ಕನ್ನಡ ಸಾಹಿತ್ಯಲೋಕದಲ್ಲಿ ಯುವ ಲೇಖಕ – ಸಜ್ಜನ

ಸಾಹಿತ್ಯಲೋಕದಲ್ಲಿ ಬಹಳಷ್ಟು ಲೇಖಕರು ತಾವು ಬರೆದಂತಹ ಕೃತಿಗಳಿಗೆ ಹಿರಿಯ ಲೇಖಕರಿಂದ ಮುನ್ನುಡಿ, ಬೆನ್ನುಡಿ, ಬರೆಸಲು ಹಾತೊರೆಯುತ್ತಾರೆ. ಅಂತದರಲ್ಲಿ ತಮ್ಮ ಚೊಚ್ಚಲ ಕೃತಿಗೆ ಸಂಗಮನಾಥ ಸಜ್ಜನ ಅವರು ತಮ್ಮ ತಾಯಿಯವರಿಂದಲೇ ಬೆನ್ನುಡಿ ಬರೆಸಿದ್ದಾರೆ. ಸಂಗಮನಾಥ ಸಜ್ಜನ ಅವರ ಸಾಹಿತ್ಯಸೇವೆಯ ಕುರಿತು ಲೇಖಕರಾದ ನಾರಾಯಣ ಸ್ವಾಮಿ ಅವರು ಓದುಗರಿಗೆ ಪರಿಚಯಿಸಿದ್ದಾರೆ. ತಪ್ಪದೆ ಮುಂದೆ ಓದಿ…

ಸಾಹಿತ್ಯಲೋಕದಲ್ಲಿ ಬಹಳಷ್ಟು ಲೇಖಕರು ತಾವು ಬರೆದಂತಹ ಕೃತಿಗಳಿಗೆ ಹಿರಿಯ ಲೇಖಕರಿಂದ ಮುನ್ನುಡಿ, ಬೆನ್ನುಡಿ, ಬರೆಸಲು ಹಾತೊರೆಯುತ್ತಾರೆ. ಅವರ ಬರಹಕ್ಕಾಗಿ ತಿಂಗಳು, ವರುಷಗಳೇ ಕಾಯುತ್ತಾರೆ. ಹಿರಿಯ ಲೇಖಕರು ತಮ್ಮ ಕೃತಿಯ ಬಗ್ಗೆ ನಾಲ್ಕು ಸಾಲು ಬರೆದರೆ ನಮ್ಮ ಪುಸ್ತಕಕ್ಕೆ ಒಂದು ಗೌರವ ಬರುತ್ತದೆ. ಒಂದಷ್ಟು ಜನ ಓದುಗರು ಕೂಡ ತಮ್ಮ ಪುಸ್ತಕವನ್ನು ಓದಬಹುದು ಎಂಬ ಮನೋಭಾವನೆ ನಮ್ಮ ಸಾಹಿತ್ಯ ಲೋಕದ ಬರಹಗಾರರಲ್ಲಿ ಮನದಲ್ಲಿರುತ್ತದೆ.. ಅದರೆ ಇತ್ತೀಚಿನ ಬಹಳಷ್ಟು ಬರಹಗಾರರು ತಮ್ಮ ಕೃತಿಗೆ ಯಾವುದೇ ಮುನ್ನುಡಿ ಬೆನ್ನುಡಿ ಇಲ್ಲದೆ ಕೃತಿಗಳನ್ನು ಪ್ರಕಟಿಸುತ್ತಿದ್ದಾರೆ.

ಲೇಖಕರೊಬ್ಬರು ತಮ್ಮ ತಾಯಿಯವರಿಂದಲೇ ಬೆನ್ನುಡಿಯನ್ನು ಬರೆಯಿಸಿ ಕೃತಿಯನ್ನು ಪ್ರಕಟಿಸಿದ್ದಾರೆ. ಬಹುಶ: ನನಗೆ ತಿಳಿದಮಟ್ಟಿಗೆ ಲೇಖಕರೊಬ್ಬರ ಕೃತಿಗೆ ಅವರ ಹೆತ್ತ ತಾಯಿಯಿಂದಲೇ ಬೆನ್ನುಡಿಯನ್ನು ಬರೆಸಿರುವುದು ವಿಶೇಷವಾಗಿದೆ. ತನ್ನ ತಾಯಿಯಿಂದಲೇ ತನ್ನ ಕೃತಿಗೆ ಬೆನ್ನುಡಿಯನ್ನು ಬರೆಯಿಸಿ, ತಮ್ಮ ಚೊಚ್ಚಲ ಕೃತಿಯನ್ನು ಲೋಕಾರ್ಪಣೆ ಮಾಡಿದ್ದು ಸಂಗಮನಾಥ ಸಜ್ಜನರು ಎಂಬುದು ನನ್ನ ವೈಯಕ್ತಿಕ ಭಾವನೆ.

ತಾಯಿಯ ಆಶೀರ್ವಾದಿಂದ ಹೊರತಂದ ಕನ್ನಡದ ಕೃತಿಯಾಗಿದ್ದು. ಲೇಖಕರ ತಾಯಿಯವರಾದ ಶ್ರೀಮತಿ ಶರಣಮ್ಮ ಸಜ್ಜನರವರು ತನ್ನ ಮಗ ಬರೆದಂತಹ ಸಾಲುಗಳಿಗೆ ತನ್ನೊಳಗಿನ ಭಾವನೆಗಳನ್ನು ಹೊರಹಾಕಿ ಹರಸಿದ್ದಾರೆ. ಮೂಲತ: ಜನಪದ ಕಲಾವಿದರಾದ ಶರಣಮ್ಮ ಸಜ್ಜನರವರು ಕಲಬುರ್ಗಿ ವಿ.ವಿ ಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಕಲಾವಿದರು. ಆದರೆ ಇವರು ಓದು ಬರಹ ಅರಿಯದವರಾದರೂ ಅವರ ಮನೋಭಿವ್ಯಕ್ತಿಯ ಮಂದಾರ ಪುಷ್ಪಗಳೇ ಇಲ್ಲಿ ಬೆನ್ನುಡಿಯ ಸಾಲುಗಳಾಗಿ ಸಹೃದಯರ ಹೃನ್ಮನಗಳನ್ನು ಸೆಳೆದಿವೆ.

ಶ್ರೀ ಸಂಗಮನಾಥ ಸಜ್ಜನರವರು ಇತ್ತೀಚೆಗೆ ಕನ್ನಡ ಸಾಹಿತ್ಯಲೋಕದಲ್ಲಿ ಯುವ ಕವಿಗಳಾಗಿ ಗುರುತಿಸಿಕೊಂಡಿದ್ದಾರೆ. ಇವರು ಕಲ್ಬುರ್ಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದವರು. ಈ ಗ್ರಾಮದಲ್ಲಿಯೇ ಶ್ರೀ ಪ್ರಭು ಸಜ್ಜನ ಮತ್ತು ಮಲ್ಲಮ್ಮನವರ ಮಗನಾಗಿ ಜನಿಸಿದರು. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಾದ ಹೊನ್ನಕಿರಣಗಿಯಲ್ಲಿ ಮುಗಿಸಿ, ಕಾಲೇಜು ಶಿಕ್ಷಣವನ್ನು ಕಲ್ಬುರ್ಗಿಯಲ್ಲಿ ಓದಿ ಪದವಿಯನ್ನು ಪಡೆದರು. ನಂತರ ಬೆಂಗಳೂರಿನಲ್ಲಿ ಬಿ ಎಡ್ ಶಿಕ್ಷಕರ ತರಬೇತಿಯನ್ನು ಪೂರೈಸಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದರು. ಪ್ರಸ್ತುತ ಬೆಂಗಳೂರಿನ ಕ್ತ್ರೆಸ್ಟ್ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ವೃತ್ತಿಯನ್ನು ಮಾಡುತ್ತಿದ್ದಾರೆ.

ಬಾಲ್ಯದಿಂದಲೂ ಕನ್ನಡ ಸಾಹಿತ್ಯ ಒಲವಿದ್ದ, ತನ್ನ ಶಿಕ್ಷಕ ವೃತ್ತಿಯ ಜೊತೆಯಲ್ಲಿ ಕನ್ನಡ ಸಾಹಿತ್ಯದ ಬರವಣಿಗೆಯನ್ನು ಪ್ರವೃತ್ತಿಯಾಗಿಸಿಕೊಂಡ ಸಂಗಮನಾಥ ಸಜ್ಜನ ರವರು 2021 ರಲ್ಲಿ “ಅಕ್ಷರ ವೈಭವ” ಎಂಬ ಚೊಚ್ಚಲ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿದರು. ಈ ಕೃತಿಯು ಹಲವಾರು ಓದುಗರ ಮನ್ನಣೆಯನ್ನು ಪಡೆದು ಯಶಸ್ವಿಯಾಗಿದೆ.

ಇವರ ಹಲವಾರು ಬರಹಗಳು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ ಆಕಾಶವಾಣಿ ಇವರ ಕವಿತೆಗಳು ಪ್ರಸಾರವಾಗಿದೆ. ಸಂಯುಕ್ತ ಕನಾ೯ಟಕ, ಯಾದಗಿರಿ ಟೈಮ್ಸ್ , ಕೋಲಾರದ ಅಗ್ನಿ ಪತ್ರಿಕೆ, ಮುಂತಾದ ಪತ್ರಿಕೆಗಳಲ್ಲಿ ಇವರ ಕವಿತೆ ಲೇಖನ ಕಥೆಗಳು ಪ್ರಕಟವಾಗಿವೆ. ಮತ್ತು 18ನೇ ಕಲ್ಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ಬೆಳತನಕ ಬೆಂದ್ರೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿತೆಗಳನ್ನು ವಾಚಿಸಿದ್ದಾರೆ. ಹಾಗೂ ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವನವಾಚನ ಮಾಡಿ ಬಹುಮಾನ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.

ಇವರ ಕನ್ನಡ ಸಾಹಿತ್ಯ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಹಲವಾರು ರಾಜ್ಯಮಟ್ಟದ ಸಂಘಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ “ಸುವಣ೯ ಸಂಘಟನಾ ಪ್ರಶಸ್ತಿ” ಯನ್ನು 2008 ರಲ್ಲಿ ಪಡೆದುಕೊಂಡಿದ್ದಾರೆ. ಇವರ ಮೊದಲ ಕವನ ಸಂಕಲನವಾದ ಅಕ್ಷರ ವೈಭವ ಕೃತಿಗೆ “ನುಡಿ ಸಿರಿ ಪುಸ್ತಕ ಪ್ರಶಸ್ತಿ” ಪಡೆದಿದ್ದಾರೆ. 2024 ರಲ್ಲಿ ಅಕ್ಷರ ನಾದ ಸಂಸ್ಥೆಯು ಶ್ರೀ ಸಂಗಮನಾಥ ಸಜ್ಜನರವರ ಸಾಹಿತ್ಯ ಸೇವೆಯನ್ನು ಗುರುತಿಸಿ “ಅಕ್ಷರ ನಾದ ಸಾಹಿತ್ಯ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದ್ದಾರೆ.

ತನ್ನ ತಂದೆಯೇ ನಾನು ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ಅವರು ಬರೆಯುತ್ತಿದ್ದ ಪತ್ರಗಳು ಅವರು ಹೇಳುತಿದ್ದ ನೀತಿಕಥೆಗಳು ಮತ್ತು ಮಾನವ ಪ್ರೀತಿ ನನ್ನನ್ನು ಬರಹಗಾರ ರೂಪಿಸಿಕೊಳ್ಳಲು ಕಾರಣವಾಯಿತು ಎಂದು ಹೇಳುವ ಶ್ರೀ ಸಂಗಮನಾಥ ಸಜ್ಜನರವರು ಮುಂದೆಯೂ ಕನ್ನಡ ಸಾಹಿತ್ಯದಲ್ಲಿ ಮತ್ತಷ್ಟು ತೊಡಗಿಸಿಕೊಂಡು ಬೆಳೆಯಲಿ. ಇವರ ಸಾಹಿತ್ಯ ಸೇವೆ ಈಗೇ ಸಾಗುತಿರಲಿ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡು ತಮ್ಮ ವೃತಿಯ ಜೊತೆಗೆ ಪ್ರವೃತ್ತಿಯಾದ ಕನ್ನಡದ ಬರವಣಿಗೆಯ ಇನ್ನಷ್ಟು ತೊಡಗಿಸಿಕೊಂಡು ಮತ್ತಷ್ಟು ಕೃತಿಗಳನ್ನು ಹೊರತಂದು ಕನ್ನಡಮ್ಮ ಸೇವೆಯನ್ನು ಮಾಡಲಿ. ಮುಂಬರುವ ಸಾಹಿತ್ಯದ ಬರಹಗಳು ನೊಂದ ಜನರ, ಮಹಿಳೆಯರ ಬದುಕಿನ ತಲ್ಲಣಗಳಾಗಲಿ. ಇವರು ಕರುನಾಡಿನ ಸಾಹಿತ್ಯದಲ್ಲಿ ಮತ್ತಷ್ಟು ಗುರುತಿಸಿಕೊಂಡು, ಇನ್ನಷ್ಟು ಗೌರವ ಪುರಸ್ಕಾರಗಳಿಗೆ ಭಾಜನರಾಗಲಿ ಎಂದು ಆಶಿಸುತ್ತಾ ಪತ್ರಿಕೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ.

ಹಿಂದಿನ ಸಂಚಿಕೆಗಳು :


  • ನಾರಾಯಣ ಸ್ವಾಮಿ – ಲೇಖಕರು ಮಾಸ್ತಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading