿ

 

ಹಿರಿಯ ಲೇಖಕಿ, ಕವಿಯತ್ರಿ ಡಾ.ಗಿರಿಜಾ ಶಾಸ್ತ್ರಿ ಅವರ ಸ್ವರಚಿತ ಕವನವನ್ನು ಆಕೃತಿಕನ್ನಡದಲ್ಲಿ ಪ್ರಕಟಿಸುವುದರ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತದೆ.

ಸಂವಹನವೇ ಸತ್ತು ಹೋಗಿರುವಾಗ
ನಾನು ಹೇಳುವುದಾದರೂ
ಏನು
ನೀನು ಕೇಳುವುದಾದರೂ
ಕಿವುಡು ಹೆಚ್ಚಾಗುತ್ತಿದೆ

ನನಗೆ
ಕುರುಡು
ನಿನಗೆ
ಕೆಟ್ಟ ಹಟವೂ ಜೊತೆಗೆ
ಹಂಚುವಷ್ಟು ಹತ್ತು ಮಂದಿಗೆ

ನನ್ನ ಸನ್ನೆಗಳು
ನಿನ್ನ ಮಾತುಗಳು
ಢಿಕ್ಕಿ ಹೊಡೆದು ಗೋಡೆಗೆ
ವಾಪಸ್ಸಾಗುತ್ತಿವೆ ಹೊರಟಲ್ಲಿಗೇ

ಶಬ್ದ ನನಗೆ ಕೇಳಿಸುವುದಿಲ್ಲ
ಢಿಕ್ಕಿ ನಿನಗೆ ಕಾಣಿಸುವುದಿಲ್ಲ
ಅಪಾರ್ಥ ಆಚರಣೆ
ಶಂಕಾತುರಂಗಳ ನಿರ್ವಹಣೆ

ನಾನೊಂದು
ಮೂಲೆ
ನೀನೊಂದು
ನಡುವೆ ಅನಿವಾರ್ಯ ಸೆಲೆ
“ಕತ್ತಲೆಗೆ ಹತ್ತೆ ತಲೆ?”
ಭಾರವಾಗಿದೆ ಊರುಗೋಲೇ

“ತೇಲಲೀಯದು ಗುಂಡು
ಮುಳುಗಲೀಯದು ಬೆಂಡು”


  • ಗಿರಿಜಾ ಶಾಸ್ತ್ರಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading